ಅಮ್ಮನ ಮದುವೆಗೆ ಸಿಹಿ ಕ್ಯೂಟ್​ ವಿಡಿಯೋಶೂಟ್​: ದಯವಿಟ್ಟು ಬಾಲಕಿಯ ಭವಿಷ್ಯ ಹಾಳುಮಾಡ್ಬೇಡಿ ಅಂತಿರೋ ಫ್ಯಾನ್ಸ್​

ಸೀತಾರಾಮರ ಮದುವೆ ಅತ್ತ ನಡೆಯುತ್ತಿದ್ದರೆ, ಸೀರಿಯಲ್ ಕೇಂದ್ರಬಿಂದು ಸಿಹಿ ವಿಡಿಯೋಶೂಟ್​ ಮಾಡಿಸಿಕೊಂಡಿದ್ದಾಳೆ. ಆದರೆ ಅಭಿಮಾನಿಗಳ ಆತಂಕವೇ ಬೇರೆ... 
 

Seetarama serial Sihis cute video shoot But the concern of the fans is about her future suc

ಸೀತಾರಾಮ ಕಲ್ಯಾಣ ನಡೆಯುತ್ತಿದೆ. ಇದರಲ್ಲಿ ಬಹಳ ಮುಖ್ಯವಾದವಳು ಸಿಹಿ. ಸಿಹಿಯ ಕಾರಣದಿಂದಲೇ ಸೀತಾ ಮತ್ತು ರಾಮ ಒಂದಾಗಿದ್ದಾರೆ. ಈಕೆಯ ಕಾರಣದಿಂದಲೇ ಸೀತಾಳ ಬಾಳಿನಲ್ಲಿ ಹೊಸ ಯುಗ ಆರಂಭವಾಗುತ್ತಿದೆ. ಅತ್ತ ಸೀತಾರಾಮ ಕಲ್ಯಾಣದಲ್ಲಿ ಎಲ್ಲರೂ ಬಿಜಿಯಾಗಿದ್ದರೆ ಸಿಹಿ ಭರ್ಜರಿ ವಿಡಿಯೋಶೂಟ್​ ಮಾಡಿಸಿಕೊಂಡಿದ್ದಾಳೆ. ಇದರಲ್ಲಿ ಹೆಂಗಸಿನ ರೀತಿಯಲ್ಲಿಯೇ ಪುಟಾಣಿ ಕಂಗೊಳಿಸುತ್ತಿದ್ದಾರೆ. ಅಷ್ಟಕ್ಕೂ, ಸೀತಾರಾಮ ಸೀರಿಯಲ್​ ಜನರಿಗೆ ಇಷ್ಟವಾಗಲು ನಾನು ಕಾರಣಗಳು ಇರಬಹುದು. ಆದರೆ ಬಹುತೇಕ ಮಂದಿಗೆ ಈ ಧಾರಾವಾಹಿ ಇಷ್ಟವಾಗಲು ಕಾರಣ ಪುಟಾಣಿ ಸಿಹಿ. ಮೊದಲಿನಿಂದಲೂ ಈಕೆಯ ಆ್ಯಕ್ಟಿಂಗ್​ಗೆ ಮನಸೋಲದವರೇ ಇಲ್ಲ. ಸೋಷಿಯಲ್​ ಮೀಡಿಯಾಗಳಲ್ಲಿ ಈಕೆಯನ್ನು ಹಾಡಿ ಕೊಂಡಾಡುವವರೇ ಹೆಚ್ಚು.   ಐದು ವರ್ಷದ ಹೊಸ್ತಿಲಿನಲ್ಲಿಯೇ  ತನ್ನ  ಪಾತ್ರವನ್ನು ಅರಿತು ಅದರಂತೆ ನಡೆದುಕೊಂಡ ಸಿಹಿಯನ್ನು ಕಂಡು ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದ್ದಾಳೆ ಈ ಪುಟಾಣಿ. ಸನ್ನಿವೇಶಕ್ಕೆ ತಕ್ಕಂತೆ ಇವಳು ಅಭಿನಯಿಸುವ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. 

ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವ ಗಾದೆ ಮಾತಿನಂತಾಗಿದೆ ಸಿಹಿಯ ಪಾತ್ರ ಎನ್ನುವುದು ಈಗ ಸೀರಿಯಲ್​ ಫ್ಯಾನ್ಸ್​ ಗಂಭೀರ ಆರೋಪ. ಇಂದಿನ ಹಲವು ಮಕ್ಕಳಿಗೆ ವಯಸ್ಸಿಗಿಂತಲೂ ಹೆಚ್ಚು ಮೆಚ್ಯುರಿಟಿ ಇರುತ್ತದೆ ಎನ್ನುವುದು ನಿಜವಾದರೂ ಸೀತಾರಾಮ ಸೀರಿಯಲ್​ನಲ್ಲಿ ಸಿಹಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ಮಕ್ಕಳಲ್ಲಿನ ಮುಗ್ಧತೆಯನ್ನು ಕಸಿದುಕೊಳ್ಳುವ ರೀತಿಯಲ್ಲಿ ತೋರಿಸಲಾಗುತ್ತಿದೆ, ಮಕ್ಕಳಿಗೆ ಸಾಮಾನ್ಯವಾಗಿ ಅರ್ಥವೇ ಆಗದಿರುವ ವಿಷಯಗಳಲ್ಲಿಯೂ ಸಿಹಿ ಪಾತ್ರವನ್ನು ಉದ್ದೇಶಪೂರ್ವಕವಾಗಿ ಟಿಆರ್​ಪಿಗೋಸ್ಕರ್​ ತೂರಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿಹಿ ಎಲ್ಲದ್ದಕ್ಕೂ ಮೂಗು ತೂರಿಸುವಂತೆಯೇ ನಿರ್ದೇಶಕರು ತೋರಿಸುತ್ತಿದ್ದು, ಇದ್ಯಾಕೋ ಅತಿಯಾಗುತ್ತಿದೆ ಎಂದು ಬಹುದೊಡ್ಡ ವರ್ಗದ ನೆಟ್ಟಿಗರು ಸೋಷಿಯಲ್​ ಮೀಡಿಯಾಗಳಲ್ಲಿ ಕಮೆಂಟ್​ ಮೂಲಕ ಅಸಮಾಧಾನ ಹೊರಹಾಕುತ್ತಿದ್ದಾರೆ.

ನಮ್ದು ನ್ಯಾಚುಲರ್​ ಬ್ಯೂಟಿರೀ... ಅಂದ್ರೆ, ನೀವೂ ಸ್ವಲ್ಪ ಮುಖಕ್ಕೆ ಹಚ್ರಲಾ.. ಚೆಂದ್ ಕಾಣ್ತೀರಿ ಅನ್ನೋದಾ ಸೀತಾರಾಮ ನಟಿ?

ಇದೀಗ ವಿಡಿಯೋಶೂಟ್​ನಲ್ಲಿಯೂ ಸಿಹಿ ಮಿಂಚುತ್ತಿದ್ದರೂ ಅದೇ ಭಾವನೆ ವ್ಯಕ್ತವಾಗಿದೆ. ಈಕೆಯ ಬಾಲ್ಯವನ್ನು ಕಸಿಯಬೇಡಿ, ಇವಳ ಭವಿಷ್ಯ ಹಾಳುಮಾಡಬೇಡಿ. ತುಂಬಾ ಅತಿಯಾಗಿ ಇವಳನ್ನು ತೋರಿಸಲಾಗುತ್ತಿದೆ ಎಂದೆಲ್ಲಾ ಅಭಿಮಾನಿಗಳು ನೋವಿನಿಂದ ಹೇಳುತ್ತಿದ್ದಾರೆ. ಅಷ್ಟಕ್ಕೂ ಹಲವಾರು ಮಕ್ಕಳು ಚಿತ್ರರಂಗದಲ್ಲಿ ಹಾಗೂ ಸೀರಿಯಲ್​ಗಳಲ್ಲಿ ಮಿಂಚುತ್ತಿದ್ದಾರೆ. ಹಿಂದೆಯೂ ಮಿಂಚಿದ್ದರು. ಮಧ್ಯದಲ್ಲಿ ಒಂದಿಷ್ಟು ದಿನ ಏಕಾಏಕಿ ಕಣ್ಮರೆಯಾಗಿ ಕೊನೆಯಲ್ಲಿ ನಟನೋ, ನಟಿಯಾಗಿಯೋ ಕಾಣಿಸಿಕೊಳ್ಳುವುದು ಹೊಸದೇನೂ ಅಲ್ಲ. ಆದರೆ ಎಲ್ಲದಕ್ಕೂ ಲಿಮಿಟ್​ ಇದ್ದರೆ ಚೆಂದ ಎನ್ನುವುದು ಫ್ಯಾನ್ಸ್​ಅಭಿಮತ. ಇಲ್ಲಿ ಸಿಹಿ ಪಾತ್ರಧಾರಿಯಾಗಿರುವ ರಿತು ಸಿಂಗ್​ ಅಭಿನಯಕ್ಕೆ ಮನಸೋಲದವರೇ ಇಲ್ಲವಾದರೂ ಈ ಎಳವೆಯಲ್ಲಿ ಅವಳನ್ನು ಈ ಪರಿಯಲ್ಲಿ ತೋರಿಸುವುದು ಸರಿಯಲ್ಲ ಎನ್ನುವ ಅಭಿಮತವೇ ಹಲವರದ್ದು. 

 ಅಂಹಾಗೆ  ರಿತು ಸಿಂಗ್​, ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಶೋ ಮೂಲಕ ಕಿರುತೆರೆ ಜನರಿಗೆ ಪರಿಚಿತ.  ಕ್ರೇಜಿಸ್ಟಾರ್​  ರವಿಚಂದ್ರನ್ ಅವರ ಫೇವರೆಟ್​ ನಟಿ. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತ, ಸದಾ ರವಿಚಂದ್ರನ್ ಗರ್ಲ್‌ಫ್ರೆಂಡ್ ನಾನು ಎಂದು ಹೇಳುತ್ತಿದ್ದ ಈ ಪುಟ್ಟ ಪೋರಿ ಈಗ ಸೀರಿಯಲ್‌ನ ಕೇಂದ್ರ ಬಿಂದು ಆಗಿದ್ದಾಳೆ. ಐದು ವರ್ಷದ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ಅಂದಹಾಗೆ, ರೀತು ನೇಪಾಳದವಳು. ನೇಪಾಳ ಮೂಲದ ರಿತು ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು.

ಅಂಬಾನಿ ಫ್ಯಾಮಿಲಿ ಮದುವೆ ಡಾನ್ಸ್​ ಮಾಡಿದ್ರೆ ಇದು 'ಜಿಯೋ ರಿಚಾರ್ಜ್'​ ಖುಷಿ ಅಂತಿದ್ದಾರಲ್ಲ ತರ್ಲೆ ಕಮೆಂಟಿಗರು?

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios