ಬರ್ತಾ ಬರ್ತಾ ಹೆಣ್ಣಿಗೇಕೆ ಕಾಮಾಸಕ್ತಿ ಕಡಿಮೆಯಾಗುತ್ತೆ? ಇವೆಲ್ಲಾ ರೀಸನ್ಸ್ ಇರಬಹುದು
ಆರೋಗ್ಯಕ್ಕೆ ನಿಯಮಿತ ಸೆಕ್ಸ್ ಕೂಡ ಮುಖ್ಯ. ಅನೇಕ ಬಾರಿ ದಾಂಪತ್ಯದಲ್ಲಿ ಬಿರುಕು ಮೂಡಲು ಇದೇ ಕಾರಣವಾಗಿರುತ್ತದೆ. ಮಹಿಳೆಯರಲ್ಲಿ ಕಾಮಾಸಕ್ತಿ ಕಡಿಮೆಯಾಗುವ ಕಾರಣ ಪುರುಷರ ಆಸಕ್ತಿ ಬೇರೆಡೆ ಹೊರಳುತ್ತದೆ. ಮಹಿಳೆಯಾದವಳು ಆಕೆ ದೇಹದಲ್ಲಿ ಯಾಕೆ ಈ ಬದಲಾವಣೆಯಾಗ್ತಿದೆ ಎಂಬುದನ್ನು ತಿಳಿದಿರೋದು ಮುಖ್ಯ.
ನಂಬಿಕೆ, ಗೌರವ, ಪ್ರೀತಿ, ಮಾತುಕತೆ ಮೂಲಕ ಶಾರೀರಿಕ ಸಂಬಂಧ ಬೆಳೆಸಿದ್ರೆ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ದಾಂಪತ್ಯದಲ್ಲಿ ಸಂತೋಷ ಬಯಸುವವರು ಈ ಎಲ್ಲ ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದ್ರೆ ದೀರ್ಘಕಾಲದಿಂದ ಸಂಬಂಧ ಬೆಳೆಸುತ್ತಿರುವ ಅಥವಾ ಒಂದು ವಯಸ್ಸಿನ ಗಡಿ ದಾಟಿದ ನಂತ್ರ ಬಹುತೇಕ ಜನರು ಸಂಭೋಗದಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಒಂದು ವಯಸ್ಸಿನ ನಂತ್ರ ನಮ್ಮ ದೇಹದಲ್ಲಾಗುವ ನೈಸರ್ಗಿಕ ಬದಲಾವಣೆಯಿಂದ ಶಾರೀರಿಕ ಸಂಬಂಧ ಬೆಳೆಸುವ ಆಸಕ್ತಿ ಕಡಿಮೆಯಾಗುತ್ತದೆ. ಇದ್ರಿಂದಾಗಿ ಸೆಕ್ಸ್ ಜೀವನ ನೀರಸಗೊಳ್ಳುತ್ತದೆ. ಇದು ಸಹಜ. ಆದ್ರೆ ಬರೀ ಕಾಮಾಸಕ್ತಿ ಇಳಿಕೆಗೆ ಇದು ಮಾತ್ರ ಕಾರಣವಲ್ಲ.
ಸೆಕ್ಸ್ (Sex) ನೈಸರ್ಗಿಕ ಕ್ರಿಯೆ. ನಿಯಮಿತವಾಗಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಆರೋಗ್ಯ (Health) ಕ್ಕೆ ಒಳ್ಳೆಯದು ಎಂದು ಅನೇಕ ಸಂಶೋಧನೆಗಳು ಹೇಳಿವೆ. ಹಾಗೆಯೇ ಇದು ಮನಸ್ಸು ಮತ್ತು ದೇಹ ಎರಡರ ಆರೋಗ್ಯವನ್ನು ವೃದ್ಧಿಸುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದ್ರೆ ಕಾಮಾಸಕ್ತಿ (Libido) ಕಡಿಮೆಯಾದಂತೆ ಮಾನಸಿಕ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ನಿಮ್ಮಲ್ಲಿ ಕಾಮಾಸಕ್ತಿ ಕಡಿಮೆಯಾಗಲು ಅನೇಕ ಕಾರಣವಿದೆ. ನಾವಿಂದು ಅದ್ಯಾವುದು ಎಂಬುದನ್ನು ನಿಮಗೆ ಹೇಳ್ತೇವೆ.
ಚೆನ್ನೈ; ಏರಿಕೆಯಾಗ್ತಿದೆ BREAST CANCER ಮಹಿಳೆಯರ ಸಂಖ್ಯೆ
ಮಹಿಳೆಯರ ಸೆಕ್ಸ್ ಡ್ರೈವ್ ಮೇಲೆ ಪರಿಣಾಮ ಬೀರುತ್ತೆ ಈ ಸಂಗತಿ :
ದಂಪತಿ ಮಧ್ಯೆ ಇರುವ ಅನಾರೋಗ್ಯಕರ ಸಂಬಂಧ : ದಂಪತಿ ಮಧ್ಯೆ ಸೆಕ್ಸ್ ಬರೀ ಲೈಂಗಿಕ ಬಯಕೆ ತೀರಿಸಿಕೊಳ್ಳಲು ಸೀಮಿತವಾಗಬಾರದು. ಇಲ್ಲಿ ಸಂವಹನಕ್ಕೂ ಅವಕಾಶವಿರಬೇಕು. ಆದ್ರೆ ಇದು ಆಗ್ತಿಲ್ಲ ಎಂದಾಗ ಮಹಿಳೆಯರು ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ತಾರೆ.
ಮಗುವಿನ ಹೆರಿಗೆ (Childbirth) : ಮನೆಗೊಂದು ಮಗು ಬಂದ್ರೆ ಸಂತೋಷ ಇಮ್ಮಡಿಗೊಳ್ಳುತ್ತದೆ. ಹಾಗೆ ತಾಯಿಯ ಜವಾಬ್ದಾರಿ ಹೆಚ್ಚಾಗುತ್ತದೆ. ತಾಯಿಯಾದವಳು ಒತ್ತಡ, ನಿದ್ರಾಹೀನತೆ ಮತ್ತು ವಿವಿಧ ದೈಹಿಕ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ಎಲ್ಲಾ ಅಂಶಗಳು ಲಿಬಿಡೋ ಕೊರತೆಯನ್ನು ಉಂಟುಮಾಡುತ್ತವೆ. ಇದು ಸೆಕ್ಸ್ ಡ್ರೈವ್ ಕಡಿಮೆ ಮಾಡುತ್ತದೆ.
ಕಾಮಾಸಕ್ತಿ ಕಡಿಮೆ ಮಾಡುತ್ತೆ ಒತ್ತಡ : ಮೆದುಳು ದೇಹದ ಪ್ರತಿಯೊಂದು ಕಾರ್ಯವನ್ನು ನಿಯಂತ್ರಿಸುತ್ತದೆ. ಮನಸ್ಸು ಒತ್ತಡದಿಂದ ಕೂಡಿದ್ದಾಗ ದೇಹದ ಅನೇಕ ಕೆಲಸಗಳು ನಿಧಾನಗೊಳ್ಳುತ್ತವೆ. ಒತ್ತಡ ಯಾವುದೇ ಕಾರಣಕ್ಕೆ ಬಂದಿರಬಹುದು, ದಾಂಪತ್ಯ ಸಮಸ್ಯೆ, ಮಕ್ಕಳ ಸಮಸ್ಯೆ, ಕೆಲಸದ ಸ್ಥಳದಲ್ಲಿ ತೊಂದರೆ, ಮಕ್ಕಳು ಹಾಗೂ ಆರೋಗ್ಯದ ವಿಷ್ಯ ಹೀಗೆ ಯಾವುದೇ ಕಾರಣಕ್ಕೆ ನೀವು ಒತ್ತಡಕ್ಕೊಳಗಾಗಿದ್ದರೂ ಅದು ನಿಮ್ಮ ಸೆಕ್ಸ್ ಲೈಫ್ ಮೇಲೆ ಪ್ರಭಾವ ಬೀರುತ್ತದೆ. ಇದ್ರಿಂದ ದೂರ ಉಳಿಯಬೇಕೆಂದ್ರೆ ನೀವು ಯೋಗ ಹಾಗೂ ಧ್ಯಾನವನ್ನು ಮಾಡ್ಬೇಕು. ಒತ್ತಡ ನಿಮ್ಮನ್ನು ಕಾಡದಂತೆ ನಿಮ್ಮ ಮನಸ್ಸನ್ನು ಕಾಪಾಡಿಕೊಳ್ಳಬೇಕು.
ಹೆಚ್ಚೆಚ್ಚು ಔಷಧಿಯಿಂದ ಕಾಡುತ್ತೆ ಸಮಸ್ಯೆ : ನೀವು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು ಅದಕ್ಕೆ ಔಷಧಿ ತೆಗೆದುಕೊಳ್ತಿದ್ದರೆ ಅದು ನಿಮ್ಮ ಹಾರ್ಮೋನ್ ಮೇಲೆ ಪ್ರಭಾವ ಬೀರುತ್ತದೆ. ಇದ್ರಿಂದಾಗಿ ನಿಮ್ಮ ಸೆಕ್ಸ್ ಆಸಕ್ತಿ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ಖಾಯಿಲೆ, ರಕ್ತದೊತ್ತಡ, ಮಾನಸಿಕ ಖಾಯಿಲೆ ಇವೆಲ್ಲದಕ್ಕೆ ನೀವು ತೆಗೆದುಕೊಳ್ಳುವ ಮಾತ್ರೆ ಕಾಮಾಸಕ್ತಿ ಕಡಿಮೆ ಮಾಡುತ್ತದೆ.
ಗರ್ಭನಿರೋಧಕ ಮಾತ್ರೆ : ಅನಗತ್ಯ ಗರ್ಭಧಾರಣೆ ತಡೆಯಲು ಗರ್ಭನಿರೋಧಕ ಮಾತ್ರೆ ಸೇವನೆ ಮಾಡುವವರಿದ್ದಾರೆ. ಇದು ನಿಮಗೆ ಅರಿವಿಲ್ಲದೆ ನಿಮ್ಮ ದೇಹವನ್ನು ಹಾಳು ಮಾಡಿರುತ್ತದೆ. ಇದ್ರಿಂದ ಕಾಮಾಸಕ್ತಿ ಕೂಡ ಕಡಿಮೆಯಾಗುತ್ತದೆ.
ಮುಟ್ಟು ನಿಂತಾಗ : ಮುಟ್ಟು ನಿಲ್ಲುವ ಸಂದರ್ಭದಲ್ಲಿ ಹಾಗೂ ಮುಟ್ಟು ನಿಂತ ಮೇಲೆ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ. ಯೋನಿಯ ಅಂಗಾಂಶ ಒಣಗುತ್ತದೆ. ಈ ವೇಳೆ ಸೆಕ್ಸ್ ನೋವು ನೀಡುತ್ತದೆ. ಅನೇಕ ಮಹಿಳೆಯರು ಲೈಂಗಿಕ ಆಸಕ್ತಿ ಕಳೆದುಕೊಳ್ತಾರೆ.
ಚಿಕ್ಕ ವಯಸಲ್ಲೇ ಅಜ್ಜಿಯಂತೆ ಕಾಣ್ತಿದ್ದೀರಾ? ಈ ತಪ್ಪು ಮಾಡೋದು ಬಿಡಿ
ದೈಹಿಕ ಚಟುವಟಿಕೆ ಕೊರತೆ : ಜಡ ಜೀವನ ಶೈಲಿ ಕೂಡ ಇದಕ್ಕೆ ಕಾರಣ. ನೀವು ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡುವುದ್ರಿಂದ ಕಾಮಾಸಕ್ತಿ ಕಡಿಮೆಯಾಗ್ಬಹುದು. ಹಾಗಾಗಿ ನೀವು ವ್ಯಾಯಾಮ, ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿ.