ಅಲ್ಪ ಆದಾಯದಲ್ಲೇ ದುಡ್ಡಿನ ಉಳಿತಾಯ ಹೇಗೆ? ಮೂರು ಟಿಪ್ಸ್ ಕೊಟ್ಟ ನಟಿ ಅದಿತಿ ಪ್ರಭುದೇವ
ಆದಾಯ ಅಲ್ಪ ಬಂದರೂ ಅದರಲ್ಲಿಯೇ ದುಡ್ಡಿನ ಉಳಿತಾಯ ಹೇಗೆ ಮಾಡಬಹುದು ಎಂಬ ಬಗ್ಗೆ ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅವರು ಮೂರು ಉಪಾಯ ಹೇಳಿಕೊಟ್ಟಿದ್ದಾರೆ.
ದುಡ್ಡನ್ನು ಹೇಗೆ ಉಳಿತಾಯ ಮಾಡಬೇಕು ಎನ್ನುವ ಬಗ್ಗೆ ನಟಿ ಸ್ಯಾಂಡಲ್ವುಡ್ ಬೆಡಗಿ ಅದಿತಿ ಪ್ರಭುದೇವ ಅವರು ಹೇಳಿಕೊಟ್ಟಿದ್ದಾರೆ. ನಟಿಯರಿಗೆ ಏನು ಬೇಕಾದಷ್ಟು ದುಡ್ಡು ಬರತ್ತೆ, ಅವರು ಉಳಿತಾಯದ ಬಗ್ಗೆ ಯೋಚನೆ ಮಾಡುವ ಅಗತ್ಯವೇ ಇಲ್ಲ ಎನ್ನುವುದು ಸಹಜ. ಅದೇ ರೀತಿ ಶ್ರೀಮಂತರಿಗೆ ದುಡ್ಡಿನ ಚಿಂತೆನೇ ಇರುವುದಿಲ್ಲ, ಅದು ಏನಿದ್ದರೂ ಬಡವರ ಚಿಂತೆ ಎನ್ನುವವರೇ ಹೆಚ್ಚು. ಆದರೆ ಅಸಲಿಗೆ ಯಾರು ಎಷ್ಟೇ ದುಡಿದರೂ ಅವರ ಆದಾಯಕ್ಕೆ ತಕ್ಕಂತೆ ಖರ್ಚು ಇದ್ದೇ ಇರುತ್ತದೆ. 100 ರೂಪಾಯಿ ದುಡಿಯುವವ ತನ್ನ ಅಗತ್ಯವನ್ನು ಅಷ್ಟಕ್ಕೇ ಸೀಮಿತ ಮಾಡಿಕೊಂಡರೆ, ಲಕ್ಷ ರೂಪಾಯಿ ದುಡಿಯುವವರ ಅಷ್ಟಕ್ಕೇ ಅಗತ್ಯವನ್ನು ಸೀಮಿತ ಮಾಡಿಕೊಂಡಿರುತ್ತಾನೆ. ಅಗತ್ಯಕ್ಕಿಂತ ಹೆಚ್ಚಿಗೆ ಖರ್ಚು ಮಾಡಲು ಹೋದರೆ ಎಲ್ಲವೂ ಏರುಪೇರಾಗುತ್ತದೆ. ಅದಕ್ಕೇ ಹಿರಿಯರು ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎಂದಿರುವುದು. ಇದೇ ಅರ್ಥ ಬರುವ ಮಾತನ್ನು ಹೇಳುವ ಮೂಲಕ ನಟಿ ಅದಿತಿ ಪ್ರಭುದೇವ ಸಾಧ್ಯವಾದಷ್ಟು ಮಟ್ಟಿಗೆ ಹಣವನ್ನು ಹೇಗೆ ಉಳಿತಾಯ ಮಾಡಬೇಕು ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.
ನಾವು ಎಷ್ಟು ದುಡಿಯುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ, ಬರುವ ಆದಾಯದಲ್ಲಿಯೇ ಎಷ್ಟು ಉಳಿತಾಯ ಮಾಡುವುದು ಮುಖ್ಯವಾಗುತ್ತದೆ ಎಂದಿರುವ ನಟಿ, ಬರುವ ದುಡ್ಡಿನಲ್ಲಿ ಉಳಿತಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದಿದ್ದಾರೆ. 100 ರೂಪಾಯಿ ಬಂದಿದೆ ಎಂದಾಗ ಆದದ್ದು ಆಗಲಿ ಎಂದು 20 ರಿಂದ 25 ರೂಪಾಯಿ ತೆಗೆದಿಟ್ಟುಬಿಡಬೇಕು. ಆರಂಭದಲ್ಲಿ ಇದು ಕಷ್ಟ ಎನಿಸಬಹುದು. ಆದರೆ ಒಮ್ಮೆ ಹೀಗೆ ಮಾಡಿ ನೋಡಿ. ಹೀಗೆ ಮಾಡಿದರೆ, ನಮ್ಮ ಕೈಯಲ್ಲಿ ಇರುವ 75 ರೂಪಾಯಿಗಳಲ್ಲಿಯೇ ನಾವು ಖಂಡಿತವಾಗಿಯೂ ಬದುಕುತ್ತೇವೆ ಇದ್ದಾಗ ಮಾತ್ರ ಅದನ್ನೂ ಬಳಸಬೇಕು ಎನ್ನಿಸುತ್ತದೆ. ಅದರೆ ಅದು ನಮ್ಮ ಕೈಯಲ್ಲಿ ಇಲ್ಲ ಎಂದಾಗ, ಬೇರೆ ಆಪ್ಷನ್ ಇಲ್ಲ ಎಂದು ನಮ್ಮ ಮನಸ್ಸಿಗೆ ತಿಳಿದಾಗ ಇರುವ ದುಡ್ಡನ್ನೇ ನಿಭಾಯಿಸಲು ಸಾಧ್ಯ ಎಂದಿದ್ದಾರೆ ಅದಿತಿ.
ALEXA ಟೀಸರ್ ರಿಲೀಸ್: ಚಿತ್ರಕ್ಕಾಗಿ ಫೈಟ್ ಮಾಡೋ ವೇಳೆ ಕೈ ಮುರಿದುಕೊಂಡ ಅದಿತಿ ಪ್ರಭುದೇವ್!
ಕೊರೊನಾ ಟೈಮ್ನಲ್ಲಿ ಏನೇನೋ ಆಗೋಯ್ತು. ಆಗ ನಾವೆಲ್ಲರೂ ಅಡ್ಜಸ್ಟ್ ಆದ್ವಿ ಅಲ್ವಾ? ಈ ಅಡ್ಜಸ್ಟ್ಮೆಂಟ್ ಎನ್ನುವ ಬ್ಯೂಟಿಫುಲ್ ಗುಣವನ್ನು ದೇವರು ಮನುಷ್ಯನಿಗೆ ಕೊಟ್ಟಿದ್ದಾನೆ. ಅದನ್ನು ಬಳಸಿಕೊಳ್ಳಬೇಕು ಎಂದಿದ್ದಾರೆ. ಆರ್ಡಿ, ಪೋಸ್ಟ್ ಆಫೀಸ್ನಲ್ಲಿ ಹಣ ಡಿಪಾಸಿಟ್ ಮಾಡಿದರೆ ಭವಿಷ್ಯಕ್ಕೆ ತುಂಬಾ ಒಳಿತಾಗುತ್ತದೆ. ನಿಮ್ಮ ಕೈಯಲ್ಲಿ ಬಂದ ದುಡ್ಡಿನಲ್ಲಿಯೇ ಎಷ್ಟು ಸಾಧ್ಯವೋ ಅಷ್ಟು ದುಡ್ಡು ಸದ್ಯ ನನ್ನದಲ್ಲ ಎಂದುಕೊಂಡು ಉಳಿತಾಯ ಮಾಡಿ ಇರುವ ದುಡ್ಡಿಯಲ್ಲಿಯೇ ನಿಭಾಯಿಸಿದರೆ ಲಕ್ಷ್ಮಿ ನಿಮಗೆ ಒಲಿಯುತ್ತದೆ ಎಂದಿರುವ ನಟಿ, ತಾವು ಕೂಡ 500 ರೂಪಾಯಿ ಆರ್ಡಿಯಿಂದ ಶುರು ಮಾಡಿರುವುದಾಗಿ ತಿಳಿಸಿದ್ದಾರೆ. ಚೀಟಿ ವ್ಯವಹಾರ ಮಾಡುವವರು ಹಲವರು. ಆದರೆ ಸರ್ಕಾರದ ಕೆಳಗೆ ಬರುವ ಸಂಸ್ಥೆಗಳಲ್ಲಿ ಹಣ ಉಳಿತಾಯ ಮಾಡುವುದರಿಂದ ಸುರಕ್ಷತೆ ಹೆಚ್ಚಿರುತ್ತದೆ ಎಂದಿದ್ದಾರೆ.
ಮೂರನೆಯದಾಗಿ ಚಿನ್ನ. ನಮ್ಮ ಕಷ್ಟಕ್ಕೆ ಆಗುವುದೇ ಬಂಗಾರ. ಚಿನ್ನ ಎಂದರೆ ಮಹಿಳೆಯರಿಗೆ ತುಂಬಾ ಇಷ್ಟ ಎನ್ನುತ್ತಾರೆ. ಆದರೆ ಇದು ಎಷ್ಟೋ ಬಾರಿ ನಮಗೆ ವರದಾನವಾಗುತ್ತದೆ. ಚಿನ್ನಕ್ಕಾಗಿ ಒಂದಿಷ್ಟು ಹಣವನ್ನು ತೆಗೆದಿಡಬೇಕು. ತುಂಬಾ ಗೋಲ್ಡ್ ಷಾಪ್ಗಳಲ್ಲಿ ಈ ಸೌಲಭ್ಯ ಇದೆ. ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಹಣವನ್ನು ಇಟ್ಟರೆ ಬಂಗಾರವನ್ನು ಖರೀದಿ ಮಾಡಿಟ್ಟುಕೊಳ್ಳಬಹುದು. ಒಂದೇ ಸಲಕ್ಕೆ ಸಹಸ್ರಾರು ರೂಪಾಯಿ ಹಣ ಕೊಟ್ಟು ಬಂಗಾರ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಸ್ವಲ್ಪ ಸ್ವಲ್ಪ ಹಣ ಹಾಕಿ ಅದನ್ನು ಖರೀದಿ ಮಾಡಿದರೆ, ಚಿನ್ನ ಇಷ್ಟವಿದ್ದವರು ಅದನ್ನು ಹಾಕಿ ಖುಷಿ ಪಡಬಹುದು ಇಲ್ಲವೇ ಅಗತ್ಯದ ಕಾಲದಲ್ಲಿ ಆಪದ್ಬಾಂಧವ ಆಗುವ ಕಾರಣ, ಅದನ್ನು ಜೋಪಾನವಾಗಿ ತೆಗೆದಿಡಬಹುದು ಎಂದಿದ್ದಾರೆ ನಟಿ ಅದಿತಿ.
ಎರಡೇ ಎರಡು ದೊಡ್ಡಪತ್ರೆ- ಹತ್ತಾರು ಮಾತ್ರೆಗಳು ಮನೆಯಿಂದ ಔಟ್: ನಟಿ ಅದಿತಿ ಅಮ್ಮನ ಟಿಪ್ಸ್
ಶೀಘ್ರದಲ್ಲಿ ಹಣ ದುಪ್ಪಟ್ಟಾಗುವ ಆಮಿಷ ಕೊಡುವ ಹಲವು ಕಂಪೆನಿಗಳಿವೆ. ಅವುಗಳ ದುರಾಸೆಗೆ ಬಿದ್ದು ಹಣ ಕಳೆದುಕೊಳ್ಳಬೇಡಿ. ಸೇಫ್ ಆಗಿರುವ ಜಾಗದಲ್ಲಿ ಹಣ ಇಟ್ಟು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದಿದ್ದಾರೆ. ಇದರ ಜೊತೆ ಜೊತೆಗೇ ಕಟ್ಲೆಟ್ ಮಾಡುವ ಸುಲಭದ ವಿಧಾನವನ್ನೂ ನಟಿ ಹೇಳಿಕೊಟ್ಟಿದ್ದಾರೆ.