MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • 10 ವರ್ಷಗಳ ನಂತ್ರ 'ನಾನ್‌ ರೆಡಿ' ಅಂತಾ ಟ್ವೀಟ್‌ ಮಾಡಿದ ತ್ರಿಶಾ, 'ಪುರಾತತ್ವ ಇಲಾಖೆಯಲ್ಲಿ ಇರ್ಬೇಕಿತ್ತು' ಎಂದ ಫ್ಯಾನ್ಸ್‌!

10 ವರ್ಷಗಳ ನಂತ್ರ 'ನಾನ್‌ ರೆಡಿ' ಅಂತಾ ಟ್ವೀಟ್‌ ಮಾಡಿದ ತ್ರಿಶಾ, 'ಪುರಾತತ್ವ ಇಲಾಖೆಯಲ್ಲಿ ಇರ್ಬೇಕಿತ್ತು' ಎಂದ ಫ್ಯಾನ್ಸ್‌!

ನಟಿ ತ್ರಿಶಾ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿರುವ ಟ್ವೀಟ್‌. ಈ ಟ್ವೀಟ್‌ಅನ್ನು ನೋಡಿದ ಅವರ ಅಭಿಮಾನಿಗಳು ಮೇಡಮ್‌ ನೀವು ಪುರಾತತ್ವ ಇಲಾಖೆಯಲ್ಲಿ ಕೆಲಸಕ್ಕೆ ಇರಬೇಕಿತ್ತು ಎಂದು ಹೇಳಿದ್ದಾರೆ. ಯಾಕಾಗಿ ಹಾಗೆ ಹೇಳಿದ್ರು? ಇಲ್ಲಿದೆ ನೋಡಿ ಡೀಟೇಲ್ಸ್‌..

2 Min read
Santosh Naik
Published : Sep 11 2023, 06:49 PM IST| Updated : Sep 11 2023, 07:01 PM IST
Share this Photo Gallery
  • FB
  • TW
  • Linkdin
  • Whatsapp
115

ತೆಲುಗು, ತಮಿಳು ಚಿತ್ರರಂಗದಲ್ಲಿ ಫ್ಯಾನ್‌ ಫೇವರಿಟ್‌ ಆಗಿರುವ ನಟಿ ತ್ರಿಶಾ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಒಂದು ದಿನದ ಹಿಂದೆ ಅವರೇ ಮಾಡಿರುವ ಒಂದು ಟ್ವೀಟ್‌.

215

ತ್ರಿಶಾ ಈ ಟ್ವೀಟ್ ಮಾಡಿದ ಬೆನ್ನಲ್ಲಿಯೇ ಅವರ ಅಭಿಮಾನಿಗಳು ಮೇಡಮ್‌ ನೀವು ನಟಿಯಲ್ಲ, ಪುರಾತತ್ವ ಇಲಾಖೆಯಲ್ಲಿ ಕೆಲಸದಲ್ಲಿರಬೇಕು ಎಂದು ಹೇಳಿದ್ದಾರೆ.

315

ಅಷ್ಟಕ್ಕೂ ತ್ರಿಶಾ ಮಾಡಿರುವ ಆ ಟ್ವೀಟ್‌ನಲ್ಲಿ ಅಂಥದ್ದೇನಿದೆ. ಅನ್ನೋದು ನಿಮ್ಮ ಕುತೂಹಲವಾಗಿರಬಹುದು. ಅವರು ಮಾಡಿರುವ ಟ್ವೀಟ್‌ಗಿಂತ, ಅವರು ಆ ಟ್ವೀಟ್‌ಅನ್ನು ಹುಡುಕಿದ್ದು ಹೇಗೆ ಅನ್ನೋದು ಅಭಿಮಾನಿಗಳು ಕುತೂಹಲವಾಗಿದೆ.

415

ಟ್ವೀಟ್‌ನ ವಿಶೇಷ ಏನೆಂದರೆ, ನಟಿ ತ್ರಿಶಾ ಬರೋಬ್ಬರಿ 10 ವರ್ಷಗಳ ಹಿಂದಿನ ಒಂದು ಟ್ವೀಟ್‌ಗೆ ಕಳೆದ ಭಾನುವಾರ ರಿಪ್ಲೈ ನೀಡಿದ್ದಾರೆ.

515

ನಿರ್ದೇಶಕ ಸೆಲ್ವರಾಘವನ್‌ 2013ರ ಜುಲೈ 13 ರಂದು ಒಂದು ಟ್ವೀಟ್‌ ಮಾಡಿದ್ದರು. ಬಹಳ ದಿನಗಳ ಬಳಿಕ ನಾನು 'ಎಎಂಎವಿ' ಚಿತ್ರವನ್ನು ನೋಡಿದೆ. ಈ ಚಿತ್ರವನ್ನು ನಿರ್ದೇಶನ ಮಾಡುವಾಗ ವೆಂಕಿ ಹಾಗೂ ತ್ರಿಶಾ ಜೊತೆ ಅದ್ಭುತ ಕ್ಷಣವನ್ನು ಕಳೆದಿದ್ದೆ. ಈಗ ಅದರ ಸೀಕ್ವೆಲ್‌ ಮಾಡೋದಿದ್ರೂ ಅದಕ್ಕೆ ನಾನು ಸೈ ಎಂದು ಬರೆದುಕೊಂಡಿದ್ದರು.

615

ಎಎಂಎವಿ ಅಂದರೆ, ಆದವರಿ ಮಾತಲಕು ಅರ್ಥಲೆ ವೆರುಲೆ ಸಿನಿಮಾ. 2007ರಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಮಾಯಿ ಮಾಡಿತ್ತು. ಆ ಸಮಯದಲ್ಲಿಯೇ 30 ಕೋಟಿ ಕಲೆಕ್ಷನ್‌ ಮಾಡಿತ್ತು.

715

ಇದೇ ಚಿತ್ರವನ್ನು ತಮಿಳಿನಲ್ಲಿ ಯಾರಿಡೀ ನೀ ಮೋಹಿನಿ ಎನ್ನುವ ಹೆಸರಿನಲ್ಲಿ ಧನುಷ್‌ ಹಾಗೂ ನಯನತಾರಾ ಜೊತೆ ಸೆಲ್ವರಾಘವನ್‌ ರಿಮೇಕ್‌ ಮಾಡಿದ್ದರು. ತಮಿಳಿನಲ್ಲೂ ಚಿತ್ರ ಸೂಪರ್‌ಹಿಟ್‌ ಆಗಿತ್ತು.

815

ಈ ಚಿತ್ರದ ಸೀಕ್ವೆಲ್‌ ಮಾಡುವ ಬಗ್ಗೆ ಸೆಲ್ವರಾಘವ್‌ 2013ರಲ್ಲಿ ಮಾಡಿದ ಟ್ವೀಟ್‌ಗೆ ಭಾನುವಾರ ಉತ್ತರ ನೀಡಿರುವ ತ್ರಿಶಾ ಈ ಸಿನಿಮಾಗೆ ನಾನು ರೆಡಿ ಎಂದು ಸೆಲ್ವರಾಘವವ್‌ ಅವರನ್ನು ಟ್ಯಾಗ್‌ ಮಾಡಿದ್ದಾರೆ.

915

ಅದರೊಂದಿಗೆ ಈ ಚಿತ್ರದ ಸೀಕ್ವೆಲ್‌ ಬರಬಹುದು ಎನ್ನುವ ಸೂಚನೆಯೂ ಜನರಿಗೆ ಸಿಕ್ಕಿದೆ. ಅದಕ್ಕಿತ ಹೆಚ್ಚಾಗಿ 10 ವರ್ಷದ ಹಿಂದಿನ ಟ್ವೀಟ್‌ಗೆ ತ್ರಿಶಾ ಹೇಗೆ ರಿಪ್ಲೈ ನೀಡಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

1015

ಇದಕ್ಕೆ ಕಾಮೆಂಟ್‌ ಮಾಡಿರುವ ಅಭಿಮಾನಿಯೊಬ್ಬ, ಹುಡುಗಿಯರು ಒಕೆ ಅನ್ನೋದಕ್ಕೆ ತುಂಬಾ ಟೈಮ್‌ ತಗೋತಾರೆ ಅಂತಾ ಕೇಳಿದ್ದೆ, ಆದ್ರೆ 10 ವರ್ಷ ತಗೋತಾರೆ ಅಂತಾ ಈಗ್ಲೆ ಗೊತ್ತಾಗಿದ್ದು ಎಂದು ಬರೆದಿದ್ದಾರೆ.

 

1115

ಇದನ್ನು ನೋಡಿದ ನಂತ್ರ ನಿಮಗಿಂತ ನನ್ನ ಲವ್ವರ್‌ ಪರ್ವಾಗಿಲ್ಲ ಅಂತಾ ಅನ್ನಿಸ್ತಿದೆ. ಕನಿಷ್ಠ ಆಕೆ 2 ದಿನಕ್ಕಾದ್ರೂ ಒಮ್ಮೆ ರಿಪ್ಲೈ ಮಾಡ್ತಾಳೆ ಎಂದು ಅಭಿಮಾನಿಯೊಬ್ಬ ಬರೆದಿದ್ದಾರೆ.

1215

ಅದಾವರಿ ಮಾತಾಲುಕು ಅರ್ದಾಳು ವೆರುಲೆ ಚಿತ್ರವನ್ನು ಸೆಲ್ವರಾಘವನ್ ನಿರ್ದೇಶಿಸಿದ್ದಾರೆ. ಅದಾವರಿ ಮಾತಾಲುಕು ಅರ್ದಲು ವೆರುಲೆ ಚಿತ್ರ ತೆಲುಗಿನಲ್ಲಿ ದೊಡ್ಡ ಹಿಟ್ ಆಯಿತು. ವೆಂಕಟೇಶ್ ಮತ್ತು ತ್ರಿಷಾ ಮುಖ್ಯ ಪಾತ್ರಧಾರಿಯಾಗಿದ್ದರು.

1315

ಪೊನ್ನಿಯನ್‌ ಸೆಲ್ವನ್‌ ಚಿತ್ರದ ದೊಡ್ಡ ಯಶಸ್ಸಿನ ಬಳಿಕ ತ್ರಿಶಾ ಮತ್ತೊಮ್ಮೆ ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.

1415

ತ್ರಿಶಾ ನಟಿಸಿರುವ ದ ರೋಡ್‌ ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಇದರಲ್ಲಿ ತ್ರಿಶಾ ಮೀರಾ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ.

1515

ದ ರೋಡ್‌ ಬೆನ್ನಲ್ಲಿಯೇ ಅವರ ಬಹುನಿರೀಕ್ಷಿತ ಚಿತ್ರ ಲಿಯೋ ಬಿಡುಗಡೆಯಾಗಲಿದೆ. ಇದರಲ್ಲಿ ಅವರು ಇಳಯದಳಪತಿ ವಿಜಯ್‌ ಜೊತೆ ತೆರೆ ಹಂಚಿಕೊಂಡಿದ್ದಾರೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ನಟಿ
ತಮಿಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved