Asianet Suvarna News Asianet Suvarna News

ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇರುತ್ತೆ, ಎತ್ತಿಕೊಂಡು ಹೋಗ್ಬೋದು ಅಂದುಕೊಂಡಿದ್ದೆ ಎಂದ ಸಹನಟ!

ಸಿನಿಮಾರಂಗದವರೇ ಸಹ ನಟಿಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಹೊಸದೇನಲ್ಲ. ಬಾಡಿ ಶೇಮಿಂಗ್‌, ಲೈಂಗಿಕವಾಗಿ ನಿಂದನೆ ಮಾಡುವುದು ಸಾಮಾನ್ಯವಾಗಿದೆ. ತಮಿಳು ಚಿತ್ರರಂಗದ ವಿವಾದಾತ್ಮಕ ನಟ ಮನ್ಸೂರ್ ಅಲಿ ಖಾನ್ ಸದ್ಯ ನಟಿ ತ್ರಿಶಾ ಬಗ್ಗೆ ಆಡಿರೋ ಮಾತು ಎಲ್ಲೆಡೆ ವೈರಲ್ ಆಗ್ತಿದೆ. 

Actress Trisha Krishnan Slams Actor Mansoor Ali Khan For Sexist Comments Vin
Author
First Published Nov 19, 2023, 12:00 PM IST

ತಮಿಳು ಚಿತ್ರ 'ಲಿಯೋ' ಸದ್ಯ ಬಾಕ್ಸಾಫೀಸಿನಲ್ಲಿ ಕೋಟಿ ಕೋಟಿ ಗಳಿಕೆ ಮಾಡುತ್ತಿದೆ. ನಟ ವಿಜಯ್‌ ಹೀರೋ ಆಗಿ ನಟಿಸಿರುವ ಚಿತ್ರದಲ್ಲಿ ತ್ರಿಶಾ ಹೀರೋಯಿನ್ ಆಗಿದ್ದಾರೆ. ಸಿನಿಮಾ ತಂಡ ಮೂವಿ ಸಕ್ಸಸ್‌ನ ಖುಷಿಯಲ್ಲಿರುವಾಗಲೇ ಚಿತ್ರದಲ್ಲಿ ಖಳನಟನಾಗಿರುವ ಅಭಿನಯಿಸಿರುವ ವ್ಯಕ್ತಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.  ತಮಿಳು ಚಿತ್ರರಂಗದ ವಿವಾದಾತ್ಮಕ ನಟ ಮನ್ಸೂರ್ ಅಲಿ ಖಾನ್ ಸದ್ಯ ನಟಿ ತ್ರಿಶಾ ಬಗ್ಗೆ ಆಡಿರೋ ಮಾತು ಎಲ್ಲೆಡೆ ವೈರಲ್ ಆಗ್ತಿದೆ. ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಈ ನಟನ ಹೇಳಿಕೆ ತ್ರಿಶಾ ಹಾಗೂ ನಿರ್ದೇಶಕ ಲೋಕೇಶ್ ಕನಗರಾಜ್ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೂಡ ತ್ರಿಶಾ ಬೆಂಬಲಕ್ಕೆ ನಿಂತಿದ್ದಾರೆ.

ತ್ರಿಶಾ ಮತ್ತು ಮನ್ಸೂರ್ ಅವರು ಲೋಕೇಶ್ ಕನಕರಾಜ್ ಅವರ ಇತ್ತೀಚಿನ ಹಿಟ್ ಸಿನಿಮಾ ಲಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ತ್ರಿಶಾ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿದರೆ, ಮನ್ಸೂರ್ ಆಲಿ ಖಾನ್ ವಿಲನ್ ಆಗಿ ನಟಿಸಿದ್ದಾರೆ. ಇತ್ತೀಚಿಗೆ ಈ ಸಿನಿಮಾ ಬಗ್ಗೆ ಮಾತಾಡುವಾಗ ಮನ್ಸೂರ್ ಆಲಿ ಖಾನ್‌, 'ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇರುತ್ತೆ. ಆಕೆನಾ ಎತ್ಕೊಂಡು ಬೆಡ್ ರೂಮ್‌ಗೆ ಹೋಗ್ತೀನಿ ಎಂದುಕೊಂಡಿದ್ದೆ' ಎಂದು ಹೇಳಿದ್ದರು.

10 ವರ್ಷಗಳ ನಂತ್ರ 'ನಾನ್‌ ರೆಡಿ' ಅಂತಾ ಟ್ವೀಟ್‌ ಮಾಡಿದ ತ್ರಿಶಾ, 'ಪುರಾತತ್ವ ಇಲಾಖೆಯಲ್ಲಿ ಇರ್ಬೇಕಿತ್ತು' ಎಂದ ಫ್ಯಾನ್ಸ್‌!

ತ್ರಿಶಾ ರೇಪ್ ಸೀನ್ ಇರಬಹುದು ಅಂದುಕೊಂಡಿದ್ದೆ ಎಂದ ನಟ
ಸಂದರ್ಶನವೊಂದರಲ್ಲಿ ಮನ್ಸೂರ್ ಆಲಿ ಖಾನ್‌, 'ನಾನು ತ್ರಿಶಾ ಜೊತೆ ಆಕ್ಟ್ ಮಾಡುತ್ತಿದ್ದೇನೆ ಎಂದು ಗೊತ್ತಾದಾಗ, ಆ ಸಿನಿಮಾದಲ್ಲಿ ಬೆಡ್‌ ರೂಮ್ ಸೀನ್ ಇರುತ್ತೆ ಎಂದು ನಾನು ಭಾವಿಸಿದ್ದೆ. ಆಕೆಯನ್ನು ಎತ್ತಿಕೊಂಡು ಬೆಡ್ ರೂಮ್ ಒಳಗೆ ಹೋಗುತ್ತೇನೆ ಎಂದು ಭಾವಿಸಿದ್ದೆ. ಈ ಹಿಂದಿನ ಸಿನಿಮಾಗಳಲ್ಲಿ ಬೇರೆ ನಟಿಯರನ್ನು ಎತ್ತಿಕೊಂಡು ಬೆಡ್‌ ರೂಮ್‌ ಒಳಗೆ ಹೋಗುವ ದೃಶ್ಯವಿತ್ತು. ನಾನು ಸಿಕ್ಕಪಟ್ಟೆ ರೇಪ್ ಸೀನ್‌ಗಳಲ್ಲಿ ನಟಿಸಿದ್ದೇನೆ. ಇದು ನನಗೆ ಹೊಸದೇನು ಆಗಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಹಾಗೇನು ಇರಲ್ಲಿಲ್ಲ. ಇವರು ಕಾಶ್ಮೀರದಲ್ಲಿ ಶೂಟ್ ಮಾಡುವಾಗ ಆಕೆಯನ್ನು ತೋರಿಸಲಿಲ್ಲ' ಎಂದು ನಟ ಮನ್ಸೂರ್ ಅಲಿ ಖಾನ್ ಹೇಳಿದ್ದರು. 

ಮನ್ಸೂರ್ ಅಲಿ ಖಾನ್ ಕೊಟ್ಟ ಈ ಹೇಳಿಕೆ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೇಳಿಕೆಯ ಬಗ್ಗೆ ನಟಿ ತ್ರಿಶಾ, ಲಿಯೋ ನಿರ್ದೇಶಕ ಲೋಕೇಶ್ ಕನಗರಾಜ್ ಖಂಡಿಸಿದ್ದರು. ತ್ರಿಶಾ, ಟ್ವಿಟರ್‌ನಲ್ಲಿ ಮನ್ಸೂರ್‌ ಆಲಿ ಖಾನ್‌ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 'ಇತ್ತೀಚಿನ ವೀಡಿಯೊವೊಂದು ನನ್ನ ಗಮನಕ್ಕೆ ಬಂದಿದೆ, ಅಲ್ಲಿಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯಕರವಾಗಿ ಮಾತನಾಡಿದ್ದಾರೆ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಇದು ಲೈಂಗಿಕತೆ, ಅಗೌರವ, ಸ್ತ್ರೀದ್ವೇಷ, ವಿಕರ್ಷಣ ಮತ್ತು ಕೆಟ್ಟ ಅಭಿರುಚಿಯಾಗಿದೆ. ಅವರಂತಹ ವ್ಯಕ್ತಿಯೊಂದಿಗೆ ನಟಿಸದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಭವಿಷ್ಯದಲ್ಲಿಯೂ ನಾನು ಇಂಥವರೊಂದಿಗೆ ನಟಿಸದಂತೆ ನೋಡಿಕೊಳ್ಳುತ್ತೇನೆ. ಅವರಂತಹ ಜನರು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ' ಎಂದು ಬರೆದುಕೊಂಡಿದ್ದಾರೆ.

ನಟಿ ಲಿಪ್‌ಲಾಕ್ ಸೀನ್‌ಗೆ ಒಪ್ಪಿದ್ರೂ ಹೀರೋ ಒಪ್ಪಲಿಲ್ಲ: 3 ಸ್ಟಾರ್‌ಗಳಿಗೂ ಇವರೇ ಹೀರೋಯಿನ್!

ತ್ರಿಶಾಗೆ ಬೆಂಬಲ ಸೂಚಿಸಿದ ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್‌, ಅಭಿಮಾನಿಗಳು
ಮನ್ಸೂರ್ ವಿರುದ್ಧ ತ್ರಿಷಾ ಹೇಳಿಕೆಗೆ ಅಭಿಮಾನಿಗಳು ಸಹ ಬೆಂಬಲ ನೀಡಿದ್ದಾರೆ. ಒಬ್ಬ ಬಳಕೆದಾರರು, 'ತ್ರಿಶಾ ತುಂಬಾ ಲವ್ಲೀ ವ್ಯಕ್ತಿತ್ವ ಹೊಂದಿದ್ದಾರೆ' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು, 'ನಟನೊಬ್ಬ ಸಹನಟಿಯ ಬಗ್ಗೆ ಹೀಗೆ ಹೇಳಿರುವುದಕ್ಕೆ ನಾಚಿಕೆ ಪಡಬೇಕು. ನಾವು ಈತನನ್ನು LCU ನಲ್ಲಿ ಮತ್ತೆ ನೋಡಲು ಬಯಸುವುದಿಲ್ಲ' ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ದಳಪತಿ ವಿಜಯ್ ನಟಿಸಿರುವ ಮತ್ತು ಲೋಕೇಶ್ ಕನಕರಾಜ್ ನಿರ್ದೇಶನದ, ತಮಿಳಿನ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಲಿಯೋ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಚಿತ್ರವು ಜಗತ್ತಿನಾದ್ಯಂತ 500 ಕೋಟಿ ರೂಪಾಯಿಗಳನ್ನು ಗಳಿಸಿದೆ. 

Follow Us:
Download App:
  • android
  • ios