Bengalurina Aa Ondu Ghatane:  ‘ಬೆಂಗಳೂರಿನ ಆ ಒಂದು ಘಟನೆ’ ಯುಟ್ಯೂಬ್‌ನಲ್ಲಿ ರಿಲೀಸ್‌ ಆಗಲು ರೆಡಿಯಾಗಿದೆ. ನಮ್ಮ ಕುಡ್ಲದ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಇದೀಗ ನಿರ್ಮಾಣವಾಗಿದೆ. ಇದೊಂದು ಕ್ರೈಂ ಥ್ರಿಲ್ಲರ್ ವೆಬ್ ಸರಣಿಯಾಗಿದೆ. ಇದರಲ್ಲಿ ನಾಲ್ಕು ಸಂಚಿಕೆಗಳಿವೆ. 

ಯುಟ್ಯೂಬ್‌ನಲ್ಲಿ ( ಬೆಂಗಳೂರಿನ ಆ ಒಂದು ಘಟನೆ ) Bengalurina Aa Ondu Ghatane ಎಂಬ ವೆಬ್ ಸಿರೀಸ್‌ ರಿಲೀಸ್‌ ಆಗಿದೆ. ಕಥೆ ಅ*ತ್ಯಾ*ಚಾರ ಪ್ರಕರಣವೊಂದರ ತನಿಖೆಯನ್ನು ಆಧರಿಸಿದ್ದು, ನಾನ್-ಲೀನಿಯರ್ ಶೈಲಿಯಲ್ಲಿದೆ. ತನಿಖೆ ಮಾಡುತ್ತ ಹೋದಂತೆ ಎದುರಾಗುವ ಅನಿರೀಕ್ಷಿತ ತಿರುವುಗಳು, ರೋಚಕ ಬೆಳವಣಿಗೆ ಜೊತೆಗೆ ಕುತೂಹಲ ಹೆಚ್ಚಾಗಲಿದೆ. ಮನರಂಜನೆ ಜೊತೆಗೆ, ಸಮಾಜಕ್ಕೆ ಅಗತ್ಯವಾದ ಸಂದೇಶವೊಂದನ್ನು ತಲುಪಿಸಲು ರೆಡಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಿನಿಮಾ ಹಿಂದೆ ಇರೋರು ಯಾರು?

ಈ ಯೋಜನೆಯ ಕಥೆ, ಚಿತ್ರಕಥೆ, ಸಂಭಾಷಣೆ, ಸಂಪಾದನೆ, ವಸ್ತ್ರ ವಿನ್ಯಾಸ, ಕಲಾ ವಿನ್ಯಾಸ, ಉಪಶೀರ್ಷಿಕೆಗಳು ಹಾಗೂ ನಾಯಕ ನಟನ ಜವಾಬ್ದಾರಿಯನ್ನು ಗುರುದತ್ ನಿರ್ವಹಿಸಿದ್ದಾರೆ. ಒಂದೇ ಯೋಜನೆಯಲ್ಲಿ ಹಲವು ವಿಭಾಗಗಳನ್ನು ಹೊತ್ತುಕೊಂಡಿರುವ ಅವರ ಶ್ರಮ ಈ ವೆಬ್ ಸರಣಿಯ ಪ್ರಮುಖ ಆಕರ್ಷಣೆಯಾಗಿದೆ.

ಡಿಸಿ ಅಮಿತ್ ಕುಮಾರ್ ಈ ವೆಬ್ ಸರಣಿಯ ಛಾಯಾಗ್ರಹಣ ಮಾಡಿದ್ದಾರೆ. ಸತ್ಯ ರಾಧಾಕೃಷ್ಣ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಗುರುದತ್ ಹಾಗೂ ದೀಪಕ್ ಹೆಗ್ಡೆ ಸಂಕಲನ ನಿರ್ವಹಿಸಿದ್ದಾರೆ.

ಗುರುದತ್ ನಾಯಕ, ಮೇಘನಾ ಕಾಂಚನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ದೀಪಕ್ ಹೆಗ್ಡೆ, ರೋಹಿತ್ ಆರ್. ನಾಯಕ್, ಸತ್ಯ ರಾಧಾಕೃಷ್ಣ, ಮನೋಹರ್ ಎನ್., ಮಂಜುನಾಥ್ ಶ್ರೀನಿವಾಸ್ ಶಿವಕುಮಾರ್, ಸ್ವಪ್ನಶ್ರೀ ಪ್ರಸಾದ್, ಸತೀಶ್ ಬಡಿಗೇರ್ ಮುಂತಾದವರು ನಟಿಸಿದ್ದಾರೆ.

ಬಹುತೇಕ ಎಲ್ಲ ಕಲಾವಿದರು ರಂಗಭೂಮಿ, ಕಿರುಚಿತ್ರಗಳ ಹಿನ್ನೆಲೆಯಿಂದ ಬಂದವರು ಇಲ್ಲಿ ನಟಿಸಿದ್ದಾರೆ. ಇದರಿಂದ ನಟನೆ ಇನ್ನಷ್ಟು ಚೆನ್ನಾಗಿ ಬಂದಿದೆ. ಬೆಂಗಳೂರು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸರಣಿ ಶೂಟಿಂಗ್‌ ಮಾಡಲಾಗಿದೆ. ಪುಟ್ಟಣ್ಣ ಕಣಗಾಲ್ ಸ್ಟುಡಿಯೋದಲ್ಲಿ ನಿರ್ಮಿಸಲಾದ ಪೊಲೀಸ್ ಠಾಣೆ ಸೆಟ್‌ನಲ್ಲಿ ಕೆಲ ಶೂಟಿಂಗ್‌ ಆಗಿದೆ.

ಜೂನ್ 26, 2026ರಂದು ಈ ಸಿರೀಸ್‌ನ ಎರಡು ಸರಣಿ ರಿಲೀಸ್‌ ಆಗಲಿದೆ. ಜುಲೈ 3, 2026ರಂದು ಅಂತಿಮ ಎರಡು ಸಂಚಿಕೆಗಳು ಬಿಡುಗಡೆಯಾಗಲಿವೆ. ನಮ್ಮ ಕನ್ನಡ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸಿರೀಸ್‌ ರಿಲೀಸ್‌ ಆಗಿದೆ.