'ಲಕ್ಷ್ಮೀ ನಿವಾಸ'ದಲ್ಲಿ ಜಾಹ್ನವಿ ಸಾವನ್ನಪ್ಪಿದ್ದಾಳೆಂದು ಭಾವಿಸಲಾಗಿದೆ. ಲಕ್ಷ್ಮೀ-ಶ್ರೀನಿವಾಸ್ ಬೇರೆಯಾಗಿದ್ದಾರೆ. ಹಿರಿಯ ಮಗಳು ಭಾವನಾ, ತವರು ಮನೆಯ ಕಷ್ಟಗಳನ್ನು ಕಡೆಗಣಿಸಿ ಸಿದ್ದೇಗೌಡರ ಪ್ರೀತಿಯಲ್ಲಿ ಮಗ್ನಳಾಗಿದ್ದಾಳೆ. ಸಂತೋಷ್ ಸ್ವಾರ್ಥಿ, ಹರೀಶ್ ಹೆಂಡ್ತಿಯ ದಾಸ. ಶ್ರೀನಿವಾಸ್ ಮಕ್ಕಳಿಂದ ವಂಚಿತ. ವೀಕ್ಷಕರು ಭಾವನಾಳ ನಡವಳಿಕೆಯನ್ನು ಟೀಕಿಸಿದ್ದಾರೆ.

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಾಹ್ನವಿ ತೀರಿಕೊಂಡಿದ್ದಾಳೆ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಇನ್ನೊಂದು ಕಡೆ ಲಕ್ಷ್ಮೀ ಮನೆ ಎರಡು ಭಾಗವಾಗಿ, ಲಕ್ಷ್ಮೀ-ಶ್ರೀನಿವಾಸ್‌ ಕೂಡ ಹಂಚಿಕೆಯಾಗಿದ್ದಾರೆ. ಹೀಗಿರುವಾಗ ಅವರ ಹಿರಿಯ ಮಗಳು ಎಲ್ಲಿ?

ಆ ಕಡೆ ತಲೆ ಹಾಕಲಿಲ್ಲ! 
ಯಾವಾಗ ನೋಡಿದರೂ ಕೂಡ ತವರು ಮನೆಗೆ ಬಂದು, ಆ ಕಷ್ಟ ಇದೆ, ಈ ಕಷ್ಟ ಇದೆ ಅಂತ ಗೋಳಾಡಿ, ಮೊಸಳೆ ಕಣ್ಣೀರು ಹಾಕಿ ಇದ್ದದ್ದನ್ನೆಲ್ಲ ಬಾಚಿಕೊಂಡು ಹೋಗುವ ಹಿರಿಯ ಮಗಳು ಈಗ ಎಲ್ಲಿ ಹೋದಳು? ಒಮ್ಮೆ ಜಾಹ್ನವಿ ಮನೆಗೆ ಹೋಗಿ ಅಲ್ಲಿ ಜಯಂತ್‌ನ ದುಷ್ಟತನ ನೋಡಿದವಳು ಮತ್ತೆ ಆ ಕಡೆ ತಲೆಗೆ ಹಾಕಲೇ ಇಲ್ಲ. 

ದೊಡ್ಡ ಮಗಳು ಎಲ್ಲಿ?
ಈ ಧಾರಾವಾಹಿಯಲ್ಲಿ ಭಾವನಾ, ಜಾಹ್ನವಿ, ಲಕ್ಷ್ಮೀ, ವೆಂಕಿ, ಸಿಂಚನಾ, ಸಂತೋಷ್‌ ಎಂದು ಸಾಕಷ್ಟು ಟ್ರ್ಯಾಕ್‌ಗಳಿವೆ. ಹೀಗಾಗಿ ಎಲ್ಲ ಕಥೆಗಳನ್ನು ತೋರಿಸೋದು, ಬ್ಯಾಲೆನ್ಸ್‌ ಮಾಡೋದು ಕಷ್ಟವೇ. ಆದರೂ ತವರು ಮನೆಯಲ್ಲಿ ಇಂಥದ್ದೆಲ್ಲ ನಡೆಯುವಾಗ ದೊಡ್ಡ ಮಗಳು ಇರಲೇಬೇಕಲ್ವಾ? ಅವಳ ಕಿವಿಗೆ ಈ ವಿಷಯ ಮುಟ್ಟೋದೇ ಇಲ್ವಾ? ಇದಕ್ಕೆ ಧಾರಾವಾಹಿ ತಂಡವೇ ಉತ್ತರ ಕೊಡಬೇಕು.

ಅಂದಹಾಗೆ ಸಿದ್ದೇಗೌಡ್ರ ಪ್ರೀತಿಯನ್ನು ಭಾವನಾ ಒಪ್ಪಿಕೊಂಡಿದ್ದಾಳೆ. ಇವರಿಬ್ಬರು ಪ್ರೀತಿಯಲ್ಲಿ ಕಳೆದುಹೋಗಿದ್ದಾರೆ. ಇದನ್ನು ನೋಡಿ ವೀಕ್ಷಕರು ಏನು ಹೇಳಿದ್ದಾರೆ?

  • ನವಿರಾದ ಪ್ರೀತಿ ಮುಗ್ದತೆಯೆಂಬ ದೋಣಿಯಲ್ಲಿ ಪಯಣಿಸುತ್ತಿದೆ...ಎದುರಿಗೆ ಆಸೆಯೆಂಬ ದಡವನ್ನ ನಿಧಾನವಾಗಿ ತಲುಪಲಿ 
  • ನಮ್ ಸಿದ್ದು ಭಾವನಾ ಜೋಡಿ ಕ್ಯೂಟ್ ಆಗಿದೆ
  • ಅಲ್ಲಿ ತವರುಮನೆ ಹತ್ಕೊಂಡು ಉರೀತಿದೆ. ಅಪ್ಪ ಅಮ್ಮ ಬೇರೆ ಆಗ್ತಿದಾರೆ. ಅಣ್ಣ ಕಾಣೆ ಆಗಿದ್ದಾನೆ, ತಂಗಿ ಸತ್ತೋಗಿದಾಳೆ. ಇದು ನೋವು ಅಲ್ವಾ? ಭಾವನಾ ಪ್ರೀತಿಯಲ್ಲಿ ಕಳೆದುಹೋಗಿದ್ದಾಳೆ, ಅವಳು ಒಳ್ಳೇ ಮಗಳು ಬಿಡಿ
  • ಅಪಘಾತ ಮಾಡಿರೋದು ಸಿದ್ದೇಗೌಡ್ರು ಅಂತಾ ಗೊತ್ತಾದ್ಮೇಲೆ ಎಲ್ಲ ಪ್ರೀತಿ ಹೋಯ್ತು
  • ಇವರ ಪ್ರೀತಿ ಹೀಗೆ ಮುಂದೆ ಸಾಗಲಿ, ಮತ್ತೆ ಯಾವುದೋ ಕಾರಣಕ್ಕೆ ಬೇರೆ ಮಾಡಬೇಡಿ
  • ಭಾವನಾಗೆ ಭಾವನೆಯೇ ಇಲ್ಲ. 

ಅಂದಹಾಗೆ ಸಂತೋಷ್‌ ಹೊಸ ಮನೆ ಕಟ್ಟಿಸಿದ್ದಾನೆ, ಅಷ್ಟೇ ಅಲ್ಲದೆ ನಾನು, ನನ್ನ ಹೆಂಡ್ತಿ, ಮಕ್ಕಳು ಮಾತ್ರ ಚೆನ್ನಾಗಿರಬೇಕು ಎಂದುಕೊಳ್ಳುವವನು ಇವನು. ಇನ್ನು ಹರೀಶ್‌ ಹೆಂಡ್ತಿಯ ದಾಸ. ಮಾವನಮನೆಯವರು ಹೊಸ ಮನೆ ಕೊಟ್ಟರು ಅಂತ ಅವನು ಹೆಂಡ್ತಿ ಜೊತೆಗೆ ಅಲ್ಲಿ ಶಿಫ್ಟ್‌ ಆಗಿದ್ದಾನೆ. ಅಪ್ಪ ಒಂದು ಮಗನ ಮನೆಯಲ್ಲಿ, ಹೆಂಡ್ತಿ ಇನ್ನೊಂದು ಮಗನ ಮನೆಯಲ್ಲಿ ಇರಬೇಕಂತೆ. ಇದರ ಮಧ್ಯೆ ಅಪ್ಪನ ಹಣದಲ್ಲಿ ನನಗೆ ಅಷ್ಟು ಹಣ ಬೇಕು, ನನಗೆ ಇಷ್ಟು ಹಣ ಬೇಕು ಎಂದು ಡಿಮ್ಯಾಂಡ್‌ ಕೂಡ ಮಾಡುತ್ತಿದ್ದಾರೆ. 

  • ಇಂಥ ಮಕ್ಕಳು ಬೇಡ, ಇಂಥ ಅಪ್ಪ ಅಮ್ಮ ಮೊದ್ಲೇ ಬೇಡ
  • ತಂದೆ ತಾಯಿಗೆ ಈ ವಯಸ್ಸಲ್ಲಿ ಆಸರೆ ಆಗದೆ ಅವರ ಸಂಪಾದನೆಯನ್ನು ಕೇಳ್ತೀರಾ....ನಿಮ್ಮಂತಹ ಮಕ್ಕಳು ಇದ್ದರೂ ಒಂದೇ ಸತ್ತರೂ ಒಂದೇ
  • ಶ್ರೀನಿವಾಸ ಒಬ್ಬ ತಿಳಿಗೇಡಿ .. ಮೊದಲು PF ಹಣ ಹಂಚಿ ಬರಿಗೈ ದೊರೆ ಆಗಿದ್ಧ ..ಇಷ್ಟಕ್ಕೂ ಮೀರಿ ಅಲ್ಪ ಸ್ವಲ್ಪ ಇದ್ದದನ್ನೂ ಪಾಪಿ ಮಗ ಹರಿಗೆ ಕೊಟ್ಟು ಈಗ ಪೆಚ್ಚು ಮುಖ ಹಾಕಿಕೊಂಡು ಅಮಾಯಕ ತರ ಮಾಡಿದ್ರೆ ಹೇಗೆ? ಸ್ವಲ್ಪ ಸಾಮಾನ್ಯ ವ್ಯವಹಾರ ಜ್ಞಾನ ಬೇಡವಾ?

ಪಾತ್ರಧಾರಿಗಳು
ಜಾಹ್ನವಿ- ಚಂದನಾ ಅನಂತಕೃಷ್ಣ
ಭಾವನಾ- ದಿಶಾ ಮದನ್‌
ಸಂತೋಷ್-‌ ಮಧು ಹೆಗಡೆ
ಹರೀಶ್-‌ ಅಜಯ್‌ ರಾಜ್‌
ಲಕ್ಷ್ಮೀ-ಶ್ವೇತಾ
ಶ್ರೀನಿವಾಸ್-‌ ಶ್ರೀನಿವಾಸ್‌ ಜಂಭೆ