ಮಹಿಳೆಯ ಕಿವಿಯೊಳಗಿತ್ತು ರಾಶಿ ಜೇಡದ ಮರಿಗಳು, ಪರೀಕ್ಷಿಸಿದ ವೈದ್ಯರಿಗೆ ಶಾಕ್..!

ಕಿವಿ, ಮೂಗು, ಬಾಯಿಯೊಳಗೆ ಅಕಸ್ಮಾತ್‌ ಕೀಟ, ಹುಳುಗಳು ಹೋಗುವುದು ಆಗಾಗ ನಡೆಯುತ್ತಿರುತ್ತದೆ. ಹಾಗೆಯೇ ಇಲ್ಲೊಬ್ಬ ಮಹಿಳೆಯ ಕಿವಿಯೊಳಗೆ ಜೇಡ ಬಲೆ ಹೆಣೆದಿರುವುದು ವೈದ್ಯರ ಪರೀಕ್ಷೆಯಲ್ಲಿ ಬಯಲಾಗಿದೆ.

Chinese Woman Suffering From Ear Pain Finds Spider Nesting Inside Vin

ಚೀನಾದ ಆಸ್ಪತ್ರೆಯೊಂದಕ್ಕೆ ಕಿವಿ ನೋವು ಎಂದು ಹೇಳಿ ಆಸ್ಪತ್ರೆಗೆ ಬಂದ ಮಹಿಳೆಯ ಕಿವಿಯೊಳಗೆ ಜೇಡವೊಂದು ಪತ್ತೆಯಾಗಿದೆ. ಅಷ್ಟೇ ಅಲ್ಲ ಜೇಡ ಮಹಿಳೆಯ ಕಿವಿಯೊಳಗೆ ಮೊಟ್ಟೆ ಹಾಗೂ ಮರಿಗಳನ್ನು ಇಟ್ಟಿರುವುದು ವೈದ್ಯರ ಪರಿಶೀಲನೆಯಲ್ಲಿ ಕಂಡು ಬಂತು. ಎಪ್ರಿಲ್ 20ರಂದು ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಮಹಿಳೆಯೊಬ್ಬರು ಕಿವಿ ವಿಪರೀತ ನೋವಾಗುತ್ತಿದೆಯೆಂದು ಹೇಳಿ ಆಸ್ಪತ್ರೆಗೆ ಬಂದಿದ್ದರು. ಮಾತ್ರವಲ್ಲ ಕಿವಿಯೊಳಗೆ ಏನೋ ಚಲಿಸುತ್ತಿದೆ, ವಿಚಿತ್ರ ಶಬ್ದ ಕೇಳುತ್ತಿದೆ ಎಂದು ಹೇಳಿದ್ದರು. ಆಗ ವೈದ್ಯರು ಮಹಿಳೆಯ ಕಿವಿಯ ಮೇಲೆ ಎಂಡೋಸ್ಕೋಪಿ ನಡೆಸಿದಾಗ ಜೇಡ ಪತ್ತೆಯಾಗಿದೆ. ಮಾತ್ರವಲ್ಲ ಕಿವಿಯೊಳಗೆ ಜೇಡದ ಬಲೆ ಸಹ ಪತ್ತೆಯಾಗಿದೆ. ಅದು ಜೇಡದಿಂದ ನೇಯ್ದ ರೇಷ್ಮೆಯಂತಹ ನೆಟ್ ಆಗಿತ್ತು.

ಹುಯ್ಡಾಂಗ್ ಕೌಂಟಿ ಪೀಪಲ್ಸ್ ಆಸ್ಪತ್ರೆಯಲ್ಲಿ ಕ್ಯಾಮೆರಾದೊಂದಿಗೆ ವಿಶೇಷ ಟ್ವೀಜರ್‌ಗಳನ್ನು ಅಳವಡಿಸಿ ಮಹಿಳೆಯ (Woman) ಬಲ ಕಿವಿಯ ಮೇಲೆ ಎಂಡೋಸ್ಕೋಪಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕಿವಿಯೊಳಗೆ ಜೇಡನ ಬಲೆ (Spider net) ಕಂಡು ಬಂದಿದ್ದು, ಅದನ್ನು ತೆಗೆಯುತ್ತಿದ್ದಂತೆ ಅದರ ಹಿಂದೆ ಜೇಡ ಕಂಡು ಬಂದಿದೆ. ಮಹಿಳೆಯ ಕಿವಿಯಲ್ಲಿ ಜೇಡವು (Spider) ಕಟ್ಟಿದ್ದ ಬಲೆಯನ್ನು ವೈದ್ಯರು ಹೊರತೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ವಿಶೇಷ ಕ್ಯಾಮೆರಾವೊಂದರಲ್ಲಿ ಮಹಿಳೆಯ ಕಿವಿಗೆ ಶಸ್ತ್ರಚಿಕಿತ್ಸೆ (Operation) ಮಾಡುತ್ತಿರುವುದನ್ನು ರೆಕಾರ್ಡ್ ಮಾಡಲಾಗಿದೆ.

ಆಮೆಯಂತೆ ಮಗುವಿನ ಬೆನ್ನ ಮೇಲಿದೆ ಚಿಪ್ಪು, ಇದೆಂಥಾ ವಿಚಿತ್ರ ಕಾಯಿಲೆ!

'ಈ ಜೇಡ ತಯಾರಿಸಿದ ಬಲೆಯು ಕಿವಿಯೋಲೆಯನ್ನು ಹೋಲುತ್ತದೆ. ಇಯರ್ ಎಂಡೋಸ್ಕೋಪ್ ಅನ್ನು ಮೊದಲು ಪ್ರವೇಶಿಸಿದಾಗ, ಅಸಹಜವಾದ ಏನೂ ಕಂಡುಬಂದಿಲ್ಲ. ಆದರೆ ಹತ್ತಿರದಿಂದ ನೋಡಿದಾಗ, ಕೆಳಗೆ ಏನೋ ಚಲಿಸುತ್ತಿರುವಂತೆ ಕಂಡು ಬಂತು. ಜೇಡರ ಬಲೆಯನ್ನು ಪಕ್ಕಕ್ಕೆ ತಳ್ಳಿದಾಗ ಜೇಡ ಕಂಡು ಬಂತು. ಮೊದಲು ಇದನ್ನು ತೆಗೆಯುವುದು ಕಷ್ಟವಾಯಿತು. ಗಂಟೆಗಳ ಪ್ರಯತ್ನದ ಬಳಿಕ ಜೇಡವನ್ನು ಮಹಿಳೆಯ ಕಿವಿಯಿಂದ ಹೊರತೆಗೆಯಲಾಯಿತು; ಎಂದು ಓಟೋಲರಿಂಗೋಲಜಿ ವಿಭಾಗದ ವೈದ್ಯ ಹ್ಯಾನ್ ಕ್ಸಿಂಗ್‌ಲಾಂಗ್ ಮಾಹಿತಿ ನೀಡಿದ್ದಾರೆ. ಅದೃಷ್ಟವಶಾತ್ ಜೇಡವು ವಿಷಕಾರಿಯಲ್ಲ ಎಂದು ವೈದ್ಯರು ಹೇಳಿದರು. 

ಹಸಿ ರಕ್ತದ ಪುಡ್ಡಿಂಗ್ ತಿಂದ ಮಹಿಳೆ, ಮೆದುಳು ಸೇರಿತ್ತು ಹುಳುಗಳ ರಾಶಿ!
ವಿಯೆಟ್ನಾಂನ 58 ವರ್ಷದ ಮಹಿಳೆ ಹಸಿ ರಕ್ತದ ಪುಡ್ಡಿಂಗ್ ಸೇವಿಸಿ ಅಸ್ವಸ್ಥತೆಯನ್ನು ಅನುಭವಿಸಿದರು. ದೇಹ ಅಸಮತೋಲಕ್ಕೊಳಗಾಯಿತು. ಸೇವಿಸಿದ ಆಹಾರದಿಂದ ಮೆದುಳಿಗೆ ಪ್ಯಾರಾಸೈಟ್ (Parasite) ಹೊಕ್ಕ ಭಯಾನಕ ಘಟನೆ ವಿಯೆಟ್ನಾಮ್‌ ನಲ್ಲಿ (Vietnam) ನಡೆದಿದೆ. 58 ವರ್ಷದ ವಿಯೆಟ್ನಾಂ ಮಹಿಳೆ ತಾನೇ ತಯಾರಿಸಿದ ಹಸಿ ರಕ್ತ ಮತ್ತು ಬೇಯಿಸಿದ ಮಾಂಸವನ್ನು ಒಳಗೊಂಡಿರುವ ಟೈಟ್ ಕ್ಯಾನ್ ಎಂಬ ಸ್ಥಳೀಯ ಖಾದ್ಯವನ್ನು ಸೇವಿಸಿದ ನಂತರ ತೀವ್ರ ಅಸ್ವಸ್ಥರಾಗಿದ್ದರು. ಡೆಡ್ಲಿ ಪ್ಯಾರಾಸೈಟ್ ಮೆದುಳಿಗೆ ಪ್ರವೇಶಿಸಿದ ನಂತರವೂ ಈ ಮಹಿಳೆ (Women) ಅದೃಷ್ಟವಶಾತ್‌ ಬದುಕುಳಿದಿದ್ದಾರೆ. 

ಚೀನಾದಲ್ಲಿ ಇದೆಂತಾ ಮಳೆ, ಆಕಾಶದಿಂದ ಮಳೆಯಂತೆ ಬಿತ್ತು ಕಂಬಳಿಹುಳಗಳು!

ಅನ್‌ಬಿನ್ಹ್‌ ಎಂಬ ಪ್ರದೇಶದಿಂದ ಬಂದಿರುವ 58 ವರ್ಷದ ಮಹಿಳೆ ಹನೋಯಿ ಎಂಬವರು ಈ ಸಮಸ್ಯೆಯನ್ನು ಅನುಭವಿಸಿದರು. ಮಹಿಳೆ ತಾವು ಸೇವಿಸಲು ಸ್ವತಃ ಊಟವನ್ನು ತಯಾರಿಸಿದರು. ಹಸಿ ರಕ್ತ ಹಾಗೂ ಮಾಂಸದಿಂದ ಪುಡ್ಡಿಂಗ್ ಮಾಡಿದರು. ನಂತರ ಅವರು ತೀವ್ರ ತಲೆನೋವು ಮತ್ತು ಸಮತೋಲನದ ನಷ್ಟದಿಂದ ಬಳಲಿದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಸಿಬ್ಬಂದಿ ಆರಂಭದಲ್ಲಿ ಆಕೆಗೆ ಪಾರ್ಶ್ವವಾಯು ಸಂಭವಿಸಿದೆ ಎಂದು ಭಾವಿಸಿದ್ದರು. ಆದರೆ, ಕೆಲವು ಪರೀಕ್ಷೆಗಳು ಹಾಗೂ ಸ್ಕ್ಯಾನ್‌ಗಳನ್ನು ನಡೆಸಿದ ನಂತರ ಪರಾವಲಂಬಿ ಹುಳುಗಳು ಅಕ್ಷರಶಃ ಅವಳ ಚರ್ಮದ ಅಡಿಯಲ್ಲಿ ತೆವಳುತ್ತಿರುವುದು ಕಂಡು ಬಂತು. ಮಾತ್ರವಲ್ಲ ಕೆಲವು ಹುಳುಗಳು ಮೆದುಳನ್ನು ಸಹ ಸೇರಿದ್ದವು.

Latest Videos
Follow Us:
Download App:
  • android
  • ios