ಚೆನ್ನೈ; ಏರಿಕೆಯಾಗ್ತಿದೆ Breast Cancer ಮಹಿಳೆಯರ ಸಂಖ್ಯೆ

ಕ್ಯಾನ್ಸರ್ ನಲ್ಲಿ ನಾನಾ ವಿಧಗಳಿವೆ. ಬಹುತೇಕ ಕ್ಯಾನ್ಸರ್ ಕೊನೆ ಹಂತದವರೆಗೂ ತನ್ನ ಗುಟ್ಟು ಬಿಡೋದಿಲ್ಲ. ಸ್ತನ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಗೊತ್ತಾದ್ರೂ ಅದನ್ನು ನಿರ್ಲಕ್ಷ್ಯಿಸೋರೇ ಹೆಚ್ಚು. ಚೆನ್ನೈನಲ್ಲಿ ಕಳೆದ 7 ವರ್ಷಗಳಿಂದ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದೆ. 
 

Breast Cancer In Chennai Women Doubled In Seven Years

ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಚೆನ್ನೈನಲ್ಲಿ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಬಂದ ವರದಿಯೊಂದು ಜನರಿಗೆ ಶಾಕ್ ನೀಡಿದೆ. ಚೆನ್ನೈನಲ್ಲಿ ಸ್ತನ ಕ್ಯಾನ್ಸರ್ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಚೆನ್ನೈ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಂಭವವು ಏಳು ವರ್ಷಗಳಲ್ಲಿ ಸುಮಾರು ದ್ವಿಗುಣಗೊಂಡಿದೆ. ಅಡ್ಯಾರ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಮತ್ತು ರಾಜ್ಯ ಆರೋಗ್ಯ ಇಲಾಖೆ ಸಂಗ್ರಹಿಸಿದ ವರದಿಯಲ್ಲಿ ಇದು ಬಹಿರಂಗಗೊಂಡಿದೆ. 

ವರದಿ (Report) ಹೇಳೋದೇನು? : ಚೆನ್ನೈ (Chennai) ನಲ್ಲಿ ಎಷ್ಟು ಮಹಿಳೆಯರು ಸ್ತನ (Breast) ಕ್ಯಾನ್ಸರ್ ಗೆ ತುತ್ತಾಗಿದ್ದಾರೆ ಎನ್ನುವ ಬಗ್ಗೆ ವರದಿ ಸಿದ್ಧವಾಗಿದೆ. ವರದಿ ಪ್ರಕಾರ, 2016 – 2018ರಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ನ (Cancer) ಕ್ರ್ಯೂಡ್ ಇನ್ಸಿಡೆನ್ಸ್ ರೇಟ್ (ಸಿಐಆರ್) ಒಂದು ಲಕ್ಷ ಜನಸಂಖ್ಯೆಗೆ 52 ಎಂಬುದು ಗೊತ್ತಾಗಿದೆ. 2006ರಿಂದ 2011ರವರೆಗೆ ಈ ದರ 27.5ರಷ್ಟಿತ್ತು. ಒಂದು ನಿರ್ದಿಷ್ಟ ವರ್ಷದಲ್ಲಿ ನಿರ್ದಿಷ್ಟ ಜನಸಂಖ್ಯೆಯಲ್ಲಿ ಸಂಭವಿಸುವ ಪ್ರಕರಣಗಳನ್ನು ಸಿಐಆರ್ ಎಂದು ಹೇಳಲಾಗುತ್ತದೆ. 

ಹಾರ್ಟ್ ಅಟ್ಯಾಕ್‌ ಆದ್ರೂ ಆಂಜಿಯೋಪ್ಲಾಸ್ಟಿ ಸರ್ಜರಿಯಿಂದ ಬದುಕುಳಿದ ಸುಶ್ಮಿತಾ ಸೇನ್‌, ಹಾಗಂದ್ರೇನು ?

2016-18ರಲ್ಲಿ ಚೆನ್ನೈನಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಂಡ ಸ್ತನ ಮತ್ತು ಸ್ತ್ರೀರೋಗ ಕ್ಯಾನ್ಸರ್‌ ಸಿಐಆರ್ 83.4 ಆಗಿತ್ತು. ಇದೇ ವೇಳೆ ಇತರ ಕ್ಯಾನ್ಸರ್ ಸಿಐಆರ್ 69.6 ಆಗಿತ್ತು.  2006-2011ರಲ್ಲಿ ಗರ್ಭಕಂಠ ಕ್ಯಾನ್ಸರ್ ಸಿಐಆರ್ 14.3 ಇತ್ತು. ಅಂಡಾಶಯ ಕ್ಯಾನ್ಸರ್ ಸಿಐಆರ್ 6.1 ಮತ್ತು ಎಂಡೊಮೆಟ್ರಿಯಲ್ ಕ್ಯಾನ್ಸರ್ ಸಿಐಆರ್ 3.1 ಆಗಿತ್ತು ಎಂದು ಕ್ಯಾನ್ಸರ್ ನೋಂದಾವಣೆ ಡೇಟಾ ತೋರಿಸುತ್ತದೆ. 2016-2018 ರ ಡೇಟಾ ಪ್ರಕಾರ, ಗರ್ಭಕಂಠದ ಕ್ಯಾನ್ಸರ್ ಸಿಐಆರ್ 11.5 ಕ್ಕೆ ಇಳಿದಿದೆ. ಆದರೆ ಎಂಡೊಮೆಟ್ರಿಯಲ್ ಕ್ಯಾನ್ಸರ್ ಸಿಐಆರ್ 7.5 ಕ್ಕೆ ಮತ್ತು ಅಂಡಾಶಯ ಕ್ಯಾನ್ಸರ್ ಸಿಐಆರ್ 9.6 ಕ್ಕೆ ಹೆಚ್ಚಾಗಿದೆ ಎಂದು ಡೇಟಾ ಹೇಳ್ತಿದೆ. 

ಅಡ್ಯಾರ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಎಪಿಡೆಮಿಯಾಲಜಿ, ಬಯೋ ಸ್ಟಾಟಿಸ್ಟಿಕ್ಸ್ ಮತ್ತು ಕ್ಯಾನ್ಸರ್ ರಿಜಿಸ್ಟ್ರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ ಸಂಪತ್ ಪ್ರಕಾರ, ಮುಂಬೈ, ಬೆಂಗಳೂರು ಮತ್ತು ಚೆನ್ನೈನಲ್ಲಿ ಸ್ತನ ಕ್ಯಾನ್ಸರ್ ಸಂಖ್ಯೆ ಹೆಚ್ಚಾಗಿದೆಯಂತೆ. ಹಾಗೆ ನಗರ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆಯನ್ನು ಹೆಚ್ಚಾಗಿ ನೋಡಬಹುದು ಎಂದು ಅವರು ಹೇಳಿದ್ದಾರೆ.

ಸ್ತನ ಕ್ಯಾನ್ಸರ್ ಹೆಚ್ಚಾಗಲು ಯಾವ ಅಂಶ ಕಾರಣವಾಗ್ತಿದೆ ಎನ್ನುವ ಬಗ್ಗೆ ನಿರ್ದಿಷ್ಟ ಅಧ್ಯಯನಗಳ ಅಗತ್ಯವಿದೆ ಎಂದವರು ಹೇಳಿದ್ದಾರೆ. ಅಷ್ಟೇ ಅಲ್ಲ ಜಾಗೃತಿ ಅಭಿಯಾನ, ಸ್ಕ್ರೀನಿಂಗ್ ಶಿಬಿರಗಳು ನಡೆಯಬೇಕೆಂದು ಸಂಪತ್ ಹೇಳಿದ್ದಾರೆ.  ಬಹುತೇಕ ಮಹಿಳೆಯರು ಕ್ಯಾನ್ಸರ್ ಮೊದಲ ಅಥವಾ ಎರಡನೇ ಹಂತದಲ್ಲಿರುವಾಗ್ಲ ಚಿಕಿತ್ಸೆಗೆ ಬರ್ತಿದ್ದಾರೆ ಇದು ಖುಷಿ ಸಂಗತಿ. ಮಹಿಳೆಯರಲ್ಲಿ ಜಾಗೃತಿ ಹೆಚ್ಚಾಗ್ತಿದೆ. ಆದ್ರೆ 30 ಹಾಗೂ ಅದಕ್ಕಿಂತ ಮೇಲ್ಪಟ್ಟ ಆರೋಗ್ಯಕರ ಮಹಿಳೆಯರು ಕೂಡ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆದ್ರೆ ಇದು ಆಗ್ತಿಲ್ಲ. ಲಕ್ಷಣ ಕಾಣಿಸಿಕೊಳ್ತಿದ್ದಂತೆ ಮಹಿಳೆಯರು ಆಸ್ಪತ್ರೆಗೆ ಬರ್ತಿದ್ದಾರೆ ಎಂದು ಅಡ್ಯಾರ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಸಹಾಯಕ ನಿರ್ದೇಶಕ ಡಾ.ಸ್ವಾಮಿನಾಥನ್ ಹೇಳಿದ್ದಾರೆ. 

ಬೊಜ್ಜು, ಮಧುಮೇಹ, ಜಡ ಜೀವನಶೈಲಿ ಮತ್ತು ಕುಟುಂಬದ ಇತಿಹಾಸ ಸ್ತನ ಕ್ಯಾನ್ಸರ್‌ಗೆ ಮುಖ್ಯ ಕಾರಣ. ಹಾಗಾಗಿ ಮಹಿಳೆಯರು ಬೊಜ್ಜಿನಿಂದ ದೂರವಿರಬೇಕು. ಮುಟ್ಟಿನ ನಂತ್ರ ನಿಯಮಿತವಾಗಿ ಸ್ತನ ಪರೀಕ್ಷೆ ಮಾಡಿಕೊಳ್ಳಬೇಕು. ಕಾಲೇಜು ದಿನಗಳಲ್ಲಿಯೇ ಇದು ಅಭ್ಯಾಸವಾದ್ರೆ ಒಳ್ಳೆಯದು ಎನ್ನುತ್ತಾರೆ ಸ್ವಾಮಿನಾಥನ್. 

ಚಿಕ್ಕ ವಯಸಲ್ಲೇ ಅಜ್ಜಿಯಂತೆ ಕಾಣ್ತಿದ್ದೀರಾ? ಈ ತಪ್ಪು ಮಾಡೋದು ಬಿಡಿ

ಪುರುಷರಲ್ಲಿ ಹೆಚ್ಚಾಗಿದೆ ಈ ಕ್ಯಾನ್ಸರ್ : ವರದಿ ಪ್ರಕಾರ, ಚೆನ್ನೈ ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ತಿದೆ. 2016 – 2018ರ ಅವದಿಯಲ್ಲೂ ಈ ಕ್ಯಾನ್ಸರ್ ಸಂಖ್ಯೆ ಹೆಚ್ಚಿತ್ತು. ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಿಐಆರ್ 12.7, ಬಾಯಿಯ ಕ್ಯಾನ್ಸರ್ ಸಿಐಆರ್ 12.3 ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಸಿಐಆರ್ 9.9 ರಷ್ಟಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. 
 

Latest Videos
Follow Us:
Download App:
  • android
  • ios