ಸಿಂಥೆಟಿಕ್ ಸ್ಯಾನಿಟರಿ ನ್ಯಾಪ್ಕಿನ್‌ಗಳ ದೀರ್ಘಕಾಲದ ಬಳಕೆಯು ಡೈಆಕ್ಸಿನ್‌ನಂತಹ ರಾಸಾಯನಿಕಗಳಿಂದಾಗಿ ಗರ್ಭಕೋಶದ ಕ್ಯಾನ್ಸರ್ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಕ್ಕೆ ಆರೋಗ್ಯಕರ ಪರ್ಯಾಯವಾಗಿ, ಹೆಚ್ಚು ಹೀರಿಕೊಳ್ಳುವ ಸಾಮರ್ಥ್ಯವಿರುವ ಬಿದಿರಿನ ಪ್ಯಾಡ್‌ಗಳನ್ನು ಪರಿಚಯಿಸಲಾಗಿದೆ.  

ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಬಳಸುವುದು ಸ್ಯಾನಿಟರಿ ನ್ಯಾಪ್ಕಿನ್​ಗಳನ್ನು. ಟ್ಯಾಂಪೂನ್ (Tampons), ಮುಟ್ಟಿನ ಕಪ್ (Menstrual Cup) ಇವೆಲ್ಲಾ ಇದ್ದರೂ, ಕೆಲವರು ಇಂದಿಗೂ ಬಟ್ಟೆಗಳನ್ನು ಬಳಸುತ್ತಿದ್ದರೂ ಹೆಚ್ಚಿನವರು ಬಳಕೆ ಮಾಡುವುದು ನ್ಯಾಪ್ಕಿನ್​ಗಳನ್ನು. ಇದೇ ಕಾರಣಕ್ಕೆ ಇಂದು ವಿಭಿನ್ನ ಕಂಪೆನಿಗಳು ಪೈಪೋಟಿಗೆ ಬಿದ್ದು ನ್ಯಾಪ್​ಕಿನ್​ ತಯಾರಿಸುವುದು ಇದೆ. ಆದರೆ ನಿಮಗೆ ಗೊತ್ತಾ? ಸಿಂಥೆಟಿಕ್ ಸ್ಯಾನಿಟರಿ ನ್ಯಾಪ್ಕಿನ್​ಗಳು ದೀರ್ಘಕಾಲದವರೆಗೆ ಬಳಸುವುದರಿಂದ ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್​ ಹೆಚ್ಚುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ. ಸಂತಾನೋತ್ಪತ್ತಿಯ ಸಮಸ್ಯೆಗೂ ಇದು ಕಾರಣ ಎಂದು ಇದಾಗಲೇ ಹಲವು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಇದನ್ನು ಸಾಬೀತು ಮಾಡಲು ಯಾವುದೇ ವೈಜ್ಞಾನಿಕ ಸಂಗತಿಗಳು ಅಥವಾ ಸಂಶೋಧನೆಗಳು ಇಲ್ಲ ಎನ್ನುವ ವಾದ ಇದೆಯಾದರೂ, ಬಹುತೇಕ ನ್ಯಾಪ್​ಕಿನ್​ಗಳು ಡೈಆಕ್ಸಿನ್ ರಾಸಾಯನಿಕವನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿರುವ ಕಾರಣ ಅದು ನೆರವಾಗಿ ಹೆಣ್ಣುಮಕ್ಕಳ ಆ ಅಂಗದ ಸಂಪರ್ಕಕ್ಕೆ ಬರುತ್ತವೆ. ಇದರಿಂದ ಸೂಕ್ಷ್ಮ ದೇಹ ಪ್ರಕೃತಿಯವರಲ್ಲಿ ಅತಿ ಶೀಘ್ರದಲ್ಲಿ ಮಾರಣಾಂತಿಕ ಸಮಸ್ಯೆಗಳು ಕಾಣಿಸುತ್ತವೆ ಎಂದು ಹೇಳಲಾಗುತ್ತದೆ.

ಆರೋಗ್ಯ ಸಂಸ್ಥೆ ಎಚ್ಚರಿಕೆ

ಇದಾಗಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಡಯಾಕ್ಸಿನ್ ಅನ್ನು ಮಾಲಿನ್ಯಕಾರಕ ಮತ್ತು ಕ್ಯಾನ್ಸರ್ ಎಂದು ಪರಿಗಣಿಸಿದೆ. ಹಾಗಿದ್ದ ಮೇಲೆ ಇದರ ಅಂಶವೇ ಇರುವ ನ್ಯಾಪ್​ಕಿನ್​ಗಳನ್ನು ಬಹಳ ವರ್ಷಗಳವರೆಗೆ ಮಹಿಳೆಯರು ಬಳಸಿದರೆ ಅದು ಯಾವ ರೀತಿಯ ಪರಿಣಾಮ ಉಂಟು ಮಾಡುತ್ತದೆ ಎಂದು ಹೇಳಬೇಕಾಗಿಲ್ಲ. ಆರಂಭದಲ್ಲಿ ತುರಿಕೆ ಅಥವಾ ಅಲರ್ಜಿಗೆ ಗುರಿಯಾಗುತ್ತದೆ. ಹೀಗೆ ಆದರೂ ತಿಂಗಳಿಗೆ ನಾಲ್ಕೈದು ದಿನ ತಾನೆ, ಆ ಬಳಿಕ ಸರಿಯಾಗುತ್ತದೆ ಎಂದು ಆ ಕಿರಿಕಿರಿಯನ್ನು ಅನುಭವಿಸುವ ದೊಡ್ಡ ವರ್ಗವೇ ಇದೆ. ಆದರೆ ಅದು ಕಾಲಕ್ರಮೇಣ ಗರ್ಭಕಂಠದ ಕ್ಯಾನ್ಸರ್​ಗೆ ಕಾರಣವಾಗಬಹುದು ಅಥವಾ ಮಕ್ಕಳಾಗುವ ಸಮಸ್ಯೆ ಉತ್ಪತ್ತಿ ಮಾಡಬಹುದು ಎನ್ನುತ್ತಾರೆ ತಜ್ಞರು.

ಬಿದಿರಿನ ಪ್ಯಾಡ್​

ಇದೇ ಕಾರಣಕ್ಕೆ ಇದೀಗ ಮುಟ್ಟಿನ ಕಪ್ ಬಳಸುವ ದೊಡ್ಡ ವರ್ಗವೂ ಶುರುವಾಗಿದೆ. ಆದರೆ ಇದರ ಬಳಕೆ ಬಗ್ಗೆ ಸರಿಯಾದ ಕ್ರಮ ಗೊತ್ತಿಲ್ಲದೇ ಅಥವಾ ಇದನ್ನು ಹಾಕಿಕೊಂಡಾಗ ಉಂಟಾಗುವ ಸಮಸ್ಯೆಗಳಿಂದ ಹಲವರು ಪ್ಯಾಡ್​​ ಮೊರೆ ಹೋಗುವುದು ಮಾಮೂಲು. ಇಂಥವರಿಗಾಗಿಯೇ ಬಿದಿರಿನ ಪ್ಯಾಡ್​ ಅನ್ನು ತಯಾರು ಮಾಡಲಾಗಿದೆ. ದಿನನಿತ್ಯ ಬಳಸುವ ಪ್ಯಾಡ್​ಗಳು ಹಾಗೂ ಬಿದಿರಿನಿಂದ ತಯಾರಾಗಿರುವ ಪ್ಯಾಡ್​ಗಳಲ್ಲಿ ಏನು ವ್ಯತ್ಯಾಸ ಇದೆ. ದಿನನಿತ್ಯ ನಾವು ಬಳಸುತ್ತಿರುವ ಪ್ಯಾಡ್​ಗಳಿಗಿಂತ ಇದು ಹೇಗೆ ಭಿನ್ನವಾಗಿದೆ. ಅದರಿಂದ ಸಮಸ್ಯೆ ಏನು ಎನ್ನುವ ಬಗ್ಗೆ ನೇರವಾಗಿಯೇ, ಉದಾಹರಣೆ ಸಹಿತ, ಲೈವ್ ಆಗಿ ತೋರಿಸಿದ್ದಾರೆ ಎಸ್​ವಿಪಿಎಲ್​ ಗ್ರೂಪ್​ನ ಮಣಿಕಂಠ ಅವರು. ಡಿಟಿಟಲ್​ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ.

ತರಿಸಿಕೊಳ್ಳುವುದು ಹೇಗೆ?

ಬೇರೆ ಪ್ಯಾಡ್​ಗಳಿಗಿಂತಲೂ ಹೆಚ್ಚಿನ ರಕ್ತಸ್ರಾವವನ್ನು ಹೀರಿಕೊಳ್ಳುವ ಕೆಪ್ಯಾಸಿಟಿ ಹೊಂದಿದೆ ಈ ಪ್ಯಾಡ್​ಗೆ ಎನ್ನುತ್ತಾರೆ ಮಣಿಕಂಠ ಅವರು. ಪರಿಸರ ಸ್ನೇಹಿಯೂ ಇದಾಗಿರುವ ಹಿನ್ನೆಲೆಯಲ್ಲಿ ಮಣ್ಣಿನಲ್ಲಿಯೇ ಇದು ಮಣ್ಣಾಗಿ ಹೋಗುತ್ತದೆ ಎನ್ನುತ್ತಾರೆ. ಎಂಟು ಪ್ಯಾಡ್​ ಇರುವ ಒಂದು ಪ್ಯಾಕ್​ನ ಬೆಲೆ 100 ರೂಪಾಯಿಗಳು. ಇದು ಸದ್ಯ ಹಾವೇರಿ ಮತ್ತು ಮೈಸೂರಿನಲ್ಲಿ ಲಭ್ಯವಿದೆ. ಬೇರೆ ಊರುಗಳಿಂದ ತರಿಸಿಕೊಳ್ಳುವವರು ಹೆಚ್ಚುವರಿಯಾಗಿ 100 ರೂಪಾಯಿಗಳ ಕೋರಿಯರ್​ ಚಾರ್ಜ್​ ಮಾಡಿ ಒಂದು ಬಾರಿಗೆ 5-10 ಬಾಕ್ಸ್​ ತರಿಸಿಕೊಳ್ಳುವ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಶ್ರೀಕಾಂತ್​ ಅವರನ್ನು ​9353673621 ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.