ಭೂಮಿ, ಆಗಸ ಬಳಿಕ ಇದೀಗ ಕಡಲಲ್ಲಿ ಟ್ರಂಪ್ ಪುತ್ರಿ ಸಾಹಸ, ಸರ್ಫಿಂಗ್ ವಿಡಿಯೋ ವೈರಲ್!
ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಸರ್ಫಿಂಗ್ ವಿಡಿಯೋ ಭಾರಿ ವೈರಲ್ ಆಗಿದೆ. ಮಿಯಾಮಿ ಬೀಚ್‌ನಲ್ಲಿ ಇವಾಂಕಾ ಸರ್ಫಿಂಗ್ ಸ್ಕಿಲ್ ಪ್ರದರ್ಶಿಸಿದ್ದಾರೆ. ಇದರಲ್ಲೇನು ವಿಶೇಷಾ ಅಂತೀರಾ, ಇವಂಕಾ ಭೂಮಿ, ಆಗಸ ಹಾಗೂ ನೀರಿನಲ್ಲಿ ಯಶಸ್ವಿಯಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ನ್ಯೂಯಾರ್ಕ್(ಸೆ.05) ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬಂಧನ ಬಳಿಕ ಪುತ್ರಿ ಇವಾಂಕಾ ಟ್ರಂಪ್ ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದರು. ಇದೀಗ ಇವಾಂಕಾ ಟ್ರಂಪ್ ಸರ್ಫಿಂಗ್ ವಿಡಿಯೋ ಸ್ಕಿಲ್ ಪ್ರದರ್ಶಿಸಿದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಈ ಮೂಲಕ ಇವಾಂಕ ಭೂಮಿ, ಆಗಸ ಹಾಗೂ ಕಡಲಲ್ಲಿ ಯಶಸ್ವಿಯಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
ಮಿಯಾಮಿ ಬೀಚ್‌ನಲ್ಲಿ ಇವಾಂಕಾ ಸರ್ಫಿಂಗ್ ಮಾಡಿದ್ದಾರೆ. ಇವಾಂಗ ಸರ್ಫಿಂಗ್ ಮಾಡುತ್ತಿದ್ದರೆ, ಬೋಟ್‌ನಲ್ಲಿ ಇವಾಂಕ ಪುತ್ರ ಖುದ್ದು ನಿಂತು ಹುರಿದುಂಬಿಸಿದ್ದಾನೆ. ಈ ವಿಡಿಯೋವನ್ನು ಇವಾಂಕ ಪೋಸ್ಟ್ ಮಾಡಿದ್ದಾರೆ. ಹಳದಿ ಬಣ್ಣದ ಸ್ವಿಮ್ ಸ್ಯೂಟ್ ಹಾಕಿರುವ ಇವಾಂಕ, ಸುರಕ್ಷತಾ ಕಾರಣದಿಂದ ಕಪ್ಪು ಬಣ್ಣದ ಲೈಫ್ ಜಾಕೆಟ್ ಧರಿಸಿದ್ದಾರೆ.
1200 ಕಿ.ಮಿ ಸೈಕಲ್ ತುಳಿದ ಬಾಲಕಿ ಹೊಗಳಿದ ಇವಾಂಕ!
ಡೋನಾಲ್ಡ್ ಟ್ರಂಪ್ ಬಂಧನದ ಬಳಿಕ ಇವಾಂಕ ಸಾಮಾಜಿಕ ಮಾಧ್ಯಮಲ್ಲಿ ಯಾವುದೇ ಪೋಸ್ಟ್ ಮಾಡಿರಲಿಲ್ಲ. ಆಗಸ್ಟ್ 25 ರಂದು ಡೋನಾಲ್ಡ್ ಟ್ರಂಪ್ ಬಂಧನವಾಗಿದ್ದರು. ಬಳಿಕ ಜಾಮೀನ ಮೇಲೆ ಬಿಡುಗಡೆಯಾಗಿದ್ದರು. ಆಗಸ್ಟ್ 9ರ ಬಳಿಕ ಇವಾಂಕ ಯಾವುದೇ ಪೋಸ್ಟ್ ಮಾಡಿರಲಿಲ್ಲ. ಇದೀಗ ಸರ್ಫಿಂಗ್ ವಿಡಿಯೋ ಹಾಕಿ ಎಲ್ಲರ ಹುಬ್ಬೇರಿಸಿದ್ದಾರೆ.
ಇವಾಂಕಾ ಸೂಪರ್ ಕಾರು ಸೇರಿದಂತೆ ಹಲವು ಐಷಾರಮಿ ಕಾರುಗಳಲ್ಲಿ ಖುದ್ದು ಡ್ರೈವಿಂಗ್ ಮಾಡಿ ಸಾಹಸ ಪ್ರದರ್ಶಿಸಿದ್ದಾರೆ. ಸೂಪರ್ ಸ್ಪೀಡ್ ಕಾರು ಚಲಾಯಿಸುವುದರಲ್ಲೂ ಇವಾಂಕಾ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಇನ್ನು ಜುಲೈ ತಿಂಗಳಲ್ಲಿ ಇವಾಂಕ ವಿಮಾನದಲ್ಲಿ ಪೈಲೆಟ್ ಆಗಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಇದೀಗ ಕಡಲಿನಲ್ಲಿ ಸರ್ಫಿಂಗ್ ಮಾಡಿ ಸೈ ಎನಿಸಿದ್ದಾರೆ.
ಇನ್ನು ಕುದುರೆ ಸವಾರಿ ಸೇರಿದಂತೆ ಹಲವು ಸಾಹಸ ಪ್ರದರ್ಶನದಲ್ಲೂ ಇವಾಂಕಾ ಟ್ರಂಪ್ ಈಗಾಗಲೇ ತಮ್ಮ ಸಾಹಸ ಪ್ರದರ್ಶಿಸಿದ್ದಾರೆ. ಅಡ್ವೆಂಚರ್ ಇಷ್ಟಪಡುವು ಇವಾಂಕಾ ಟ್ರಂಪ್ ಇದೀಗ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇವಾಂಕಾ ಟ್ರಂಪ್ 2009ರಲ್ಲಿ ಜರೇದ್ ಕುಶ್ನರ್ ವಿವಾಹವಾಗಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದಾರೆ.
ಭಾರತದಲ್ಲಿ ತಂದೆಗಿಂತ ಭಾರೀ ಹವಾ ಮಾಡಿದ ಪುತ್ರಿ ಇವಾಂಕಾ ಟ್ರಂಪ್
ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಭಾರತ ಪ್ರವಾಸ ಕೈಗೊಂಡಿದ್ದರು. 2020ರಲ್ಲಿ ಟ್ರಂಪ್ ಭಾರತ ಪ್ರವಾಸದ ವೇಳೆ ಇವಾಂಕ ಟ್ರಂಪ್ ಕೂಡ ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಇವಾಂಕಾ ಹಾಗೂ ಜರೇದ್ ಕುಶ್ನರ್ ತಾಜ್ ಮಹಲ ಸೌಂದರ್ಯಕ್ಕೆ ಮನಸೋತಿದ್ದರು. ಒಂದು ಗಂಟೆಗಳ ಕಾಲ ಇವಾಂಕಾ ಟ್ರಂಪ್ ತಾಜ್‌ಮಹಲ್‌ನಲ್ಲಿ ಸಮಯ ಕಳೆದಿದ್ದರು.
ತಾಜ್‌ಮಹಲ್ ಎದುರಲ್ಲಿ ತಾವು ತೆಗೆಸಿಕೊಂಡ ಫೋಟೋವನ್ನು ಭಾರತೀಯರು ಫೋಟೋಶಾಪ್ ಮೂಲಕ ತಿರುಚಿ ತಮ್ಮ ತಮ್ಮ ಫೋಟೋ ಸೇರಿಸಿಕೊಂಡಿರುವುದನ್ನು ಇವಾಂಕಾ ಬಹುವಾಗಿ ಮೆಚ್ಚಿಕೊಂಡಿದ್ದರು. ಈ ಫೋಟೋಗಳಿಗೆ ಪ್ರತಿಕ್ರಿಯೆ ನೀಡಿದ್ದ ಇವಾಂಕಾ ‘ಅತ್ಯುದ್ಭುತ ತಾಜ್‌ಗೆ ಕರೆದೊಯ್ದಿದ್ದಕ್ಕೆ ಧನ್ಯವಾದಗಳು. ಈ ಅಪೂರ್ವ ಕ್ಷಣಗಳನ್ನು ನಾನೆಂದಿಗೂ ಮರೆಯಲ್ಲ’ ಎಂದು ಹಾಸ್ಯವಾಗಿಯೇ ಪ್ರತಿಕ್ರಿಯಿಸಿದ್ದರು.