ಪ್ರಾಣಿಗಳು ಕೂಡ ಮನುಷ್ಯರಂತೆ ಕೆಲವು ಗುಣಗಳನ್ನು ಹೊಂದಿವೆ.  ಮಕ್ಕಳಂತೆ ತುಂಟತನದಂತೆ  ಹಠವನ್ನು ಮಾಡುತ್ತವೆ ಸೇಡು ತೀರಿಸಲು ನೋಡುತ್ತವೆ. ಅದೇ ರೀತಿ ಇಲ್ಲೊಂದು ಬೆಕ್ಕಿನ ವೀಡಿಯೋವೊಂದು ಸಖತ್ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬೆಕ್ಕು ಶ್ವಾನಗಳು ತುಂಟಾಟ ತೋರುವ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳ ಈ ತುಂಟತನಗಳು ನೋಡುಗರಿಗೆ ಸೋಜಿಗ ಮೂಡಿಸುತ್ತವೆ. ಬೆಕ್ಕುಮರಿಗಳು ನಾಯಿ ಮರಿ ಜೊತೆ ಆಟವಾಡುವ ವಿಡಿಯೋಗಳು ನಾಯಿಮರಿಗಳನ್ನು ಬೆಕ್ಕು ತಾಯಿಯಂತೆ ನೋಡುವ ಅಥವಾ ಬೆಕ್ಕಿನ ಮರಿಗಳನ್ನು ನಾಯಿ ತಾಯಿಯಂತೆ ನೋಡುವ ಹೀಗೆ ಹಲವು ರೀತಿಯ ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ಪ್ರಾಣಿಗಳು ಕೂಡ ಮನುಷ್ಯರಂತೆ ಕೆಲವು ಗುಣಗಳನ್ನು ಹೊಂದಿವೆ. ಮಕ್ಕಳಂತೆ ತುಂಟತನದಂತೆ ಹಠವನ್ನು ಮಾಡುತ್ತವೆ ಸೇಡು ತೀರಿಸಲು ನೋಡುತ್ತವೆ. ಅದೇ ರೀತಿ ಇಲ್ಲೊಂದು ಬೆಕ್ಕಿನ ವೀಡಿಯೋವೊಂದು ಸಖತ್ ವೈರಲ್ ಆಗಿದೆ.

ಅಂದಹಾಗೆ ಈ ಬೆಕ್ಕಿಗೆ ಮನೆ ಮಾಲೀಕನ ಮೇಲೆ ಏನು ದ್ವೇಷವಿತ್ತೋ ಏನೋ ತಿಳಿಯದು. ಮನೆಯ ಗೋಡೆಯ ಅಡ್ಡದಲ್ಲಿದ್ದ ಪ್ರಿಡ್ಜ್‌ವೊಂದರ ಬಾಕ್ಸೊಳಗೆ ಕುಳಿತಿದ್ದ ಬೆಕ್ಕು, ಮಾಲೀಕ ಬರುತ್ತಿದ್ದಿದ್ದನೇ ಕಾದು ಮಾಲಿಕನ ಕೆನ್ನೆಗೆ ತನ್ನ ಮುಂಗೈನಿಂದ ಒಂದು ಬಾರಿಸಿದೆ. ಆದರೆ ಬೆಕ್ಕು ಹೀಗೆ ಮಾಡಬಹುದೆಂಬ ಯಾವುದೇ ನಿರೀಕ್ಷೆ ಇಲ್ಲದ ಮಾಲೀಕ ಬೆಕ್ಕಿನ ಏಟಿಗೆ ಬೆಚ್ಚಿ ಬಿದ್ದು, ದೂರ ಹೋಗಿದ್ದಾನೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ. ಆತ (ಬೆಕ್ಕು) ಹಾಗೆ ಮಾಡುವುದಕ್ಕೆ ಏನಾದರು ಕಾರಣ ಇದ್ದಿರಬಹುದು ಎಂದು ಈ ವೀಡಿಯೋ ಪೋಸ್ಟ್ ಮಾಡಿದವರು ಬರೆದುಕೊಂಡಿದ್ದಾರೆ.

ಹಾವಿನ ಜೊತೆ ಆಟ ಸುಲಭವಲ್ಲ, ಸಾವನ್ನು ವೆಲ್‌ಕಮ್ ಮಾಡಿಕೊಳ್ಳಬೇಡಿ!

ಬೆಕ್ಕಿನ ವೀಡಿಯೋ ನಿಜಕ್ಕೂ ನಗು ಮೂಡಿಸುತ್ತಿದೆ. ಸಾಮಾನ್ಯವಾಗಿ ಮಕ್ಕಳು ಆಟವಾಡುತ್ತಾ ಹೀಗೆ ಮಾಡುವುದುಂಟು ಬಾಗಿಲಿನ ಸೆರೆಯಲ್ಲಿ ನಿಂತು ಅಕ್ಕನೋ ತಮ್ಮನೋ ಅಹತ್ತಿರ ಬರುತ್ತಿದ್ದಂತೆ ಜೋರಾಗಿ ಬೊಬ್ಬೆ ಹೊಡೆದು ಹೆದರಿಸುವುದು, ಅಥವಾ ದಿಢೀರ್ ಆಗಿ ಆಕ್ರಮಣ ಮಾಡುವುದು ಹೀಗೆ ಏನಾದರೊಂದು ಕೀಟಲೆಗಳನ್ನು ಅಕ್ಕ ತಮ್ಮ ಅಣ್ಣ ತಂಗಿ ಎಲ್ಲರೂ ಇರುವ ತುಂಬು ಕುಟುಂಬದಲ್ಲಿ ಕೆಲವು ತುಂಟ ಮಕ್ಕಳು ಮಾಡುತ್ತಿರುತ್ತಾರೆ. ಆದರೆ ಇಲ್ಲಿ ಬೆಕ್ಕು ಮಾಲೀಕನಿಗೆ ಹಾಗೆ ಮಾಡಿದ್ದು ನೋಡಿ ಅನೇಕರಿಗೆ ಅಚ್ಚರಿ ಮೂಡಿದೆ.

ಛೀ..ಛೀ..ಕೇರಳಿಗರು ಬೆಕ್ಕನ್ನೂ ತಿನ್ತಾರಾ? ಟ್ವಿಟರ್‌ನಲ್ಲಿ ಏನಿದು ಬಿಸಿಬಿಸಿ ಚರ್ಚೆ!

ವೀಡಿಯೋ ನೋಡಿದವರು ಆ ಬೆಕ್ಕು ಹಿಂದಿನ ಜನ್ಮದಲ್ಲಿ ಮನುಷ್ಯ ಆಗಿದ್ದಿರಬೇಕು, ಅಥವಾ ನಿಮ್ಮ ಅಣ್ಣನೋ ತಂಗಿಯೋ ಆಗಿದ್ದಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. 5 ಸೆಕೆಂಡ್‌ನ ವೀಡಿಯೋದಲ್ಲಿ ಹುಡುಗನೋರ್ವ ಕೋಣೆಯೊಂದರ ಕಾರ್ನರ್‌ನಲ್ಲಿ ಈಚೆಗೆ ಬರುತ್ತಿದ್ದು, ಈ ವೇಳೆ ಬೆಕ್ಕು, ಗೋಡೆಯ ಅಡ್ಡದಲ್ಲಿ ಇದ್ದ ಫ್ರಿಡ್ಜ್‌ ಮೇಲೆ ಇರುವ ಬಾಕ್ಸ್‌ನಲ್ಲಿ ಕುಳಿತಿದ್ದು, ಹುಡುಗ ಬರುವುದನ್ನೇ ನೋಡಿದ ಬೆಕ್ಕು ಒಮ್ಮೆಲೇ ತನ್ನ ಕೈ ಎತ್ತಿ ಆತನ ಕೆನ್ನೆಗೆ ಬಾರಿಸಿ ಬಿಡುತ್ತದೆ. ಒಟ್ಟಿನಲ್ಲಿ ಈ ವೀಡಿಯೋ ಬಹಳ ಮಜವಾಗಿದೆ.