ʼಬಿಗ್‌ ಬಾಸ್‌ ಕನ್ನಡʼ ಮನೆಯಲ್ಲಿ ತ್ರಿವಿಕ್ರಮ್‌, ರಂಜಿತ್ ಅವರು ದೋಸ್ತಿಗಳೆಂದು ಎಲ್ಲರಿಗೂ ಗೊತ್ತಿತ್ತು. ಆದರೆ ರಂಜಿತ್ ನಿಶ್ಚಿತಾರ್ಥದಲ್ಲಿ ತ್ರಿವಿಕ್ರಮ್ ಮಾತ್ರ ಗೈರು ಹಾಕಿದ್ದರು. ಇದಕ್ಕೆ ಕಾರಣ ಏನು? 

‘ಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋನಲ್ಲಿ ತ್ರಿವಿಕ್ರಮ್‌, ರಂಜಿತ್‌ ಸ್ನೇಹ ಸಿಕ್ಕಾಪಟ್ಟೆ ಹೈಲೈಟ್‌ ಆಗಿತ್ತು. ʼಪದ್ಮಾವತಿʼ ಧಾರಾವಾಹಿಯಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ದೊಡ್ಮನೆಯಲ್ಲಿ ಕೂಡ ಈ ಜೋಡಿಯ ಸ್ನೇಹ ಇನ್ನಷ್ಟು ಸ್ಟ್ರಾಂಗ್‌ ಆಯ್ತು. ಆದರೆ ರಂಜಿತ್‌ ನಿಶ್ಚಿತಾರ್ಥಕ್ಕೆ ತ್ರಿವಿಕ್ರಮ್‌ ಗೈರಾಗಿದ್ದರು. ಇದಕ್ಕೆ ಕಾರಣ ಏನು ಎಂದು ರಂಜಿತ್ ಅವರು ಹೇಳಿಕೊಂಡಿದ್ದಾರೆ.

ತ್ರಿವಿಕ್ರಮ್‌ ಯಾಕೆ ಬಂದಿಲ್ಲ? 
“ಖಾಸಗಿಯಾಗಿ ನಾನು ನಿಶ್ಚಿತಾರ್ಥ ಮಾಡಿಕೊಳ್ಳೋಣ ಎಂದುಕೊಂಡಿದ್ದೆ. ಆದರೆ ಇತ್ತೀಚೆಗೆ ಪರಿಚಯ ಆಗಿರೋರನ್ನು ಕರೆದಿದ್ದೆ. ನಾನು ಎಂಗೇಜ್‌ ಆಗ್ತಿದೀನಿ ಅಂತ ಹೇಳಿದಾಗ, ಓಹ್‌ ಅತ್ತಿಗೆ ರೆಡಿ ಆಗಿಬಿಟ್ರಾ? ನಾನು ಬರ್ತೀನಿ ಅಂತ ಹೇಳಿದ್ದ. ಇನ್ನೂ ನಾನು ಮದುವೆ ಆಗೋ ಮಾನಸಾ ಕೂಡ ತ್ರಿವಿಕ್ರಮ್‌ರನ್ನು ಭೇಟಿಯಾಗಿಲ್ಲ. ನಮ್ಮಿಬ್ಬರನ್ನು ಒಟ್ಟಿಗೆ ನೋಡಬೇಕು ಅಂತ ಅವಳು ಆಸೆಪಡುತ್ತಿದ್ದಾಳೆ. ಅದಿನ್ನೂ ಆಗಿಲ್ಲ. ತ್ರಿವಿಕ್ರಮ್‌ ಹೊಸ ಧಾರಾವಾಹಿ ಒಪ್ಕೊಂಡಿದ್ದಕ್ಕೆ ನಮ್ಮ ನಿಶ್ಚಿತಾರ್ಥಕ್ಕೆ ಬಂದಿಲ್ಲ” ಎಂದು ರಂಜಿತ್‌ ಅವರು ʼಬಾಸ್‌ ಟಿವಿʼಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

BBK 11: ತ್ರಿವಿಕ್ರಮ್‌, ರಶ್ಮಿಕಾ ಮಂದಣ್ಣ ಜೊತೆಗಿರೋ ಫೋಟೋ ವೈರಲ್!‌ ಏನಪ್ಪಾ ಇದು ಹೊಸ ಕಥೆ?

ನನ್ನ, ತ್ರಿವಿಕ್ರಮ್‌ ಸ್ನೇಹ ಅಷ್ಟು ಸ್ಟ್ರಾಂಗ್‌ ಯಾಕೆ? 
“ತ್ರಿವಿಕ್ರಮ್‌ ನನ್ನ ಜೊತೆ ತುಂಬ ಬ್ಲೆಂಡ್‌ ಆಗ್ತಾನೆ. ನನ್ನ ಜಾನರ್‌ಗೆ ಅವನು ಸೆಟ್‌ ಆಗ್ತಾನೆ. ನಾವು ಎಷ್ಟೇ ಬೆಳೆದರೂ ಕೂಡ ಬಂದಿರೋ ಹಾದಿ ಮರೆಯಬಾರದು. ನಾವಿಬ್ಬರೂ ದೊಡ್ಮನೆಯಲ್ಲಿ ಹಳೆಯ ದಿನಗಳನ್ನು ಮಾತನಾಡುತ್ತಿದ್ದೆವು. ಆ ಸಿನಿಮಾ ಆಗಿಲ್ಲ, ಇದಾಗಿಲ್ಲ, ಎರಡು ವರ್ಷದಿಂದ ಕಾಲಿ ಕೂತಿದ್ದೆ, ಅಷ್ಟು ಕಷ್ಟಪಟ್ಟೆ ಅಂತ ತ್ರಿವಿಕ್ರಮ್‌ ಹೇಳಿದ್ದ. ಆಗ ನಾನು ಚಿತ್ರರಂಗದಲ್ಲಿ ಇರೋದರಿಂದ ತಾಳ್ಮೆ ಬೇಕು. ಬಿಗ್‌ ಬಾಸ್‌ ಸಿಕ್ಕಿದೆ, ಈ ಹೆಸರು ತಗೊಂಡು ಮುಂದಕ್ಕೆ ಹೋಗು ಅಂತ ಹೇಳಿದ್ದೆ. ಇಬ್ಬರೂ ಒಟ್ಟಿಗೆ ಕಾಫಿ ಕುಡಿಯುತ್ತಿದ್ದೆವು, ವರ್ಕೌಟ್‌ ಮಾಡುತ್ತಿದ್ದೆವು” ಎಂದು ತ್ರಿವಿಕ್ರಮ್‌ ಬಗ್ಗೆ ರಂಜಿತ್‌ ಹೇಳಿದ್ದಾರೆ.

ಒಟ್ಟಿಗೆ ಸಿನಿಮಾ ಮಾಡ್ತೀವಿ! 
“ಬೆಳಗ್ಗೆ ನನ್ನ ಜೊತೆ ಮಾತನಾಡುತ್ತ, ಅಪ್ಪನ ದೇಹವನ್ನು ಎತ್ತಿಕೊಂಡು ಬಂದಿದ್ದೆ. ಆಗಲೂ ನಾನು ಅತ್ತಿರಲಿಲ್ಲ ಅಂತ ಹೇಳಿದ್ದ. ರಾತ್ರಿ ನನಗೋಸ್ಕರ ಅತ್ತಿದ್ದನು. ಇದನ್ನೂ ನಾನು ನೋಡಿದ್ದೆ. ಒಳ್ಳೆಯ ಸಿನಿಮಾ ಸಿಕ್ಕರೆ ತ್ರಿವಿಕ್ರಮ್‌ ಹೀರೋ ಆಗಲಿ, ನಾನು ವಿಲನ್‌ ಆಗ್ತೀನಿ ಅಂತ ಹೇಳಿದ್ದೀನಿ. ಈಗ ಸೀರಿಯಲ್‌ ಸಿಗ್ತು, ಮಾಡ್ತೀನಿ ಅಂತ ತ್ರಿವಿಕ್ರಮ್‌ ಹೇಳಿದಾಗ ನಾನು ಮಾಡು ಅಂದೆ. ಮುಂದೆ ಒಳ್ಳೆಯ ಅವಕಾಶ ಸಿಕ್ಕರೆ ಇಬ್ಬರೂ ಸಿನಿಮಾ ಮಾಡ್ತೀವಿ” ಎಂದು ರಂಜಿತ್‌ ಹೇಳಿದ್ದಾರೆ.

BBK 11: ಭವ್ಯಾಗೊಂದೇ ಅಲ್ಲ, ಅನುಗೆ ಐ ಲವ್‌ ಯು ಅಂದಿದ್ದೆ: ನಟ ತ್ರಿವಿಕ್ರಮ್‌ ಮುಕ್ತ ಮಾತು!

ನಟ ರಂಜಿತ್‌-ಮಾನಸಾ ನಿಶ್ಚಿತಾರ್ಥ! 
ಇತ್ತೀಚೆಗೆ ʼಅವನು ಮತ್ತೆ ಶ್ರಾವಣಿʼ, ʼಶನಿʼ ಧಾರಾವಾಹಿ ನಟ ರಂಜಿತ್‌ ಅವರು ಮಾನಸಾ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹೋಟೆಲ್‌ನಲ್ಲಿ ಈ ಎಂಗೇಜ್‌ಮೆಂಟ್‌ ನಡೆದಿದೆ. ಶಿಶಿರ್‌ ಶಾಸ್ತ್ರೀ, ಮೋಕ್ಷಿತಾ ಪೈ, ಐಶ್ವರ್ಯಾ ಶಿಂಧೋಗಿ, ಭವ್ಯಾ ಗೌಡ ಅವರು ಈ ನಿಶ್ಚಿತಾರ್ಥದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದರು. ಮಾನಸಾ ಅವರು ಫ್ಯಾಷನ್‌ ಡಿಸೈನರ್‌ ಎನ್ನಲಾಗಿದೆ. ಬಿಗ್‌ ಬಾಸ್‌ ಮನೆಯಿಂದ ಆಚೆ ಬರುತ್ತಿದ್ದಂತೆ ರಂಜಿತ್‌, ಮಾನಸಾ ನಡುವಿನ ಸ್ನೇಹ ಗಟ್ಟಿಯಾಗಿ, ಪ್ರೀತಿಯಾಗಿ ಅರಳಿದೆ. ಆದಷ್ಟು ಬೇಗ ಈ ಜೋಡಿ ಮದುವೆ ಆಗಲಿದೆಯಂತೆ. 

YouTube video player