ಆಫೀಸ್‌ಗಳಲ್ಲಿ ಬಾಸ್‌ಗಳ ಕಿರುಕುಳ ಹೊಸತೇನಲ್ಲ. ಸಣ್ಣಪುಟ್ಟ ಕಾರಣಕ್ಕೆ ಕಿರಿಕ್ ಮಾಡೋದು ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ವರ್ತಿಸುತ್ತಿರುತ್ತಾರೆ. ಹೀಗಿರುವಾಗ ಇಲ್ಲೊಬ್ಬ ಮಹಿಳೆ ಬಾಸ್ ಮಾಡಿದ ಕಿರಿಕ್‌ಗೆ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾಳೆ. ಅಷ್ಟಕ್ಕೂ ಆ ಮಹಿಳೆ ಮಾಡಿದ್ದೇನು ಅಂತ ಗೊತ್ತಾದ್ರೆ ನೀವೂ ಸಹ ಯಪ್ಪಾ ಹೀಗೂ ಮಾಡ್ತಾರಾ ಅಂತ ಅಂದ್ಕೊಳ್ಳೋದು ಖಂಡಿತ.
ಹೊಸ ಕಚೇರಿಗೆ ಜಾಯಿನ್ ಆದ ನಂತರ ಹೊಸ ಪರಿಸರ, ಹೊಸ ಸಹೋದ್ಯೋಗಿಗಳ ಜೊತೆ ಹೊಂದಿಕೊಳ್ಳುವುದು ಒಂದು ದೊಡ್ಡ ಸವಾಲಿನ ಕೆಲಸವೇ ಸರಿ. ಹೊಸ ಸ್ಥಳದಲ್ಲಿ ಕೆಲಸದ ಬಗ್ಗೆ ತಿಳಿದುಕೊಳ್ಳಲು ಸ್ಪಲ್ಪ ಸಮಯ ಬೇಕಾಗಬಹುದು. ಕೆಲವೊಮ್ಮೆ ಬಾಸ್, ಸುತ್ತಮುತ್ತಲಿದ್ದ ಸಹೋದ್ಯೋಗಿಗಳು ಸಪೋರ್ಟಿವ್ ಆಗಿರದಿದ್ದರೆ ಇದು ಕಿರುಕುಳದಂತೆಯೂ ಭಾಸವಾಗಬಹುದು. ಹೊಸ ಜಾಬ್‌ನಲ್ಲಿ ಉಂಟಾದ ಕಿರುಕುಳದಿಂದ ಮಹಿಳೆಯೊಬ್ಬರು ಇತ್ತೀಚೆಗಷ್ಟೇ ಮೂರು ದಿನಗಳ ಹಿಂದೆ ಆರಂಭಿಸಿದ ತನ್ನ ಹೊಸ ಉದ್ಯೋಗಕ್ಕೆ ರಿಸೈನ್ ಮಾಡಿದ್ದಾರೆ. ಅದಕ್ಕೆ ನಿರ್ಧಿಷ್ಟ ಕಾರಣವೇನು ಎಂಬುದುನ್ನು ರೆಡ್ಡಿಟ್‌ನಲ್ಲಿ ವಿವರಿಸಿದ್ದಾರೆ.
ರೆಡ್ಡಿಟ್‌ನಲ್ಲಿ ತಾನು ಕೆಲಸ (Work) ತೊರೆದ ಕಾರಣವನ್ನು ಮಹಿಳೆ (Woman) ಸುದೀರ್ಘವಾಗಿ ವಿವರಿಸಿದ್ದು, 'ಹತ್ತು ನಿಮಿಷಗಳ ಕಾಲ ಟಾಯ್ಲೆಟ್ ಬ್ರೇಕ್ ತೆಗೆದುಕೊಂಡಿದ್ದನ್ನು ಬಾಸ್ ಪ್ರಶ್ನಿಸಿದರು' ಎಂದು ತಿಳಿಸಿದ್ದಾರೆ. 'ಸೋಮವಾರದಂದು ನಾನು ಕಂಪನಿಯೊಂದರಲ್ಲಿ ಕೆಲಸ ಆರಂಭಿಸಿದೆ. ಬುಧವಾರ ಬಾಸ್ ನನ್ನನ್ನು ಚೇಂಬರ್‌ಗೆ ಕರೆದರು ಮತ್ತು ಯಾಕಾಗಿ 10 ನಿಮಿಷ ಟಾಯ್ಲೆಟ್ ಬ್ರೇಕ್ ತೆಗೆದುಕೊಂಡೆ ಎಂದು ಪ್ರಶ್ನಿಸಿದರು. ಇದು ನಾನು ಕೆಲಸವನ್ನು ತೊರೆಯಲು ಕಾರಣವಾಯಿತು. ನಾನು ಹೀಗೆ ಮಾಡಿದ್ದು ಸರಿಯಾಗಿದೆಯೇ ಎಂಬುದರ ಬಗ್ಗೆ ನನಗೆ ಗೊಂದಲವಿದೆ. ಹೀಗಾಗಿ ಈ ಬಗ್ಗೆ ತಿಳಿದುಕೊಳ್ಳಲು ನಾನು ಕಾಲ್ ಮಾಡುತ್ತಿದ್ದೇನೆ' ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಉದ್ಯೋಗ ಬಿಟ್ಟು 13 ವರ್ಷ ಗೃಹಿಣಿಯಾಗಿದ್ದ ಬಗ್ಗೆ ರೆಸ್ಯೂಮ್ ಬರೆದ ಮಹಿಳೆ, ವೈರಲ್ ಆಯ್ತು ಪೋಸ್ಟ್
ಬಾಸ್ ನೀಡುವ ಕಿರುಕುಳದ ಬಗ್ಗೆ ವಿವರಿಸಿ ಪೋಸ್ಟ್
ಮಾತ್ರವಲ್ಲ ಬಾಸ್, 'ನಿನಗೆ ನಿಗದಿಪಡಿಸಿದ ವರ್ಕ್ ಫಿನಿಶ್ ಮಾಡಲು ಯಾಕೆ ತಡವಾಗುತ್ತಿದೆ' ಎಂದು ಪ್ರಶ್ನಿಸಿದರು. 'ಆದರೆ ನನಗೆ ಅವರು ಕೆಲಸ ನೀಡುತ್ತಿಲ್ಲ. ಸಹೋದ್ಯೋಗಿಯೊಬ್ಬರು ಗೈಡ್ ಮಾಡುತ್ತಿದ್ದಾರೆ. ಅವರು ಆರು ಗಂಟೆಗೆ ಮನೆಗೆ ಹೋಗುವಂತೆ ಸೂಚಿಸುತ್ತಿದ್ದಾರೆ' ಎಂದು ಮಹಿಳೆ ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ನಾನು ಘಟನೆಯ ಬಗ್ಗೆ ವಿವರಿಸಿದರೆ ಮೇಲಾಧಿಕಾರಿ (Boss) ನಾನು ವಾದಿಸುತ್ತೇನೆಂದು ಆರೋಪಿಸಿದರು. ಇಂಥಾ ಸ್ಥಳದಲ್ಲಿ ಕೆಲಸ ಮಾಡುವುದು ಹೇಗೆ ಸಾಧ್ಯ ಎಂದು ಮಹಿಳೆ ಪ್ರಶ್ನಿಸಿದ್ದಾರೆ. ಘಟನೆಯ ನಂತರ ಕೆಲಸ್ಕೆ ರಾಜೀನಾಮೆ ನೀಡಿರುವ ಮಹಿಳೆ, 'ನಾನು ಇಂಥಾ ಟಾಕ್ಸಿಕ್ ಅಗಿರುವ ಕೆಲಸ ಮಾಡುವ ಸ್ಥಳವನ್ನು ಬಿಟ್ಟು ಬಂದಿದ್ದಕ್ಕಾಗಿ ತುಂಬಾ ಖುಷಿ (Happy) ಪಡುತ್ತಿದ್ದೇನೆ. ಇಂಥಾ ಸ್ಥಳದಲ್ಲಿ ಜಾಗದಲ್ಲಿ ಕೆಲಸ ಮಾಡುವುದು ಎಷ್ಟು ಹಾರಿಬಲ್ ಆಗಿದೆ ಎಂದು ನನಗೆ ಅರ್ಥವಾಗುತ್ತಿದೆ' ಎಂದು ಮಹಿಳೆ ವಿವರಿಸಿದ್ದಾರೆ.
Viral News: ಐದು ಗಂಟೆ ಕೆಲಸಕ್ಕೆ 50 ಸಾವಿರ ಸಂಬಳ ಕೇಳಿದ ಇಂಟರ್ನ್!
ಮಹಿಳೆ ಮಾಡಿರೋ ಪೋಸ್ಟ್ ಸಖತ್ ವೈರಲ್ ಆಗಿದ್ದು, ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ನಿಮ್ಮನ್ನು ತರಬೇತಿಯಲ್ಲಿ ಹೊಸ ನೇಮಕ ಎಂದು ಪರಿಗಣಿಸಿದಾಗ ಕಾರಣವಿಲ್ಲದೆ ನಿಮಗೆ ಕಿರುಕುಳ ನೀಡುವುದನ್ನು ಮಾಡುವುದು ಸಾಮಾನ್ಯವಾಗಿ. ನೀವು ಸರಿಯಾದ ಕೆಲಸವನ್ನು ಮಾಡಿದ್ದೀರಿ, ನಿಮ್ಮ ಮುಂದಿನ ಕೆಲಸದಲ್ಲಿ ಶುಭವಾಗಲಿ' ಎಂದು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ನೀವು ನಿಮ್ಮ ಬಾಸ್ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುವ ಎಲ್ಲಾ ಹಕ್ಕನ್ನು ಹೊಂದಿದ್ದೀರಿ' ಎಂದು ಸಲಹೆ ನೀಡಿದ್ದಾರೆ.
ತುಂಬಾ ಬೆಳ್ಳಗಿದ್ದೀಯಮ್ಮಾ, ಕೆಲ್ಸ ಕೊಡೋಕಾಗಲ್ಲ ಎಂದ ಕಂಪೆನಿ!
ಸಾಮಾನ್ಯವಾಗಿ ವಿದ್ಯಾರ್ಹತೆ, ಅನುಭವದ ಕೊರತೆ, ಸ್ಕಿಲ್ ಕಡಿಮೆಯಿದೆ, ಭಾಷೆ ಸರಿಯಾಗಿ ಗೊತ್ತಿಲ್ಲ ಅನ್ನೋ ಕಾರಣಕ್ಕೆ ಕೆಲವು ಕಂಪೆನಿಗಳು ಕೆಲಸ ಕೊಡುವುದಿಲ್ಲ. ಆದರೆ ಇಲ್ಲೊಂದು ಕಂಪೆನಿ ಹುಡುಗಿ ಸಿಕ್ಕಾಪಟ್ಟೆ ಬೆಳ್ಳಗಿದ್ದಾಳೆ ಅನ್ನೋ ಕಾರಣಕ್ಕೆ ಆಕೆಗೆ ಕೆಲಸ ಕೊಟ್ಟಿಲ್ಲ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಲಿಂಕ್ಡ್‌ಇನ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ. ಬೆಂಗಳೂರು ಮೂಲದ ಯುವತಿ ಪ್ರತೀಕ್ಷಾ ಜಿಚ್ಕರ್ ಅವರು ತಮಗೆ ಇತ್ತೀಚಿಗೆ ಕಂಪೆನಿಯೊಂದು ಜಾಬ್ ನೀಡಲು ನಿರಾಕರಿಸಿದ ಹಿಂದಿನ ಕಾರಣ ಹಂಚಿಕೊಂಡಿದ್ದಾರೆ. 'ನನ್ನ ಚರ್ಮದ ಟೋನ್ ಹೆಚ್ಚು ಬೆಳ್ಳಗೆ ಇರುವ ಕಾರಣ ಅಂತಿಮ ಸುತ್ತಿನ ಸಂದರ್ಶನದಲ್ಲಿನನ್ನನ್ನು ತಿರಸ್ಕರಿಸಲಾಯಿತು' ಎಂದು ಅವರು ಹತಾಶೆ ವ್ಯಕ್ತಪಡಿಸಿದ್ದಾರೆ. ಕಂಪನಿಯಿಂದ ಸ್ವೀಕರಿಸಿದ ನಿರಾಕರಣೆ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ.
ತುಂಬಾ ಬೆಳ್ಳಗಿದ್ದೀಯಮ್ಮಾ, ಕೆಲ್ಸ ಕೊಡೋಕಾಗಲ್ಲ, ಟೀಮ್‌ನಲ್ಲಿ ತೊಂದ್ರೆಯಾಗುತ್ತೆ ಎಂದ ಕಂಪೆನಿ!
