ಮಹಿಳಾ ಮ್ಯಾನೇಜರ್ ವರ್ಸಸ್ ಪುರುಷ ಮ್ಯಾನೇಜರ್ ಇವರಲ್ಲಿ ಯಾರು ಬೆಸ್ಟ್? ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿರುವ ರೀಲ್ಸ್ ಒಂದು ಈ ಚರ್ಚೆ ಹುಟ್ಟುಹಾಕಿದೆ. ಆಫೀಸ್ ಸಿಬ್ಬಂದಿ ರಿಯಾಕ್ಷನ್ ನೋಡಿ ನೆಟ್ಟಿಗರು ದಂಗಾಗಿದ್ದಾರೆ.

ಎರಡು ಜಡೆ ಒಟ್ಟಿಗೆ ಸೇರಲ್ಲ ಎನ್ನುವ ಮಾತೊಂದಿದೆ. ಮಹಿಳೆಯೇ ಮಹಿಳೆಗೆ ಶತ್ರು ಅಂತ ಅನೇಕರು ಹೇಳ್ತಾರೆ. ಕೆಲವೊಂದು ಸನ್ನಿವೇಶಗಳನ್ನು ನೋಡ್ದಾಗ ಅದು ಸತ್ಯ ಎನ್ನಿಸುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ (viral) ಆಗಿದೆ. ಅದ್ರಲ್ಲಿ ಆಫೀಸ್ ಸಿಬ್ಬಂದಿ ಆಟ ಆಡ್ತಿದ್ದಾರೆ. ಎರಡು ಆಪ್ಶನ್ ನಲ್ಲಿ ಒಂದನ್ನು ಆಯ್ಕೆ ಮಾಡ್ಕೊಳ್ಬೇಕು. ಈ ವೇಳೆ ಮಹಿಳಾ ಮ್ಯಾನೇಜರ್ ಹಾಗೂ ಪುರುಷ ಮ್ಯಾನೇಜರ್ ಇವ್ರಲ್ಲಿ ನಿಮ್ಮ ಆಯ್ಕೆ ಯಾವುದು ಅಂತ ಕೇಳಲಾಗುತ್ತೆ. ಆಗ ಸಿಬ್ಬಂದಿ ಮಾಡ್ಕೊಂಡ ಆಯ್ಕೆ ಚರ್ಚೆಯಲ್ಲಿದೆ.

ಪುರುಷ ಮ್ಯಾನೇಜರ್ ವರ್ಸಸ್ ಮಹಿಳಾ ಮ್ಯಾನೇಜರ್ (female manager)

ಗೇಮ್ ನಲ್ಲಿದ್ದ ಪ್ರತಿಯೊಬ್ಬರೂ ಪುರುಷ ಮ್ಯಾನೇಜರ್ ಆಯ್ಕೆ ಮಾಡ್ಕೊಂಡಿದ್ದಾರೆ. ಮಹಿಳಾ ಮ್ಯಾನೇಜರ್ ಜಾಗ ಸಂಪೂರ್ಣ ಖಾಲಿ ಇತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಅನೇಕರು, ಮಹಿಳೆಗೆ ಮಹಿಳೆಯೇ ಶತ್ರು ಅಂತ ಕಮೆಂಟ್ ಮಾಡಿದ್ದಾರೆ. ಮಹಿಳೆ ಮುಂದೆ ಬರೋದನ್ನು ಇನ್ನೊಬ್ಬ ಮಹಿಳೆ ಸಹಿಸೋದಿಲ್ಲ ಅಂತ ಹೇಳಿದ್ದಾರೆ. ಮತ್ತೆ ಕೆಲವರು ಮಹಿಳೆ ಮ್ಯಾನೇಜರ್ ಕೈಕೆಳಗೆ ಕೆಲ್ಸ ಮಾಡಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನನ್ನ ಬಾಸ್ ಮಹಿಳೆ. ಅವ್ರ ಕೆಳಗೆ ಕೆಲ್ಸ ಮಾಡೋದು ತಲೆನೋವಿನ ಕೆಲ್ಸ ಎಂದಿದ್ದಾರೆ. ಮತ್ತೊಂದಿಷ್ಟು ಮಂದಿ ತಮ್ಮ ಮಹಿಳಾ ಮ್ಯಾನೇಜರ್ ಕೆಲ್ಸವನ್ನು ಹೊಗಳಿದ್ದಾರೆ.

ಮಸಾಜ್ ಮಾಡಲು ಬಂದು ಗ್ರಾಹಕಿಯ ಮನೆಯಲ್ಲೇ ಆಕೆಯ ಮೇಲೆ ಹಲ್ಲೆ ಮಾಡಿದ ಅರ್ಬನ್ ಕಂಪನಿ ಉದ್ಯೋಗಿ

ಅಷ್ಟಕ್ಕೂ ಮಹಿಳಾ ಮ್ಯಾನೇಜರ್ ಅಂದಾಗ ಮೂಗು ಮುರಿಯೋದು ಏಕೆ?

ಬಾಸ್ ಹೆಣ್ಣ, ಗಂಡ ಎನ್ನುವ ಪ್ರಶ್ನೆಯನ್ನು ಕೇಳೋದು ಸಾಮಾನ್ಯ. ಹೆಣ್ಣು ಎಂದಾಗ ಮುಖದ ಪ್ರತಿಕ್ರಿಯೆ ಭಿನ್ನವಾಗಿರುತ್ತದೆ. ಮಹಿಳಾ ಬಾಸ್ಗಳು ಒಳ್ಳೆಯವರಲ್ಲ ಎಂಬುದು ಜನರಲ್ಲಿ ಸುಸ್ಥಾಪಿತ ನಂಬಿಕೆ. ಅವರು ಮುಂಗೋಪಿಗಳು. ಅವರೊಂದಿಗೆ ಕೆಲಸ ಮಾಡುವುದು ಕಷ್ಟ. ಅವರು ಕೆಲಸ ಮಾಡುವುದಿಲ್ಲ, ಕೆಲ್ಸ ಮಾಡಿಸ್ತಾರೆ, ಅವರಿಗೆ ಲಕ್ಷಾಂತರ ನೆಪಗಳಿರುತ್ವೆ, ಯಾವುದೇ ಕಾರಣ ಇಲ್ದೆ ಕೂಗಾಡ್ತಾರೆ ಎನ್ನುವ ನಂಬಿಕೆ ಇದೆ.

ಮಹಿಳೆಯರ ಮೂಡ್ ಸ್ವಿಂಗ್ ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತವೆ. ಅವರು ಮನೆಕೆಲಸಗಳು ಮತ್ತು ಕುಟುಂಬದ ಜವಾಬ್ದಾರಿಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ, ಆದ್ರೆ ಆಫೀಸ್ ನಲ್ಲಿ ಮೇಲಾಧಿಕಾರಿಗಳನ್ನು ದೂಷಿಸ್ತಾರೆ ಅಂತ ನಂಬೋರೇ ಹೆಚ್ಚು. ಹಾಗೆಯೇ ಅನೇಕರು ಮಹಿಳಾ ಮೇಲಾಧಿಕಾರಿಗಳನ್ನು ಒಪ್ಪಿಕೊಳ್ಳೋದಿಲ್ಲ. ಮಹಿಳೆಯೊಬ್ಬಳು ಉನ್ನತ ಸ್ಥಾನಕ್ಕೆ ಬಂದಿದ್ದಾಳೆ ಅಂದ್ರೆ ಅದು ಅಡ್ಡದಾರಿಯಿಂದ, ಅವಳಿಗೆ ಸಾಮರ್ಥ್ಯವಿಲ್ಲ ಅಂತ ಅವಳನ್ನು ದೂಷಿಸೋರ ಸಂಖ್ಯೆ ಕೂಡ ಹೆಚ್ಚಾಗಿದೆ. ಅತಿ ಅಪರೂಪಕ್ಕೆ ಕೆಲ ಮಹಿಳೆಯರಿಗೆ ಉನ್ನತ ಸ್ಥಾನವನ್ನು ನಿಭಾಯಿಸೋದು ಕಷ್ಟವಾಗುತ್ತದೆ. ಆದ್ರೆ ಎಲ್ಲ ಮಹಿಳೆಯರು ಹಾಗಲ್ಲ. ಮನೆ, ಕೆಲ್ಸ ಎಲ್ಲವನ್ನೂ ಒಟ್ಟಿಗೆ ನಿಭಾಯಿಸಬಲ್ಲರು. ದೊಡ್ಡ ದೊಡ್ಡ ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ಪರಿಹರಿಸಬಲ್ಲರು. ಕೆಲ ಸಂದರ್ಭದಲ್ಲಿ ಅವರ ತಾಳ್ಮೆ ಕಟ್ಟೆ ಒಡೆಯುತ್ತದೆ. ಅದನ್ನೇ ಜನರು ತಪ್ಪಾಗಿ ತಿಳಿಯುತ್ತಾರೆ. ಮತ್ತೆ ಕೆಲ ಮಹಿಳೆಯರಿಗೆ ಕಷ್ಟಪಟ್ಟು ಮೇಲೆ ಬಂದ ಸ್ಥಾನವನ್ನು ಕಳೆದುಕೊಳ್ಳುವ ಭಯವಿರುತ್ತದೆ. ಇದೇ ಒತ್ತಡದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಅವರು ಸ್ವಲ್ಪ ಕಠಿಣವಾಗಿ ವರ್ತಿಸುತ್ತಾರೆ. ಅದನ್ನೇ ಜನರು ಅಹಂಕಾರ, ಬೇರೆಯವರ ಸಮಸ್ಯೆಗೆ ಸ್ಪಂದಿಸದ ಬಾಸ್ ಎಂಬ ಪಟ್ಟ ನೀಡುತ್ತಾರೆ.

ಮಹಿಳಾ ಪ್ರಯಾಣಿಕರ ಸುರಕ್ಷತೆಗೆ MakeMyTrip ಮಾಸ್ಟರ್ ಪ್ಲಾನ್! AI ಆಧಾರಿತ ಹೊಸ ಫೀಚರ್‌ಗಳು ಲಾಂಚ್

ಈ ಬಗ್ಗೆ ಸಾಕಷ್ಟು ಸಮೀಕ್ಷೆ ಕೂಡ ನಡೆದಿದೆ. ಸಮೀಕ್ಷೆಯಲ್ಲಿ ಕೂಡ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಒಂದು ರೀಲ್ ಮನುಷ್ಯನ ಮನಸ್ಥಿತಿಯ ನಾನಾ ರೂಪಗಳ ಬಗ್ಗೆ ಚರ್ಚೆ ಮಾಡುವಂತೆ ಮಾಡಿದೆ.

View post on Instagram