Kitchen Hacks : ಅಷ್ಟು ದುಡ್ಡು ಕೊಟ್ಟು ತಂದ ಟೊಮ್ಯಾಟೋ ಹಾಳಾಗದಂತೆ ಮಾಡಲು ಇಲ್ಲಿದೆ ಟೆಕ್ನಿಕ್!

ಇಂಗು – ತೆಂಗು ಇದ್ರೆ ಮಂಗನೂ ಅಡುಗೆ ಮಾಡುತ್ತೆ ಎನ್ನುವ ಮಾತಿದೆ. ಅಡುಗೆ ಮಾಡೋದು ಸುಲಭವಾದ್ರೂ ಅದಕ್ಕೆ ಬಳಸುವ ಪದಾರ್ಥ, ಹಣ್ಣು ತರಕಾರಿ ರಕ್ಷಣೆ ಮಾಡೋದು ಸುಲಭವಲ್ಲ. ತಂದ ಒಂದೇ ದಿನದಲ್ಲಿ ಹಾಳಾಗುವ ಹಣ್ಣುಗಳನ್ನು ನಾಲ್ಕೈದು ದಿನ ಇಡ್ಬೇಕೆಂದ್ರೆ ಈ ಟಿಪ್ಸ್ ಫಾಲೋ ಮಾಡಿ.
 

Amazing vegitables and fruit Storage Tips know kitchen hacks roo

ಹಣ್ಣು ತರಕಾರಿಗಳು ನಮ್ಮ ಶರೀರಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತವೆ. ಮಾರುಕಟ್ಟೆಯಿಂದ ತಂದ ಹಣ್ಣನ್ನು ಮನೆಯಲ್ಲಿ ಹೇಗೆ ಇಟ್ಟುಕೊಳ್ಳಬೇಕೆನ್ನುವುದೇ ಹಲವರ ಚಿಂತೆ. ಏಕೆಂದರೆ ಹಣ್ಣಾಗಲೀ, ತರಕಾರಿಗಳಾಗಲೀ ಹೆಚ್ಚು ದಿನ ಬಾಳಿಕೆ ಬರೋದಿಲ್ಲ. ಅವು ಕೊಳೆತು ಹೋಗುತ್ತವೆ. ಕೊಳೆತ ನಂತರ ಅವುಗಳನ್ನು ಎಸೆಯೋದು ಅನಿವಾರ್ಯ. ಇದ್ರಿಂದ ಹಣ ಹಾಳು. 

ಸೊಪ್ಪು, ತರಕಾರಿ (Vegetable) ಮತ್ತು ಹಣ್ಣುಗಳ ಬೆಲೆ ಹೆಚ್ಚಾಗಿರುವುದರಿಂದ ಹಣ್ಣು ತರಕಾರಿಗಳು ಹಾಳಾಗದಂತೆ ಎಚ್ಚರವಹಿಸುವುದು ಅವಶ್ಯಕ. ಆದರೆ ಕೆಲವೊಮ್ಮೆ ನಾವು ಎಷ್ಟೇ ಜೋಪಾನವಾಗಿಟ್ಟರೂ ಅವು ಹಾಳಾಗಿಬಿಡುತ್ತವೆ. ಹಣ್ಣು ಮತ್ತು ತರಕಾರಿಗಳು ಕೊಳೆಯದೇ ಹೆಚ್ಚು ದಿನ ಬರಬೇಕೆಂದರೆ ಈ ಕೆಳಗಿನ ಕೆಲವು ಸಿಂಪಲ್ ಟಿಪ್ಸ್ (Tips) ಗಳನ್ನು ಫಾಲೋ ಮಾಡಿ. ಹೀಗೆ ಮಾಡೋದ್ರಿಂದ ಹಣ್ಣು ಮತ್ತು ತರಕಾರಿಗಳು ಹಾಗೂ ಸೊಪ್ಪು ಕೊಳೆತು ವೇಸ್ಟ್ ಆಗುವುದನ್ನು ತಪ್ಪಿಸಬಹುದು.

ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಿಸುವ ವಿಧಾನ : 
ಬಾಳೆಹಣ್ಣು  (Banana) :
ಬಾಳೆಹಣ್ಣು ಹೆಚ್ಚು ದಿನ ಕೆಡದೆ ಹಾಗೇ ಇರಬೇಕೆಂದ್ರೆ ಬಾಳೆಹಣ್ಣನ್ನು ಚೆನ್ನಾಗಿ ತೊಳೆದು ಅದನ್ನು ಒಣಗಿದ ಬಟ್ಟೆಯಿಂದ ಒರೆಸಬೇಕು. ನಂತರ ಬಾಳೆಹಣ್ಣಿನ ಕಾಂಡದ ಭಾಗವನ್ನು ಒದ್ದೆ ಬಟ್ಟೆಯಿಂದ ಸುತ್ತಿಡಬೇಕು. ಹೀಗೆ ಮಾಡಿದ್ರೆ ಬಾಳೆಹಣ್ಣು ಬಹಳ ದಿನಗಳ ತನಕ ಕೆಡುವುದಿಲ್ಲ.

ಕೊತ್ತುಂಬರಿ ಸೊಪ್ಪು (Coriander Leaves) : ಕೊತ್ತುಂಬರಿ ಸೊಪ್ಪು ಬಹಳ ದಿನ ಕೆಡದಂತೆ ಇರಲು ಅದರ ಕಾಂಡದ ಭಾಗವನ್ನು ಒದ್ದೆಯಾದ ಪೇಪರ್ ಟವೆಲ್ ಸಹಾಯದಿಂದ ಸುತ್ತಬೇಕು. ನಂತರ ಅದನ್ನು ಒಂದು ಗ್ಲಾಸ್ ನಲ್ಲಿ ಇಡಬೇಕು. ಹೀಗೆ ಮಾಡೋದ್ರಿಂದ ಕೊತ್ತುಂಬರಿ ಸೊಪ್ಪು ಬಹಳ ದಿನಗಳ ತನಕ ಕೆಡೋದಿಲ್ಲ.

ಪೌಷ್ಟಿಕಾಂಶ ಹೆಚ್ಚಿರೋ ವೆಜ್ ಬ್ರೇಕ್ ಫಾಸ್ಟ್ ಗಳು… ನೀವೂ ತಿನ್ನಿ

ಕಲ್ಲಂಗಡಿ ಹಣ್ಣು (Water Melon): ಕಲ್ಲಂಗಡಿ ಹಣ್ಣು ಬಹಳ ದೊಡ್ಡದಾಗಿದ್ದರೆ ಒಂದೇ ದಿನದಲ್ಲಿ ಅದನ್ನು ತಿನ್ನಲು ಸಾಧ್ಯವಿಲ್ಲ. ಆಗ ಅದನ್ನು ನಾವು ಫ್ರಿಜ್‌ನಲ್ಲಿಡುತ್ತೇವೆ. ಹಾಗೆ ಫ್ರಿಜ್‌ನಲ್ಲಿ ಇಟ್ಟ ಕಲ್ಲಂಗಡಿ ಹಣ್ಣಿನಲ್ಲಿ ಬ್ಯಾಕ್ಟೀರಿಯಾಗಳು ಉತ್ಪನ್ನವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎರಡು ಬೆಳ್ಳುಳ್ಳಿ ಎಸಳುಗಳನ್ನು ಕಲ್ಲಂಗಡಿ ಹಣ್ಣಿನ ಮೇಲಿಟ್ಟು ಪ್ಲಾಸ್ಟಿಕ್ ಕವರಿನಿಂದ ಅದನ್ನು ಪ್ಯಾಕ್ ಮಾಡಿ ಫ್ರಿಜ್‌ನಲ್ಲಿ ಇಡೋದ್ರಿಂದ ಕಲ್ಲಂಗಡಿ ಹಣ್ಣು ಫ್ರೆಶ್ ಆಗಿರುತ್ತದೆ.

ಅಕ್ಕಿ (Rice): ನಾವು ಊಟ ಮಾಡುವ ಅಕ್ಕಿಯಲ್ಲಿ ಪದೇ ಪದೇ ಹುಳುಗಳು ಆಗುತ್ತವೆ. ಹೀಗೆ ಹುಳುಗಳು ಆಗುವುದನ್ನು ತಪ್ಪಿಸಲು ಒಂದು ಸಣ್ಣ ಬ್ಯಾಗಿಲ್ಲಿ ಶುಂಠಿ ಮತ್ತು ನಕ್ಷತ್ರದ ಹೂವನ್ನು ಹಾಕಿ, ಅಕ್ಕಿಯ ಒಳಗಡೆ ಇಡಬೇಕು. ಹೀಗೆ ಮಾಡೋದ್ರಿಂದ ಅಕ್ಕಿಯಲ್ಲಿ ಹುಳಗಳು ಆಗೋದಿಲ್ಲ.

ಶುಂಠಿಯನ್ನು ದೀರ್ಘಕಾಲದವರೆಗೆ ಕೆಡದಂತೆ ಫ್ರೆಶ್ ಇಡೋದು ಹೇಗೆ?

ಟೊಮಾಟೋ (Tomato): ಇತ್ತೀಚಿನ ದಿನಗಳಲ್ಲಿ ಟೊಮಾಟೊ ಬೆಲೆ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತು. ಟೊಮಾಟೊ ಹಣ್ಣು ಬಹಳ ದಿನಗಳ ತನಕ ಹಾಳಾಗದೇ ಇರಲು ಅದರ ತೊಟ್ಟಿನ ಭಾಗವನ್ನು ಗಮ್ ಟೇಪ್ ಸಹಾಯದಿಂದ ಲಾಕ್ ಮಾಡಬೇಕು. ಹೀಗೆ ಮಾಡೋದ್ರಿಂದ ಮೂರು ವಾರಗಳ ತನಕ ಟೊಮಾಟೊ ಫ್ರೆಶ್ ಆಗಿರುತ್ತದೆ.
ಎಲೆಕೋಸು: ಎಲೆಕೋಸು ಹೆಚ್ಚು ದಿನ ಬಾಳಿಕೆ ಬರಬೇಕೆಂದರೆ ಅದರ ಬುಡದ ಭಾಗವನ್ನು ಕತ್ತರಿಸಿ ಆ ಜಾಗದಲ್ಲಿ ಒದ್ದೆಮಾಡಿದ ಪೇಪರ್ ಅನ್ನು ಹಾಕಿಡಿ. ಇದರಿಂದ ಎಲೆಕೋಸು ತಾಜಾ ಆಗಿರುತ್ತದೆ.
ಗ್ರೀನ್ ಆನಿಯನ್ : ಗ್ರೀನ್ ಆನಿಯನ್ ಅನ್ನು ಪೇಪರ್ ಟವೆಲ್ ನಲ್ಲಿ ಸುತ್ತಿ ನೀರು ಚಿಮುಕಿಸಿ ಇಡೋದ್ರಿಂದ ಅದು ಹೆಚ್ಚು ಕಾಲ ಫ್ರೆಶ್ ಆಗಿರುತ್ತದೆ.
ಸ್ಟ್ರಾಬೆರ್ರಿ : ಸ್ಟ್ರಾಬೆರ್ರಿ ಫ್ರಿಜ್ ನಲ್ಲಿ ಇಟ್ಟರೂ ಹಾಳಾಗಿಬಿಡುತ್ತದೆ. ಸ್ಟ್ರಾಬೆರ್ರಿ ಹಾಳಾಗದಂತೆ ಇಡಲು ಒಂದು ಪಾತ್ರೆಯಲ್ಲಿ ನೀರು ಹಾಗೂ ವಿನೆಗರ್ ಅನ್ನು ಹಾಕಿ ಮತ್ತೊಂದು ಪಾತ್ರೆಯಲ್ಲಿ ಸ್ಟ್ರಾಬೆರ್ರಿ ಯನ್ನು ಹಾಕಿ ಅದನ್ನು ವಿನೆಗರ್ ನೀರಿನಲ್ಲಿ ಮುಳುಗಿಸಿ ಇಡಿ. ಹೀಗೆ ಮಾಡೋದ್ರಿಂದ ಸ್ಟ್ರಾಬೆರ್ರಿ ಚೆನ್ನಾಗಿರುತ್ತೆ.
 

Latest Videos
Follow Us:
Download App:
  • android
  • ios