1200 ಕಿ.ಮಿ ಸೈಕಲ್ ತುಳಿದ ಬಾಲಕಿ ಹೊಗಳಿದ ಇವಾಂಕ!
ಅಸಹಾಯಕ ತಂದೆಯನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು 1200 ಕಿಲೋ ಮೀಟರ್ ಕ್ರಮಿಸಿದ ಬಾಲಕಿಯನ್ನು ಅಮೆರಿಕ ಅಧ್ಯಕ್ಷನ ಪುತ್ರಿ ಇವಾಂಕ ಟ್ರಂಪ್ ಹಾಡಿ ಹೊಗಳಿದ್ದಾರೆ. ಇದರ ಬೆನ್ನಲ್ಲೇ ಇವಾಂಕ ಇಷ್ಟೊಂದು ಸಂವೇದನೆ ಕಳೆದುಕೊಳ್ಳಬಾರದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರಿಗರು ಬಿಸಿ ಮುಟ್ಟಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.23): ಅನಾರೋಗ್ಯ ಪೀಡಿತ ತಂದೆಯನ್ನು ಸೈಕಲ್‌ನಲ್ಲಿ ಕೂರಿಸಿ ಬರೋಬ್ಬರಿ 1200 ಕಿ.ಮಿ ಕ್ರಮಿಸಿ ತವರಿಗೆ ತಲುಪಿಸಿದ ಬಿಹಾರದ ಜ್ಯೋತಿ ಕುಮಾರಿ ಎಂಬಾಕೆಯ ಸಾಹಸವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಹಾಡಿ ಹೊಗಳಿದ್ದಾರೆ.
ಜ್ಯೋತಿ ತಂದೆ ಮೋಹನ್ ಪಾಸ್ವಾನ್ ಹರ್ಯಾಣದ ಗುಡಗಾಂವ್‌ನಲ್ಲಿ ವಾಸವಾಗಿದ್ದರು. ಲಾಕ್‌ಡೌನ್ ವೇಳೆಯಲ್ಲಿ ಮೋಹನ್ ಅಪಘಾತಕ್ಕೆ ತುತ್ತಾಗಿದ್ದರು. ಕೆಲಸವೂ ಇಲ್ಲದೇ ದುಡ್ಡು ಇಲ್ಲದೇ ಕಂಗಾಲಾಗಿದ್ದ ತಂದೆಯನ್ನು 15 ವರ್ಷದ ಬಾಲಕಿ ಸೈಕಲ್‌ನಲ್ಲಿ ತಂದೆಯನ್ನು ಕೂರಿಸಿಕೊಂಡು 1200 ದೂರದ ಬಿಹಾರದ ತನ್ನೂರಿಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಳು. ಇದು ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು.
ತಂದೆ ಕೂರಿಸಿಕೊಂಡು 1200 ಕಿ.ಮೀ. ಸೈಕಲ್ ತುಳಿದ 15 ವರ್ಷದ ಬಾಲಕಿ..!
ಈ ಬಗ್ಗೆ ವೈಬ್‌ಸೈಟ್ ಒಂದರಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಟ್ವೀಟ್ ಮಾಡಿ, ಭಾರತೀಯ ಜನರ ಹಾಗೂ ಸೈಕ್ಲಿಂಗ್ ಒಕ್ಕೂಟದ ಸಹಿಷ್ಣುತೆ ಮತ್ತು ಪ್ರೀತಿಯ ಈ ಸುಂದರವಾದ ಸಾಧನೆಯ ಕಲ್ಪನೆ ಇದು ಎಂದು ಬರೆದುಕೊಂಡಿದ್ದಾರೆ.
ಆದರೆ ವಲಸೆ ಕಾರ್ಮಿಕರ ಬವಣೆಯನ್ನು ಸೂಚಿಸುವ ಈ ಸುದ್ದಿಯನ್ನು ವೈಭವೀಕರಿಸಿದ್ದಕ್ಕೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ 'ಆಕೆಯ ಬಡತನ ಹಾಗೂ ಹತಾಷೆಯನ್ನು ವೈಭವೀಕರಿಸಲಾಗಿದೆ. ಜ್ಯೋತಿ 1200 ಕಿಲೋ ಮೀಟರ್ ಸೈಕಲ್ ಓಡಿಸಿದ್ದನ್ನು ಕೇಳಿ ಥ್ರಿಲ್ ಆಗುತ್ತಂತೆ ಇವರಿಗೆಲ್ಲ. ಇದು ಸರ್ಕಾರದ ವೈಫಲ್ಯ ಎನ್ನುವುದರ ಬದಲು ಸಾಧನೆ ಎಂದು ಬಿಂಬಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.