Food
ಶುಂಠಿ ತಂದ ಕೂಡಲೇ ಅದನ್ನು ಸಿಪ್ಪೆ ಸಮೇತ ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ, ಅಥವಾ ಝಿಪ್ ಬ್ಯಾಗ್ ನಲ್ಲಿ ಹಾಕಿ ಫ್ರಿಜ್ ನಲ್ಲಿಟ್ರೆ ತುಂಬಾ ಸಮಯ ಬಾಳಿಕೆ ಬರುತ್ತೆ.
ಸಿಪ್ಪೆ ತೆಗೆದ ಶುಂಠಿಯನ್ನು ಸಣ್ಣದಾಗಿ ಕತ್ತರಿಸಿ ಡೀಪ್ ಫ್ರೀಜ್ ಮಾಡಿ, ಅದನ್ನು ಗಾಳಿಯಾಡದ ಡಬ್ಬಿಯಲ್ಲಿಟ್ಟರೆ, ತುಂಬಾ ಸಮಯದವರೆಗೆ ಉಳಿಯುತ್ತೆ.
ಶುಂಠಿಯನ್ನು ಝಿಪ್ ಬ್ಯಾಗ್ ನಲ್ಲಿ ಹಾಕಿ, ಅದರ ಒಳಗೆ ಗಾಳಿ, ನೀರು ಸಂಗ್ರಹವಾಗದಂತೆ ನೋಡಿಕೊಂಡರೆ, ಸುಮಾರು ಒಂದು ತಿಂಗಳವರೆಗೆ ಇದನ್ನ ಬಳಕೆ ಮಾಡಬಹುದು.
ಶುಂಠಿಯ ಸಿಪ್ಪೆ ತೆಗೆದು, ನಂತರ ಅದನ್ನುಆಸಿಡಿಕ್ ಲಿಕ್ವಿಡ್ ಜಾರ್ ನಲ್ಲಿ ಹಾಕಿ. ನೀವು ಬಯಸಿದರೆ, ಅದನ್ನು ವಿನೆಗರ್ ಅಥವಾ ನಿಂಬೆ ರಸದಲ್ಲಿ ಸುಲಭವಾಗಿ ಸಂಗ್ರಹಿಸಬಹುದು. ಇದರಿಂದ ದೀರ್ಘಕಾಲ ಉಳಿಯುತ್ತೆ.
ಇನ್ನೊಂದು ಸುಲಭವಾದ ವಿಧಾನ ಅಂದ್ರೆ ಶುಂಠಿಯನ್ನು ನೀರು ಹಾಕದೆ ಪೇಸ್ಟ್ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ಇದು ಸುಲಭ ಅಡುಗೆಗೆ ಸಹಕಾರಿ.
ಶುಂಠಿಯನ್ನು ಪೇಪರ್ ನಲ್ಲಿ ಕಟ್ಟಿ ಇಟ್ಟರೆ ಒಂದು ವಾರದವರೆಗೆ ಶುಂಠಿ ಕೆಡೋದಿಲ್ಲ.
ಶುಂಠಿಯನ್ನು ಕಟ್ ಮಾಡದೆ ಮತ್ತು ಸಿಪ್ಪೆ ತೆಗೆಯದೇ ತುಂಬಾ ಸಮಯವರೆಗೆ ಬಳಕೆ ಮಾಡಬಹುದು. ಸಿಪ್ಪೆ ತೆಗೆದರೆ ಬೇಗನೆ ಹಾಳಾಗುತ್ತದೆ.