Kannada Tv Serial TRP This Week : ಈ ವಾರದ TRP ಹೊರಬಂದಿದೆ. ಧಾರಾವಾಹಿಗಳ‌‌ ಸ್ಥಾನಗಳಲ್ಲಿ ಬದಲಾವಣೆ ಕಂಡು ಬಂದಿದೆ.. ಹಾಗಾದರೆ ಯಾವ ಧಾರಾವಾಹಿಗೆ ಯಾವ ಸ್ಥಾನ ಸಿಕ್ಕಿದೆ? No. 1. ಧಾರಾವಾಹಿ ಯಾವುದು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಧಾರಾವಾಹಿಗಳಲ್ಲಿ (Kananda Serials) ಬರುವ ಒಂದಿಷ್ಟು ರೋಚಕ ಟ್ವಿಸ್ಟ್, ವಿಶೇಷ ಎಪಿಸೋಡ್‌ ಜೊತೆಗೆ ಕ್ರಿಕೆಟ್ (Naveen Suryavanshi, Cricket) ಅಬ್ಬರ, ಸಿನಿಮಾ (Cinema) ಅಥವಾ ಇನ್ನಿತರ ಬೆಳವಣಿಗೆಗಳಿಂದ ಕೂಡ ಸೀರಿಯಲ್‌ ಟಿಆರ್‌ಪಿಯಲ್ಲಿ (TRP) ಆಗಾಗ ಬದಲಾವಣೆ ಆಗುತ್ತಿರುತ್ತದೆ. ಎಲ್ಲ ವಾರವೂ ಎಲ್ಲ ಸೀರಿಯಲ್‌ ಟಿಆರ್‌ಪಿ ಒಂದೇ ರೀತಿ ಇರೋದಿಲ್ಲ. ಸೀರಿಯಲ್‌ಗಳ ಟಿಆರ್‌ಪಿ ಬದಲಾವಣೆ ಸಹಜ. ಹೀಗಾಗಿ ಈ ವಾರ ಕೂಡ ಕನ್ನಡ ಧಾರಾವಾಹಿಗಳ ಟಿಆರ್‌ಪಿಯಲ್ಲಿ ಬದಲಾವಣೆ ಆಗಿದೆ. ಹಾಗಾದರೆ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ?

ಕಲರ್ಸ್‌ ಕನ್ನಡ (Colors Kannada) ಧಾರಾವಾಹಿಗಳು 

ನಂದಗೋಕುಲ (Nandagokula) ಧಾರಾವಾಹಿ ಆರಂಭ ಆದಾಗಿನಿಂದ ಒಳ್ಳೆಯ ಸ್ಥಾನ ಕಾಯ್ದುಕೊಂಡಿದೆ. ಟಿಆರ್‌ಪಿಯಲ್ಲಿ ಈಗ ಕಲರ್ಸ್‌ ಕನ್ನಡ ಸೀರಿಯಲ್‌ಗಳು ಒಳ್ಳೆಯ ಸುಧಾರಣೆ ಕಂಡಿರೋದಂತೂ ಸತ್ಯ. ಇನ್ನೊಂದು ಕಡೆ ಪವಿತ್ರ ಬಂಧನ ಸೀರಿಯಲ್‌ ಟಿಆರ್‌ಪಿ ಏರಿಕೆ ಆಗುತ್ತಲೇ ಇದೆ. ಕತೆಯಲ್ಲಿ ಬದಲಾವಣೆ, ಟ್ವಿಸ್ಟ್‌ ತಂದುಕೊಂಡು ವೀಕ್ಷಕರ ಪ್ರೀತಿಯನ್ನು ಗಳಿಸುತ್ತಿವೆ.

  • ನಂದಗೋಕುಲ ಧಾರಾವಾಹಿ 6.4 TVR 
  • ಗೌರಿ ಕಲ್ಯಾಣ ಧಾರಾವಾಹಿ 6.1 TVR 
  • ಗಂಧದಗುಡಿ ಧಾರಾವಾಹಿ 6.2 TVR 
  • ಮುದ್ದು ಸೊಸೆ ಧಾರಾವಾಹಿ 6.1 TVR 
  • ಪವಿತ್ರಬಂಧನ ಧಾರಾವಾಹಿ 6.1 TVR

ಜೀ ಕನ್ನಡ (Zee Kannada) ಧಾರಾವಾಹಿಗಳು 

ಅಮೃತಧಾರೆ (Amrutadhare) ಹಾಗೂ ಕರ್ಣ (Karna) ಧಾರಾವಾಹಿಗಳಲ್ಲಿ ಸ್ಪರ್ಧೆ ಇದ್ದೇ ಇದೆ. ಈಗ ಅಣ್ಣಯ್ಯ (Annayya) ಸೀರಿಯಲ್‌ ಕೂಡ ಟಿಆರ್‌ಪಿಯಲ್ಲಿ ಏರಿಕೆ ಕಂಡಿದೆ. ಒಟ್ಟಿನಲ್ಲಿ ಈ ಸೀರಿಯಲ್‌ಗಳು ಒಂದಿಷ್ಟು ಮೆಗಾ ಎಪಿಸೋಡ್‌ಗಳನ್ನು ಕೂಡ ಕೊಡುತ್ತಿವೆ. 

  • ಅಮೃತಧಾರೆ ಧಾರಾವಾಹಿ 5.9 
  • ಅಣ್ಣಯ್ಯ ಧಾರಾವಾಹಿ 6.6 
  • ಕರ್ಣ ಧಾರಾವಾಹಿ 5.8 
  • ಲಕ್ಷ್ಮೀ ನಿವಾಸ ಧಾರಾವಾಹಿ 6.0 
  • ಆದಿಲಕ್ಷ್ಮೀ ಧಾರಾವಾಹಿ 5.3

ಸ್ಟಾರ್‌ ಸುವರ್ಣ (Star Suvarna) ಧಾರಾವಾಹಿಗಳು 

ಸ್ವಮೇಕ್‌ ಕಥೆಯಿಂದ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿ ಒಳ್ಳೆಯ ಟಿಆರ್‌ಪಿ ಕಾಯ್ದುಕೊಂಡು ಬಂದಿದೆ. ವಿಶೇಷ ಪಾತ್ರಗಳ ಮೂಲಕ ಈ ಸೀರಿಯಲ್‌ ಟಿಆರ್‌ಪಿ ಒಳ್ಳೆಯ ಸ್ಥಾನ ಕಾಯ್ದುಕೊಂಡಿದೆ. ಇತ್ತೀಚೆಗೆ ಹೊಸ ಧಾರಾವಾಹಿಗಳು ಕೂಡ ರೋಚಕ ಕಥೆಗಳಿಂದ ಒಳ್ಳೆಯ ಟಿಆರ್‌ಪಿ ಪಡೆಯುತ್ತಿವೆ. 

  • ನಿನ್ನ ಜೊತೆ ನನ್ನ ಕಥೆ ಧಾರಾವಾಹಿ 4.0 
  • ಆಸೆ ಧಾರಾವಾಹಿ 3.3 
  • ವಸುದೈವ ಕುಟುಂಬ ಧಾರಾವಾಹಿ 3.1

ಒಟ್ಟಿನಲ್ಲಿ, ಒಂದಿಷ್ಟು ಧಾರಾವಾಹಿಗಳ ಸ್ಥಾನ ಬದಲಾವಣೆ ಆಗಿದೆ. ಬಿಗ್ ಬಾಸ್ ಜೊತೆಗೆ ಇನ್ನೂ ಕೆಲ ಕಾರಣದಿಂದ ಕೆಲ ಧಾರಾವಾಹಿಗಳು ಮುಕ್ತಾಯ ಆಗಲಿವೆ, ಅಷ್ಟೇ ಅಲ್ಲದೆ ಹೊಸ ಧಾರಾವಾಹಿಗಳ ಪ್ರೋಮೋ ಕೂಡ ಬಂದಿದ್ದು ಸಾಕಷ್ಟು ರೋಚಕತೆ ಮೂಡಿಸಿದೆ.