ಮಾಲ್‌ನಲ್ಲಿದ್ದ ಈ ಮಹಿಳೆ ಕೈಯಲ್ಲಿ ಮೊಬೈಲ್ ಇತ್ತು, ಎಸ್ಕಲೇಟರ್ ಸ್ಟಾಪ್ ಆಗಿದ್ದು ಗೊತ್ತೇ ಆಗಲಿಲ್ಲ!
ಜನರ ಕೈಗೆ ಮೊಬೈಲ್ ಸಿಕ್ಕಿದ್ರೆ ಕಥೆ ಮುಗೀತು. ಇಡೀ ದಿನ ಬೇಕಾದ್ರೂ ಮೊಬೈಲ್ ನೋಡ್ತಾ ಟೈಂ ಪಾಸ್ ಮಾಡೋರಿದ್ದಾರೆ. ಆದ್ರೆ ಮೊಬೈಲ್ ನಲ್ಲಿ ಜನ ಇಷ್ಟೊಂದು ಮೈಮರೆತ್ರೆ ಕಷ್ಟ... ಕಷ್ಟ..
ಮಕ್ಕಳು ಮೊಬೈಲ್ ನೋಡ್ತಾರೆ ಅನ್ನೋದು ಪಾಲಕರ ಆರೋಪ. ಆದ್ರೆ ದೊಡ್ಡವರೇ ದಾರಿ ತಪ್ಪಿದಾಗ ಪಾಪ ಮಕ್ಕಳೇನು ಮಾಡ್ತಾರೆ ಅನ್ನೋದು ನನ್ನ ಪ್ರಶ್ನೆ. ಈಗಿನ ದಿನಗಳಲ್ಲಿ ಮೊಬೈಲ್ ಭೂತ ಎಲ್ಲರನ್ನೂ ಅಂಟಿಕೊಂಡಿದೆ. ಎಲ್ಲೆಂದರಲ್ಲಿ ಯಾವಾಗಂದ್ರೆ ಆವಾಗ ಮೊಬೈಲ್ ಹಿಡಿದು ಮೈಮರೆಯುತ್ತಾರೆ ಜನರು.
ಈ ಮೊಬೈಲ್ (Mobile) ನಿಂದ ಏನೆಲ್ಲ ಅವಾಂತರಗಳಾಗುತ್ವೆ ಅನ್ನೋದನ್ನು ಸಾಮಾಜಿಕ ಜಾಲತಾಣ (Social Network) ಗಳಲ್ಲಿ ನಾವು ನೋಡ್ಬಹುದು. ಕೆಲ ದಿನಗಳ ಹಿಂದೆ ದೆಹಲಿ ಪೊಲೀಸರು ಟ್ವಿಟರ್ ನಲ್ಲಿ ವಿಡಿಯೋ ಹಾಕಿ, ಮೊಬೈಲ್ ನೋಡ್ತಾ ರಸ್ತೆಯಲ್ಲಿ ಓಡಾಡ್ಬೇಡಿ ಎಂದಿದ್ದರು. ದಾರಿ ಇರಲಿ, ಮನೆ ಇರಲಿ ಇಲ್ಲ ಮಾಲ್ ಇರಲಿ ಎಲ್ಲೆಂದ್ರೆಲ್ಲಿ ಮೊಬೈಲ್ ನೋಡುವ ಜನರಿಗೆ ವಾಸ್ತವದಲ್ಲಿ ನಾವೆಲ್ಲಿದ್ದೇವೆ, ಏನು ಮಾಡ್ತಿದ್ದೇವೆ ಎಂಬುದೇ ತಿಳಿಯೋದಿಲ್ಲ. ಈಗ ಫೇಸ್ಬುಕ್ (Facebook) ನಲ್ಲಿ ಒಂದು ವಿಡಿಯೋ ಪೋಸ್ಟ್ ಆಗಿದೆ. ಅದ್ರಲ್ಲಿ ಮೊಬೈಲ್ ಕೈನಲ್ಲಿ ಹಿಡಿದು ಮಹಿಳೆ ಮಾಡ್ತಿರುವ ಕೆಲಸ ನೋಡಿದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.
ಇಂಗ್ಲೀಷೂ ಬರ್ತಿರಲಿಲ್ಲ, ರತನ್ ಟಾಟಾ ಕೆಲಸ ಬಿಟ್ಮೇಲೆ ಯುಪಿಎಸ್‌ಸಿ ಪಾಸ್ ಆದ ಮಹಿಳೆ
ವೈರಲ್ ವಿಡಿಯೋದಲ್ಲಿ ಏನಿದೆ? : LADbible ಫೇಸ್ಬುಕ್ ಪೇಜ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬಳು ಎಸ್ಕಲೇಟರ್ ಮೇಲೆ ನಿಂತಿರೋದನ್ನು ನೀವು ನೋಡ್ಬಹುದು. ಆದ್ರೆ ಎಸ್ಕಲೇಟರ್ ವರ್ಕ್ ಆಗ್ತಿಲ್ಲ. ಕೈನಲ್ಲಿ ಮೊಬೈಲ್ ಹಿಡಿದು ಏನೋ ನೋಡ್ತಿರುವ ಮಹಿಳೆಗೆ ಅಲ್ಲಿ ಏನಾಗ್ತಿದೆ ಎನ್ನುವ ಗಮನವೇ ಇಲ್ಲ. ಆಕೆ ಮೊಬೈಲ್ ನೋಡೋದ್ರಲ್ಲಿ ತಲ್ಲೀನವಾಗಿರುವ ಕಾರಣ ಎಸ್ಕಲೇಟರ್ ನಿಂತಿದ್ದು ಆಕೆಗೆ ಗೊತ್ತೇ ಆಗಿಲ್ಲ. ಅನೇಕ ಜನರು ಆಕೆ ಮುಂದೆಯೇ ಮೆಟ್ಟಿಲು ಹತ್ತಿ ಹೋಗೋದನ್ನು ನೀವು ನೋಡ್ಬಹುದು. ಆದ್ರೆ ಮಹಿಳೆ ಮಾತ್ರ ಅಲ್ಲಿಂದ ಅಲುಗಾಡ್ತಿಲ್ಲ.
ಎಸ್ಕಲೇಟರ್ ನಿಂತಿದ್ದು ಅವರಿಗೆ ತಿಳಿದಿಲ್ಲ ಎಂದು ಈ ವಿಡಿಯೋಕ್ಕೆ ಶಿರ್ಷಿಕೆ ಹಾಕಲಾಗಿದೆ. ಈಕೆಗೆ ಯಾರು ಹೇಳಿಲ್ಲವೆಂದ್ರೆ ಇಲ್ಲೇ ದಿನಗಟ್ಟಲೆ ನಿಲ್ತಾಳೆ ಎಂದು ವಿಡಿಯೋದಲ್ಲಿ ಕಮೆಂಟ್ ಮಾಡಲಾಗಿದೆ. ವಿಡಿಯೋ ಈವರೆಗೆ 7.4 ಮಿಲಿಯನ್ ವೀವ್ಸ್ ಪಡೆದಿದೆ. ಮೂರು ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. 9 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ.
Zeenat Aman: ದುಡ್ಡಿಗೆ ಪ್ರೀತಿ ಕೊಳ್ಳೋ ತಾಕತ್ತಿಲ್ಲ, ಬದುಕಿನುದ್ದಕ್ಕೂ ನೋವುಂಡ ನಟಿಯ ಜೀವನ ಪಾಠ
ಸಾಮಾಜಿಕ ಜಾಲತಾಣ ಬಳಕೆದಾರರ ಕಮೆಂಟ್ : ಇದಕ್ಕೆ ಜನರು ನಾನಾ ರೀತಿಯ ಕಮೆಂಟ್ ಮಾಡಿದ್ದಾರೆ. ಫೋನ್ ನಲ್ಲಿ ಅದೇನೋ ಬಹಳ ಮುಖ್ಯವಾದ ವಿಷ್ಯ ನೋಡ್ತಿದ್ದಾಳೆ ಎಂದು ಒಬ್ಬರು ಬರೆದ್ರೆ ನಾವು ಹೀಗೆ ಸಾಮಾಜಿಕ ಜಾಲತಾಣ ಬಳಕೆ ಮಾಡ್ತಾ ಇಡೀ ವಿಶ್ವ, ತಮ್ಮ ಸುತ್ತಮುತ್ತಲಿನವರನ್ನೂ ಮರೆಯುತ್ತೇವೆ ಎಂದು ಇನ್ನೊಬ್ಬರು ಬರೆದಿದ್ದಾರೆ.
ಎಸ್ಕಲೇಟರ್ ಮಧ್ಯೆದಲ್ಲಿ ಹೀಗೆ ಮೊಬೈಲ್ ನೋಡ್ತಾ ನಿಂತಿದ್ದಕ್ಕೆ ಜನರು ಕೋಪಗೊಂಡಿದ್ದಾರೆ. ಮಧ್ಯದಲ್ಲಿ ನಿಂತು ಉಳಿದವರಿಗೆ ತೊಂದರೆ ನೀಡುವ ಬದಲು ಮನೆಗೆ ಹೋಗಿ ಎಂದು ಬೈದಿದ್ದಾರೆ.
ಎಸ್ಕಲೇಟರ್ ವರ್ಕ್ ಆಗ್ತಿಲ್ಲ ಎಂಬುದು ಈಕೆಯ ಅರಿವಿಗೆ ಬರದೆ ವಾರಗಟ್ಟಲೆ ನಿಂತ್ರೆ ಮನೆಯವರು ಮಿಸ್ಸಿಂಗ್ ದೂರು ನೀಡ್ತಾರೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮಹಿಳೆಯನ್ನು ತಳ್ತಾ ಮೇಲೆ ಹೋಗುವ ಜನರು, ಎಸ್ಕಲೇಟರ್ ವರ್ಕ್ ಮಾಡ್ತಿಲ್ಲ ಎಂದು ಹೇಳ್ಬಹುದಿತ್ತು ಅನ್ನೋದು ಕೆಲವರ ವಾದ.
ಪಕ್ಕದ ಎಸ್ಕಲೇಟರ್ ವರ್ಕ್ ಆಗ್ತಿರುವ ಕಾರಣ, ತನ್ನ ಎಸ್ಕಲೇಟರ್ ಮೇಲೆ ಹೋಗ್ತಿದೆ ಎಂದು ಈಕೆ ಭಾವಿಸಿದ್ದಾಳೆ ಎಂಬ ಕಮೆಂಟ್ ಕೂಡ ಇಲ್ಲಿದೆ. ಕೆಲವರಿಗೆ ಈ ಮಹಿಳೆ ಮೊಬೈಲ್ ನಲ್ಲಿ ಏನು ನೋಡ್ತಿದ್ದಾಳೆ ಎನ್ನುವ ಕುತೂಹಲವಿದೆ. ಒಬ್ಬರು ನನ್ನ ವಿಡಿಯೋ ಅಂದ್ರೆ ಮತ್ತೊಬ್ಬರು ಕೊರಿಯನ್ ಧಾರಾವಾಹಿ ಎಂದಿದ್ದಾರೆ. ಒಟ್ಟಿನಲ್ಲಿ ನಿಂತಿದ್ದ ಎಸ್ಕಲೇಟರ್ ಮೇಲೆ ನಿಂತು ಮಹಿಳೆ ವೈರಲ್ ಆಗಿದ್ದಾಳೆ.