‘ಬಿಗ್‌ ಬಾಸ್’‌ ತ್ರಿವಿಕ್ರಮ್‌ ಹಾಗೂ ಪ್ರತಿಮಾ ನಟನೆಯ ‘ಮುದ್ದು ಸೊಸೆ’ ಧಾರಾವಾಹಿ ಪ್ರಸಾರದ ದಿನಾಂಕ ರಿವೀಲ್‌ ಮಾಡಿದೆ. 

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮುಕ್ತಾಯ ಆಗಲಿದೆ ಎಂದು ಕಲರ್ಸ್‌ ಕನ್ನಡ ವಾಹಿನಿಯೇ ಅಧಿಕೃತವಾಗಿ ಹೇಳಿಕೊಂಡಿದೆ. ನಿತ್ಯ 7.30ಗೆ ಈ ಸೀರಿಯಲ್‌ ಪ್ರಸಾರ ಆಗುತ್ತಿದ್ದು, ಈ ಸೀರಿಯಲ್‌ ಜಾಗಕ್ಕೆ 'ಮುದ್ದು ಸೊಸೆ' ಎಂಟ್ರಿ ಕೊಡಲಿದೆಯಂತೆ. 

ತ್ರಿವಿಕ್ರಮ್‌-ಪ್ರತಿಮಾ ಧಾರಾವಾಹಿ! 
ಹೌದು, 'ಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋ ರನ್ನರ್‌ ಅಪ್‌ ತ್ರಿವಿಕ್ರಮ್‌ ಅವರು ಹೀರೋ ಆಗಿ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ. ಇವರಿಗೆ ನಾಯಕಿಯಾಗಿ ‘ಅಂತರಪಟ’, ‘ದೊರೆಸಾನಿ’ ಖ್ಯಾತಿಯ ಪ್ರತಿಮಾ ಕಾಣಿಸಿಕೊಳ್ತಿದ್ದಾರೆ. ಈ ಧಾರಾವಾಹಿ ಪ್ರಸಾರದ ಬಗ್ಗೆ ಕಲರ್ಸ್‌ ಕನ್ನಡ ವಾಹಿನಿಯೇ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. “ಮನಸ್ತುಂಬಾ ಓದು, ಮನಸೊಪ್ಪದ ಮದುವೆ, ಇವಳೇ ಮುದ್ದು ಸೊಸೆ! ಏಪ್ರಿಲ್ 14ರಿಂದ ರಾತ್ರಿ 7:30ಗೆ ಪ್ರಸಾರ ಆಗಲಿದೆ” ಎಂದು ವಾಹಿನಿ ಹೇಳಿದೆ.

‌ಕುಚಿಕು ಗೆಳೆಯ Bigg Boss ರಂಜಿತ್ ನಿಶ್ಚಿತಾರ್ಥಕ್ಕೆ ತ್ರಿವಿಕ್ರಮ್‌ ಯಾಕೆ ಬರಲೇ ಇಲ್ಲ? ಇಲ್ಲಿದೆ ಅಸಲಿ ಸತ್ಯ!

ಈ ಧಾರಾವಾಹಿ ಕಥೆ ಏನು?
ʼಮುದ್ದು ಸೊಸೆʼ ಧಾರಾವಾಹಿಯಲ್ಲಿ ನಾಯಕ ಭದ್ರ, ನಾಯಕಿ ವಿದ್ಯಾ ಮದುವೆ ನಡೆಯುತ್ತಿರುತ್ತದೆ. ವಿದ್ಯಾ ಆಗ ಹತ್ತನೇ ಕ್ಲಾಸ್‌ ಓದುತ್ತಿರುತ್ತಾಳೆ. ಮದುವೆ ಇಷ್ಟ ಇಲ್ಲ ಅಂದ್ರೂ ಕೂಡ ಅವಳ ಮನೆಯಲ್ಲಿ ಯಾರೂ ಕೇಳೋದಿಲ್ಲ. ಹೀಗಾಗಿ ಅವಳು ಮದುವೆಯ ದಿನವೇ ಪೊಲೀಸರಿಗೆ ಫೋನ್‌ ಮಾಡಿ, ಈ ಊರಿನಲ್ಲಿ ಬಾಲ್ಯವಿವಾಹ ಆಗುತ್ತಿದೆ ಎಂದು ಮಾಹಿತಿ ಕೊಟ್ಟಿರ್ತಾಳೆ. ಎಲ್ಲರೂ ಮದುವೆ ಆಗುತ್ತದೆ ಅಂತ ಕಾಯುತ್ತಿರುತ್ತಾರೆ, ಈ ಎಲ್ಲ ಸಂಭ್ರಮದ ಮಧ್ಯೆ ಇನ್ನೇನು ಹೀರೋ, ಹೀರೋಯಿನ್‌ಗೆ ತಾಳಿ ಕಟ್ಟಬೇಕು ಎಂದುಕೊಂಡಿರ್ತಾನೆ. ಆಗ ಪೊಲೀಸರು ಎಂಟ್ರಿ ಕೊಟ್ಟು ಹೀರೋ ತಂದೆಗೆ ಅವಮಾನ ಮಾಡ್ತಾರೆ.

ಆಗ ಹೀರೋ ತಂದೆ ಪೊಲೀಸರಿಗೆ ಕೈಮಾಡಲು ಮುಂದಾಗುತ್ತಾನೆ. ಅಧಿಕಾರದಲ್ಲಿದ್ದ ಪೊಲೀಸರಿಗೆ ಹೊಡೆಯಲು ಮುಂದಾಗಿದ್ದಕ್ಕೆ ಹೀರೋ ತಂದೆಯನ್ನು ವಶಕ್ಕೆ ಪಡೆಯುತ್ತಾರೆ. ಆಗ ಹೀರೋಗೆ ಬೇಸರ ಆಗುತ್ತದೆ. ಬಾಲ್ಯವಿವಾಹ ಆಗ್ತಿದೆ ಅಂತ ಪೊಲೀಸರಿಗೆ ವಿಷಯ ತಿಳಿಸಿ, ನನ್ನ ಅಪ್ಪನಿಗೆ ಅವಮಾನ ಮಾಡಿದೋರನ್ನು ಸುಮ್ಮನೆ ಬಿಡಲ್ಲ ಅಂತ ಹೀರೋ ಶಪಥ ಮಾಡುತ್ತಾನೆ. ವಿದ್ಯಾ ಮಾತ್ರ ಏನೂ ಗೊತ್ತಿಲ್ ಎನ್ನೋ ರೀತಿ ಸುಮ್ಮನೆ ಇರ್ತಾಳೆ.ಆಗ ವಿದ್ಯಾ ಮುಖ ನೋಡಿ ಹೀರೋ ಭದ್ರ, “ಈ ಜನ್ಮಕ್ಕೆ ಇವಳೇ ನನ್ನ ಹೆಂಡ್ತಿ” ಅಂತ ಹೇಳ್ತಾನೆ. 

ಚಿರಂಜೀವಿಗೆ ಎಂತಹ ಸ್ಥಿತಿ ಬಂತು ನೋಡಿ, ನಿರ್ದೇಶಕ ತ್ರಿವಿಕ್ರಮ್ ಬಳಿ ಎವರೇಜ್ ಸಿನಿಮಾ ಚಾನ್ಸ್ ಕೇಳಿದ ಮೆಗಾಸ್ಟಾರ್!

ಈಗ ಇರುವ ಪ್ರಶ್ನೆ ಏನು? 
ಪೊಲೀಸರಿಗೆ ಫೋನ್‌ ಮಾಡಿದ್ದು, ವಿಷಯ ತಿಳಿಸಿದ್ದು ಇದೇ ವಿದ್ಯಾ ಅಂತ ಹೀರೋಗೆ ಗೊತ್ತಾದರೆ ಏನಾಗಲಿದೆ? ಮುಂದೆ ವಿದ್ಯಾ, ಭದ್ರ ಮದುವೆ ಆಗತ್ತಾ? ಒಂದು ವೇಳೆ ಈ ಜೋಡಿ ಮದುವೆಯಾದರೆ ವಿದ್ಯಾಗೆ ಏನೆಲ್ಲ ಸಮಸ್ಯೆ, ಸವಾಲು ಬರಬಹುದು? ವಿದ್ಯಾ ಮುಂದೆ ಓದುತ್ತಾಳಾ ಎಂದು ಕಾದು ನೋಡಬೇಕಿದೆ. 

View post on Instagram