Asianet Suvarna News Asianet Suvarna News

Working Women and Pregnancy: ಪರಿಸ್ಥಿತಿ ಸಂಭಾಳಿಸೋದು ಹೇಗೆ?

ಬಿಡುವಿರದ ದುಡಿತದಲ್ಲಿ ಮಹಿಳೆಯೂ ಗಂಡಿಗೆ ಸಮಾನವಾಗಿ, ದುಡಿಯುತ್ತಿದ್ದಾಳೆ. ಆದರೆ, ಹೆಣ್ಣು ಹೆಣ್ಣೇ. ಏನೇ ಮಾಡಿದರೂ ಮಗುವನ್ನು ಹೆರುವ ಶಕ್ತಿ ಇರೋದು ಮಾತ್ರ ಹೆಣ್ಣಿಗೇ. ದೈಹಿಕವಾಗಿ ಏನೇ ಬದಲಾವಣೆಯಾದರೂ ಆಕೆಯೇ ಅದರೊಂದಿಗೆ ಹೋರಾಡಬೇಕು. ಗರ್ಭಿಣಿಯಾದಾಗ ಉಗ್ಯೋಗಸ್ಥ ಮಹಿಳೆ ಹೇಗೆ ಮ್ಯಾನೇಜ್ ಮಾಡಬೇಕು?  

How working women should manage and balance during pregnancy
Author
Bangalore, First Published Jan 3, 2022, 7:39 PM IST

ಇತ್ತೀಚಿಗೆ ಮಹಿಳೆಯರು (Women) ಸ್ವಾವಲಂಬಿಗಳಾಗಿ ಬದುಕಲು ಬಯಸುತ್ತಾರೆ. ವಿಮಾನ ಓಡಿಸುವುದರಿಂದ ಹಿಡಿದು, ಕೂಲಿ ಕೆಲಸದವರಿಗೂ ಎಲ್ಲಾ ಕೆಲಸದಲ್ಲಿ ತೊಡಗಿರುತ್ತಾರೆ,  ಅಷ್ಟೇ ಅಲ್ಲದೆ ಕ್ರೀಡೆಗಳಲ್ಲಿ (Sports) ಕೂಡ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಹೀಗಿರುವಾಗ ಮಹಿಳೆಯರು ತಮ್ಮ ಆರೋಗ್ಯದ (Health) ಬಗ್ಗೆ ಕೂಡ ಹೆಚ್ಚಿನ ಗಮನಹರಿಸುವುದು ಮುಖ್ಯವಾಗಿರುತ್ತದೆ.  ಅದರಲ್ಲಿಯೂ ಗರ್ಭಿಣಿಯರು (Pregnancy) ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರಿಸಬೇಕು. ದುಡಿಮೆಗೆ ಹೋಗುವ ಗರ್ಭಿಣಿಯರು ಈ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ತಾಯಿ ಹಾಗೂ ಮಗುವಿನ ಕಾಳಜಿಯನ್ನು ಮಾಡಬಹುದು. ಅವು ಈ ಕೆಳಗಿನಂತಿವೆ

ಒಳ್ಳೆ ಆಹಾರ ಸೇವನೆ:
ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು,  ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸದಿದ್ದರೆ ಆರೋಗ್ಯ ಏರುಪೇರಾಗಬಹುದು. ಸುಸ್ತಾಗುವುದು ಜೊತೆಗೆ ಕೆಲಸದಲ್ಲಿನ ಆಸಕ್ತಿ ಕಮ್ಮಿ ಆಗಬಹುದು. ಹೆಚ್ಚಿನ ಪೋಷಕಾಂಶವುಳ್ಳ ಆಹಾರವನ್ನು ಸೇವಿಸಬೇಕು,  ಹಸಿ ತರಕಾರಿಗಳು (Vegetables) ಹಣ್ಣು ಹಾಗೂ ಸಲಾಡ್ (Salad) ನಂತಹ ಆಹಾರ ಉತ್ತಮ ಹೆಚ್ಚಿನ ಪ್ರೋಟೀನ್ ಉಳ್ಳ  ಆಹಾರವಾದ ಹಾಲು (Milk), ಮೊಟ್ಟೆ (Egg)ಯಿಂದ ತಯಾರಿಸುವ ಆಹಾರದ ಜೊತೆಗೆ ಡ್ರೈ ಫ್ರೂಟ್ಸ್ (Dry Fruits) ಸೇವಿಸುವುದು ಉತ್ತಮ. ವೈದ್ಯರು ಹೇಳುವ ಪ್ರಕಾರ ಗರ್ಭಿಣಿಯರು ಪ್ರತಿದಿನ  ಕ್ಯಾಲ್ಸಿಯಂ (Calcium) ಯುಕ್ತ ಆಹಾರವನ್ನು ಸೇವಿಸಬೇಕು. ಇದರಿಂದಾಗಿ ಮಾನಸಿಕ ಆರೋಗ್ಯ (Mental Health) ಹಾಗೂ ದೈಹಿಕ ಆರೋಗ್ಯ (Physical Health) ಎರಡು ಕೂಡ ಉತ್ತಮವಾಗುತ್ತದೆ.  ಮಗುವಿನ ಬೆಳವಣಿಗೆಗೂ ಕೂಡ ಇದು ಅವಶ್ಯಕ. 
 
ಚಿನ್ನಾಗಿ ನಿದ್ರಿಸುವುದು:
 ಒಳ್ಳೆಯ ನಿದ್ರೆ ದೇಹದ ಸಮತೋಲನಕ್ಕೆ ಅತ್ಯವಶ್ಯಕ. ಅದರಲ್ಲಿಯೂ ಗರ್ಭಿಣಿಯರು ಇಂತಹ ಸಮಯದಲ್ಲಿ ನಿದ್ರಾಹೀನತೆಯನ್ನು (Sleeplessness) ಅನುಭವಿಸಬಾರದು. ಇದರಿಂದ ಹೊಟ್ಟೆಯಲ್ಲಿರುವ ಮಗುವಿಗೂ ಹಾಗೂ ಅದರ ತಾಯಿ ಇಬ್ಬರಿಗೂ ತೊಂದರೆ ಆಗಬಹುದು.  ಹೆಚ್ಚಿನ ಕೆಲಸದ ಒತ್ತಡದಿಂದ (Stress) ನಿದ್ರಾಹೀನತೆ ಕಂಡುಬರಬಹುದು ಇದರಿಂದಾಗಿ ಮೊದಲಿಗೆ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳಬಹುದು. ಆದರೆ ಕಾಲಕ್ರಮೇಣ ಅದರ ಪ್ರಭಾವ ಮಗುವಿನಲ್ಲಿ ಕಾಣಿಸಿಕೊಳ್ಳಬಹುದು ಎಂಬುದು ವೈದ್ಯರು ನೀಡುವ ಸಲಹೆ. ಸಾಮಾನ್ಯವಾಗಿ ಏಳರಿಂದ ಒಂಬತ್ತು ಗಂಟೆಗಳ ಕಾಲ ಸುಖನಿದ್ರೆ ಗರ್ಭಿಣಿಯರಿಗೆ ಅವಶ್ಯಕ. ಅದರಲ್ಲಿಯೂ ಕೆಲಸದಲ್ಲಿ ನಿರತವಾಗಿರಬೇಕು. ಕೆಲವು ಸಂಶೋಧನೆಗಳ ಪ್ರಕಾರ ಗರ್ಭಿಣಿಯರು ತಮ್ಮ ಎಡಬದಿಗೆ ತಿರುಗಿ ಮಲಗುವುದು ಒಳ್ಳೆಯದು. 

ಕಾಜಲ್ ಅಗರ್ವಾಲ್ ಪ್ರೆಗ್ನೆಂಟ್

ಬೆಚ್ಚಗಿನ ಬಟ್ಟೆ ಧರಿಸಿ: 
ಕೆಲಸಕ್ಕೆ ಹೋಗುವಾಗ ಅಲ್ಲಿನ ವಾತಾವರಣಕ್ಕೆ ಹೊಂದುವ ಹಾಗೂ ಅವರ ದೇಹಕ್ಕೆ ಅನುಕೂಲಕರವಾಗಿ ಹೊಂದುವಂತಹ ಬಟ್ಟೆ (Clothes) ಧರಿಸಬೇಕು.  ಆಚೆ-ಈಚೆ ಅಲುಗಾಡಲು ಸಾಧ್ಯವಾಗದೆ ಇರುವಂತಹ, ಉಸಿರು ಕಟ್ಟುವಂತಹ ಬಟ್ಟೆಗಳನ್ನು ಧರಿಸದೆ ಇರುವುದು ಉತ್ತಮ.  ಹೈ ಹೀಲ್ಸ್ ಹಾಕುವುದನ್ನು ಕಡಿಮೆ ಮಾಡಬೇಕು. ಇಂತಹವುಗಳಿಂದ ಆರೋಗ್ಯದಲ್ಲಿ ಸಮಸ್ಯೆ ಆಗುವುದರ ಜೊತೆಗೆ ಕೆಲಸದಲ್ಲಿನ ಆಸಕ್ತಿ ಕಡಿಮೆಯಾಗಬಹುದು. 

ಒಂದೇ ಸ್ಥಳದಲ್ಲಿ ಹೆಚ್ಚಿನ ಸಮಯದ ತನಕ ವಿರಾಮವನ್ನು ಪಡೆಯದೆ ಕುಳಿತುಕೊಳ್ಳುವುದು ಕಷ್ಟವಾಗಬಹುದು. ಸಣ್ಣ ವಿರಾಮವನ್ನು (Small Break) ತೆಗೆದುಕೊಂಡು ಹೊರಗಿನ ಶುದ್ಧ ಗಾಳಿ ಸೇವಿಸಬೇಕು. ದೀರ್ಘ ಉಸಿರಾಟ (Long Breath) ಇನ್ನೂ ಒಳ್ಳೆಯದು. ಇದರಿಂದ ರಕ್ತ ಸಂಚಾರ (Blood Circulation) ಸುಗಮವಾಗುತ್ತದೆ.  ಒಂದೇ ಸ್ಥಳದಲ್ಲಿ ತುಂಬಾ ಸಮಯದ ತನಕ ಕೂರುವುದರಿಂದ ಬೆನ್ನು, ಕೈ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು. 

ಅನಗತ್ಯ ಗರ್ಭಧಾರಣೆ ತಪ್ಪಿಸಲು ಇಲ್ಲಿವೆ ಉಪಾಯ

ಗರ್ಭಿಣಿಯರು ತಮ್ಮ ಆರೋಗ್ಯದ ಕಾಳಜಿಯನ್ನು ತಾವೇ ನೋಡಿಕೊಳ್ಳಬೇಕಾಗುತ್ತದೆ ಇದು ಅವರಿಗೂ ಹಾಗೂ ಅವರ ಹೊಟ್ಟೆಯಲ್ಲಿರುವ ಮಗುವಿಗೂ ಅವಶ್ಯಕ. ಪ್ರತಿಯೊಂದರಲ್ಲಿಯೂ ಗಂಡುಮಕ್ಕಳಿಗೆ ಸಮಾನರಾಗಿ ನಿಲ್ಲಲು ಹೊರಟಿರುವ ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಕಾಳಜಿ ವಹಿಸಬೇಕು. ಹೊರಗಿನ ಕೆಲಸಗಳನ್ನು ಮಾಡುವುದರ ಜೊತೆಗೆ ತಮ್ಮ ಹೊಟ್ಟೆಯೊಳಗಿರುವ ಮಗುವಿನ ಕಾಳಜಿಯನ್ನು ನೋಡಿಕೊಳ್ಳುವುದು ತಾಯಂದಿರ ಕರ್ತವ್ಯವಾಗಿರುತ್ತದೆ.

Follow Us:
Download App:
  • android
  • ios