ಅಯ್ಯೋ ನೋವು ಅಂದ್ರೂ ಬಿಡ್ಲಿಲ್ಲ, ಅನಸ್ತೇಶಿಯಾ ಬಳಸದೆ 23 ಮಹಿಳೆಯರಿಗೆ ಸರ್ಜರಿ !
ದೇಹದ ಮೇಲೆ ಸಣ್ಣ ಗಾಯವಾದ್ರೂ ವಿಪರೀತ ನೋವಾಗುತ್ತೆ. ಸಹಿಸೋಕೆ ಆಗಲ್ಲ. ಇನ್ನು ಮೈಯನ್ನು ಕುಯ್ಯುವಾಗ ನೋವಾಗದೆ ಇರುತ್ತಾ? ಸಹಿಸಲು ಅಸಾಧ್ಯವಾದ ನೋವಾಗ್ಬೋದು. ಹೀಗಾಗಿಯೇ ಈ ರೀತಿ ಸರ್ಜರಿ ಮಾಡುವಾಗ ರೋಗಿಗೆ ಅನಸ್ತೇಶಿಯಾ ನೀಡಲಾಗುತ್ತೆ. ಆದ್ರೆ ಇಲ್ಲೊಂದೆಡೆ ಯಡವಟ್ಟು ವೈದ್ಯರ ಟೀಂ ಅರಿವಳಿಕೆ ಮದ್ದು ನೀಡದೆ 23 ಮಹಿಳೆಯರಿಗೆ ಸರ್ಜರಿ ಮಾಡಿ ನರಕ ತೋರಿಸಿದ್ದಾರೆ.
ಬಿಹಾರ: ಇಲ್ಲಿನ ಖಗಾರಿಯಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು (Doctors) ಮತ್ತು ವೈದ್ಯಕೀಯ ಸಿಬ್ಬಂದಿ ಅರಿವಳಿಕೆ ಇಲ್ಲದೆ ಸುಮಾರು 23 ಮಹಿಳೆಯರಿಗೆ ಆಪರೇಷನ್ ಮಾಡಿದ್ದಾರೆ. ಇತ್ತೀಚೆಗೆ ಅಲೌಲಿಯ ಪಿಎಚ್‌ಸಿಯಲ್ಲಿ 23 ಮಹಿಳೆಯರಿಗೆ (Woman) ಅರಿವಳಿಕೆ ಇಲ್ಲದೆ ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆ (Operation) ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸುಮಾರು 30 ಮಹಿಳೆಯರಿಗೆ ಈ ಕಾರ್ಯವಿಧಾನಕ್ಕೆ ಒಳಗಾಗಲು ನಿರ್ಧರಿಸಲಾಗಿತ್ತು. ಆದರೆ ಏಳು ಮಂದಿ ಭಯದಿಂದ ಸಂಸ್ಥೆಯಿಂದ ಓಡಿಹೋಗಿದ್ದಾರೆ ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ ಎಂದು ಖಗಾರಿಯಾ ಸಿವಿಲ್ ಸರ್ಜನ್ ಅಮರ್ಕಾಂತ್ ಝಾ ತಿಳಿಸಿದ್ದಾರೆ. ಖಗಾರಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಅಲೌಲಿ ಬ್ಲಾಕ್‌ನಲ್ಲಿರುವ ಪಿಎಚ್‌ಸಿಯಲ್ಲಿ ನಡೆದ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ಸಿವಿಲ್ ಸರ್ಜನ್‌ಗೆ ತನಿಖೆ (Enquiry)ಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದ್ದಾರೆ.
ಟ್ಯೂಬೆಕ್ಟಮಿ ಎಂದರೇನು ?
ಇದು ಮಹಿಳೆಯರಲ್ಲಿ ಅನಗತ್ಯ ಗರ್ಭಧಾರಣೆಯನ್ನು (Unwanted pregnancy) ತಡೆಯುವ ಪ್ರಕ್ರಿಯೆಯಾಗಿದೆ. ಇದರಲ್ಲಿ, ಮೊದಲು, ಹೊಟ್ಟೆಯನ್ನು ತೆರೆಯಬೇಕು ಮತ್ತು ಫಾಲೋಪಿಯನ್ ಟ್ಯೂಬ್‌ಗಳನ್ನು ಬಹಿರಂಗಪಡಿಸಬೇಕು. ಅಂಡಾಶಯದಲ್ಲಿ ಮೊಟ್ಟೆಯ ಹಾದಿಯನ್ನು ಮುಚ್ಚಲು ಅವುಗಳನ್ನು ನೈಲಾನ್ ದಾರದಿಂದ ಕಟ್ಟಲಾಗುತ್ತದೆ. ಬಿಹಾರದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಮಹಿಳೆಯರಿಗೆ ಅರಿವಳಿಕೆ (Anaesthesia) ನೀಡದೆ ಮಾಡಲಾಗಿದೆ. ಟ್ಯೂಬೆಕ್ಟಮಿ ಕಾರ್ಯವಿಧಾನವು ಫಾಲೋಪಿಯನ್ ಟ್ಯೂಬ್‌ಗಳ ಶಸ್ತ್ರಚಿಕಿತ್ಸೆಯ ಕ್ಲಿಪಿಂಗ್ ಅನ್ನು ಒಳಗೊಂಡಿರುತ್ತದೆ. ಖಾಸಗಿ ಸಂಸ್ಥೆಯು ನಡೆಸುತ್ತಿರುವ ಸರ್ಕಾರಿ ಪ್ರಾಯೋಜಿತ ಅಭಿಯಾನದ ಭಾಗವಾಗಿ ಮಹಿಳೆಯರು ಆಸ್ಪತ್ರೆಗೆ ಆಗಮಿಸಿದ್ದರು.
Lower Back Pain: ಚಿಂತೆ ಬಿಡಿ, ಸರ್ಜರಿ ಇಲ್ದೆನೂ ಕಡಿಮೆ ಮಾಡ್ಕೋಬೋದು
ಅಯ್ಯೋ ನೋವೆಂದು ಕಿರುಚಾಡಿದರೂ ಬಿಡಲ್ಲಿಲ್ಲ !
ಸಂತ್ರಸ್ತರು, ತಮ್ಮ ಭಯಾನಕ ಅನುಭವಗಳನ್ನು (Experience) ಹೇಳಿಕೊಂಡಿದ್ದಾರೆ. ಒಬ್ಬ ಮಹಿಳೆ, 'ಸಿಬ್ಬಂದಿ ಕೈ, ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಅಸಹನೀಯ ನೋವನ್ನು ಅನುಭವಿಸಿದೆ' ಎಂದಿದ್ದಾರೆ. ಇನ್ನೊಬ್ಬ ಮಹಿಳೆ, 'ಭಯಾನಕ ಘಟನೆಯನ್ನು ನಾನು ನೆನಪಿಸಿಕೊಳ್ಳಲು ಬಯಸುವುದಿಲ್ಲ. ನಾನು ನೋವಿನಿಂದ ಕಿರುಚುತ್ತಿದ್ದೆ, ವೈದ್ಯರು ಕೆಲಸವನ್ನು ಪೂರ್ಣಗೊಳಿಸುತ್ತಿದ್ದಂತೆ ನಾಲ್ಕು ಜನರು ನನ್ನ ಕೈಕಾಲುಗಳನ್ನು ಬಿಗಿಯಾಗಿ ಹಿಡಿದಿದ್ದರು. ಆರಂಭದಲ್ಲಿ ನಾನು ಅಸಹನೀಯ ನೋವಿನ ಬಗ್ಗೆ ವೈದ್ಯರನ್ನು ಕೇಳಿದಾಗ ಅದು ಸಾಮಾನ್ಯವಾಗಿ ಸಂಭವಿಸುತ್ತದೆ ಎಂದು ಹೇಳಿದರು. ಆಮೇಲೆ ನೋವು (Pain) ಸಹಿಸಲು ಅಸಾಧ್ಯ ಎಂಬಂತಾಯಿತು' ಎಂದು ನೋವಿನಿಂದ ಹೇಳಿದ್ದಾರೆ. ಶಸ್ತ್ರಚಿಕಿತ್ಸೆಯ ಉದ್ದಕ್ಕೂ ನಾನು ಎಚ್ಚರವಾಗಿಯೇ ಇದ್ದೆ ಮತ್ತು ಅಪಾರ ನೋವನ್ನು ಅನುಭವಿಸಿದೆ ಎಂದು ಇನ್ನೊಬ್ಬ ಸಂತ್ರಸ್ತೆ ಹೇಳಿದರು.
ಪ್ರಕರಣದ ಕುರಿತು ವಿಚಾರಣೆ, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ
'ಇದು ಗಂಭೀರವಾದ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವಾಗಿದೆ. ಮಹಿಳೆಯರಿಗೆ ಅರಿವಳಿಕೆ ಇಲ್ಲದೆ ಶಸ್ತ್ರಚಿಕಿತ್ಸಾ ವಿಧಾನಕ್ಕೆ ಒಳಗಾಗುವುದು ಹೇಗೆ ? ಟ್ಯೂಬೆಕ್ಟಮಿಗೆ ಸ್ಥಳೀಯ ಅರಿವಳಿಕೆ ಬಳಸುವುದು ಪ್ರಮಾಣಿತ ಅಭ್ಯಾಸವಾಗಿದೆ. ಈ ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿದೆ ಮತ್ತು ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಖಗಾರಿಯಾ ಸಿವಿಲ್ ಸರ್ಜನ್ ಅಮರ್ಕಾಂತ್ ಭರವಸೆ ನೀಡಿದ್ದಾರೆ.
ಮೋಸದ ಜಗತ್ತು...ಕಣ್ಣುಜ್ಜಿಕೊಂಡರೆ ಕೈಗೆ ಬಂದ್ಬಿಡ್ತು ಕಣ್ಣು, ನಕಲಿ ಕಣ್ಣು ಹಾಕಿದ್ದ ಜಾರ್ಖಂಡ್ ಆಸ್ಪತ್ರೆ ಸೀಲ್!
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್, 'ಇದು ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆಯಾಗಿದೆ. ಉತ್ತಮ ಆರೋಗ್ಯ ಸೌಲಭ್ಯಗಳನ್ನು ನೀಡದೆ ರಾಜ್ಯ ಸರ್ಕಾರ ಜನರನ್ನು ವಂಚಿಸುತ್ತಿದೆ. ಆಸ್ಪತ್ರೆಗಳಿಗೆ (Hospital) ಭೇಟಿ ನೀಡದ ಅವರಿಗೆ ರಾಜ್ಯದಲ್ಲಿನ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಅರಿವಳಿಕೆಯಂತಹ ಮೂಲಭೂತ ವಸ್ತುಗಳ ಕೊರತೆಯಿದೆ ಎಂದು ತಿಳಿದಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.