Heart Attack Symptoms: ಹೃದಯದ ನೋವು ಮತ್ತು ಹಾರ್ಟ್ ಅಟ್ಯಾಕ್ ಒಂದೇ ಅಲ್ಲ!
ಮಕ್ಕಳು-ವೃದ್ಧರು ಅನ್ನೋ ವಯಸ್ಸಿನ ವ್ಯತ್ಯಾಸವಿಲ್ಲದೆ ಹೆಚ್ಚಿನವರು ಈಗ ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಇಷ್ಟಕ್ಕೂ ಈ ಹೃದಯಾಘಾತ ಎಂದರೇನು? ಹೃದಯದ ನೋವು ಮತ್ತು ಹಾರ್ಟ್ ಅಟ್ಯಾಕ್ ಒಂದೇನಾ? ಈ ಬಗ್ಗೆ ತಜ್ಞರು ಏನಂತಾರೆ ತಿಳಿಯೋಣ.
ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವಾಗಲೇ ಕುಸಿದು ಬಿದ್ದು, ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಾರೆ. ಕೆಲವೊಬ್ಬರಿಗೆ ಕೆಲಸ ಮಾಡುವಾಗ ನೋವು ಬರುತ್ತದೆ, ಕೆಲಸ ಮಾಡುವುದು ನಿಲ್ಲಿಸಿದರೆ ನೋವು ಹೋಗುತ್ತದೆ. ಇದು ಹೃದಯಕ್ಕೆ ಸಂಬಂಧಿಸಿದ ನೋವು, ಆದರೆ ಹೃದಯಾಘಾತ ಅಲ್ಲ. ಹಾಗಿದ್ರೆ ನಿಜವಾಗ್ಲೂ ಹಾರ್ಟ್‌ಅಟ್ಯಾಕ್ ಎಂದರೇನು? ಕಾರ್ಡಿಯಾಕ್ ಸರ್ಜನ್, ಡಾ.ರಾಜೇಶ್ ಟಿ.ಆರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಿಮ್ಮ ಹೃದಯದ ಆರೋಗ್ಯ ನಿಮ್ಮ ಕೈಯಲ್ಲಿ, ಹೃದಯದ ಆರೋಗ್ಯಕ್ಕಿಲ್ಲ ವಯಸ್ಸಿನ ಮಿತಿ