ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ಮೂಲಕ ಮೋಡಿ ಮಾಡಿದ ಸುಂದರಿ ಸ್ಪಂದನಾ ಸೋಮಣ್ಣ, ಬಿಗ್ ಬಾಸ್ ಮೂಲಕ ಯುವಜನರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಬಿಗ್ ಬಾಸ್ ಸೀಸನ್ 12 ಮುಗಿದ ನಂತರ ಸ್ಪಂದನಾ, ಒಂದೆರಡು ಧಾರಾವಾಹಿಗಳಲ್ಲಿ ಅತಿಥಿ ಪಾತ್ರದಲ್ಲಿ ವಿಸಿಟ್ ಕೊಟ್ಟಿದ್ದು ಬಿಟ್ಟರೆ ಪೂರ್ಣಪ್ರಮಾಣದಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ.
ಇದೀಗ ಸ್ಪಂದನಾ ಬಿಗ್ ಬಾಸ್ ಸೂಟ್ ಕೇಸ್ ಹಿಡಿದುಕೊಂಡು ಹೊರಟು ನಿಂತಿರುವ ಫೋಟೊಗಳನ್ನು ಶೇರ್ ಮಾಡಿದ್ದು, ಬಿಗ್ ಬಾಸ್ ಮನೆಗಂತೂ ಹೋಗ್ತಿಲ್ಲ, ಆದ್ರೆ ಹೋಗ್ತಿರೋದೆಲ್ಲಿಗೆ?
ಸಿಂಪಲ್ ಬ್ಯೂಟಿ ಸ್ಪಂದನಾ ಸೋಮಣ್ಣ ಇದೇ ಮೊದಲ ಬಾರಿ ವಿದೇಶ ಯಾತ್ರೆ ಮಾಡುತ್ತಿದ್ದು, ತಮ್ಮ ಮೊದಲ ವಿದೇಶಿ ಫ್ಲೈಟ್ ಹತ್ತುವ ಸಂಭ್ರಮವನ್ನು ನಟಿ ಫೋಟೊಗಳ ಜೊತೆ ವ್ಯಕ್ತಪಡಿಸಿದ್ದಾರೆ.
I took my first International Flight! and it’s “EUROPE” babyyyy! ಎಂದು ಕ್ಯಾಪ್ಶನ್ ಹಾಕುವ ಮೂಲಕ ಏರ್ ಪೋರ್ಟ್ ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ.
ಸ್ಪಂದನಾ ಹಂಚಿಕೊಂಡಿರುವ ಫೋಟೊಗೆ ಕಾಮೆಂಟ್ ಮಾಡಿರುವ ನಟಿ, ನಿರೂಪಕಿ ಹಾಗೂ ಸಹಸ್ಪರ್ಧಿ ಜಾನ್ವಿ ಇದು ಬಿಗ್ ಬಾಸ್ ಸೂಟ್ ಕೇಸ್ ಎಂದು ಹೇಳಿ ನಕ್ಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಯಾವುದೇ ಗೇಮ್ ಆಡದೇ ಕೊನೆಯ ವಾರದವರೆಗೂ ಬಂದಿದ್ದ ಕಳ್ಳ ಪುಟ್ಟಿ ಸ್ಪಂದನಾಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ಕಿರುತೆರೆಯಲ್ಲಿ ಹೊಸ ಹೊಸ ಸೀರಿಯಲ್ ಗಳು ಆರಂಭವಾದರೂ ನಟಿ ಯಾವುದೇ ಸೀರಿಯಲ್ ಗಳಲ್ಲಿ ಕಾಣಿಸಲೇ ಇಲ್ಲ, ಅಭಿಮಾನಿಗಳು ನಟಿಯ ಕಂ ಬ್ಯಾಕ್’ಗಾಗಿ ಕಾಯುತ್ತಿದ್ದಾರೆ.
ವಿಯೆಟ್ನಾಂನಲ್ಲಿ ಜೋಡಿ ಹಕ್ಕಿಗಳಂತೆ ಜೊತೆಯಾಗಿ ಹಾರಾಡಿದ ಶಿಶಿರ್- ಐಶ್ವರ್ಯ
ನವಿಲುಗರಿ ಕಾಂಟ್ರವರ್ಸಿ ಬಳಿಕ ಮತ್ತೊಮ್ಮೆ ಮಿಂಚಿದ ನಿವೇದಿತಾ ಗೌಡ
ಭಾರತವೇ ಸ್ವರ್ಗ, ವಿದೇಶ ಯಾಕೆ? ವೈಷ್ಣವಿ ಗೌಡ ಪೋಸ್ಟ್‌ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ!
ಕಿಶನ್ ಬಿಳಗಲಿ ತೋಳಲ್ಲಿ ಬಂಧಿಯಾದ ಕೃಷಿ ತಾಪಂಡ… ದೃಷ್ಟಿ ತೆಗೆದ ಫ್ಯಾನ್ಸ್