ಕೆಲ್ಸ ಮಾಡುವ ಆಸಕ್ತಿ ಇದ್ರೆ ಸಿಲಿಕಾನ್ ಸಿಟಿ ಬೆಂಗಳೂರು ಎಲ್ಲರ ಹೊಟ್ಟೆ ತುಂಬಿಸುತ್ತೆ. ಅದಕ್ಕೆ ಈ ಚಾಲಕಿ ಉತ್ತಮ ನಿದರ್ಶನ. ಡ್ರೈವಿಂಗ್ ಕಲಿತು, ಸಾಲ ಮಾಡಿ ಆಟೋ ಖರೀದಿ ಮಾಡಿರುವ ಚಾಲಕಿ ಅನೇಕರಿಗೆ ಸ್ಪೂರ್ತಿ.
ಆಪ್ ಮೂಲಕ ಆಟೋ (Auto) ಬುಕ್ ಮಾಡಿದಾಗ ಸಾಮಾನ್ಯವಾಗಿ ಚಾಲಕರು ಯಾರಿರ್ತಾರೆ ಎನ್ನುವ ಟೆನ್ಷನ್ ಇರುತ್ತೆ. ಪ್ರಯಾಣ ಸುಖಕರವಾಗಿರಬೇಕೆಂದ್ರೆ ಚಾಲಕರು ಚೆನ್ನಾಗಿರ್ಬೇಕು. ಪ್ರಯಾಣಿಕರಿಗೆ ಚಾಲಕರು ಸ್ಪಂದಿಸಬೇಕು. ಬುಕ್ ಮಾಡಿದ ಆಟೋಕ್ಕೆ ಹುಡುಗಿಯರು ಚಾಲಕಿಯರಾಗಿ ಬರೋದು ಬಹಳ ಅಪರೂಪ. ಒಂದ್ವೇಳೆ ಹುಡುಗಿ ಆಟೋ ಓಡಿಸ್ತಿದ್ರೆ ಅದೇನೋ ವಿಶೇಷ ಖುಷಿ ಸಿಗುತ್ತೆ. ಅವರನ್ನು ಮಾತನಾಡಿಸುವ ಕುತೂಹಲ ಮೂಡುತ್ತೆ. ಸ್ನೇಹಾ ಕೂಡ ತಮ್ಮ ಆಟೋಗೆ ಚಾಲಕಿಯನ್ನು ಮಾತನಾಡಿಸಿದ್ದಾರೆ. ಅವರಿಂದ ಒಂದಿಷ್ಟು ವಿಷ್ಯ ಕಲೆ ಹಾಕಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್ ಖಾತೆಯಲ್ಲಿ ಅವರು ಹಂಚಿಕೊಂಡ ಪೋಸ್ಟ್ ವೈರಲ್ ಆಗಿದ್ದು ಮಾತ್ರವಲ್ಲ, ಅನೇಕ ಹುಡುಗಿಯರಿಗೆ ಆಟೋ ಓಡಿಸಲು ಧೈರ್ಯ ಹಾಗೂ ಸ್ಪೂರ್ತಿ ನೀಡಿದೆ.
ಬೆಂಗಳೂರಿನ ಆಟೋ ಚಾಲಕಿ (auto driver)
ಬೆಂಗಳೂರಿನಲ್ಲಿ ಅಲ್ಲಿ ಇಲ್ಲಿ ಕೆಲ ಆಟೋಗಳನ್ನು ಮಹಿಳೆಯರು ಓಡಿಸ್ತಿದ್ದಾರೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚಾಗ್ತಿದೆ. ಕೋರಮಂಗಲ ಏರಿಯಾದಲ್ಲಿ ಸುಮಾರು 300 ಮಹಿಳಾ ಆಟೋ ಚಾಲಕಿಯರಿದ್ದಾರೆಂದ್ರೆ ಅಚ್ಚರಿಯಾಗುತ್ತೆ. ಈ ವಿಷ್ಯವನ್ನು ಸೌಮ್ಯಾ ಅವರಿಗೆ ಆಟೋ ಚಾಲಕಿಯೊಬ್ಬರು ಹೇಳಿದ್ದಾರೆ. ಸೌಮ್ಯಾ ಏರಿದ್ದ ಆಟೋದ ಚಾಲಕಿ ಹೆಸರೇನು ಎಂಬುದನ್ನು ಸೌಮ್ಯಾ ಬರೆದಿಲ್ಲ. ಆದ್ರೆ ಅವ್ರ ಪ್ರಯಾಣದ ಅನುಭವ ಹಂಚಿಕೊಂಡಿದ್ದಾರೆ. ಆಟೋ ತಮ್ಮ ಮುಂದೆ ಬಂದಾಗ ಡ್ರೈವರ್ ನೋಡಿ ಸೌಮ್ಯಾ ಖುಷಿಪಟ್ರು. ಚಾಲಕಿ ಮುಖದಲ್ಲಿಯೂ ಸಂತೋಷವಿತ್ತು. ಇಬ್ಬರ ಮಧ್ಯೆ ಮಾತು ಶುರುವಾಯ್ತು.
ಮಹಿಳಾ ಮ್ಯಾನೇಜರ್ ಅಂದ್ರೆ ದೂರ ಓಡೋದೇಕೆ, ಚರ್ಚೆ ಹುಟ್ಟುಹಾಕಿದ
40 ದಿನ ತರಬೇತಿ , 45 ಸಾವಿರ ಸಂಪಾದನೆ
ಸೌಮ್ಯಾ, ನಮ್ಮ ಯಾತ್ರಿ ಆಪ್ ಮೂಲಕ ಆಟೋ ಬುಕ್ ಮಾಡಿದ್ದರು. ನಮ್ಮ ಯಾತ್ರಿ ಆಟೋ ಚಾಲಕಿಗೆ ನಮ್ಮ ಯಾತ್ರಿ ತರಬೇತಿ ನೀಡಿದೆ. ಸುಮಾರು 40 ದಿನಗಳ ಕಾಲ ಆಟೋ ಓಡಿಸೋದು ಹೇಗೆ ಎಂಬ ಬಗ್ಗೆ ತರಬೇತಿ ನೀಡಲಾಗಿದೆ. ನಂತ್ರ ಚಾಲಕಿ, ಎಲೆಕ್ಟ್ರಿಕ್ ಆಟೋ ಖರೀದಿ ಮಾಡಿದ್ದಾರೆ. ಚಾಲಕಿ ಪ್ರಕಾರ, ಎಲೆಕ್ಟ್ರಿಕ್ ಆಟೋ ಓಡಿಸೋದು ಸುಲಭ. ಸಾಲ ಪಡೆದು ಆಟೋ ಖರೀದಿ ಮಾಡಿದ ಚಾಲಕಿ ಈಗ ಪ್ರತಿ ತಿಂಗಳು ಸುಮಾರು 45 ಸಾವಿರ ಸಂಪಾದನೆ ಮಾಡ್ತಿದ್ದಾರೆ. ಕೆಲವೊಮ್ಮೆ ಈ ಮೊತ್ತದಲ್ಲಿ ಏರಿಕೆಯಾಗುತ್ತೆ.
ಮಹಿಳಾ ಪ್ರಯಾಣಿಕರ ಸುರಕ್ಷತೆಗೆ MakeMyTrip ಮಾಸ್ಟರ್ ಪ್ಲಾನ್! AI ಆಧಾರಿತ ಹೊಸ ಫೀಚರ್‌ಗಳು ಲಾಂಚ್
ಯಾವುದೇ ಟೆನ್ಷನ್ ಇಲ್ಲ
ಚಾಲಕಿ ಪ್ರಕಾರ, ಆಟೋ ಅವರಿಗೆ ನೆಮ್ಮದಿ, ಖುಷಿ ಎರಡನ್ನೂ ನೀಡಿದೆ. ಪ್ರಯಾಣಿಕರಿಂದ ಈವರೆಗೆ ಯಾವುದೇ ಕಿರುಕುಳವನ್ನು ಅವರು ಎದುರಿಸಿಲ್ಲ. ಪ್ರಯಾಣಿಕರಿಂದ ಇವರಿಗೆ ಬೆಂಬಲ ಸಿಕ್ಕಿದೆಯಂತೆ. ಕೋರಮಂಗಲದ ಎಲ್ಲ ಚಾಲಕಿಯರು ಒಂದೇ ಗುಂಪಿನಲ್ಲಿದ್ದಾರೆ. ಸಿಗ್ನಲ್ ನಲ್ಲಿ ಅನೇಕ ಹುಡುಗಿಯರು, ಚಾಲಕಿಯನ್ನು ಮಾತನಾಡಿಸ್ತಾರಂತೆ. ಅವರ ಕೆಲ್ಸದ ಬಗ್ಗೆ ಕೇಳ್ತಾರಂತೆ. ಇದು ನನಗೆ ಹೆಮ್ಮೆಯ ವಿಷ್ಯ. ನನಗೆ ಖುಷಿ ನೀಡುತ್ತೆ ಎಂದು ಚಾಲಕಿ ಹೇಳಿದ್ದಾರೆ. ಇವ್ರ ಜೊತೆಗಿನ ಪ್ರಯಾಣ ತುಂಬಾ ಆನಂದದಾಯಕವಾಗಿತ್ತು ಎಂದು ಸೌಮ್ಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಸ್ನೇಹಾ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಚಾಲಕಿಯ ಆತ್ಮವಿಶ್ವಾಸ ಮತ್ತು ದಯೆಯನ್ನು ಶ್ಲಾಘಿಸಿದ್ದಾರೆ. ಮಹಿಳಾ ಸುರಕ್ಷತೆಯ ಮೇಲೆ ಅದರ ಸಕಾರಾತ್ಮಕ ಪರಿಣಾಮವನ್ನು ಉಲ್ಲೇಖಿಸಿದ ಅನೇಕರು, ಮಹಿಳೆಯರು ಚಾಲನಾ ವೃತ್ತಿಗೆ ಸೇರಬೇಕೆಂದು ಕರೆ ನೀಡಿದ್ದಾರೆ. ಜೀವನೋಪಾಯಕ್ಕೆ ಆಟೋ ಚಾಲನೆ ಮಾಡ್ಬೇಕೆಂದುಕೊಂಡಿರುವ ಅನೇಕರಿಗೆ ಸೌಮ್ಯ ಪೋಸ್ಟ್ ಧೈರ್ಯ ನೀಡಿದೆ. ಮಹಾನಗರಿ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡ್ಬಹುದು ಎಂಬ ಆತ್ಮವಿಶ್ವಾಸ ತುಂಬಿದೆ.


