ಪರ್ಫ್ಯೂಮ್ ಎಂದ ತಕ್ಷಣ ಘಮ್ಮೆನ್ನುವ ಸುವಾಸನೆ ನೆನಪಿಗೆ ಬರುತ್ತೆ. ಸುಗಂಧ ಭರಿತವಾದ ಹೂಗಳು ಅಥವಾ ತೈಲಗಳಿಂದ ಸಾಮಾನ್ಯವಾಗಿ ಪರ್ಫ್ಯೂಮ್‌ನ್ನು ತಯಾರಿಸಲಾಗುತ್ತೆ. ಆದ್ರೆ ಇಲ್ಲೊಂದೆಡೆ ಮಾತ್ರ ಬೆವರಿನಿಂದ ಪರ್ಫ್ಯೂಮ್ ತಯಾರಿಸಲಾಗಿದೆ. ಅರೆ..ಇದೇನ್ ವಿಚಿತ್ರ ಅನ್ಬೇಡಿ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಅನೇಕ ಪರ್ಫ್ಯೂಮ್‌ಗಳ ಜಾಹೀರಾತುಗಳನ್ನು ನೀವು ನೋಡಿರಬಹುದು. ಅದರಲ್ಲಿ ಸಾಮಾನ್ಯವಾಗಿ ದೇಹದ ದುರ್ಗಂಧವನ್ನು ಹೋಗಲಾಡಿಸಲು ಡಿಯೋಡ್ರೆಂಟ್‌ಗಳನ್ನು ಬಳಸುತ್ತಾರೆ. ಈ ರೀತಿ ಪರ್ಫ್ಯೂಮ್ ಬಳಸಿದಾಗ ಹುಡುಗರು, ಹುಡುಗಿಯರತ್ತ ಆಕರ್ಷಿತರಾಗುವುದನ್ನು ನೀವು ನೋಡಬಹುದು. ಡಿಯೋಡರೆಂಟ್ ಮತ್ತು ಸುಗಂಧ ದ್ರವ್ಯಗಳನ್ನು ಮಾರಾಟ ಮಾಡಲು ಕಂಪನಿಗಳು ಈ ಪರಿಕಲ್ಪನೆಯನ್ನು ಆರಿಸಿಕೊಳ್ಳುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಆದರೆ ಬ್ರೆಜಿಲಿಯನ್ ಕಂಪೆನಿಯೊಂದು ಪರ್ಫ್ಯೂಮ್‌ನ ಪರಿಕಲ್ಪನೆಯನ್ನೇ ಬದಲಾಯಿಸಿದೆ. ಸಾಮಾನ್ಯವಾಗ ಬೆವರಿನ ವಾಸನೆ ಹೋಗಲಾಡಿಸಲು ಪರ್ಫ್ಯೂಮ್ ಬಳಸುತ್ತಾರಲ್ಲವೇ? ಆದರೆ ಇಲ್ಲಿ ಬೆವರನ್ನು ಬಳಸಿ ಪರ್ಫ್ಯೂಮ್‌ ತಯಾರಿಸಲಾಗಿದೆ.

ಬ್ರೆಜಿಲಿಯನ್ ಮಾಡೆಲ್ ಇತ್ತೀಚೆಗೆ ಇದೇ ರೀತಿಯ ಪರಿಕಲ್ಪನೆಯೊಂದಿಗೆ ಹೊಸ ಸ್ವೆಟ್ ಪರ್ಫ್ಯೂಮ್ ಬ್ರ್ಯಾಂಡ್‌ನ್ನು ಬಿಡುಗಡೆ ಮಾಡಿದ್ದಾರೆ. 'ಈ ಸುಮಧುರ ವಾಸನೆಗಾಗಿ ಬೇರೆಯವರು ಮುಗಿ ಬೀಳುತ್ತಾರೆ' ಎಂಬ ಪರಿಕಲ್ಪನೆಯೊಂದಿಗೆ ಸುಗಂಧ ದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಈ ಸುಗಂಧದ್ರವ್ಯಕ್ಕೆ ಬೆವರನ್ನು ಕೂಡಾ ಸೇರಿಸಿರುವುದು ವಿಶೇಷ.

ಯಾವ ಪರ್ಫ್ಯೂಮ್ ಹಾಕಿದರೂ ದೇಹದ ದುರ್ನಾತ ಹೋಗ್ತಾ ಇಲ್ವಾ? ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ

ಬೆವರಿನಿಂದ ತಯಾರಿಸಿದ ಸುಗಂಧ ದ್ರವ್ಯ ಬಿಡುಗಡೆ ಮಾಡಿದ ರೂಪದರ್ಶಿ
ಬ್ರೆಜಿಲ್‌ನ ರೂಪದರ್ಶಿಯೊಬ್ಬರು (Model) ತಮ್ಮ ಬೆವರಿನಿಂದ ತಯಾರಿಸಿದ ಸುಗಂಧ ದ್ರವ್ಯವನ್ನು (Perfume) ಬಿಡುಗಡೆ ಮಾಡಿದ್ದಾರೆ. ಸಾವೊ ಪಾಲೊದಲ್ಲಿ ವಾಸಿಸುವ 29 ವರ್ಷದ ಮಾಡೆಲ್ ವೆನ್ನಸೆಸ್ಸಾ ಮೌರಾ ಎಂಬವರು ಈ ಪರ್ಫ್ಯೂಮ್ ತಯಾರಿಸಿದ್ದಾರೆ. ಈಕೆ ಕೇವಲ ಮಾಡೆಲ್ ಮಾತ್ರವಲ್ಲದೆ ಆನ್‌ಲೈನ್ ಪ್ರಭಾವಿಯೂ ಹೌದು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಬೆವರಿನಿಂದ (Sweat) ಸುಗಂಧ ದ್ರವ್ಯವನ್ನು ತಯಾರಿಸುವ ಯೋಜನೆಯನ್ನು ರೂಪಿಸಿದರು.

ಬೆವರಿನಿಂದ ಪರ್ಫ್ಯೂಮ್‌ ತಯಾರಿಸುವ ಆಲೋಚನೆ ಹೇಗೆ ಬಂತು?
ವೆನ್ನಸೆಸ್ಸಾ ಮೌರಾ ಪ್ರಿಯಕರ (Lover) ಹಾಗೂ ಮಾಜಿ ಪ್ರಿಯಕರ ಯಾವಾಗಲೂ ನಿನ್ನ ದೇಹದ ವಾಸನೆಯು ನೈಸರ್ಗಿಕವಾಗಿ ಸುಗಂಧಭರಿತವಾಗಿದೆ. ಅದು ನಮ್ಮನ್ನು ಆಕರ್ಷಿಸುತ್ತದೆ ಎನ್ನುತ್ತಿದ್ದರಂತೆ, ಈ ವಿಚಾರವನ್ನು ಆಕೆ ಗಂಭೀರವಾಗಿ ತೆಗೆದುಕೊಂಡು ಬೆವರಿನಿಂದಲೇ ಪರ್ಫ್ಯೂಮ್ ತಯಾರಿಸಿದ್ದಾಳೆ. ಇದಕ್ಕೆ 'ಫ್ರೆಶ್ ಗಾಡೆಸ್ ಪರ್ಫ್ಯೂಮ್' ಎಂದು ಹೆಸರಿಟ್ಟಿದ್ದಾಳೆ. ಸುಗಂಧ ದ್ರವ್ಯದಿಂದಾಗಿ ಅನೇಕ ಆನ್‌ಲೈನ್ ಅನುಯಾಯಿಗಳು ನನ್ನತ್ತ ಆಕರ್ಷಿತರಾಗಿದ್ದಾರೆ (Attractive) ಎಂದು ವೆನ್ನಸೆಸ್ಸಾ ಮೌರಾ ಹೇಳುತ್ತಾರೆ. ಪರ್ಫ್ಯೂಮ್‌ನಲ್ಲಿ ಆಕೆಯ ಬೆವರಿನ ಹೊರತಾಗಿ ಇತರ ಪದಾರ್ಥಗಳು ಕೂಡಾ ಇದೆ. ಬಾಟಲಿಯಲ್ಲಿ 8 ಮಿಲಿ ಬೆವರನ್ನು ಬೆರೆಸಲಾಗುತ್ತದೆಯಂತೆ.

ನಾನು ಟ್ವಿಟ್ಟರ್‌ ಖರೀದಿಸಲು, ನೀವು ದಯವಿಟ್ಟು ನನ್ನ ಸುಗಂಧ ದ್ರವ್ಯ ಕೊಂಡುಕೊಳ್ಳಿ: Elon Musk

ನನ್ನ ಚರ್ಮವು ಮಾದಕ ನೈಸರ್ಗಿಕ ಪರಿಮಳವನ್ನು ಹೊಂದಿದೆ ಎಂದು ತನ್ನ ಜೀವನದಲ್ಲಿ ಪುರುಷರು ತುಂಬಾ ಸಲ ಹೇಳಿದ್ದಾರೆ ಎಂದು ಅವರು ಬಹಿರಂಗಪಡಿಸಿದರು. ಈ ಕಾರಣಕ್ಕಾಗಿಯೇ ಇತರ ಮಹಿಳೆಯರು ಸಹ ಈ ಹೆಗ್ಗಳಿಕೆಯನ್ನು ಪಡೆಯಲು ಇತರ ಮಹಿಳೆಯರು ಧರಿಸಬಹುದಾದ ಸುಗಂಧವನ್ನು ಸೃಷ್ಟಿಸಲು ಅವರು ಪ್ರಾರಂಭಿಸಿದ್ದಾಗಿ ವನೆಸ್ಸಾ ತಿಳಿಸಿದರು.

ಬೆವರಿನಿಂದ ತಯಾರಿಸಿದ ಪರ್ಫ್ಯೂಮ್ ಬೆಲೆ ಎಷ್ಟು?
ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವನೆಸ್ಸಾ ಮೌರಾ, ತಮ್ಮ ಸಂಗಾತಿಯನ್ನು ಆಕರ್ಷಿಸಲು ಬಯಸುವವರಿಗೆ ಈ ವಿಶಿಷ್ಟವಾದ ಸುಗಂಧ ದ್ರವ್ಯವು ಪರಿಪೂರ್ಣ ಸಾಧನವಾಗಿದೆ ಎಂದು ಹೇಳಿಕೊಳ್ಳುತ್ತಾರೆ. ವರದಿ ಪ್ರಕಾರ ಈ ಪರ್ಫ್ಯೂಮ್ ಬೆಲೆ 50 ಎಂಎಲ್​ಗೆ 138 ಡಾಲರ್​ಗಳು ಅಂದರೆ 11 ಸಾವಿರ ರೂಪಾಯಿಯಂತೆ. ಅದೇನೆ ಇರ್ಲಿ, ಎಲ್ಲರೂ ಬೆವರನ್ನು ಹೋಗಲಾಡಿಸೋಕೆ ಪರ್ಫ್ಯೂಮ್ ಹಚ್ಚಿದ್ರೆ ಇಲ್ಲಿ ಮಾತ್ರ ಬೆವರಿನಿಂದಲೇ ಸುಗಂಧದ್ರವ್ಯ ತಯಾರಿಸಿರೋದು ಅಚ್ಚರಿಯೇ ಸರಿ.

ಕೆಮಿಕಲ್‌ಗಳಿಂದ ತುಂಬಿದ ಪರ್ಫ್ಯೂಮ್‌ಗಳು ಬೇಡ್ವಾ? ಹಾಗಾದರೆ ಈ Essential Oilಗಳನ್ನು ಟ್ರೈ ಮಾಡಿ