MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ತೆಲುಗುನಾಡಿನ ಸೊಸೆ ಆದ್ಮೇಲೆ ರಶ್ಮಿಕಾಗೆ ಫಿದಾ ಆದ ಕನ್ನಡಿಗರು; ಕಾರಣ ಗೊತ್ತಾದ್ರೆ 'ಹೀಗೂ ಆಗೋಯ್ತಾ' ಅನ್ನೋದು ಪಕ್ಕಾ!

ತೆಲುಗುನಾಡಿನ ಸೊಸೆ ಆದ್ಮೇಲೆ ರಶ್ಮಿಕಾಗೆ ಫಿದಾ ಆದ ಕನ್ನಡಿಗರು; ಕಾರಣ ಗೊತ್ತಾದ್ರೆ 'ಹೀಗೂ ಆಗೋಯ್ತಾ' ಅನ್ನೋದು ಪಕ್ಕಾ!

ಮಾರ್ಚ್ 4ರಂದು ನಡೆದ ಅದ್ದೂರಿ ಆರತಕ್ಷತೆ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವರ ಉಡುಪಿನ ಆಯ್ಕೆ ಅವರ ಕನ್ನಡಪ್ರೇಮಕ್ಕೆ ಸಾಕ್ಷಿ ಎನ್ನಲಾಗುತ್ತಿದೆ. ರಶ್ಮಿಕಾ ತೆಲಂಗಾಣದ ಮನೆಗೆ ಸೊಸೆಯಾಗಿ ಹೋಗಿದ್ದರೂ, ತಮ್ಮ ಮೂಲವನ್ನು ಮರೆಯದೇ ಕರ್ನಾಟಕದ ಹೆಮ್ಮೆಯ 'ಮೈಸೂರು ಸಿಲ್ಕ್' ಸೀರೆಯನ್ನು ಉಟ್ಟು ಕಂಗೊಳಿಸಿದರು.

2 Min read
Author : Shriram Bhat
Published : Mar 07 2026, 01:03 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : X

ಇಡೀ ಭಾರತ ತುಂಬಾ ಈಗ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮದುವೆಯದೇ ಸುದ್ದಿ. ಅಷ್ಟರಮಟ್ಟಿಗೆ ಸುದ್ದಿಯಾದ ಸದ್ಯದ ತಾರೆ ಅಂದ್ರೆ ಅದು ರಶ್ಮಿಕಾ ಮಾತ್ರ. ಕನ್ನಡ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ನಟಿ ರಶ್ಮಿಕಾ ಬಳಿಕ ತೆಲುಗು, ತಮಿಳು, ಮಲೆಯಾಳಂ ಸಿನಿಮಾದಲ್ಲಿ ನಟಿಸಿ ಬಳಿಕ ಬಾಲಿವುಡ್ ಸಿನಿಮಾದಲ್ಲೂ ಮಿಂಚಿ, ಭಾರತದ ನಂಬರ್ ಒನ್ ನಟಿಯಾಗಿ ಮೆರೆದು ಇತ್ತೀಚೆಗೆ ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakonda) ಅವರನ್ನು ಮದುವೆಯಾಗಿರೋದು ಈಗ ಇತಿಹಾಸ..

27
Image Credit : X

ದಕ್ಷಿಣ ಭಾರತದ ಚಿತ್ರರಂಗದ 'ಮೋಸ್ಟ್ ಹ್ಯಾಪನಿಂಗ್ ಕಪಲ್' ಎಂದೇ ಗುರುತಿಸಿಕೊಂಡಿದ್ದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ರೌಡಿ ಸ್ಟಾರ್ ವಿಜಯ್ ದೇವರಕೊಂಡ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಫೆಬ್ರವರಿ 26ರಂದು ರಾಜಸ್ಥಾನದ ಅರಮನೆಯಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗಿದ ಈ ವಿವಾಹ ಮಹೋತ್ಸವದ ಚಿತ್ರಗಳು ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ. ಆದರೆ, ಮದುವೆಯ ನಂತರ ನಡೆದ ಆರತಕ್ಷತೆಯಲ್ಲಿ ರಶ್ಮಿಕಾ ಮಂದಣ್ಣ ತೋರಿದ 'ಕನ್ನಡ ಪ್ರೇಮ' ಈಗ ಎಲ್ಲರ ಗಮನ ಸೆಳೆಯುತ್ತಿದೆ.

Related Articles

Related image1
ಪುರುಷರಲ್ಲಿ ಉದಯನಿಧಿ ಸ್ಟಾಲಿನ್, ಮಹಿಳೆಯರಲ್ಲಿ ರಮ್ಯಾ ಕೃಷ್ಣನ್ ಅವರನ್ನು ತ್ರಿಶಾ ಪ್ರೀತಿಸುತ್ತಿದ್ದಾರೆ, ವಿಜಯ್ ಅಲ್ಲ: ಗಾಯಕಿ ಸುಚಿತ್ರಾ!
Related image2
'ಗೋ ಟು ಪೀಪಲ್' ಎಂದಿದ್ಯಾಕೆ ತ್ರಿಷಾ ಕೃಷ್ಣನ್? ಮಾತಿಗಿಂತ ಕೃತಿ ಮೇಲು ಅನ್ನೋ ಎಚ್ಚರಿಕೆ ಗಂಟೆ ಯಾರಿಗೆ?
37
Image Credit : X

ಮೈಸೂರು ರೇಷ್ಮೆಯಲ್ಲಿ ಮಿಂಚಿದ ತೆಲಂಗಾಣದ ಸೊಸೆ:

ಮಾರ್ಚ್ 4ರಂದು ನಡೆದ ಅದ್ದೂರಿ ಆರತಕ್ಷತೆ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವರ ಉಡುಪಿನ ಆಯ್ಕೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ರಶ್ಮಿಕಾ ತೆಲಂಗಾಣದ ಮನೆಗೆ ಸೊಸೆಯಾಗಿ ಹೋಗಿದ್ದರೂ, ತಮ್ಮ ಮೂಲವನ್ನು ಮಾತ್ರ ಮರೆತಿಲ್ಲ. ಈ ವಿಶೇಷ ದಿನದಂದು ಅವರು ಕರ್ನಾಟಕದ ಹೆಮ್ಮೆಯ 'ಮೈಸೂರು ಸಿಲ್ಕ್' ಸೀರೆಯನ್ನು ಉಟ್ಟು ಕಂಗೊಳಿಸಿದರು. ಅಷ್ಟೇ ಅಲ್ಲದೆ, ಆ ಸೀರೆಯ ಮೇಲೆ ಕರ್ನಾಟಕ ಸರ್ಕಾರದ ಲಾಂಛನವಾದ 'ಗಂಡಭೇರುಂಡ' ಚಿತ್ರದ ಎಂಬ್ರಾಯ್ಡರಿ ಇದ್ದದ್ದು ಕನ್ನಡಿಗರ ಅಭಿಮಾನವನ್ನು ಇಮ್ಮಡಿಗೊಳಿಸಿದೆ.

47
Image Credit : Social Media

ಕೊಡವ ಸಂಸ್ಕೃತಿಯ ಅನಾವರಣ:

ಕೇವಲ ಸೀರೆಯಷ್ಟೇ ಅಲ್ಲ, ರಶ್ಮಿಕಾ ಧರಿಸಿದ್ದ ರವಿಕೆಯ (Blouse) ವಿನ್ಯಾಸದಲ್ಲೂ ಒಂದು ವಿಶೇಷತೆ ಇತ್ತು. ಕೊಡಗಿನ ಕುವರಿಯಾದ ರಶ್ಮಿಕಾ, ತಮ್ಮ ಸಮುದಾಯದ ಸಂಪ್ರದಾಯವನ್ನು ಬಿಂಬಿಸುವಂತೆ ರವಿಕೆಯ ಹಿಂಭಾಗದಲ್ಲಿ ಕೊಡವರ ಪವಿತ್ರ ಲಾಂಛನಗಳಾದ 'ಪಿಚೆ ಕತ್ತಿ' ಮತ್ತು 'ಬಂದೂಕಿನ' ಚಿತ್ರಗಳನ್ನು ಬಿಡಿಸಿದ್ದರು. ಈ ಮೂಲಕ ತಾವು ಎಲ್ಲಿಗೇ ಹೋದರೂ ತಮ್ಮ ಕೊಡವ ಸಂಸ್ಕೃತಿಯನ್ನು ಎದೆಯ ಮೇಲೆ ಹೊತ್ತು ನಡೆಯುತ್ತೇನೆ ಎಂಬ ಸಂದೇಶವನ್ನು ರಶ್ಮಿಕಾ ಸಾರಿದ್ದಾರೆ.

57
Image Credit : Instagram

ವೈರಲ್ ಆಯ್ತು 'ಏಳಮ್ಮ ತುಳಸಿ' ಮ್ಯೂಸಿಕ್:

ಇವೆಲ್ಲದರ ನಡುವೆ ರಶ್ಮಿಕಾ ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ವಿಡಿಯೋವಂತೂ ಈಗ ಟ್ರೆಂಡಿಂಗ್ ಲಿಸ್ಟ್‌ನಲ್ಲಿದೆ. ತಮ್ಮ ಮದುವೆಯ ಸುಂದರ ಕ್ಷಣಗಳ ವಿಡಿಯೋಗೆ ರಶ್ಮಿಕಾ ಹಿನ್ನೆಲೆ ಸಂಗೀತವಾಗಿ ಬಳಸಿಕೊಂಡಿರುವುದು ಪುರಂದರ ದಾಸರ ರಚನೆಯ 'ಏಳಮ್ಮ ತುಳಸಿ' ಎಂಬ ಕನ್ನಡ ಹಾಡನ್ನು! ಇತ್ತೀಚೆಗೆ ಯುವ ಸಂಗೀತ ನಿರ್ದೇಶಕ ಕೆ. ಸುಮೇಧ್ ಅವರು ಅತ್ಯಂತ ಆಧುನಿಕವಾಗಿ ಮತ್ತು ಮಧುರವಾಗಿ ಸಂಯೋಜಿಸಿರುವ ಈ ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ 70 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಇದೇ ಹಾಡನ್ನು ರಶ್ಮಿಕಾ ತಮ್ಮ ಲೈಫ್‌ನ ಅತಿ ದೊಡ್ಡ ಸಂಭ್ರಮಕ್ಕೆ ಬಳಸಿರುವುದು ವಿಶೇಷ.

67
Image Credit : Instagram

ಟೀಕಾಕಾರರಿಗೆ ತಕ್ಕ ಉತ್ತರ:

ಕಳೆದ ಕೆಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಅವರನ್ನು 'ಕನ್ನಡ ವಿರೋಧಿ' ಎಂದು ಕೆಲವರು ಟೀಕಿಸುತ್ತಲೇ ಬಂದಿದ್ದರು. ಆದರೆ, ತಮ್ಮ ಬದುಕಿನ ಅತ್ಯಂತ ಪ್ರಮುಖ ಘಟ್ಟವಾದ ಮದುವೆಯ ಸಂದರ್ಭದಲ್ಲಿ ರಶ್ಮಿಕಾ ಉಟ್ಟ ಉಡುಪು, ತೋರಿದ ಲಾಂಛನಗಳು ಮತ್ತು ಬಳಸಿದ ಕನ್ನಡ ಹಾಡು ಅವರ ಮೇಲಿದ್ದ ಎಲ್ಲಾ ಆರೋಪಗಳಿಗೆ ಮೌನವಾಗಿಯೇ ಉತ್ತರಿಸಿದಂತಿದೆ. 

77
Image Credit : Instagram

ಹೊರರಾಜ್ಯದಲ್ಲಿ ನೆಲೆಸಿದರೂ ತನ್ನ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಮರೆಯದ ರಶ್ಮಿಕಾ ಅವರ ಈ ನಡೆಗೆ ಈಗ ಕರ್ನಾಟಕದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ, ವಿಜಯ್ ಮತ್ತು ರಶ್ಮಿಕಾ ಜೋಡಿ ಈಗ ಬಾಲಿವುಡ್‌ನಿಂದ ಹಿಡಿದು ಸ್ಯಾಂಡಲ್‌ವುಡ್‌ವರೆಗೆ ಹಾರ್ಟ್ ಆಫ್ ದಿ ಟೌನ್ ಆಗಿ ಮಿಂಚುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
'ಗೋ ಟು ಪೀಪಲ್' ಎಂದಿದ್ಯಾಕೆ ತ್ರಿಷಾ ಕೃಷ್ಣನ್? ಮಾತಿಗಿಂತ ಕೃತಿ ಮೇಲು ಅನ್ನೋ ಎಚ್ಚರಿಕೆ ಗಂಟೆ ಯಾರಿಗೆ?
Recommended image2
Dhurandhar Revenge trailer: ಮೊದಲ ಭಾಗದ ಕಲೆಕ್ಷನ್ 1300 ಕೋಟಿ, ಈಗ ' ಟ್ರೈಲರ್ ಔಟ್! (ವಿಡಿಯೋ)
Recommended image3
ಗಂಡಸ್ತನ ಸಾಬೀತುಪಡಿಸೋ ಕಥೆ, ಈ ಅಡಲ್ಟ್ ಕಾಮಿಡಿ ನೋಡಲು ಮುಗಿಬಿದ್ದ ವೀಕ್ಷಕರು!
Related Stories
Recommended image1
ಪುರುಷರಲ್ಲಿ ಉದಯನಿಧಿ ಸ್ಟಾಲಿನ್, ಮಹಿಳೆಯರಲ್ಲಿ ರಮ್ಯಾ ಕೃಷ್ಣನ್ ಅವರನ್ನು ತ್ರಿಶಾ ಪ್ರೀತಿಸುತ್ತಿದ್ದಾರೆ, ವಿಜಯ್ ಅಲ್ಲ: ಗಾಯಕಿ ಸುಚಿತ್ರಾ!
Recommended image2
'ಗೋ ಟು ಪೀಪಲ್' ಎಂದಿದ್ಯಾಕೆ ತ್ರಿಷಾ ಕೃಷ್ಣನ್? ಮಾತಿಗಿಂತ ಕೃತಿ ಮೇಲು ಅನ್ನೋ ಎಚ್ಚರಿಕೆ ಗಂಟೆ ಯಾರಿಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved