ALEXA ಟೀಸರ್​ ರಿಲೀಸ್​: ಚಿತ್ರಕ್ಕಾಗಿ ಫೈಟ್​ ಮಾಡೋ ವೇಳೆ ಕೈ ಮುರಿದುಕೊಂಡ ಅದಿತಿ ಪ್ರಭುದೇವ್​!

ನಟಿ ಅದಿತಿ ಪ್ರಭುದೇವ ಅವರ ಬಹು ನಿರೀಕ್ಷಿತ ಅಲೆಕ್ಸಾ  ಟೀಸರ್​ ಬಿಡುಗಡೆಯಾಗಿದೆ. ಚಿತ್ರಕ್ಕಾಗಿ ಫೈಟ್​ ಮಾಡೋ ವೇಳೆ ನಟಿ ಕೈ ಮುರಿದುಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
 

Actress Aditi Prabhudevas much awaited Alexa teaser is out actress broke her hand suc

ಪವನ್‌ ತೇಜ ಮತ್ತು ಅದಿತಿ ಪ್ರಭುದೇವ (Aditi Prabhudev)  ನಟಿಸಿರುವ ಅಲೆಕ್ಸಾ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ನಟಿ ಅದಿತಿ ಪ್ರಭುದೇವ ಹಾಗೂ ಪವನ್ ತೇಜ್ ಮೊದಲಾದವರು ‘ಅಲೆಕ್ಸಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಮರ್ಡರ್ ಮಿಸ್ಟರಿ, ಆಕ್ಷನ್ ಜಾನರ್​ನ ಸಿನಿಮಾ ಇದು ಎಂಬುದು ಟೀಸರ್​ ನೋಡಿದರೆ ತಿಳಿದುಬರುತ್ತದೆ. ಚಿತ್ರದಲ್ಲಿ ನಟಿ ಅದಿತಿ ಪ್ರಭುದೇವ ಹಿಂದೆಂದೂ ಕಾಣದ ಖಡಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಜೊತೆಯಾಗಿ ಪವನ್​ ತೇಜ್​ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.  ಸಿನಿಮಾದ ಟೀಸರ್ ರಿದಂ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಬಿಡುಗಡೆ ಆಗಿದೆ. ಚಿತ್ರವನ್ನು ಜೀವ ನಿರ್ದೇಶಿಸಿದ್ದು, ನಿರ್ಮಾಣದ ಹೊಣೆ ಹೊತ್ತವರು  ವಿ.ಚಂದ್ರು. 

ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಅವರು ಸಾಕಷ್ಟು ಫೈಟ್ ಕೂಡ ಮಾಡಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ ಎಂದಿದ್ದಾರೆ ನಟ ಪವನ್​ ತೇಜ್​. ಈ ಚಿತ್ರದ ಮೂಲಕ ತಮ್ಮ ಬಹುವರ್ಷಗಳ ಕನಸನ್ನು ಅದಿತಿ ನನಸು ಮಾಡಿಕೊಳ್ಳುವ ಮಧ್ಯೆಯೇ, ಚಿತ್ರದಲ್ಲಿ ಫೈಟಿಂಗ್​ ಮಾಡಲು ಹೋಗಿ  ಕೈ ಮುರಿದುಕೊಂಡಿದ್ದಾರೆ. ರಕ್ತ ಸುರಿಸಿದ್ದಾರೆ! ಹೌದು. ಈ ವಿಷಯವನ್ನು  ನಟ ಪವನ್​ ತೇಜ್​ ಹೊರಗೆಡವಿದ್ದಾರೆ. ಔಷಧ ಉದ್ಯಮದ ಮಾಫಿಯಾ ಬಗ್ಗೆ ಸಹ ಸಂದೇಶವನ್ನು ಈ ಸಿನಿಮಾ ಒಳಗೊಂಡಿದ್ದು, ಅದಿತಿ ತನಿಖಾಧಿಕಾರಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಈ ಮೂಲಕ ಪೊಲೀಸ್​ ಪಾತ್ರದ ಬಹು ವರ್ಷಗಳ ಕನಸನ್ನು ಈಡೇರಿಸಿಕೊಂಡಿದ್ದಾರೆ. 

ಎರಡೇ ಎರಡು ದೊಡ್ಡಪತ್ರೆ- ಹತ್ತಾರು ಮಾತ್ರೆಗಳು ಮನೆಯಿಂದ ​ಔಟ್​: ನಟಿ ಅದಿತಿ ಅಮ್ಮನ ಟಿಪ್ಸ್​

ಪೊಲೀಸ್ ಅಧಿಕಾರಿ (Police Officer) ಆಗಬೇಕು ಎಂಬ ಕನಸು ಚಿಕ್ಕಂದಿನಿಂದಲೂ ಇತ್ತು. ಅದು ಈಡೇರಿರಲಿಲ್ಲ.‌ ನಿರ್ದೇಶಕ ಜೀವ ನೀವು ಈ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರ ಮಾಡಲಿದ್ದೀರಿ ಅಂದ ಕೂಡಲೇ ಸಿನಿಮಾ ಒಪ್ಪಿಕೊಂಡೆ. ಸಾಹಸ ದೃಶ್ಯಗಳಲ್ಲೂ ನಟಿಸಬೇಕು ಎಂಬ ಬಯಕೆಯೂ ಇತ್ತು. ಅದು ಸಹ ಈ ಸಿನಿಮಾದಿಂದಾಗಿ ನನಸಾಗಿದೆ. ಸಾಹಸ ನಿರ್ದೇಶಕ ರವಿವರ್ಮಾ ಹಾಗೂ ಮಾಸ್ ಮಾದ ಅವರು ನಾನು ನಟಿಸಿರುವ ಆಕ್ಷನ್ ದೃಶ್ಯಗಳನ್ನು ಸಂಯೋಜನೆ ಮಾಡಿದ್ದಾರೆ. ಸಾಹಸ ದೃಶ್ಯಗಳು ಬಹಳ ಚೆನ್ನಾಗಿ ಮೂಡಿಬಂದಿವೆ. ಮಾಲಾಶ್ರೀ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಯಾವುದೇ ಡ್ಯೂಪ್ ಇಲ್ಲದೆ ನಾನೇ ಫೈಟ್ ದೃಶ್ಯಗಳಲ್ಲಿ ಪಾಲ್ಗೊಂಡಿದ್ದೇನೆ ಎಂದಿದ್ದಾರೆ  ಅದಿತಿ ಪ್ರಭುದೇವ.

ಮೈಸೂರು, ಮಡಿಕೇರಿ ಮುಂತಾದ ಕಡೆ ಶೂಟಿಂಗ್ ಮಾಡಿದ್ದೇವೆ. ಮೂರು ಹಾಡುಗಳು ಹಾಗೂ ನಾಲ್ಕು ಫೈಟ್ ದೃಶ್ಯಗಳು ಈ ಸಿನಿಮಾದಲ್ಲಿವೆ. ಅಕ್ಟೋಬರ್ ಅಕ್ಟೋಬರ್ ಅಂತ್ಯಕ್ಕೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ನಿರ್ದೇಶಕ ಜೀವ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು,  ಫಾರ್ಮಾಸೆಟಿಕಲ್ ಮಾಫಿಯಾ ಬಗ್ಗೆ ಕೂಡ ಕ್ಲೈಮ್ಯಾಕ್ಸ್ ನಲ್ಲಿ ತೋರಿಸಿದ್ದೇವೆ‌. ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ಕಥೆ ಕೇಳಿದ ತಕ್ಷಣ ನಿರ್ಮಾಪಕರು ಇಷ್ಟಪಟ್ಟರು. ಇನ್ವೆಸ್ಟಿಕೇಶನ್ ಆಫೀಸರ್ ಆಗಿ ಅದಿತಿ ಪ್ರಭುದೇವ ನಟಿಸಿದ್ದಾರೆ ಎಂಬ ಮಾಹಿತಿ ಶೇರ್​ ಮಾಡಿಕೊಂಡರು. 

ಹಾಲು ಒಡೆಯದೇ ಬೆಲ್ಲದ ಟೀ ಮಾಡುವ ವಿಧಾನ ಹೇಳಿಕೊಟ್ಟ ನಟಿ ಅದಿತಿ ಪ್ರಭುದೇವ

Latest Videos
Follow Us:
Download App:
  • android
  • ios