ಟ್ರಾಫಿಕ್‌ನಲ್ಲಿ, ಗಾಡಿಯಲ್ಲಿ ಹುಡುಗಿ ಬ್ಯಾಗಿನೊಳಗೆ ಮುದ್ದು ಮುದ್ದಾದ ಬೆಕ್ಕು, ವಿಡಿಯೋ ವೈರಲ್
ಮನೆಯೊಳಗೆ ಮುದ್ದು ಮುದ್ದಾದ ಪೆಟ್ಸ್ ಇರೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ನಾಯಿಮರಿ, ಬೆಕ್ಕಿನ ಮರಿ ಹೀಗೆ ಯಾವುದಾದರೊಂದು ಮನೆಯಲ್ಲಿದ್ರೆ ಬೆಸ್ಟ್ ಫ್ರೆಂಡ್‌ನಂತೆ ಅನಿಸಲು ಶುರುವಾಗುತ್ತದೆ. ಆದ್ರೆ ಆಫೀಸ್ ಕೆಲ್ಸದ ಮಧ್ಯೆ ಪೆಟ್ಸ್‌ಗಳನ್ನು ನೋಡ್ಕೊಳ್ಳೋದು ಕಷ್ಟಾನೇ ಸರಿ. ಅದ್ಕೇ ಇಲ್ಲೊಬ್ಬಳು ಪೆಟ್ ಕೇರ್ ಮಾಡೋಕೆ ಅದೆಂಥಾ ಐಡಿಯಾ ಮಾಡಿದ್ದಾಳೆ ನೋಡಿ.
ಬೆಂಗಳೂರಿನಂಥಾ ಮಹಾನಗರದಲ್ಲಿ ಬೋರಾಗದೆ ಹ್ಯಾಪಿ ಹ್ಯಾಪಿಯಾಗಿರಬೇಕು ಅಂದ್ರೆ ಪೆಟ್ಸ್ ಇಟ್ಕೊಳ್ಳೋದು ಬೆಸ್ಟ್. ಸ್ನೇಹಿತರ ಜೊತೆ ದಿನಪೂರ್ತಿ ಸಮಯ ಕಳೆಯೋಕಂತೂ ಆಗಲ್ಲ. ಮನೆಗೆ ಹಿಂತಿರುಗಿ ಬರುವಾಗ ಮುಖದಲ್ಲಿ ನಗು ಮೂಡಿಸೋದು ಈ ಮುದ್ದಾದ ನಾಯಿ, ಬೆಕ್ಕಿನ ಮರಿಗಳು. ಹೀಗಾಗಿಯೇ ಹೆಚ್ಚಿನವರು ಮುದ್ದಾದ ಪೆಟ್‌ನ್ನು ಇಟ್ಟುಕೊಂಡಿರುತ್ತಾರೆ. ಅವುಗಳನ್ನು ಹೆಚ್ಚು ನೆಚ್ಚಿಕೊಂಡಿರುತ್ತಾರೆ. ಆದ್ರೆ ನಗರದಲ್ಲಿ ವಾಸಿಸುವವರ ಸಮಸ್ಯೆಯೆಂದರೆ ಪೆಟ್ ಕೇರ್. ಆಫೀಸ್, ಮನೆ ಎಂದು ಓಡಾಡುವ ಕಾರಣ ಸಾಕುಪ್ರಾಣಿಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸೋಕೆ ಸಾಧ್ಯವಾಗುವುದಿಲ್ಲ.
ಬೆಳಗ್ಗೆ ಮನೆ ಬಿಟ್ಟು ಸಂಜೆ ಮತ್ತೆ ಮರಳಿ ಮನೆ ಸೇರುವ ಕಾರಣ ಅಷ್ಟೋ ಹೊತ್ತು ಪೆಟ್ಸ್ ಮನೆಯಲ್ಲಿ ಒಂಟಿಯಾಗಿ, ಆಹಾರವಿಲ್ಲದೆ ಇರಬೇಕಾಗುತ್ತದೆ. ಹೀಗಿರುವಾಗ ಬೆಂಗಳೂರಿನ ಯುವತಿ (Girl)ಯೊಬ್ಬಳು ಕೆಲಸದ ಸಮಯದಲ್ಲಿ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ದಿ ಬೆಸ್ಟ್ ಪರಿಹಾರವೊಂದನ್ನು ಕಂಡು ಹಿಡಿದಿದ್ದಾಳೆ. ಅವಳು ತನ್ನ ಪ್ರೀತಿಯ ಬೆಕ್ಕನ್ನು (Cat) ಬ್ಯಾಗ್‌ನಲ್ಲಿ ಹಾಕಿಕೊಂಡು ಎಲ್ಲೆಡೆ ಕರೆದೊಯ್ಯುತ್ತಾಳೆ. ಸದ್ಯ ಈ ಕುರಿತಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಕ್ಕಿಗೇನು ಸಿಟ್ಟಿತ್ತೋ ಏನೋ: ಕದ್ದು ಕುಳಿತು ಮಾಲೀಕನ ಕೆನ್ನೆಗೆ ಬಾರಿಸಿದ ಮರ್ಜಾಲ: ವೈರಲ್ ವೀಡಿಯೋ
ಆಫೀಸ್ ಕೆಲ್ಸದ ಮಧ್ಯೆ ಪೆಟ್ ಕೇರ್ ಮಾಡೋದು ಹೀಗೆ ನೋಡಿ
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಯುವತಿ ತನ್ನ ಸಾಕು ಬೆಕ್ಕನ್ನು ದ್ವಿಚಕ್ರ ವಾಹನದಲ್ಲಿ ತನ್ನ ಕೆಲಸದ ಸ್ಥಳಕ್ಕೆ ಕರೆತರುತ್ತಿರುವುದನ್ನು ಕಾಣಬಹುದು. ಬೆಕ್ಕನ್ನು ಗುಲಾಬಿ ಬಣ್ಣದ ಬ್ಯಾಗ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಮಹಿಳೆ ಟ್ರಾಫಿನ್‌ನಲ್ಲಿ ಗಾಡಿ ನಿಲ್ಲಿಸಿರುವಾಗ ಬೆಕ್ಕು ಕುತೂಹಲದಿಂದ ಸುತ್ತಲಿನ ಪ್ರಪಂಚವನ್ನು ನೋಡಿತ್ತದೆ. ಅನಿರ್ಬನ್ ರಾಯ್ ದಾಸ್ ಎಂಬ ಸಾಮಾಜಿಕ ಮಾಧ್ಯಮ (Social media) ಬಳಕೆದಾರರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, 'ಕೆಲಸಕ್ಕೆ ಹೋಗುತ್ತಿದ್ದು, ಪೆಟ್ ಕೇರ್ ಮಾಡಬೇಕೆಂಬುದು ನಿಮ್ಮ ಉದ್ದೇಶವಾಗಿದ್ದರೆ, ಇದಕ್ಕೆ ಉತ್ತಮ ಮಾರ್ಗ ನಿಮ್ಮ ಮುದ್ದಾದ ಸಾಕುಪ್ರಾಣಿಯನ್ನು (Pet) ನಿಮ್ಮೊಂದಿಗೆ ಕೊಂಡೊಯ್ಯುವುದು. ನಾನು ಈ ಮುದ್ದಾದ ಬೆಕ್ಕನ್ನು ಯುವತಿ ಆಫೀಸ್‌ಗೆ ಹೀಗೆ ಕೊಂಡೊಯ್ಯುವುದನ್ನು ನೋಡಿದ್ದೇನೆ. ಹಾಗಾಗಿ ಅದನ್ನು ರೆಕಾರ್ಡ್ ಮಾಡಿದ್ದೇನೆ' ಎಂದಿದ್ದಾರೆ.
ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಪ್ರಾಣಿ ಮತ್ತು ಮನುಷ್ಯನ ಹೃದಯಸ್ಪರ್ಶಿ ಸಂಬಂಧವನ್ನು ಸೂಚಿಸುತ್ತದೆ. ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ಹಾರ್ಟ್ ಎಮೋಜಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅನೇಕ ಬಳಕೆದಾರರು ಬೆಕ್ಕಿನ ಮರಿಯನ್ನು ಜೊತೆಗೇ ಕೊಡೊಯ್ಯುವ ನವೀನ ವಿಧಾನಕ್ಕಾಗಿ ಯುವತಿಯನ್ನು ಹೊಗಳಿದ್ದಾರೆ. ಆದರೆ ಇನ್ನು ಕೆಲವರು ಸವಾರ ಮತ್ತು ಬೆಕ್ಕಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೂರು ವರ್ಷಗಳ ಕಾಲ ಕುಟುಂಬದಿಂದ ದೂರವಾಗಿದ್ದ ನಾಯಿಯೊಂದು ಮತ್ತೆ ತನ್ನ ಕುಟುಂಬವನ್ನು ಸೇರಿದ ವಿಚಾರ ವೈರಲ್ ಆಗಿತ್ತು.
ವಿಷಕಾರಿ ಹಾವಿಂದ ಮಾಲೀಕರ ಕುಟುಂಬ ಬಚಾವ್ ಮಾಡಿದ ಜೋಡಿ ಬೆಕ್ಕು..!
4 ವರ್ಷದ ಹುಡುಗಿಯಷ್ಟೇ ಎತ್ತರದ ಮಾರ್ಜಾಲ
ವಿಶ್ವದ ಅತೀ ದೊಡ್ಡ ಬೆಕ್ಕು ಎಂದೇ ಹೇಳಲಾದ ಬೆಕ್ಕೊಂದರ ವೀಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಷ್ಯಾದ ಮಹಿಳೆಯೊಬ್ಬರ ಬೆಕ್ಕು ಇದಾಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು. yuliyamnn ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಬೆಕ್ಕಿನ ಹಲವು ವೀಡಿಯೋಗಳಿದ್ದು, ಬೆಕ್ಕು ಆಟವಾಡುವ ಬಾಗಿಲನ್ನು ತೆರೆಯುವ ಕುಳಿತು ಬಿಂದಾಸ್ ಆಗಿ ಕಾರ್ಟೂನ್ ನೋಡುವ ಹಲವು ವೀಡಿಯೋಗಳು ಈ ಖಾತೆಯಲ್ಲಿವೆ.
ಯೂಲಿಯ ಮಿನಿನ ಎಂಬ ಮಹಿಳೆ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಈ ಬೆಕ್ಕಿನ ಹೆಸರು ಕೆಫಿರ್, ಈ ಬೆಕ್ಕಿನ ಫೋಟೋಗಳನ್ನು ಯೂಲಿಯ ಆಗಾಗ ಪೋಸ್ಟ್ ಮಾಡುತ್ತಿದ್ದು, ಬೆಕ್ಕು ಎಷ್ಟು ಎತ್ತರ ಬೆಳೆದಿದೆ ಎಂಬುದು ವೀಡಿಯೋದಲ್ಲಿ ಕಾಣಿಸುತ್ತಿದೆ. ಯೂಲಿಯ ಅವರ 4 ವರ್ಷದ ಮಗಳು ಅನೇಚ್ಕಾಳಷ್ಟೇ ಉದ್ದ ಬೆಕ್ಕು ಕೆಫಿರ್ ಬೆಳೆದಿರುವುದು ಕಂಡು ಬಂದಿದೆ.