- Home
- Entertainment
- TV Talk
- Karna Serial: ಆಸ್ಪತ್ರೆ ಸೀಜ್! ನಿತ್ಯಾಗೆ ಹೊಟ್ಟೆ ಬಂದಿದ್ರೆ ಹೀಗೆ ಆಗ್ತಿರಲಿಲ್ಲ ಎನ್ನೋದಾ ನೆಟ್ಟಿಗರು?
Karna Serial: ಆಸ್ಪತ್ರೆ ಸೀಜ್! ನಿತ್ಯಾಗೆ ಹೊಟ್ಟೆ ಬಂದಿದ್ರೆ ಹೀಗೆ ಆಗ್ತಿರಲಿಲ್ಲ ಎನ್ನೋದಾ ನೆಟ್ಟಿಗರು?
ವಿಲನ್‌ಗಳ ಕುತಂತ್ರದಿಂದ ಕರ್ಣ ಜೈಲು ಸೇರಿದ್ದು, ಆತನ ಆಸ್ಪತ್ರೆ ಸೀಜ್ ಆಗಿದೆ. ಒಂದೆಡೆ ಕರ್ಣನನ್ನು ಉಳಿಸಲು ಬೇರೆ ಸೀರಿಯಲ್ಗಳ ನಾಯಕಿಯರು ಬರುತ್ತಿದ್ದರೆ, ಮತ್ತೊಂದೆಡೆ ಗರ್ಭಿಣಿ ನಿತ್ಯಾಳಿಗೆ ಇನ್ನೂ ಹೊಟ್ಟೆ ಬಂದಿಲ್ಲವೇಕೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ವಿಲನ್‌ಗಳ ಮೇಲುಗೈ
ಕರ್ಣ ಸೀರಿಯಲ್ (Karna Serial)ನಲ್ಲಿ ರಮೇಶ್, ನಯನತಾರಾ, ಸಂಜಯ್ ಎಲ್ಲರ ಕುತಂತ್ರದಿಂದಾಗಿ ಕರ್ಣ ಜೈಲು ಸೇರಿದ್ದಾರೆ. ಆಸ್ಪತ್ರೆಯಲ್ಲಿ ಎಕ್ಸ್ಪೈರಿ ಡೇಟ್ ಇರೋ ಮಾತ್ರೆ ಇಟ್ಟು ಕುತಂತ್ರಿಗಳು ಹೀಗೆ ಮಾಡಿದ್ದಾರೆ.
ಆಸ್ಪತ್ರೆ ಸೀಜ್
ವಿಲನ್ಸ್ ಕೈ ಮೇಲಾಗಿದೆ. ಅದೇ ಇನ್ನೊಂದೆಡೆ, ಆಸ್ಪತ್ರೆಯ ಲೈಸೆನ್ಸ್ ಕಿತ್ತು ಹಾಕಲಾಗಿದ್ದು, ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ನಿತ್ಯಾ ಎಷ್ಟೇ ಬೇಡಿಕೊಂಡರೂ ಅಧಿಕಾರಿಗಳು ತಮಗೆ ಬಂದಿರುವ ಆದೇಶವನ್ನು ಪಾಲಿಸಿ ಹೋಗಿದ್ದಾರೆ.
ನಿತ್ಯಾಳ ಮೇಲೆ ಗೂಬೆ
ಇದೇ ಅವಕಾಶ ಎಂದುಕೊಂಡು ನಯನತಾರಾ, ನಿತ್ಯಾಳಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾಳೆ. ನೀನು ಆಸ್ಪತ್ರೆಗೆ ಬಂದ ಮೇಲೆ ಈ ಘಟನೆ ನಡೆದಿದೆ. ನೀನು ಬರದೇ ಇದ್ದರೆ ಹೀಗೆ ಆಗುತ್ತಿರಲಿಲ್ಲ ಎಂದಿದ್ದಾಳೆ. ಅಲ್ಲಿಗೆ ನಿತ್ಯಾ ಕುಸಿದು ಹೋಗಿದ್ದಾಳೆ.ಅತ್ತೆಯ ಮಾತು ಅವಳಿಗೆ ನೆನಪಿಗೆ ಬಂದಿದೆ. ಈ ಆಸ್ಪತ್ರೆಯ ಮೇಲೆ ಮನೆಯವರು ಇಟ್ಟಿರುವ ವಿಶ್ವಾಸ ನೆನಪಿಸಿಕೊಂಡು ಅವಳು ಕುಗ್ಗಿ ಹೋಗಿದ್ದಾಳೆ.
ಕರ್ಣನ ಕಾಪಾಡಲು ನಾಯಕಿಯರು
ಅತ್ತ ಕರ್ಣನ ಕಾಪಾಡಲು ವಿವಿಧ ಸೀರಿಯಲ್ಗಳ ನಟಿಯರು ಬಂದಿದ್ದಾರೆ. ಇದಾಗಲೇ ರೋಗಿಗಳ ಜೀವನದಲ್ಲಿ ಚೆಲ್ಲಾಟ ಆಡುವ ಟಿಪ್ಸ್ ಕೊಟ್ಟ ಸೀರಿಯಲ್ ವಿರುದ್ಧ ನೆಟ್ಟಿಗರು ಗರಂ ಆಗುತ್ತಿದ್ದಾರೆ..
ಹೊಟ್ಟೆ ಬಂದಿದ್ರೆ...
ಇದೀಗ ಈ ಪ್ರೊಮೋ ಬಿಡುಗಡೆಯಾಗುತ್ತಲೇ, ಗರ್ಭಿಣಿ ನಿತ್ಯಾಳಿಗೆ ಇನ್ನೂ ಯಾಕೆ ಹೊಟ್ಟೆ ಬಂದಿಲ್ಲ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಆಕೆಗೆ ಹೊಟ್ಟೆ ಬಂದಿದ್ದರೆ ಈ ಸಮಸ್ಯೆ ಆಗ್ತಿರಲಿಲ್ಲ. ಸುಮ್ಮನೇ ರೆಸ್ಟ್ ಮಾಡಿಕೊಂಡು ಮನೆಯಲ್ಲಿ ಇರುತ್ತಿದ್ದಳು. ಇದಾಗಲೇ ನಾಲ್ಕೈದು ತಿಂಗಳ ಗರ್ಭಿಣಿ ಆದ್ರೂ ಹೊಟ್ಟೆ ಮಾತ್ರ ಸ್ವಲ್ಪವೂ ಬರಲಿಲ್ಲ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.
ಮೀಮ್ಸ್ ಸುರಿಮಳೆ
ಒಟ್ಟಿನಲ್ಲಿ ಸೀರಿಯಲ್ ಸೀರಿಯಸ್ ಆಗಿ ಹೋಗುತ್ತಿದ್ದರೆ, ಇತ್ತ ನೆಟ್ಟಿಗರು ಮಾತ್ರ ತಮಾಷೆ ಮಾಡುತ್ತಿದ್ದಾರೆ. ಅದರಲ್ಲಿಯೂ ಕರ್ಣನ ಕಾಪಾಡಲು ಬೇರೆ ಬೇರೆ ಸೀರಿಯಲ್ಗಳ ನಾಯಕಿಯರು ಬಂದಿರುವ ಬಗ್ಗೆ ಇದಾಗಲೇ ಮೀಮ್ಸ್ಗಳು ಸುರಿಮಳೆಯೂ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

