ಬೆಂಗಳೂರು ಪಿಜಿಗೆ ನುಗ್ಗಿದ ಕಳ್ಳ ಮಾಡಿದ್ದೇನು? ಸಿಸಿಟಿವಿಯಲ್ಲಿ ಶಾಕಿಂಗ್ ದೃಶ್ಯಗಳ ಸೆರೆ!
ಬೆಂಗಳೂರಿನ ಪಿಜಿಯೊಂದಕ್ಕೆ ನುಗ್ಗಿರುವ ಕಳ್ಳ ಅಲ್ಲಿ ಮಾಡಿರುವ ಕಿತಾಪತಿಯ ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೋ ಇದಾಗಿದೆ.
ಮನೆಗಳಲ್ಲಿ, ದೇವಾಲಯಗಳಲ್ಲಿ, ಅಂಗಡಿಗಳಲ್ಲಿ ಕಳ್ಳರ ಕಾಟ ಇಂದು-ನಿನ್ನೆಯದ್ದಲ್ಲ. ಯಾವ ರೂಪದಲ್ಲಾದರೂ ಕಳ್ಳರು ತಮ್ಮ ಕೈಚಳಕ ತೋರಿಸುತ್ತಾರೆ. ಹಿಂದೆಲ್ಲಾ ಕಳ್ಳರನ್ನು ಹಿಡಿಯುವುದು ತುಂಬಾ ಕಷ್ಟವಾಗಿದ್ದರೂ, ಈಗ ಸಿಸಿಟಿವಿಯ ಮಹಿಮೆಯಿಂದಾಗಿ ಕಳ್ಳರು ತಪ್ಪಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲವಾದರೂ ಚಾಣಾಕ್ಷತನದಿಂದ ಅವರು ತಪ್ಪಿಸಿಕೊಳ್ಳುವುದೂ ಇದೆ. ಇದೀಗ ಅಂಥದ್ದೇ ಒಂದು ಘಟನೆ ಬೆಂಗಳೂರಿನ ಪಿಜಿಯಲ್ಲಿ ನಡೆದಿದೆ. ಕಳ್ಳನೊಬ್ಬ ಪಿಜಿಯೊಳಕ್ಕೆ ನುಗ್ಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದು ಯಾವ ಪಿಜಿ ಎನ್ನುವ ಬಗ್ಗೆ ಸ್ಪಷ್ಟವಾಗಿಲ್ಲವಾದರೂ ಬೆಂಗಳೂರಿನ ಮಾರತಹಳ್ಳಿಯ ಮಸಾಲೆ ಗಾರ್ಡನ್ ಲೇಔಟ್ ನಲ್ಲಿ ಇರುವ ಪಿಜಿ ಎಂದು ಹೇಳಲಾಗುತ್ತಿದೆ. ಇದೇ 13ರಂದು ಈ ಘಟನೆ ನಡೆದಿದೆ. ಬೆಳಿಗ್ಗೆ ಸುಮಾರು 7:30 ಕ್ಕೆ ಒಬ್ಬ ವ್ಯಕ್ತಿಯೊಬ್ಬ ಪಾರ್ಕಿಂಗ್ ಸ್ಥಳದ ಮೂಲಕ ಪಿಜಿಗೆ ಬಂದಿದ್ದಾನೆ. ಶಬ್ದ ಮಾಡದೆ ಪ್ರತಿ ಕೋಣೆಯನ್ನು ಅಲ್ಲಿರುವ ಬಾಗಿಲಿನ ರಂಧ್ರದ ಮೂಲಕ ಪರಿಶೀಲಿಸಲು ಪ್ರಾರಂಭಿಸಿದ್ದಾನೆ. ಬರುವ ಶಬ್ದ ಯಾರಿಗೂ ಕೇಳಿಸಬಾರದು ಎನ್ನುವ ಕಾರಣಕ್ಕೆ ಕೈಯಲ್ಲಿ ಚಪ್ಪಲಿಯನ್ನು ಹಿಡಿದಿದ್ದಾನೆ. ಪ್ರತಿ ಫ್ಲೋರ್‌ನಲ್ಲಿನ ಪ್ರತಿಯೊಂದು ಕೋಣೆಯನ್ನು ಪರಿಶೀಲಿಸಿ ಅತ್ತ ಇತ್ತ ಹೋಗಿರುವುದನ್ನು ಸಿಸಿಟಿವಿಯಲ್ಲಿ ನೋಡಬಹುದಾಗಿದೆ.
ಪಾಕ್ನಲ್ಲೂ ಪ್ರಿಯಾಂಕಾ ಬ್ಯಾಗಿಂದೇ ಸದ್ದು: ಜವಾಹರ್ ಮೊಮ್ಮಗಳಿಂದ ಇನ್ನೇನು ನಿರೀಕ್ಷೆ ಸಾಧ್ಯ ಎಂದ ಸಚಿವ!
ಬೆಳಿಗ್ಗೆ ಪಿಜಿ ಕ್ಲೀನ್ ಮಾಡಲು ಬಂದ ಕೆಲಸದಾಕೆ ಈತನನ್ನು ನೋಡಿ ಅನುಮಾನಪಟ್ಟು ಯಾರು ಎಂದು ಕೇಳಿದಾಗ, ಆತ, ತನ್ನ ಸ್ನೇಹಿತರನ್ನು ನೋಡಲು ಬಂದಿರುವುದಾಗಿ ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಕೆಲಸದಾಕೆ, ಆ ಸ್ನೇಹಿತರಿಗೆ ಕಾಲ್ ಮಾಡಿ ಎಂದಾಗ, ಮೊಬೈಲ್ ಫೋನ್ ತೆಗೆದು ಕಾಲ್ ಮಾಡುವಂತೆ ನಾಟಕವಾಡಿ ಬಂದ ಜಾಗದಿಂದಲೇ ಎಸ್ಕೇಪ್ ಆಗಿದ್ದಾನೆ. ಬಳಿಕ ಕೆಲಸದಾಕೆ ಸಂಬಂಧಪಟ್ಟವರಿಗೆ ವಿಷಯ ತಿಳಿಸಿದಾಗ ಸಿಸಿಟಿವಿ ಪರಿಶೀಲನೆ ಮಾಡಲಾಗಿದೆ. ನಂತರ ಆತನ ಚಟುವಟಿಕೆ ನೋಡಿ ಕಳ್ಳ ಎನ್ನುವುದು ತಿಳಿದಿದೆ.
ಪಿಜಿಗಳಲ್ಲಿ ಇರುವವರು ಅದರಲ್ಲಿಯೂ ಮುಖ್ಯವಾಗಿ ಹೆಣ್ಣುಮಕ್ಕಳು ಜಾಗೃತರಾಗಿ ಇರಬೇಕು ಎಂದು ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ. ಕೆಲವು ಪ್ರದೇಶಗಳಲ್ಲಿ ಪಿಜಿಗಳಿಗೆ ನುಗ್ಗಿರುವ ಕಳ್ಳರು ಹಲವಾರು ಅಪರಾಧ ಕೃತ್ಯಗಳನ್ನು ಮಾಡಿರುವ ಘಟನೆಗಳು ನಡೆದಿವೆ. ಕಳ್ಳತನ ಮಾತ್ರವಲ್ಲದೇ ಕೊಲೆಯಾದಂಥ ಘಟನೆಗಳೂ ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಆದ್ದರಿಂದ ಪಿಜಿಯಲ್ಲಿ ಇರುವವರ ಜೊತೆ ಪಿಜಿಯ ಉಸ್ತುವಾರಿ ನೋಡಿಕೊಳ್ಳುವವರೂ ಜಾಗೃತರಾಗಿರಬೇಕಿದೆ. ಈ ಪಿಜಿಯಲ್ಲಿ ಇಷ್ಟು ಸುಲಭವಾಗಿ ಯಾರೋ ಒಬ್ಬ ಹೇಗೆ ಒಳಕ್ಕೆ ಬರಲು ಸಾಧ್ಯ ಎನ್ನುವ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಕನಿಷ್ಠ ಭದ್ರತೆಯೂ ಪಿಜಿಗೆ ಇಲ್ಲವೇ ಎಂದು ಪ್ರಶ್ನೆ ಕೇಳಲಾಗುತ್ತಿದೆ. ಈ ವಿಡಿಯೋ ಅನ್ನು ನಮ್ಮ ಬೆಂಗಳೂರು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಒಂದು ತಿಂಗಳು ಜೊತೆಗಿದ್ದು 15 ವರ್ಷ ದೂರವಿದ್ದಾಕೆಯಿಂದ 40 ಲಕ್ಷ ಡಿಮಾಂಡ್! ಕೋರ್ಟ್ ಕೇಸ್ ವೈರಲ್