ಚೀನಾದಲ್ಲಿ ಇದೆಂತಾ ಮಳೆ, ಆಕಾಶದಿಂದ ಮಳೆಯಂತೆ ಬಿತ್ತು ಕಂಬಳಿಹುಳಗಳು!
ಅಚ್ಚರಿಯ ವಿದ್ಯಮಾನದಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಕೀಟಗಳ ಮಳೆಯಾಗಿದೆ. ಹೌದು ನೀವು ಓದುತ್ತಿರೋದು ಸತ್ಯ, ಲೋಳೆಯಂಥ ದ್ರವಗಳನ್ನು ಮೈಮೇಲೆ ಹೊಂದಿರುವ ಹುಳಗಳು ಆಕಾಶದಿಂದ ಮಳೆಯಂತೆ ಬೀಳುತ್ತಿವೆ.
ನವದೆಹಲಿ (ಮಾ.11): ಸಾಮಾನ್ಯವಾಗಿ ಇಂಗ್ಲೀಷ್‌ನಲ್ಲಿ ಆಡುಭಾಷೆಯಲ್ಲಿ 'ಇಟ್ಸ್ ರೇನಿಂಗ್ ಕ್ಯಾಟ್ಸ್ ಆಂಡ್ ಡಾಗ್ಸ್' ಎನ್ನುವ ಸಾಲುಗಳನ್ನು ಕೇಳಿರುತ್ತೇವೆ. ಆದರೆ, ಚೀನಾದಲ್ಲಿ ಕೀಟಗಳ ಮಳೆಯಾಗುತ್ತಿದೆ. ಹೌದು, ನೀವು ಓದುತ್ತಿರೋದು ಸತ್ಯ. ಚೀನಾದ ರಾಜಧಾನಿ ಬೀಜಿಂಗ್‌ನ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಕೀಟಗಳ ಮಳೆ ಚೀನಾದಲ್ಲಿ ಎಷ್ಟು ವ್ಯಾಪಕವಾಗಿದೆ ಎಂದರೆ, ಚೀನಾದ ರಸ್ತೆಗಳ ಮೇಲೆ ನಿಲ್ಲಿಸಿರುವ ಕಾರುಗಳು ಹಾಗೂ ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ಕೀಟಗಳು ಬಿದ್ದಿವೆ. ಆಕಾಶದಿಂದ ಮಳೆ ಬೀಳುವ ರೀತಿಯಲ್ಲಿಯೇ ಕೀಟಗಳು ನೆಲಕ್ಕೆ ಬೀಳುತ್ತಿವೆ. ಈ ವಿಡಿಯೋ ಸಾಕಷ್ಟು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ವೈರಲ್ ಆಗಿದೆ. ಬೀಜಿಂಗ್‌ನ ರಸ್ತೆಯ ಮೇಲಿರುವ ಕಾರ್‌ಗಳ ಮೇಲೆ ಕೀಟಗಳ ರೀತಿಯ ಜೀವಿಗಳು ಬಿದ್ದಿರುವುದನ್ನು ಕಾಣಬಹುದಾಗಿದೆ. ಏಷ್ಯಾನೆಟ್ ನ್ಯೂಸ್ ಈ ವಿಡಿಯೋದ ಸತ್ಯಾಸತ್ಯತೆ ಪರಿಶೀಲನೆ ಮಾಡಿಲ್ಲ. ಬೀಜಿಂಗ್‌ನಲ್ಲಿ ರಸ್ತೆಗಳ ಪಕ್ಕದಲ್ಲಿ ನಿಲ್ಲಿಸಿದ ಕಾರುಗಳ ಮೇಲೆ ಕಂಬಳಿಹುಳಗಳ ತರಹದ ಧೂಳಿನ ಕಂದು ಬಣ್ಣದ ಜೀವಿಗಳು ಬಿದ್ದಿವೆ. ಇನ್‌ಸೈಡರ್ ಪೇಪರ್ ಇಂಥ ಕೆಲವೊಂದು ವಿಡಿಯೋಗಳನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಜನರು ಆಕಾಶದಿಂದ ಮಳೆಯ ರೀತಿಯಲ್ಲಿ ಬೀಳುವ ಹುಳಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಛತ್ರಿಗಳ ಮೊರೆ ಹೋಗಿರುವುದನ್ನೂ ದಾಖಲಿಸಿದೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, 'ಹುಳಗಳ ಮಳೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ ಆದರೆ ಮದರ್ ನೇಚರ್ ನೆಟ್‌ವರ್ಕ್ ಎಂಬ ವೈಜ್ಞಾನಿಕ ನಿಯತಕಾಲಿಕವು ಭಾರೀ ಗಾಳಿಯ ಕಾರಣದಿಂದಾಗಿ ಹೆಚ್ಚಾಗಿ ಭಾರವಿಲ್ಲದೇ ಇರುವ ಈ ಜೀವಿಗಳು ಹಾರಿ ಬಂದಿರುವ ಸಾಧ್ಯತೆ ಹೆಚ್ಚಿದೆ' ಎಂದು ಹೇಳಿದೆ. "ಚಂಡಮಾರುತದ ನಂತರ ಕೀಟಗಳು ಸುಂಟರಗಾಳಿಯಲ್ಲಿ ಸಿಕ್ಕಿಹಾಕಿಕೊಂಡಾಗ ಈ ರೀತಿಯ ಘಟನೆ ಸಂಭವಿಸುತ್ತದೆ ಎಂದು ನಿಯತಕಾಲಿಕವು ಗುರುತಿಸಿದೆ ಎಂದು ನ್ಯೂಯಾರ್ಕ್ ಪೋಸ್ಟ್ ತಿಳಿಸಿದೆ.
'ಸಿಂಹಕ್ಕೆ ಸಲ್ಲಬೇಕು ಹೊರತು ನರಿಗಲ್ಲ..' ಹೆದ್ದಾರಿ ಕ್ರೆಡಿಟ್ ವಾರ್‌ಗೆ ಅಭಿಮಾನಿಗಳ ಪೋಸ್ಟರ್ ವಾರ್!
ಆದರೆ, ಚೀನಾದ ಪತ್ರಕರ್ತ ಶೆನ್ ಶಿವೈ ಅವರು ಈ ವೀಡಿಯೊ ನಕಲಿ ಎಂದು ಹೇಳಿದ್ದಾರೆ ಮತ್ತು ಬೀಜಿಂಗ್ ನಗರವು ಇತ್ತೀಚಿನ ದಿನಗಳಲ್ಲಿ ಯಾವುದೇ ಮಳೆಗೆ ಸಾಕ್ಷಿಯಾಗಲಿಲ್ಲ. "ನಾನು ಬೀಜಿಂಗ್‌ನಲ್ಲಿದ್ದೇನೆ ಮತ್ತು ಈ ವೀಡಿಯೊ ನಕಲಿಯಾಗಿದೆ. ಬೀಜಿಂಗ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆಯಾಗಿಲ್ಲ, ”ಎಂದು ಶಿವೆ ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತ, ವಿಡಿಯೋ ವೈರಲ್!
ಕೆಲವರು ಈ ವೀಡಿಯೊ ನಕಲಿ ಎಂದು ಹೇಳಿದ್ದಲ್ಲದೆ, ಅದಕ್ಕೆ ವಿಡಿಯೋದಲ್ಲಿಯೇ ಸಾಕ್ಷಿ ಇದೆ. ಎಂದಿದ್ದಾರೆ. ಹುಳಗಳು ಕಾರುಗಳ ಮೇಲೆ ಮಾತ್ರವೇ ಇವೆ. ಪಾದಚಾರಿ ಮಾರ್ಗದಲ್ಲಿ ಎಲ್ಲೂ ಹುಳಗಳು ಬಿದ್ದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಚಳಿಗಾಲ ಮುಗಿದು ಬೇಸಿಗೆ ಆರಂಭಿಸುವ ಸಮಯದಲ್ಲಿ ಇಂಥ ಹುಳದ ಮಳೆ ಸಾಮಾನ್ಯ. ಚೀನಾದಲ್ಲಿ ಆಗುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.