ನಿರ್ದೇಶಕರು ತಮ್ಮ ಮಾತು ಕೇಳೇ ಬಿಟ್ರು ಎಂದ ನೆಟ್ಟಿಗರಿಗೆ ಮತ್ತೆ ದೊಡ್ಡ ಆಘಾತ! ಆಗಿದ್ದೇ ಬೇರೆ

ತುಳಸಿಯ ಮಗುವನ್ನು ತೆಗೆಸುವಂತೆ ವೈದ್ಯೆ ಹೇಳಿದಾಗ ನೆಟ್ಟಿಗರಿಗೆ ತಾವೇ ಗೆದ್ದ ಅನುಭವವಾಗಿತ್ತು. ಆದರೆ ಇದೀಗ ಸೀರಿಯಲ್​ನಲ್ಲಿ ಆಗಿದ್ದೇ ಬೇರೆ. ಏನದು?
 

Tulasi decided to have child and give to Poorni in Shreerastu Shubhamastu suc

ಅತ್ತ ತುಳಸಿ ಗರ್ಭಿಣಿಯಾಗಿದ್ದಾಳೆ. ಮೊಮ್ಮಕ್ಕಳನ್ನು ನೋಡುವ ಕಾಲದಲ್ಲಿ ಮಗು ಆಗುತ್ತಿರುವುದಕ್ಕೆ ನೆಟ್ಟಿಗರಿಂದ ಇನ್ನಿಲ್ಲದಂತೆ ಟೀಕೆ ಅನುಭವಿಸುತ್ತಿದ್ದಾಳೆ ತುಳಸಿ. ತುಳಸಿಯ ಜೊತೆ ತುಳಸಿ ಪಾತ್ರಧಾರಿ ಸುಧಾರಾಣಿ ಅವರೂ ಟ್ರೋಲ್​ ಆಗಗುತ್ತಿದ್ದಾರೆ. ಒಂದು ಉತ್ತಮ ಸೀರಿಯಲ್​ ಅನ್ನು ಹೀಗೆ ಹಾಳು ಮಾಡಬೇಡಿ ಎಂದು ನಿರ್ದೇಶಕರಿಗೆ ಫ್ಯಾನ್ಸ್​ ದಮ್ಮಯ್ಯ ಎನ್ನುತ್ತಿದ್ದಾರೆ.   ಇಂಥ ವಯಸ್ಸಿನಲ್ಲಿಯೂ ಗರ್ಭ ಧರಿಸಿದರೆ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ಸೀರಿಯಲ್​ನಲ್ಲಿ ತೋರಿಸುತ್ತಿದ್ದಾರೆ, ಅದಕ್ಕೆ ಇಂಥ ಕಮೆಂಟ್ಸ್​ ಹಾಕಬೇಡಿ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಆದರೆ, ಗರ್ಭ ಧರಿಸಿರುವುದು ಯಾವ ಪರಿಯಲ್ಲಿ ಟ್ರೋಲ್​ ಆಯಿತು ಎಂದರೆ ವಾಹಿನಿ ಒಂದು ಹಂತದಲ್ಲಿ ಕಮೆಂಟ್​ ಸೆಕ್ಷನ್​ ಅನ್ನೇ ಆಫ್​ ಮಾಡಬೇಕಾದ ಸ್ಥಿತಿಯನ್ನೂ ತಲುಪಿತ್ತು. ಇದೀಗ ತುಳಸಿ ಮಾಧವ್​ಗೆ ವಿಷಯ ತಿಳಿಸಿದ್ದಾಳೆ. ಆರಂಭದಲ್ಲಿ ಮಾಧವ್​ಗೆ ತುಳಸಿ ಏನು ಹೇಳುತ್ತಿದ್ದಾಳೆ ಎನ್ನುವುದು ತಿಳಿಯದೇ ಹೋದರೂ, ಈಗ ವಿಷಯ ತಿಳಿದು ಖುಷಿ ಪಟ್ಟಿದ್ದಾನೆ. ಅತ್ತ ಸಮರ್ಥ್​ ಕೂಡ ತನ್ನ ಬೆಂಬಲಕ್ಕೆ ನಿಂತಿದ್ದಾನೆ ಎಂದು ತುಳಸಿ ತಪ್ಪಾಗಿ ತಿಳಿದುಕೊಂಡುಬಿಟ್ಟಿದ್ದಾಳೆ.

ಇದೆಲ್ಲಾ ಆದ ಬಳಿಕ ತುಳಸಿ ಮಗುವನ್ನು ಹೆತ್ತರೆ ಆಕೆಯ ಜೀವಕ್ಕೆ ಅಪಾಯವಿದೆ, ಮಗುವನ್ನು ತೆಗೆಸಬೇಕು ಎಂದು ವೈದ್ಯರು ಹೇಳುತ್ತಾರೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ, ನೆಟ್ಟಿಗರೆಲ್ಲಾ ಗೆಲುವಿನ ನಗೆ ಬೀರಿದ್ದರು. ತಾವು ಹಾಕಿದ ಕಮೆಂಟ್ಸ್​ಗೆ ನಿರ್ದೇಶಕರು ಹೆದರೇ ಬಿಟ್ಟರು. ತುಳಸಿಯ ಮಗುವನ್ನು ಅಬಾರ್ಟ್​ ಮಾಡಿಸುತ್ತಾರೆ. ಇನ್ನು ಮುಂದೆ ನೆಮ್ಮದಿಯಿಂದ ಸೀರಿಯಲ್​ ನೋಡಬಹುದು. ಅಂತೂ ತಮ್ಮ ಮಾತು ನಡೆಯಿತು ಎಂದೇ ಅಂದುಕೊಂಡರು. ಆದರೆ ಈಗ ಆಗಿದ್ದೇ ಬೇರೆ.  ಇದೀಗ ತುಳಸಿ ಮಗು ಹೆರಲುಮುಂದಾಗಿದ್ದಾಳೆ. ಆಕೆಗೆ ತನ್ನ ಪ್ರಾಣಕ್ಕಿಂತಲೂ ಮುಖ್ಯವಾಗಿದ್ದು ಪೂರ್ಣಿಯ ಮಡಿಲಿಗೆ ಕಂದನನ್ನು ಕೊಡುವುದು. ತಾನು ಮಗುವನ್ನು ಹೆತ್ತು ಅದನ್ನು ಪೂರ್ಣಿಯ ಮಡಿಲಿಗೆ ಹಾಕುವುದಾಗಿ ಹೇಳಿದ್ದಾಳೆ ತುಳಸಿ.

ಕಾಜೋಲ್ ಕೈಯಲ್ಲಿದ್ದ ಮೊಬೈಲ್​ ದಿಢೀರ್​ ಮಾಯ: ದೇವಿಯ ಶಾಪ್​ ಅಂತಿದ್ದಾರೆ ನೆಟ್ಟಿಗರು!

ಅಲ್ಲಿಗೆ ನೆಟ್ಟಿಗರ ಯೋಚನೆ ಉಲ್ಟಾ ಪಲ್ಟಾ ಆಗಿದೆ. ಮತ್ತೆ ತಕರಾರು ತೆಗೆಯುತ್ತಿದ್ದಾರೆ. ತುಳಸಿಯ ಹೊಟ್ಟೆಯಲ್ಲಿ ಮಗುವನ್ನು ನೋಡಲು ಸಾಧ್ಯವಿಲ್ಲ. ಈ ಸೀರಿಯಲ್​ ಚೆನ್ನಾಗಿಲ್ಲ ಎಂದೆಲ್ಲಾ ಹೇಳುತ್ತಿದ್ದಾರೆ. ಅದೇ ಇನ್ನೊಂದೆಡೆ, ತುಳಸಿ ಮಗುವನ್ನು ಪೂರ್ಣಿಯ ಮಡಿಲಿಗೆ ಹಾಕಿ ಸಾವನ್ನಪ್ಪುತ್ತಾಳಾ ಎನ್ನುವ ಆತಂಕವೂ ಒಂದೆಡೆ ನೆಟ್ಟಿಗರನ್ನು ಕಾಡುತ್ತಿದೆ. ಹೀಗೆ ಆಗುವುದು ಸರಿಯಲ್ಲ ಎಂದೂ ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ತುಳಸಿಯ ಪ್ರೆಗ್ನೆನ್ಸಿ ನೆಟ್ಟಿಗರಿಗೆ ನುಂಗಲಾಗದ ತುತ್ತಾಗಿದೆ. ಪೂರ್ಣಿಗೇ ಮಗುವನ್ನು ಹೆರುವಂತೆ ಮಾಡಿ, ಇಲ್ಲವೇ ಮಗುವನ್ನು ಆಕೆ ಅನಾಥಾಶ್ರಮದಿಂದ ದತ್ತು ಪಡೆದು ಇತರರಿಗೂ ಮಾದರಿಯಾಗುವಂತೆ ಮಾಡಿ ಎನ್ನುವುದು ನೆಟ್ಟಿಗರ ಮಾತು. ಮುಂದೇನಾಗುತ್ತೋ ಕಾದು ನೋಡಬೇಕಿದೆ. 

ಬಿಗ್​ಬಾಸ್​ ಅರ್ಧಕ್ಕೆ ಬಿಟ್ಟು ಓಡಿದ ಸಲ್ಮಾನ್: ಬಿರಿಯಾನಿ ಮೂಲಕ ಖಾನ್​ಗಳ ಸುದೀರ್ಘ ದ್ವೇಷ ಬಗೆಹರಿಸಿದ್ದರು ಬಾಬಾ ಸಿದ್ದಿಕಿ!

 

Latest Videos
Follow Us:
Download App:
  • android
  • ios