ನೆಗಟಿವ್ Emotions ವೈರಸ್ ಇದ್ದಂತೆ ಹುಷಾರು
ಯಾವುದಾದರೂ ದುಃಖದ ಸನ್ನಿವೇಶ ನೋಡಿದಾಗ ನಮ್ಮಲ್ಲೂ ದುಃಖದ ಭಾವನೆ. ಯಾರಾದರೂ ಅಳುತ್ತ ಭಾವನೆ ಹಂಚಿಕೊಂಡರೆ ನಮ್ಮ ಕಣ್ಣಲ್ಲೂ ನೀರು. ನಾವು ಆ ದುಃಖವನ್ನು ನಿಜಕ್ಕೂ ಅನುಭವಿಸದೇ ಇದ್ದರೂ ಕಣ್ಣಲ್ಲಿ ನೀರ್ಯಾಕೆ ಬಂತು? ಇದು ಮಿರರ್ ನ್ಯೂರಾನುಗಳ ಪ್ರಭಾವ.
ಮತ್ತೊಬ್ಬರ ಭಾವನೆ(Feelings) ಗಳಿಗೆ ಸ್ಪಂದಿಸುವುದು ಮಾನವ (Man) ಸಹಜ ಗುಣ. ಯಾರಾದರೂ ನೋವಿನ ಸಂಗತಿಯನ್ನು ನಮ್ಮೊಂದಿಗೆ ಹಂಚಿಕೊಂಡರೆ ನಮಗೂ ದುಃಖ(Pain) ವಾಗುತ್ತದೆ. ದುಃಖದ ಸನ್ನಿವೇಶ ಹಂಚಿಕೊಂಡಾಗ ನಮ್ಮ ಕಣ್ಣಲ್ಲೂ ನೀರು (Tears) ಜಿನುಗುತ್ತದೆ. ಮನುಷ್ಯರೊಂದಿಗೆ ಮಾತ್ರವಲ್ಲ, ಸಿನಿಮಾ ನೋಡುವಾಗಲೂ ನಾವು ಅಲ್ಲಿನ ಸನ್ನಿವೇಶಗಳಲ್ಲಿ ಒಂದಾಗುತ್ತೇವೆ. ಗಂಟಲು ಬಿಗಿದಂತಾಗಿ ಕಣ್ಣಲ್ಲಿ ನೀರು ತುಂಬಿಕೊಳ್ಳುವುದು ಸಾಮಾನ್ಯ. ಇದೇಕೆ ಹೀಗೆ ಎಂದು ಒಮ್ಮೆಯಾದರೂ ಅನಿಸಿರುತ್ತದೆಯಲ್ಲವೇ? ಇದೇ ಇಮೋಷನಲ್ ಕಂಟ್ಯಾಜಿಯನ್ (Emotional Contagian) ಅಥವಾ ಭಾವನಾತ್ಮಕ ಸಾಂಕ್ರಾಮಿಕತೆ. ಇಲ್ಲಿ ಮಿರರ್ ನ್ಯೂರಾನುಗಳು (Mirror Neurons) ಕೆಲಸ ಮಾಡುತ್ತವೆ.
ಎದುಗಿರುವ ದೃಶ್ಯ (Scene) ಅಥವಾ ಸನ್ನಿವೇಶ(Situation) ದ ಭಾವನೆಯನ್ನು ಮಿರರ್ ನ್ಯೂರಾನುಗಳು ನಮ್ಮೊಳಗೂ ಪ್ರಚೋದಿಸುತ್ತವೆ, ಎದುರಿಗಿರುವವರ ಭಾವನೆ ಮತ್ತು ವರ್ತನೆಯನ್ನು ಅನುಸರಿಸುವಂತೆ ಪ್ರೇರೇಪಿಸುತ್ತವೆ. ವಿಚಿತ್ರವೆಂದರೆ, ಇವು ಸಂತಸದ ಭಾವನೆಗಳಿಗಿಂತ ದುಃಖ ಅಥವಾ ಋಣಾತ್ಮಕ ಭಾವನೆಗಳನ್ನೇ ಕೆರಳಿಸುತ್ತವೆ. ಹೀಗಾಗಿಯೇ ಇದೊಂದು ರೀತಿ ಭಾವನಾತ್ಮಕ ಸಾಂಕ್ರಾಮಿಕತೆ ಎನ್ನಬಹುದು.
ಸ್ವಲ್ಪ ಸಮಯದ ಹಿಂದೆ ಜಗತ್ತು ಕೊರೋನಾಮಯವಾಗಿತ್ತು. ಆಗ ಯಾವುದೇ ನ್ಯೂಸ್ ಚಾನೆಲ್ಲುಗಳನ್ನು ನೋಡಿದರೂ ಬರೀ ಮರಣವಾರ್ತೆ. ನಿಧನರಾದವರ ಕುಟುಂಬದ ಗೋಳು, ದುಃಖವನ್ನು ನೋಡುತ್ತ ನಮ್ಮೆಲ್ಲರ ಮನಸ್ಸೂ ಭಾರವಾಗಿದ್ದು ಸುಳ್ಳಲ್ಲ. ಸಾವು ನಮ್ಮ ಮನೆಯ ಬಾಗಿಲಿಗೂ ಬಂದಂತೆ ಭಾಸವಾಗಿ ಕಂಗಾಲಾಗಿದ್ದಿದೆ. ಅಲ್ಲವೇ? ಅಸಲಿಗೆ ಪರಿಸ್ಥಿತಿ ಹಾಗಿಲ್ಲದೆಯೂ ಇದ್ದಿರಬಹುದು. ಆದರೆ, ಭಾವನೆಗಳು ಮಾತ್ರ “ಏನೋ ಆಗಿಬಿಡುತ್ತದೆ’ ಎನ್ನುವಂತೆ ಇದ್ದಿದ್ದು ಸುಳ್ಳಲ್ಲ. ಕೊರೋನಾ ಕಾಲದ ಇಮೋಷನಲ್ ಕಂಟ್ಯಾಜಿಯನ್ ನಿಂದಾಗಿ ಸಾಕಷ್ಟು ಜನರು ಖಿನ್ನತೆಗೆ ತುತ್ತಾಗಿದ್ದರು. ಆರೋಗ್ಯವಂತರಲ್ಲೂ ರೋಗ ನಿರೋಧಕ ಶಕ್ತಿ ಕುಸಿದಿತ್ತು.
ಇಂದು ಜಗತ್ತನ್ನು ಮತ್ತೆ ಒಮಿಕ್ರಾನ್ ಭಯ ತುಂಬಿಕೊಂಡಿದೆ. ಎಲ್ಲಿ ನೋಡಿದರೂ ಒಮಿಕ್ರಾನ್ ನದ್ದೇ ಸುದ್ದಿ. ಈ ಸಮಯದಲ್ಲೂ ಭಾವನಾತ್ಮಕ ಸಾಂಕ್ರಾಮಿಕತೆಗೆ ಒಳಗಾಗದಂತೆ ನಮ್ಮನ್ನು ನಾವು ನೋಡಿಕೊಳ್ಳಬೇಕಿದೆ. ಇದೊಂದು ಸಂದರ್ಭ ಮಾತ್ರವಲ್ಲ, ಎಲ್ಲ ಸಮಯದಲ್ಲೂ ನೆಗೆಟಿವ್ ವಿಚಾರದಿಂದ ದೂರವಿರಬೇಕು.
ಒಬ್ಬರಲ್ಲಿ ಕಮಿಟ್ ಆದ್ಮೇಲೂ ಮತ್ತೊಬ್ಬರ ಮೇಲೆ ಕ್ರಷ್ ಆಯಿತಾ?
ಏನು ಮಾಡ್ಬೇಕು?
• ಮುಖ್ಯವಾಗಿ, ನೆಗೆಟಿವ್ ಸುದ್ದಿಗಳಿಂದ ದೂರವಿರಬೇಕು. ಎಲ್ಲೋ ದೂರದ ಋಣಾತ್ಮಕ (Negative) ಸುದ್ದಿಗಳು ನಿಮ್ಮ ದೈನಂದಿನ ಜೀವನಕ್ಕೆ ಅಗತ್ಯವಿಲ್ಲ. ಹೀಗಾಗಿ, ಈ ಭಾವನೆಗಳಿಗೆ ಹೆಚ್ಚು ಆದ್ಯತೆ ನೀಡುವ ಅಗತ್ಯವಿಲ್ಲ. ಕೈಲಾದ ಸಹಾಯ ಮಾಡುವ ಮಾನವೀಯತೆ ಇರಲಿ. ಆದರೆ, ಸುಖಾಸುಮ್ಮನೆ ನೆಗೆಟಿವ್ ಭಾವನೆಗಳಿಗೆ ಬಲಿಯಾಗಬೇಕಿಲ್ಲ.
• ಕೋಪ(Anrgy) ವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ನಿಮಗೆ ಗೊತ್ತೇ? ಕಳೆದ ಲಾಕ್ ಡೌನ್ (Lock Down) ಸಮಯದಲ್ಲಿ ಮನೆಯಲ್ಲೇ ಸಮಯ ಕಳೆದ ಬಹುತೇಕ ಜನರಲ್ಲಿ ಕಿರಿಕಿರಿ ಹಾಗೂ ಕೋಪದ ಭಾವನೆ ಹೆಚ್ಚಾಗಿದ್ದುದು ಕಂಡುಬಂದಿತ್ತು. ಇದರಿಂದಾಗಿ, ಬಹಳಷ್ಟು ಮನೆಗಳಲ್ಲಿ ಅಹಿತಕರ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ, ಸರಿತಪ್ಪುಗಳ ವಿಶ್ಲೇಷಣೆ ಮಾಡಿ, ವರ್ತನೆಯನ್ನು ನಿಯಂತ್ರಿಸಿಕೊಳ್ಳಿ.
• ನೆಗೆಟಿವ್ ಭಾವನೆಗಳನ್ನು ಅಥವಾ ಸುದ್ದಿಗಳನ್ನು ಇನ್ನೊಬ್ಬರಿಗೆ ದಾಟಿಸುವ ಯತ್ನ ಬಿಡಿ. ಅಂದರೆ, ನಿಮಗೆ ಯಾವುದೋ ರಸ್ತೆ ದುರ್ಘಟನೆಯ ಬಗ್ಗೆ ತಿಳಿಯುತ್ತದೆ ಎಂದುಕೊಳ್ಳಿ. ಅದನ್ನು ಮನೆಯವರಲ್ಲಿ, ಮಕ್ಕಳಲ್ಲಿ ಹೇಳಬೇಕಾದ ಅಗತ್ಯವಿಲ್ಲ. “ಹೀಗಾಯ್ತಂತೆ, ಹಾಗಾಯ್ತಂತೆ’ ಎನ್ನುವ ಕತೆಗಳಿಂದ ಪ್ರಯೋಜನವಿಲ್ಲ. ಬಾಯಿಚಪಲಕ್ಕಾಗಿ ಮತ್ತೊಬ್ಬರ ಮನೆಯ ಋಣಾತ್ಮಕ ಸುದ್ದಿಗಳನ್ನು ಎಲ್ಲೆಡೆ ಹೇಳುವುದನ್ನು ನಿಯಂತ್ರಿಸಿಕೊಳ್ಳಿ. ಆಧಾರವಿಲ್ಲದ ಸುದ್ದಿಗಳನ್ನಂತೂ ಹೇಳಲೇಬೇಡಿ.
• ನಿಮ್ಮ ಭಾವನೆಗಳ ಮೇಲೆ ಕಣ್ಣಿರಿಸಿ! ಅಂದರೆ, ನಿಮ್ಮ ಮನಸ್ಸು ಭಾರವಾಗಿದ್ದರೆ ಅದಕ್ಕೆ ಕಾರಣವನ್ನು ಗುರುತಿಸಬೇಕು. ಇಂತಹ ಕಾರಣದಿಂದಾಗಿ ಮನಸ್ಸು ಕುಗ್ಗಿದೆ ಅಥವಾ ಸಂತಸವಿಲ್ಲ ಎನ್ನುವುದನ್ನು ಗುರುತಿಸಿಕೊಂಡರೆ ಪರಿಹಾರ ಸುಲಭವಾಗುತ್ತದೆ.
• ನೆಗೆಟಿವ್ ಸುದ್ದಿ ಹೇಳುವವರಿಂದ ದೂರವಿರಿ. ಸ್ನೇಹಿತರಾಗಲೀ, ನೆಂಟರಿಷ್ಟರಾಗಲೀ. ಕೇವಲ ನೆಗೆಟಿವ್ ಸುದ್ದಿಗಳನ್ನೇ ಹೇಳುವವರಿಂದ ದೂರವಿದ್ದರೆ ನಿಮ್ಮಲ್ಲಿ ಕಹಿ ಭಾವನೆ ಮೂಡುವುದಿಲ್ಲ.
• ಯಾವುದಾದರೂ ನೆಗೆಟಿವ್ ವಿಚಾರದಿಂದ ಮನಸ್ಸು ಭಯಗೊಂಡಿದ್ದರೆ “ಈ ಸಮಯ ಹೀಗೆಯೇ ಇರುವುದಿಲ್ಲ. ಕಳೆದುಹೋಗುತ್ತದೆ, ಒಳ್ಳೆಯ ಸಮಯ (Good Time) ಬರುತ್ತದೆ’ ಎನ್ನುವ ಭರವಸೆಯನ್ನು ಮನಸ್ಸಿಗೆ ತುಂಬುತ್ತಿರಬೇಕು.