Old Fashion: ಹಳೆಯ, ಹರಿದ ಸ್ವೆಟರ್‌ಗೆ ನೀಡಿ ನ್ಯೂ ಲುಕ್
ಕಪಾಟಿನಲ್ಲಿ ಇಲ್ಲವೆ ಹಳೆ ಬಟ್ಟೆಯ ಗಂಟಿನಲ್ಲಿ ಇರುವು ಹರಿದ ಸ್ವೆಟರ್ ಹೊರಗೆ ತೆಗಿರಿ. ಸುಮ್ನೆ ಜಾಗ ತಿಂತಿದೆ,ಎಸೆಯೋಣ ಎಂದುಕೊಂಡಿದ್ರೆ ಸ್ವಲ್ಪ ತಡೀರಿ. ಸೂಜಿ,ಕತ್ತರಿ ಹಿಡಿದು,ಸ್ವೇಟರ್ ಮುಂದಿಟ್ಟು ಇದನ್ನ ಓದಿ. ನಂತ್ರ ನಿಮ್ಮ ಹಳೆ ಸ್ವೆಟರ್ ಹೇಗೆ ಬದಲಾಗುತ್ತೆ ನೋಡಿ.
ಋತು (Season) ಬದಲಾದಂತೆ ನಮ್ಮ ಬಟ್ಟೆ ಕೂಡ ಬದಲಾಗುತ್ತದೆ. ಮಳೆಗಾಲಕ್ಕೆ ಅಂತ,ಚಳಿಗಾಲಕ್ಕೆ ಅಂತ,ಬೇಸಿಕೆ ಕಾಲಕ್ಕೆ ಅಂತ ನಾವು ಬೇರೆ ಬೇರೆ ಬಟ್ಟೆಗಳನ್ನು ಖರೀದಿ ಮಾಡ್ತೇವೆ. ಚಳಿಗಾಲದಲ್ಲಿ ಬೆಚ್ಚಗಿನ,ಉಣ್ಣೆ (Wool)ಯ ಬಟ್ಟೆಗೆ ಆಧ್ಯತೆ ನೀಡ್ತೇವೆ. ಚಳಿಗಾಲದಲ್ಲಿ ಸ್ವೆಟರ್ ಗೆ ಬೇಡಿಕೆ ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಇಡೀ ದಿನ ಸ್ವೆಟರ್ (Sweater )ಧರಿಸುವವರಿದ್ದಾರೆ. ಕಾಲಕ್ಕೆ ತಕ್ಕಂತೆ ನಾವು ಬಟ್ಟೆ ಧರಿಸುವುದ್ರಿಂದ ವಾರ್ಡ್ರೋಬ್ (Wardrobe) ತುಂಬಿರುತ್ತದೆ. ಒಂದು ತೆಗೆಯಲು ಹೋದ್ರೆ ಇನ್ನೊಂದು ಬೀಳುತ್ತೆ. ಎಲ್ಲಪ್ಪ ಈ ಬಟ್ಟೆಗಳನ್ನು ಇಡೋದು ಎನ್ನುವ ಸಮಸ್ಯೆ ಹೆಣ್ಣುಮಕ್ಕಳಿಗೆ ಕಾಮನ್. ಬರೀ ಇದೊಂದೇ ಸಮಸ್ಯೆಯಲ್ಲ ಸ್ವಾಮಿ, ಈ ವರ್ಷ ಚಳಿಗಾಲಕ್ಕೆ ಹಾಕಿಕೊಂಡ ಸ್ವೆಟರನ್ನು ಮುಂದಿನ ವರ್ಷ ಹಾಕಿಕೊಳ್ಳೊಕೆ ಅನೇಕರಿಗೆ ಮುಜುಗರ. ಇದು ಹಳೆದಾಯ್ತು ಎನ್ನುತ್ತ ಹೊಸ ಸ್ವೆಟರ್ ಖರೀದಿ ಮಾಡ್ತಾರೆ. ಹೀಗಾಗಿ ಕಪಾಟಿನಲ್ಲಿ ಕಮ್ಮಿ ಎಂದ್ರೂ ನಾಲ್ಕೈದು ಸ್ಟೆಟರ್ ಇರುತ್ತದೆ. ಹಳೆ ಸ್ವೆಟರ್ ಏನು ಮಾಡೋದು ಎಂಬ ಚಿಂತೆ ನಿಮಗೂ ಕಾಡ್ತಿದ್ದರೆ ಟೆನ್ಷನ್ ಬಿಟ್ಟಾಕಿ. ಹಳೆ ಸ್ವೆಟರ್ ಗೆ ಹೊಸ ರೂಪಕೊಡಿ. ಸ್ವೆಟರ್ ನಲ್ಲಿ ಏನೆಲ್ಲ ಮಾಡ್ಬಹುದು ಅಂತಾ ಇಂದು ಹೇಳ್ತೆವೆ.
ಸ್ವೆಟರ್ ದಿಂಬಿನ ಕವರ್ (Pillow Cover): ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ,ವಿಭಿನ್ನ ಡಿಸೈನ್ ಸ್ವೆಟರ್ ಸಿಗುತ್ತೆ. ನಿಮ್ಮ ಬಳಿ ಅದ್ರಲ್ಲಿ ಒಂದೆರಡು ಡಿಸೈನ್ ಇದ್ದೇ ಇರುತ್ತೆ. ಅಲ್ಲಿ-ಇಲ್ಲಿ ಹರಿದಿದೆ,ಸ್ವಲ್ಪ ಬಣ್ಣ ಮಾಸಿದೆ ಅಂದ್ರೆ ಅದನ್ನು ದಿಂಬಿನ ಕವರ್ ಮಾಡಬಹುದು. ನಿಮ್ಮ ಸೋಫಾ, ಕೆಲಸದ ಕುರ್ಚಿ ಅಥವಾ ಮಲಗುವ ಕೋಣೆಯ ದಿಂಬಿಗೆ ಇದು ಬೆಸ್ಟ್ ಕವರ್. ಸ್ವೆಟರ್ ಎಷ್ಟು ದೊಡ್ಡದಾಗಿದೆ ಮತ್ತು ದಿಂಬು ಎಷ್ಟು ಗಾತ್ರದ್ದು ಎಂಬುದರ ಮೇಲೆ ನೀವು ಕವರ್ ತಯಾರಿಸಬೇಕಾಗುತ್ತದೆ. ದಿಂಬಿನ ಅಳತೆ ನೋಡಿ,ಸ್ವೆಟರನ್ನು ಕತ್ತರಿಸಿ,ಹೊಲಿಗೆ ಮಾಡಿ,ಕವರ್ ಮಾಡಿದ್ರೆ ವಾರ್ಡ್ರೋಬ್ ನಲ್ಲಿ ಒಂದು ಜಾಗ ಖಾಲಿಯಾದಂತೆ.
ಬೂಟ್ ಟಾಪರ್ಸ್ (Boot Toppers): ನಿಮ್ಮ ಹಳೆ ಸ್ವೆಟರ್ ಗೆ ಬೂಟ್ ಟಾಪರ್ಸ್ ರೂಪ ನೀಡಬಹುದು. ಇದು ನಿಮ್ಮ ಪಾದಗಳನ್ನು ಬೆಚ್ಚಗಿಡಲು ನೆರವಾಗುತ್ತದೆ. ಹಾಗೆ ನಿಮ್ಮ ಪಾದ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಸಾಮಾನ್ಯವಾಗಿ ಬೂಟುಗಳಿಂದ ಪಾದಗಳು ಗಾಯಗೊಳ್ಳುವ ಹಾಗೂ ಬಿರುಕುಬಿಡುವ ಸಾಧ್ಯತೆ ಚಳಿಗಾಲದಲ್ಲಿ ಹೆಚ್ಚಿರುತ್ತದೆ. ಇದರ ಹಿಂದಿನ ಕಾರಣವೆಂದರೆ ಬೂಟುಗಳ ರಬ್ಬರ್ ಮೇಲ್ಭಾಗದ ಗಡಸುತನ. ಇದು ಪಾದಗಳು ಬಿರುಕುಬಿಡಲು ಕಾರಣವಾಗುತ್ತದೆ. ಅದಕ್ಕೆ ಈ ಬೂಟ್ ಟಾಪ್ ರಕ್ಷಣೆ ನೀಡುತ್ತದೆ.
ಕಪ್ ವಾರ್ಮರ್ (Cup Warmer): ನಿಮ್ಮ ಹಳೆಯ ಸ್ವೆಟರ್‌ಗಳಿಂದ ನೀವು ಕಪ್ ವಾರ್ಮರ್‌ಗಳನ್ನೂ ತಯಾರಿಸಬಹುದು. ಇದಕ್ಕಾಗಿ ನಿಮ್ಮ ಹಳೆಯ ಸ್ವೆಟರ್‌ನ ತೋಳುಗಳನ್ನು ವೃತ್ತಾಕಾರದಲ್ಲಿ ಸಣ್ಣದಾಗಿ ಕತ್ತರಿಸಬೇಕು.
ಕುರ್ಚಿ ವಾರ್ಮರ್ : ಹಳೆಯ ಸ್ವೆಟರ್ ರನ್ನು ಸುಂದರವಾಗಿ ಕತ್ತರಿಸಿ ಪ್ಲಾಸ್ಟಿಕ್ ಕುರ್ಚಿ ಅಥವಾ ನಿಮ್ಮ ಕೆಲಸದ ಕುರ್ಚಿಯ ಮೇಲೆ ಇರಿಸಬಹುದು. ಶೀತ ಹೆಚ್ಚಿದ್ದಾಗ ಇದು ನಿಮ್ಮನ್ನು ಬೆಚ್ಚಗಿಡಲು ನೆರವಾಗುತ್ತದೆ. ಚಳಿಗಾಲದಲ್ಲಿ, ಕುರ್ಚಿಗಳು ಹೆಚ್ಚು ತಣ್ಣಗಿರುತ್ತವೆ. ಅದರ ಮೇಲೆ ಕುಳಿತುಕೊಳ್ಳುವುದು ಕಷ್ಟವಾಗುತ್ತದೆ. ಆ ಸಂದರ್ಭದಲ್ಲಿ ಕುರ್ಚಿ ಮೇಲೆ ಹಾಕಿರುವ ಸ್ವೆಟರ್ ಮಾರ್ಮರ್ ನಿಮ್ಮನ್ನು ಬೆಚ್ಚಗಿಡುತ್ತದೆ.
ಬ್ಯಾಗ್ : ಹಳೆ ಸ್ವೆಟರ್ ನಿಂದ ನೀವು ಬ್ಯಾಗ್ ಕೂಡ ಮಾಡಬಹುದು. ಸ್ವೆಟರ್ ಗೆ ಕತ್ತರಿ ಹಾಕುವಾಗ ನೆಯ್ಗೆ ಸಡಿಲವಾಗದಂತೆ ನೋಡಿಕೊಳ್ಳಬೇಕು. ನೆಯ್ಗೆ ಸಡಿಲವಾದ್ರೆ ಅದು ಪ್ರಯೋಜನಕ್ಕೆ ಬರುವುದಿಲ್ಲ.
ಸ್ವೆಟರ್ ಬ್ರೆಸ್ಲೈಟ್ : ಯಸ್. ಹಳೆ ಸ್ವೆಟರ್ ಮೂಲಕ ನೀವು ಬ್ರೆಸ್ಲೈಟ್ ಮಾಡಬಹುದು. ಇದು ನಿಮ್ಮ ಕೈಗೆ ಹೊಸ ಲುಕ್ ನೀಡುತ್ತದೆ.