ಶಿಕ್ಷೆ ಮುಗಿದರೂ ಜೈಲಿನಲ್ಲೇ ಇದ್ದ, ದುನಿಯಾ ವಿಜಿ ಅವನನ್ನ ಬಿಡಿಸಿದ್ರು! ಹೊರಗೆ ಬಂದವನು ಮತ್ತಿಬ್ಬರನ್ನ ಕೊಂದ!
ಒಮ್ಮೆ ಕೊಲೆ ಮಾಡಿ ಜೈಲು ಪಾಲಾದವ್ರು ಬದಲಾಗಿ ಬದುಕಿದ ಅದೆಷ್ಟೋ ಉದಾಹರಣೆ ಗಳಿವೆ. ಆದ್ರೆ ಇಂತಹ ಕ್ರಿಮಿಗಳು ಮತ್ತೆ ಮತ್ತೆ ಅದೇ ಚಾಳಿ ಮಾಡಿ ಜೈಲು ಸೇರ್ತಾರೆ. ಇದರಿಂದಾಗಿ ನೆರವಿಗೆ ಬಂದ ದುನಿಯಾ ವಿಜಯ್ ಕೂಡ ಇವತ್ತು ಮುಜುಗರ ಅನುಭವಿಸುವಂತಾಗಿದೆ.
ಬೆಂಗಳೂರು: ಆತ ನಟೋರಿಯಸ್ ಕಿಲ್ಲರ್. ಮೂರು ಮೂರು ಕೊಲೆ ಮಾಡಿ ಜೈಲು ಸೇರಿದ್ದ. ಆದ್ರೆ ಆತನಿಗೆ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಅವಧಿ ಮುಗಿದಿದ್ರೂ ದಂಡದ ಮೊತ್ತವನ್ನ ಕಟ್ಟಲಾಗದೇ ಸೆರೆಮನೆಯಲ್ಲೇ ಇದ್ದುಬಿಟ್ಟಿದ್ದ. ಇನ್ನೂ ಇದರ ಬಗ್ಗೆ ತಿಳಿದ ದುನಿಯಾ ವಿಜಿ ಹಣ ಕೊಟ್ಟು ಬಿಡುಗಡೆ ಗೊಳಿಸಿದ್ರು. ಇನ್ನಾದ್ರು ಬದಲಾಗಿ ಬದುಕ್ತಾನೆ ಅಂತಾ ಅಂದುಕೊಂಡಿದ್ರು.
ಆತ ಕೂಡ ಜೈಲಿನಿಂದ ಬಂದು ಮಾರ್ಕೆಟ್ ನಲ್ಲಿ ಕೊತ್ತಂಬರಿ ಸೊಪ್ಪು ವ್ಯಾಪಾರ ಮಾಡಿಕೊಂಡಿದ್ದ. ಆದ್ರೆ ಇವತ್ತು ಇನ್ನೆರಡು ಹೆಣಗಳನ್ನ ಹಾಕಿ ಜೈಲಿಗೆ ಹೋಗಿದ್ದಾನೆ. ಅಷ್ಟಕ್ಕೂ ಆ ಕಿರಾತಕ ಯಾರು? ಏನಿವನ ಕಥೆ? ಈತನಿಗೂ ದುನಿಯಾ ವಿಜಿಗೂ ಏನು ಲಿಂಕ್. ಎಲ್ಲವನ್ನ ಎಳೆಎಳೆಯಾಗಿ ಬಿಚ್ಚಿಡ್ತೇವೆ ನೋಡಿ.