Pooja Lokesh: ಕನ್ನಡ ಸಿನಿಮಾ ನಟಿ, ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಸೀತಾ ರಾಮ’ ದಲ್ಲಿ ವಿಲನ್ ಭಾರ್ಗವಿ ಪಾತ್ರದಲ್ಲಿ ನಟಿಸಿದ್ದ ನಟಿ ಪೂಜಾ ಲೋಕೇಶ್ ಇದೀಗ ನಟನೆ ಬಿಟ್ಟು, ಅಡುಗೆ ಮಾಡಲು ಶುರು ಮಾಡಿದ್ದಾರೆ. ಅಂದರೆ ಹೊಸದಾಗಿ ಅಡುಗೆ ಕಾರ್ಯಕ್ರಮ ಆರಂಭಿಸಿದ್ದಾರೆ. 

ಪೂಜಾ ಲೋಕೇಶ್

ಕನ್ನಡ ಚಿತ್ರರಂಗದಲ್ಲಿ 90ರ ದಶಕದ ಆರಂಭದಲ್ಲಿ ಬೆರಳೆಣಿಕೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಪೂಜಾ ಲೋಕೇಶ್. ಬಳಿಕ ತಮಿಳು ಕಿರುತೆರೆಯಲ್ಲಿ ಸಾಲು ಸಾಲು ಸೀರಿಯಲ್ ಗಳಲ್ಲಿ ನಟಿಸಿ, ಸುಮಾರು ಇಪ್ಪತ್ತು ವರ್ಷಗಳ ಕಾಲ ಪೂಜಾ ತಮಿಳು ಕಿರುತೆರೆಯಲ್ಲಿ ಗಟ್ಟಿಯಾಗಿ ನಿಂತಿದ್ದರು. ಕನ್ನಡ ಕಿರುತೆರೆಗೆ , ಕನ್ನಡಿಗರಿಗೆ ಇವರು ಮತ್ತೆ ಹತ್ತಿರವಾಗಿದ್ದು, ‘ಸೀತಾ ರಾಮ’ ಧಾರಾವಾಹಿ ಮೂಲಕ.

ಸೀತಾ ರಾಮ ವಿಲನ್ ಭಾರ್ಗವಿ

ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ನಟಿಸಿದ ‘ಸೀತಾ ರಾಮ’ ಧಾರಾವಾಹಿಯಲ್ಲಿ ವಿಲನ್ ಭಾರ್ಗವಿ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದರು ಪೂಜಾ ಲೋಕೇಶ್. ಇವರದ್ದು ನೆಗೆಟಿವ್ ಶೇಡ್ ಆಗಿದ್ದರೂ ಕೂಡ, ಆ ಪಾತ್ರವನ್ನು ಅವರು ಅಭಿನಯಿಸಿದ ರೀತಿಯನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಸೀತಾ ರಾಮ ಧಾರಾವಾಹಿ ಮುಗಿದು ಇದೀಗ ವರ್ಷಗಳು ತುಂಬುತ್ತಾ ಬಂದಿವೆ. ಮತ್ತೆ ಯಾವಾಗ ಧಾರಾವಾಹಿಯಲ್ಲಿ ನಟಿಸುತ್ತೀರಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಈ ಸಂದರ್ಭದಲ್ಲೇ ನಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಪೂಜಾ ಲೋಕೇಶ್ ಹೊಸ ಹೆಜ್ಜೆ

ಹೌದು, ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಅಗಿರುವ ಪೂಜಾ ಲೋಕೇಶ್ ಆ ಮೂಲಕ ತಾವು ಹೊಸ ಹೆಜ್ಜೆ ಇಡುತ್ತಿರುವುದಾಗಿ ಇತ್ತೀಚೆಗೆ ಹೇಳಿದ್ದರು. ಇದೀಗ ತಾವು ಕುಕ್ಕಿಂಗ್ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡುತ್ತಿರುವ ಪುಟ್ಟ ವಿಡೀಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ‘ಕುಕ್ಕಿಂಗ್ ಕಲಾಕರ್’ ಎನ್ನುವ ಕುಕ್ಕಿಂಗ್ ಚಾನೆಲ್, ಸೃಜನ್ ಲೋಕೇಶ್ ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ಈ ಕುರಿತು ಪೂಜಾ ಲೋಕೇಶ್ ಏನು ಹೇಳಿದ್ದಾರೆ ನೋಡಿ.

View post on Instagram

ಕುಕ್ಕಿಂಗ್ ಕಲಾಕಾರ್ ಯೂಟ್ಯೂಬ್ ಶೋ

#cookingkalakar ಮೋಜಿನಿಂದ ತುಂಬಿದ, ಮನರಂಜನೆಯ, ಆಕರ್ಷಕವಾದ ಮತ್ತು ಸ್ವಲ್ಪ ಅಡುಗೆ ಮತ್ತು ಸ್ವಲ್ಪ ಹರಟೆ... ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುಲಿದ್ದೇವೆ. ಆಹಾರವು ಕೇವಲ ರುಚಿಯ ಬಗ್ಗೆ ಅಲ್ಲ, ಅದು ಪ್ರತಿಯೊಂದು ಖಾದ್ಯಗಳ ಜೊತೆಗಿನ ಭಾವನಾತ್ಮಕ ಸಂಬಂಧಗಳ ಬಗ್ಗೆ. ಈ ಅಡುಗೆ ಅನುಭವವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಕಾಯುತ್ತಿದ್ದೇನೆ. . SRUJAN LOKESH OFFICIAL YOUTUBE CHANNEL ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಪೂಜಾ ಲೋಕೇಶ್ ತಿಳಿಸಿದ್ದಾರೆ.

ಯಾವಾಗ ಪ್ರಸಾರ?

ಇನ್ನು ಕುಕ್ಕಿಂಗ್ ಕಲಾಕಾರ್ ಸೆಲೆಬ್ರಿಟಿ ಕುಕ್ಕಿಂಗ್ ಶೋ ಆಗಿದ್ದು. ಪ್ರೊಮೋದಲ್ಲಿ ತೋರಿಸಿದಂತೆ ಈಗಾಗಲೇ ಈ ಕಾರ್ಯಕ್ರಮದಲ್ಲಿ ಪೂಜಾ ಲೋಕೇಶ್ ತಾಯಿ ಗಿರಿಜಾ ಲೋಕೇಶ್, ಗ್ರೀಷ್ಮಾ ಸೃಜನ್, ಸಿಂಧು ಮಹೇಶ್, ಧನರಾಜ್ ಮತ್ತು ಶಾಲಿನಿ ದಂಪತಿ, ನಂದಗೋಕುಲ ಖ್ಯಾತಿಯ ಅರವಿಂದ ರಾವ್, ಮೊದಲಾದವರು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮ ಪ್ರತಿ ವಾರ ಪ್ರಸಾರವಾಗಲಿದೆ ಎಂದು ಪೂಜಾ ಲೋಕೇಶ್ ಹೇಳಿದ್ದು, ಮೊದಲ ಎಪಿಸೋಡ್ ಇದೇ ಮಾರ್ಚ್ 15ರಂದು ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ. ಅಭಿಮಾನಿಗಳು ಪೂಜಾ ಲೋಕೇಶ್ ಅವರ ಹೊಸ ಹೆಜ್ಜೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.