Zeenat Aman: ದುಡ್ಡಿಗೆ ಪ್ರೀತಿ ಕೊಳ್ಳೋ ತಾಕತ್ತಿಲ್ಲ, ಬದುಕಿನುದ್ದಕ್ಕೂ ನೋವುಂಡ ನಟಿಯ ಜೀವನ ಪಾಠ

ದುಡ್ಡಿಗೆ ಪ್ರೀತಿಯ ಕೊಳ್ಳೋ ತಾಕತ್ತಿಲ್ಲ ಎಂದು ಬದುಕಿನ ಪಾಠವನ್ನು ಜಾಹೀರಾತಿನ ಮೂಲಕ ಹೇಳಿದ್ದಾರೆ ನಟಿ ಜೀನತ್​ ಅಮನ್​. ಅಂದಹಾಗೆ ಇವರ ಬದುಕು ನೋವಿನ ಹಂದರ. 
 

Zeenat Aman is her unapologetic self in new ad says Money cant buy love suc

ದುಡ್ಡೊಂದಿದ್ದರೆ ಏನು ಬೇಕಾದರೂ ಖರೀದಿಸಬಹುದು ಎಂಬುದಾಗಿ ಹಲವರು ಅಂದುಕೊಂಡಿರುತ್ತಾರೆ. ಪ್ರತಿಯೊಬ್ಬರಿಗೂ ಶ್ರೀಮಂತರಾಗಬೇಕು, ಸಿಕ್ಕಾಪಟ್ಟೆ ಆಸ್ತಿ ಹೊಂದಬೇಕು ಅನ್ನೋ ಆಸೆ ಇರುತ್ತದೆ. ಇದಕ್ಕೆ ಕಾರಣ ದುಡ್ಡಿನಿಂದ ಏನನ್ನಾದರೂ ಖರೀದಿಸಬಹುದು ಎನ್ನುವ ಕಾರಣಕ್ಕೆ. ಆದರೆ ದುಡ್ಡಿನಿಂದ ಬಹುತೇಕ ಖರೀದಿ ಸಾಧ್ಯವಿಲ್ಲ ಎನ್ನುವ ಅಂಶ ತಿಳಿಯುವುದು ಜೀವನ ಪ್ರೀತಿಯಲ್ಲಿ ಸೋತಾಗ ಮಾತ್ರ. ಹೌದು.  ದುಡ್ಡಿದ್ದರೆ ಸುಖ, ನೆಮ್ಮದಿ, ನಿಷ್ಕಲ್ಮಷ ಪ್ರೀತಿ, ಸ್ನೇಹ ಯಾವುದನ್ನೂ ಗಳಿಸಲು ಸಾಧ್ಯವಿಲ್ಲ. ಸುಖ, ನೆಮ್ಮದಿ ದುಡ್ಡಿನಿಂದ ಸಿಗುತ್ತದೆ ಎಂದು ಅಂದುಕೊಳ್ಳುವವರು ಆಗರ್ಭ ಶ್ರೀಮಂತರನ್ನೊಮ್ಮೆ ಕೇಳಿದರೆ ತಿಳಿಯುತ್ತದೆ. ಒಮ್ಮೆ ದೇಹಕ್ಕೆ ಗಂಭೀರ ಕಾಯಿಲೆ ಅಂಟಿದರೆ, ಅದನ್ನು ಎಲ್ಲಾ ಸಲ ದುಡ್ಡಿನಿಂದ ಗುಣಮಾಡಲು ಸಾಧ್ಯವಿಲ್ಲ ಎನ್ನುವುದು ಅಷ್ಟೇ ಮುಖ್ಯ. ಅದರಲ್ಲಿಯೂ ದುಡ್ಡಿದ್ದು, ಕೈಗೊಂದು-ಕಾಲಿಗೊಂದು ಆಳಿದ್ದರೂ ಒಂಟಿಯಾಗಿ ಬದುಕುವವನ ಬಳಿ ಹೋಗಿ ಕೇಳಿದರೆ ದುಡ್ಡಿಗೆ ಇರುವ ನೈಜ ಬೆಲೆ ತಿಳಿಯುತ್ತದೆ. ದುಡ್ಡಿದ್ದ ಮಾತ್ರಕ್ಕೆ ಮನಶಾಂತಿಯನ್ನು ಖರೀದಿಸಲೂ ಸಾಧ್ಯವಿಲ್ಲ. 

ಇದೇ ಜೀವನ ಪಾಠವನ್ನು  ಹಿರಿಯ ನಟಿ ಜೀನತ್ ಅಮನ್ (Zeenat Aman) ಅವರು ಈಗ ಹೇಳಿದ್ದಾರೆ. ಆದರೆ ಅವರು ಬದುಕಿನ ಈ ಪರಿಚಯವನ್ನು ಮಾಡಿಸಿರುವುದು ಒಂದು ಜಾಹೀರಾತಿನ ಮೂಲಕ. ಅಂದಹಾಗೆ ಜೀನತ್​ ಅಮನ್​ 70 ರಿಂದ 90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿಯರಲ್ಲಿ ಒಬ್ಬರು. ತಮ್ಮ ಸೆಕ್ಸಿ ಲುಕ್​ ಹಾಗೂ ಅಮಲೇರಿದ ಕಣ್ಣುಗಳಿಂದಲೇ ಪಡ್ಡೆ ಹುಡುಗರ ಹೃದಯ ಕದ್ದ ನಟಿ ಇವರು. ತಮ್ಮ ಮಾದಕ ನೋಟ, ನೃತ್ಯದಿಂದ ಜೀನತ್​ ಹಲವರ ಹೃದಯ ಗೆದ್ದಿದ್ದರು.  ಆ ಕಾಲದಲ್ಲಿಯೇ ಅತ್ಯಂತ ಬೋಲ್ಡ್​ ಆಗಿ ನಟಿಸಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. 1971ರಲ್ಲಿ ಬಿಡುಗಡೆಯಾಗಿದ್ದ ಹರೇ ಕೃಷ್ಣ ಹರೇ ರಾಮ್​ ಚಿತ್ರದಲ್ಲಿನ ದಮ್ಮರೇ ದಂ... ಹಾಡಂತೂ ಕೆಲ ದಶಕಗಳವರೆಗೆ ಎಲ್ಲರ ಬಾಯಲ್ಲೂ ನಲಿದಾಡಿತ್ತು. ಇಂಥ ನಟಿ ಈಗ ದುಡ್ಡು ಹಾಗೂ ಜೀವನದ ಪಾಠವನ್ನು ಜಾಹೀರಾತಿನ ಮೂಲಕ ಹೇಳಿದ್ದಾರೆ.

Zeenat Aman: ಮೊದಲ ಪತಿ ದವಡೆ ಮುರಿದ, 3ನೇಯವ ರೇಪ್​ ಮಾಡಿದ, ಬಾಲಿವುಡ್​ ಸೆಕ್ಸಿಯ ಭಯಾನಕ ಸ್ಟೋರಿ!

ಕ್ರೆಡ್​ಗೆ ನೀಡಿರುವ ಜಾಹೀರಾತಿನಲ್ಲಿ ನಟಿ ಜೀವನದ ಪಾಠ ಮಾಡಿದ್ದಾರೆ. 54 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ, ಬಿಳಿ ಬಣ್ಣದ ಸೂಟ್‌ನಲ್ಲಿ ಕಂಗೊಳಿಸುತ್ತಿರುವ ಜೀನತ್, 'ನಟನಾಗುವುದು ಸುಲಭ, ಆದರೆ ನಿಮ್ಮನ್ನು ನೀವೇ ತಿಳಿದುಕೊಳ್ಳುವುದು ಹಾಗೂ ನೀವು ನೀವೇ ಆಗಿರುವುದು ತುಂಬಾ ಕಷ್ಟ' ಎಂದಿದ್ದಾರೆ.  'ನೀವು ಯಾರು?' 'ನಿಮ್ಮ ಉದ್ದೇಶವೇನು?' 'ನಾನೇಕೆ ಇಲ್ಲಿದ್ದೇನೆ?' ಎಂಬ ಅಸ್ತಿತ್ವವಾದದ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ನೀವು ನೀವಾದಾಗ ಉದ್ಭವಿಸುತ್ತದೆ ಎಂದಿರುವ ನಟಿ, ಜೀವನದಲ್ಲಿ ಹಣದಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ಹಣದಿಂದ ಪ್ರೀತಿ ಖರೀದಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಕೊನೆಗೆ ಜಾಹೀರಾತಿನ ಕುರಿತು ಹೇಳಿದ ನಟಿ ಯುಪಿಐ ಪೇಮೆಂಟ್​ ಮಾಡಲು ನಿಮ್ಮ ರೂಪೆ ಕ್ರೆಡಿಟ್​ ಕಾರ್ಡ್​ ಅನ್ನು ಕ್ರೆಡ್​ಗೆ ಲಿಂಕ್​ ಮಾಡಿ ಎಂದಿದ್ದಾರೆ. 

ಜೀನತ್​ ಅಮನ್​ ಪ್ರೀತಿ, ದುಡ್ಡಿನ ಜೀವನದ ಪಾಠ ಮಾಡಲು ಕಾರಣವೂ ಇದೆ.  ಇದಕ್ಕೆ ಕಾರಣ, ಅವರ  ಕರಾಳ ಬದುಕು. ಎಲ್ಲರ ಕಣ್ಣಿಗೆ ಕಾಣುವ ಬಣ್ಣದ ಲೋಕದಂತೆ ಕೆಲವು ನಟ ನಟಿಯರ ನಿಜ ಜೀವನ ಬಣ್ಣದ್ದಾಗಿರುವುದಿಲ್ಲ. ಅಲ್ಲಿ ಬರೀ ಕತ್ತಲು, ನೋವು, ನಿರಾಸೆ. ಅಂಥ ಕೆಟ್ಟ ಜೀವನವನ್ನು ಅನುಭವಿಸಿರುವವರಲ್ಲಿ ಜೀನತ್​ ಅಮನ್​ ಕೂಡ ಒಬ್ಬರು. ಬೋಲ್ಡ್​ ದೃಶ್ಯಗಳಿಂದ ಹಣ ಗಳಿಸಿದ್ದರೂ  ಜೀವನವೇ ದೊಡ್ಡ ಟ್ರ್ಯಾಜಡಿ. ಜೀನತ್ ಮೊದಲು ನಟ ಸಂಜಯ್ ಖಾನ್ (Sanjay Khan) ಅವರನ್ನು ರಹಸ್ಯವಾಗಿ ವಿವಾಹವಾಗಿದ್ದರು.  ಆದರೆ ಶೀಘ್ರದಲ್ಲೇ ಅವರು  ವಿಚ್ಛೇದನ (Divorce) ಪಡೆದರು.  ಆ ದಿನಗಳಲ್ಲಿ ಜೀನತ್ ಯಶಸ್ಸಿನ ಉತ್ತುಂಗದಲ್ಲಿದ್ದರು. ಸಂಜಯ್ ಖಾನ್​ಗೆ ಅದಾಗಲೇ  ಮದುವೆಯಾಗಿ ಮೂರು ಮಕ್ಕಳಿದ್ದರು. ಸಂಜಯ್ ಖಾನ್ ಅವರೊಂದಿಗೆ ಮುರಿದುಬಿದ್ದ ನಂತರ, ಜೀನತ್ ನಟ ಮತ್ತು ನಿರ್ಮಾಪಕ ಮಝರ್ ಖಾನ್ (Maghar Khan)ಅವರನ್ನು  ಮದುವೆಯಾದರು ಮತ್ತು ಅವರೊಂದಿಗೆ ಇಬ್ಬರು ಪುತ್ರರನ್ನು ಹೊಂದಿದ್ದಾರೆ. ಮಝರ್ ನಂತರ ಸಾವನ್ನಪ್ಪಿದರು.  ನಂತರ ನಟಿ  ಅಮನ್ ಖನ್ನಾ ಅಕಾ ಸರ್ಫರಾಜ್ ಜಾಫರ್ ಅಹ್ಸನ್  ಅವರನ್ನು ವಿವಾಹವಾದರು.  ಆದಾಗ್ಯೂ, ಈ ಮದುವೆಯು ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಈ ಮದುವೆಯನ್ನು ಮುರಿದುಕೊಳ್ಳುವಾಗ, ಜೀನತ್ ಸರ್ಫರಾಜ್ ಮೇಲೆ ಅತ್ಯಾಚಾರ ಮತ್ತು ವಂಚನೆ ಎಂದು ಆರೋಪಿಸಿದರು.

ಹಿಂದೂ- ಮುಸ್ಲಿಂ ಪ್ರೇಮ್​ ಕಹಾನಿ: ಪ್ರಿಯಕರನ ಬಿಟ್ಟು ಸ್ನೇಹಿತೆ ಪತಿಯನ್ನೇ ಮದ್ವೆಯಾದ ಮಲೈಕಾ ಅರೋರಾ ತಂಗಿ!

ಜೀನತ್ ಯಶಸ್ಸಿನ ಉತ್ತುಂಗದಲ್ಲಿದ್ದಾಗ, ಆಕೆಯ ಹೆಸರು ನಟ ದೇವ್ ಆನಂದ್‌ (Dev Anand) ಅವರೊಂದಿಗೆ ಸೇರಿಕೊಂಡಿತ್ತು. ಆದರೆ ಆಗಲೇ ದೇವ್​ ಆನಂದ್​   ಇಬ್ಬರು ಮಕ್ಕಳ ತಂದೆಯಾಗಿದ್ದರು. ಆದ್ದರಿಂದ ಅವರು ಈ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಇದಾದ ನಂತರ ಜೀನತ್ ಹೆಸರು ಪಾಕಿಸ್ತಾನಿ ಕ್ರಿಕೆಟಿಗ (ನಂತರ  ಪಾಕ್​ ಪ್ರಧಾನಿ) ಇಮ್ರಾನ್ ಖಾನ್ (Imran Khan) ಜೊತೆಗೂ ಸೇರಿಕೊಂಡಿತ್ತು. ಹೀಗೆ ಬದುಕಿನುದ್ದಕ್ಕೂ ಕಾಂಟ್ರವರ್ಸಿಯ ಜೊತೆ ದುರಂತ ಜೀವನ ಅನುಭವಿಸಿದ್ದಾರೆ ನಟಿ ಜೀನತ್​ ಅಮಾನ್​. ಸದ್ಯ ಅವರಿಗೆ 71 ವರ್ಷ ವಯಸ್ಸಾಗಿದ್ದು, ಮಕ್ಕಳ ಜೊತೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಆದರೆ ನಿಷ್ಕಲ್ಮಷ ಪ್ರೀತಿ ಅವರಿಗೆ ಸಿಗಲೇ ಇಲ್ಲ. 
 

Latest Videos
Follow Us:
Download App:
  • android
  • ios