Food

ಪನೀರ್ ಪರೋಟ

ಮಸಾಲೆಯುಕ್ತ ಕಾಟೇಜ್ ಚೀಸ್ ಅಥವಾ ಪನೀರ್ ತುಂಬಿದ ಪ್ರೋಟೀನ್ ಪ್ಯಾಕ್ ಮಾಡಿದ ಪನೀರ್ ಪರೋಟ, ತುಂಬಾನೆ ಟೇಸ್ಟಿಯಾಗಿರುತ್ತೆ, ಜೊತೆಗೆ ಪ್ರೋಟೀನ್ ಭರಿತವಾಗಿರುತ್ತೆ. 
 

Image credits: Image: Youtube Video still

ಮಿಕ್ಸ್ ದಾಲ್ ದೋಕ್ಲಾ

ಗುಜರಾತಿನ ಈ ಸ್ಪೆಷಲ್ ಡಿಶ್ ಮಿಕ್ಸ್ ದಾಲ್ ದೋಕ್ಲಾ, ಹುಳಿ, ಸಿಹಿ, ಖಾರ ರುಚಿ ಯಾವ ಟೈಮ್ ಲ್ಲಿ ಬೇಕಾದ್ರೂ ಸವಿಯೋಕೆ ಸೂಪರ್, ಅದರಲ್ಲೂ ಬ್ರೇಕ್ ಫಾಸ್ಟ್ ಗೆ ಬೆಸ್ಟ್. 
 

Image credits: Pixabay

ಶೇಂಗಾ ಬೀಜದ ಪೋಹಾ

ಮಸಾಲಯುಕ್ತ ಪೋಹಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೀಜ ಸೇರಿಸಿ ಮಾಡಲಾಗುವ ಈ ತಿನಿಸು ಆರೋಗ್ಯಕ್ಕೆ ಉತ್ತಮವಾಗಿದೆ. 
 

Image credits: Instagram

ಬಿಸಿಬೇಳೆ ಬಾತ್

ಎಲ್ಲಾ ರೀತಿಯ ತರಕಾರಿಗಳು, ಬೇಳೆ, ಅಕ್ಕಿಯನ್ನು ಸೇರಿಸಿ ತಯಾರಿಸಲಾಗುವ ಟೇಸ್ಟಿಯಾದ ಬಿಸಿಬೇಳೆ ಬಾತ್ ಗೆ ತುಪ್ಪ ಸೇವಿಸಿ ಸವಿದರೆ ಪೂರ್ತಿ ದಿನಕ್ಕೆ ಬೇಕಾದಷ್ಟು ಶಕ್ತಿ ದೊರೆಯುತ್ತೆ. 
 

Image credits: Freepik

ಮೊಳಕೆ ಕಾಳು ಸಲಾಡ್

ಪ್ರೋಟೀನ್ ರಿಚ್ ಬ್ರೇಕ್ ಫಾಸ್ಟ್ ಎಂಜಾಯ್ ಮಾಡಲು ಬಯಸಿದ್ರೆ ನೀವು ಈ ಫ್ರೆಶ್ ಮೊಳಕೆ ಕಾಳು, ತರಕಾರಿ, ಹುಳಿ ಹಾಕಿ ಮಾಡಿದ ಸಲಾಡ್ ತಿನ್ನೋದು ಬೆಸ್ಟ್. 
 

Image credits: Social Media

ಸೋಯಾ ಚಂಕ್ಸ್ ಪುಲಾವ್

ಪ್ರೋಟೀನ್ ಭರಿತವಾದ ಸೋಯಾ ಚಂಕ್ಸ್ ನ್ನು ಪೋಹಾ ಅಥವಾ ಪುಲಾವ್ ಮಾಡಿ ತಿನ್ನೋದು ಉತ್ತಮ. ಇದು ದಿನವಿಡೀ ಹೊಟ್ಟೆ ತುಂಬುವಂತೆ ಮಾಡುತ್ತೆ. 
 

Image credits: Social Media

ಮೂಂಗ್ ದಾಲ್ ಚಿಲ್ಲಾ

ಹೆಸರು ಕಾಳಿನಿಂದ ಮಾಡಲಾಗುವ ಟೇಸ್ಟಿಯಾದ ಸಾಫ್ಟ್ ಮತ್ತು ಸ್ಪೈಸಿ ಆಗಿರುವ ಮೂಂಗ್ ದಾಲ್ ಚಿಲ್ಲಾ ಚಟ್ನಿ ಜೊತೆ ಸವಿಯೋದೆ ಚೆಂದ 
 

Image credits: Social Media

ಮಸಾಲಾ ಆಮ್ಲೆಟ್ (ಎಗ್ ಲೆಸ್)

ಕಡ್ಲೆ ಹಿಟ್ಟು, ಈರುಳ್ಳಿ , ಟೋಮ್ಯಾಟೋ ಮಸಾಲೆಗಳಿಂದ ಮಾಡಿದಂತಹ ಮಸಾಲಾ ಆಮ್ಲೆಟ್ ತಿನ್ನಲು ಬಲು ಟೇಸ್ಟಿ, ಆರೋಗ್ಯಕ್ಕಂತೂ ತುಂಬಾನೆ ಉತ್ತಮ. 
 

Image credits: Social Media

ಇಡ್ಲಿ ಸಾಂಬಾರ್

ದಕ್ಷಿಣ ಭಾರತದ ಫೇವರಿಟ್ ತಿಂಡಿ ಇಡ್ಲಿ -ಸಾಂಬಾರ್. ಇದು ತುಂಬಾ ರುಚಿಕರವಾದ, ಜೊತೆಗೆ ತುಂಬಾನೆ ಆರೋಗ್ಯಯುತವಾದ ತಿಂಡಿ. 
 

Image credits: Social Media

ಚನಾ ಚಾಟ್

ಕಡ್ಲೆ, ಈರುಳ್ಳಿ , ಟೋಮ್ಯಾಟೋ, ಮೆಣಸು, ಕೊತ್ತಂಬರಿ, ಉಪ್ಪು, ಹುಳಿ, ಖಾರ ಮಿಶ್ರಿತವಾದ ಈ ಚನಾ ಚಾಟ್ ಪ್ರೋಟೀನ್ ರಿಚ್ ಯಮ್ಮಿ ಬ್ರೇಕ್ ಫಾಸ್ಟ್ ಆಗಿದೆ. 
 

Image credits: Social Media

ಶುಂಠಿಯನ್ನು ದೀರ್ಘಕಾಲದವರೆಗೆ ಕೆಡದಂತೆ ಫ್ರೆಶ್ ಇಡೋದು ಹೇಗೆ?

ಸಂಡೇ ಹೊರಗಡೆನೇ ತಿನ್ಬೇಕು ಅಂತೇನಿಲ್ಲ..ಮಸಾಲೆ ದೋಸೆ ಮನೆಯಲ್ಲೇ ಮಾಡಿ ತಿನ್ನಿ..

ಬೆಳಗ್ಗಿನ ತಿಂಡಿಗೆ ಒಂದ್ಸಲ ಟ್ರೈ ಮಾಡಿ ನೋಡಿ ಈ ಜಪಾನೀಸ್ ಎಗ್ ಸ್ಯಾಂಡ್‌ವಿಚ್

ಕನ್ನಡಿಗರಾಗಿ ಕರ್ನಾಟಕದ ಈ ಎಲ್ಲಾ ಸ್ಪೆಷಲ್ ತಿಂಡಿ ಸವಿದಿದ್ದೀರಾ?