ಲಕ್ಷ್ಮೀನಿವಾಸ ಚಿನ್ನುಮರಿ ಉರ್ಫ್​ ಚಂದನಾ ಅನಂತಕೃಷ್ಣ ಅವರು ಬಣ್ಣದ ಲೋಕದಲ್ಲಿ ತಮಗಾಗಿರುವ ಕಹಿ ಘಟನೆ, ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡಿದ್ದಾರೆ.

ಲಕ್ಷ್ಮೀ ನಿವಾಸದ ಚಿನ್ನುಮರಿ ಜಾಹ್ನವಿ ಶ್ರೀಲಂಕಾದ ಸಮುದ್ರದಲ್ಲಿ ಬಿದ್ದು, ಚೆನ್ನೈನಲ್ಲಿ ಎದ್ದು ಸದ್ಯ ಸೀರಿಯಲ್​ನಲ್ಲಿ ವಿಶ್ವನ ಮನೆ ತಲುಪಿದ್ದಾಳೆ. ವಿಶ್ವನ ಕಾರಿನ ಡಿಕ್ಕಿಯಲ್ಲಿ ಅಡಗಿ ಕುಳಿತಿದ್ದ ಜಾನು, ಅವನಿಗೂ ಅರಿವಿಲ್ಲದೇ ಮನೆಗೆ ಬಂದಿದ್ದಾಳೆ. ಅತ್ತ ತನ್ನ ಪತ್ನಿ ಸತ್ತೇ ಹೋದಳು ಎಂದು ಜಯಂತ್​ ಗೋಗರೆಯುತ್ತಿದ್ದಾನೆ. ಇದೀಗ, ವಿಶ್ವನ ಮನೆ ಸೇರಿರೋ ಜಾಹ್ನವಿ ಅಲ್ಲಿಂದಲೂ ಹೊರಗೆ ಹೋಗುವ ಕಾಲ ಬಂದಿದೆ. ಏಕೆಂದರೆ ವಿಶ್ವನಿಗೆ ಜಾಹ್ನವಿ ತನ್ನದೇ ಮನೆಯಲ್ಲಿ ಇದ್ದಾಳೆ ಎನ್ನುವ ಗುಮಾನಿ ಶುರುವಾಗಿದೆ. ಆದ್ದರಿಂದ ಜಾಹ್ನವಿ ಮನೆಯಿಂದ ಹೋಗಲು ನೋಡಿದರೂ ಅದು ಸಾಧ್ಯವಾಗಲಿಲ್ಲ. ಅದೇ ಇನ್ನೊಂದೆಡೆ, ಸೈಕೋ ಜಯಂತ್​ಗೆ ತನ್ನ ಪತ್ನಿ ಬದುಕಿದ್ದಾಳೆ ಎಂದೇ ಎನ್ನಿಸುತ್ತಿದೆ. ಆದ್ದರಿಂದ ಅವಳನ್ನು ಹುಡುಕಲು ಡಿಟೆಕ್ಟಿವ್​ನ ಇಟ್ಟಿದ್ದಾನೆ. ಈಗ ಜಾಹ್ನವಿ ಬದುಕಿದ್ದಾಳೆ ಎನ್ನುವ ಸುಳಿವು ಅವನಿಗೆ ಸಿಕ್ಕಿದೆ. ಇನ್ನೇನು ಜಾಹ್ನವಿ ಏನಾದ್ರೂ ಅವನ ಕೈಗೆ ಸಿಕ್ಕರೆ ಮುಗೀತು ಕಥೆ. ಒಟ್ಟಿನಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್​ ರೋಚಕ ಹಂತಕ್ಕೆ ಬಂದು ನಿಂತಿದೆ.

ಹೀಗೆ ಸೈಕೋ ಗಂಡನ ಕೈಯಲ್ಲಿ ಸಿಕ್ಕು ಒದ್ದಾಡುತ್ತಿರುವ ಚಿನ್ನುಮರಿ ಜಾಹ್ನವಿಯ ನಿಜವಾದ ಹೆಸರು ಚಂದನಾ ಅನಂತಕೃಷ್ಣ. ರಿಯಲ್​ ಲೈಫ್​ನಲ್ಲಿ ಈಚೆಗಷ್ಟೇ ಮದುವೆಯಾಗಿರೊ ಚಂದನಾ, ಸದ್ಯ ಮದುವೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ. ಆದರೆ ಇದೀಗ ಕಿರುತೆರೆಯಲ್ಲಿ ತಾವು ಅನುಭವಿಸಿದ ಕಾಸ್ಟಿಂಗ್​ ಕೌಚ್​ ಬಗ್ಗೆ ನಟಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಸಿನಿಮಾದಲ್ಲಿ ಇರುವಂತೆ ಕಿರುತೆರೆಯಲ್ಲಿಯೂ ವಿಭಿನ್ನ ರೀತಿಯಲ್ಲಿ ಲೈಂ*ಗಿಕ ಕಿರುಕುಳ ಇರುವ ಬಗ್ಗೆ ಇದಾಗಲೇ ಕೆಲವು ನಟಿಯರು ಮಾತನಾಡಿದ್ದಾರೆ. ಆದರೆ, ನಟಿಯಾಗುವ ಕನಸು ಹೊತ್ತು ಎಲ್ಲೆಲ್ಲೋ ಅಪ್ಲಿಕೇಷನ್​ ಹಾಕಿದಾಗ, ಆಗುವ ಅನಾಹುತಗಳ ಬಗ್ಗೆ ಚಂದನಾ ಅವರು ಇಲ್ಲಿ ಮಾತನಾಡಿದ್ದಾರೆ. ಈ ಮೂಲಕ ಯಾವ್ಯಾವುದೋ ಏಜೆನ್ಸಿಗಳಿಗೆ ಹೀಗೆ ಅರ್ಜಿ ಗುಜರಾಯಿಸಿ ಲೈಫ್​ ಹಾಳುಮಾಡಿಕೊಳ್ಳುತ್ತಿರುವ ಹೆಣ್ಣುಮಕ್ಕಳಿಗೂ ಪರೋಕ್ಷವಾಗಿ ಪಾಠ ಮಾಡಿದ್ದಾರೆ ನಟಿ. 

ಶೂಟಿಂಗ್​ನಲ್ಲಿ ಡೈಲಾಗ್​ ಹೇಳೋದು ಅಂದ್ರೆ ಸುಮ್ನೆನಾ? ಲಕ್ಷ್ಮೀ ನಿವಾಸ ತಾರೆಯರೆಲ್ಲಾ ಸುಸ್ತೋ ಸುಸ್ತು!

 ಅಂದಹಾಗೆ ಅವರು, ವೈ5 ಟಿವಿ ಕನ್ನಡ ಎನ್ನುವ ಯೂಟ್ಯೂಬ್ ಚಾನೆಲ್​ಗೆ ಸಂದರ್ಶನ ನೀಡಿದ್ದು, ಅದರಲ್ಲಿ ಈ ವಿಷಯ ತಿಳಿಸಿದ್ದಾರೆ. ನಟಿಯಾಗುವ ಕನಸು ಹೊತ್ತು ಹಲವಾರು ಆಡಿಷನ್​ ಕೊಟ್ಟು, ಕೆಲವು ಕಡೆ ಅರ್ಜಿ ಸಲ್ಲಿಸಿದ್ದರಿಂದ ತಮಗಾದ ಕೆಟ್ಟ ಅನುಭವ ಹೇಳಿದ್ದಾರೆ. ತಾವು ಸ್ವಲ್ಪ ದಪ್ಪ ಇದ್ದುದರಿಂದ ಎಲ್ಲಿಯೂ ಸೆಲೆಕ್ಟ್​ ಆಗುತ್ತಿರಲಿಲ್ಲ ಎಂದೂ ಹೇಳಿಕೊಂಡಿರುವ ಚಂದನಾ ಅವರು, ಕೊನೆಗೆ ತಮಗಾದ ಕಹಿ ಅನುಭವ ತೆರೆದಿಟ್ಟಿದ್ದಾರೆ. ಅವರ ಮಾತಿನಲ್ಲಿಯೇ ಹೇಳುವುದಾದರೆ, 'ಅದೊಂದು ದಿವಸ ಸಿನಿಮಾವೊಂದರಲ್ಲಿ ಅವಕಾಶ ಇದೆ ಎಂದು ಒಬ್ರು ಫೋನ್‌ ಮಾಡಿದ್ರು. ಮೊದಲಿಗೆ ಮಾಡರ್ನ್​ ಡ್ರೆಸ್​ ಹಾಕಿ ಕಳಿಸಿ ಅಂದ್ರು, ಆಮೇಲೆ ವಿತೌಟ್​ ಮೇಕಪ್​ ಅಂದ್ರು. ಎಲ್ಲಾ ಕಳಿಸಿದೆ. ಆಮೇಲೆ ವಿಡಿಯೋ ಕಾಲ್‌ ಮಾಡಿ, ನಿಮ್ಮನ್ನ ನೋಡಬೇಕು ಅಂದ್ರು. ಆಗ ನನಗೆ ಡೌಟ್​ ಬಂತು. ನನ್ನ ಸ್ನೇಹಿತೆಯರ ಜೊತೆ ಇರುವಾಗ ಕಾಲ್​ ಮಾಡಿದೆ. ನನ್ನ ಜೊತೆ ಸುಮಾರ್​ ಮಂದಿ ಇದ್ದಾರೆ ಎಂದು ಅವರು ಏನೂ ಹೇಳಿಲ್ಲ. ಆಮೇಲೆ ನಾನು ಅದನ್ನು ಬ್ಲಾಕ್​ ಮಾಡಿದೆ. 

ಇದಾದ ಬಳಿಕ ಆ ಮೇಲೆ ಯಾವುದೋ ಏಜೆನ್ಸಿಯಿಂದ ಫೋನ್‌ ಬಂದಿತ್ತು. ಒಂದು ಸಿನಿಮಾ ಇದೆಲ್ಲ ರಿಕ್ವೈರ್‌ಮೆಂಟ್ಸ್‌ ಬೇಕು ಎಂದ್ರು. ನೀವು ಓಕೆ ಅಂದ್ರೆ ಇಷ್ಟು ಪೇಮೆಂಟ್‌ ಕೊಡ್ತೀವಿ, ಮೂರು ತಿಂಗಳು ಶೂಟಿಂಗ್‌ + ಕಾಂಪ್ರಮೈಸ್‌ ಎಂದು ಆ ಮೆಸೇಜ್‌ನಲ್ಲೇ ಕ್ಲಿಯರ್‌ ಆಗಿ ಬರೆದಿದ್ರು. ನನಗೆ ಶಾಕ್​ ಆಯ್ತು. ಕಾಂಪ್ರಮೈಸ್​ ಎಂದರೆ ಏನು ಎನ್ನುವುದನ್ನು ಇದಾಗಲೇ ಹಲವಾರು ಮಂದಿ ಹೇಳಿದ್ದಾರೆ. (ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಅಲ್ಲಿರುವ ಪುರುಷರ ಆಸೆ ಈಡೇರಿಸಲು ರೆಡಿ ಇರಬೇಕು ಎನ್ನುವುದು ಅದು) ಅದನ್ನ ನೋಡಿ ನಾನು ರಿಪ್ಲೈ ಮಾಡಲಿಲ್ಲ, ನಂಬರ್‌ ಬ್ಲಾಕ್‌ ಮಾಡಿದೆ' ಎಂದಿದ್ದಾರೆ ಚಂದನಾ. ಈ ಮೂಲಕ, ಬಣ್ಣದ ಲೋಕದ ಕನಸು ಕಾಣುವವರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. 

ಜಯಂತೂ ಅಲ್ಲ, ವಿಶ್ವನೂ ಅಲ್ಲ... ರುದ್ರನ ಜೊತೆ ಲಕ್ಷ್ಮೀ ನಿವಾಸ ಚಿನ್ನುಮರಿ ರೊಮಾನ್ಸ್​!

View post on Instagram