ಪಾಕ್ನಲ್ಲೂ ಪ್ರಿಯಾಂಕಾ ಬ್ಯಾಗಿಂದೇ ಸದ್ದು: ಜವಾಹರ್ ಮೊಮ್ಮಗಳಿಂದ ಇನ್ನೇನು ನಿರೀಕ್ಷೆ ಸಾಧ್ಯ ಎಂದ ಸಚಿವ!
ಪಾಕಿಸ್ತಾನದಲ್ಲಿಯೂ ಪ್ರಿಯಾಂಕಾ ಗಾಂಧಿಯವರ ಪ್ಯಾಲಿಸ್ತೇನ್ ಬ್ಯಾಗು ಸದ್ದು ಮಾಡುತ್ತಿದೆ. ಜವಾಹರ್ ಲಾಲ್ ಮೊಮ್ಮಗಳಿಂದ ಇನ್ನೇನು ನಿರೀಕ್ಷೆ ಸಾಧ್ಯ ಎಂದು ಹಾಡಿ ಹೊಗಳಲಾಗುತ್ತಿದೆ.
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಸಂಸತ್ತಿಗೆ ಹೋದ ಸಮಯದಲ್ಲಿ ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್ ಹಿಡಿದುಕೊಂಡು ಹೋಗಿರುವ ವಿಷಯ ಭಾರತದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಬಗ್ಗೆ ಕಾಂಗ್ರೆಸ್ಸಿಗೇತರರು ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದರೆ, ಕಾಂಗ್ರೆಸ್ ಮತ್ತು ಅದರ ಬೆಂಬಲಿಗರು ಪ್ರಿಯಾಂಕಾ ಮಾಡಿರುವುದು ಸರಿಯಿದೆ ಎಂದು ವಾದಿಸುತ್ತಿದ್ದಾರೆ. ಅಷ್ಟಕ್ಕೂ ಈ ಪ್ಯಾಲೆಸ್ತೀನ್ ಬ್ಯಾಗು ಭಾರತದಲ್ಲಿ ಮಾತ್ರವಲ್ಲದೇ ಪಾಕಿಸ್ತಾನದಲ್ಲಿಯೂ ಸದ್ದು ಮಾಡುತ್ತಿದೆ. ಜವಾಹರ್ಲಾಲ್ ಮೊಮ್ಮಗಳಾಗಿರುವ ಪ್ರಿಯಾಂಕಾ ಗಾಂಧಿ ಅವರಿಂದ ಇನ್ನೇನು ನಿರೀಕ್ಷೆ ಸಾಧ್ಯ, ಈ ರೀತಿಯ ಧೈರ್ಯ ಪಾಕಿಗಳಿಗೂ ಇಲ್ಲ. ಇವರೂ ಇದನ್ನು ಪ್ರದರ್ಶಿಸಬೇಕು ಎಂದು ಪಾಕಿಸ್ತಾನ ಮಾಜಿ ಸಚಿವ ಫವಾದ್ ಹಸನ್ ಚೌಧರಿ ಪ್ರಿಯಾಂಕಾ ಗಾಂಧಿಯನ್ನು ಹಾಡಿ ಹೊಗಳಿದ್ದಾರೆ.
ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನಿಯರ ಪರವಾಗಿ ಇರುವುದಾಗಿ ಭಾರತದಲ್ಲಿ ಒಂದಿಷ್ಟು ಮಂದಿ ಸಂಸದೆಯ ವಿರುದ್ಧ ಪ್ರತಿಭಟನೆಗೆ ಇಳಿದಿದ್ದರೆ, ಪಾಕಿಸ್ತಾನಿಗಳು ಮಾತ್ರ ಫುಲ್ ಖುಷ್ ಆಗಿರುವುದು ಮಾಜಿ ಸಚಿವರ ಮಾತಿನಿಂದ ತಿಳಿದು ಬರುತ್ತಿದೆ. ಜವಾಹರಲಾಲ್ ನೆಹರೂ ಅವರಂತಹ ಅತ್ಯುತ್ತಮ ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗಳಿಂದ ನಾವು ಇಂಥದ್ದನ್ನೇ ನಿರೀಕ್ಷಿಸಿದ್ದೆವು. ಅದು ನಿಜವಾಗಿದೆ. ಕೆಲವು ಸಂಕುಚಿತ ಮನಸ್ಸುಗಳಿರುವವರ ನಡುವೆ ಭಿನ್ನವಾಗಿ ನಿಂತಿದ್ದಾರೆ ಪ್ರಿಯಾಂಕಾ ಗಾಂಧಿ. ಇಲ್ಲಿಯವರೆಗೆ ಯಾವುದೇ ಪಾಕಿಸ್ತಾನಿ ಸಂಸತ್ ಸದಸ್ಯರು ಅಂತಹ ಧೈರ್ಯವನ್ನು ಪ್ರದರ್ಶಿಸಿಲ್ಲ. ಥ್ಯಾಂಕ್ಯೂ ಎಂದು ಎಕ್ಸ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ. ಇದೀಗ ಭಾರತದಲ್ಲಿ ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ಸಿಗೇತರರಿಗೆ ಪಾಕ್ನ ಈ ಹೊಗಳಿಗೆ ಇನ್ನಷ್ಟು ಆಹಾರವನ್ನು ಒದಗಿಸಿದೆ.
ದ್ವಿಪೌರತ್ವ ಕಾನೂನು ಕುಣಿಕೆಯಲ್ಲಿ ರಾಹುಲ್! ಸಂವಿಧಾನದಲ್ಲಿ ಏನಿದೆ? ಸಾಬೀತಾದ್ರೆ ಏನಾಗತ್ತೆ? ಇಲ್ಲಿದೆ ಡಿಟೇಲ್ಸ್
ಪ್ರಿಯಾಂಕಾ ಗಾಂಧಿ ಅವರು ರಾಹುಲ್ ಗಾಂಧಿಯವರಿಗಿಂತಲೂ ತುಂಬಾ ಡೇಂಜರ್ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ವಯನಾಡಿನಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಜೂನ್‌ನಲ್ಲಿ, ಪ್ರಿಯಾಂಕಾ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟೀಕಿಸಿದ್ದರು. ಕಳೆದ ಅಕ್ಟೋಬರ್‌ನಲ್ಲಿ, ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಒಂದು ವರ್ಷವನ್ನು ಪೂರ್ಣಗೊಳಿಸಿದಾಗ, ಪ್ರಿಯಾಂಕಾ ಇಸ್ರೇಲ್ ಅಂತರರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂದು ಕೂಡ ಆರೋಪಿಸಿದ್ದರು.
ಅಷ್ಟಕ್ಕೂ ಪ್ರಿಯಾಂಕಾ ಗಾಂಧಿ ಹೊಸದಾಗಿ ಸಂಸದೆಯಾದಾಗಿನಿಂದಲೂ ಸದ್ದು ಮಾಡುತ್ತಲೇ ಇದ್ದಾರೆ. ಕರ್ನಾಟಕ ಹಾಗೂ ಕೇರಳದ ಗಡಿ ಭಾಗದ ವಿವಾದವನ್ನು ಮತ್ತೆ ಮುನ್ನಲೆಗೆ ತಂದು ಉರಿಯುವ ಬೆಂಕಿಗೆ ತುಪ್ಪ ಸವರಿದ್ದರು. ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ತಮ್ಮ ಆದ್ಯತೆ ಎನ್ನುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು. ಇದರ ಬೆನ್ನಲ್ಲೇ ಈಗ ಪ್ಯಾಲೆಸ್ತೀನ್ ಬ್ಯಾಗ್ ಪ್ರದರ್ಶಿಸಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬ್ಯಾಗ್ ಗಲಾಟೆಯಾದ ಬೆನ್ನಲ್ಲೇ ಮರುದಿನ ಬಾಂಗ್ಲಾದೇಶದ ಹಿಂದೂಗಳ ಪರವಾಗಿ ಇರುವಂಥ ಬ್ಯಾಗ್ ಪ್ರದರ್ಶಿಸಿ, ಈ ಗಲಾಟೆಯನ್ನು ತಣ್ಣಗೆ ಮಾಡಲು ನೋಡಿದ್ದಾರೆ ಪ್ರಿಯಾಂಕಾ ಗಾಂಧಿ.
ಒಂದು ತಿಂಗಳು ಜೊತೆಗಿದ್ದು 15 ವರ್ಷ ದೂರವಿದ್ದಾಕೆಯಿಂದ 40 ಲಕ್ಷ ಡಿಮಾಂಡ್! ಕೋರ್ಟ್ ಕೇಸ್ ವೈರಲ್