ಶ್ರೀಕಾಂತ್‌ನನ್ನು ಸಿದ್ದೇಗೌಡ ಕೊಲೆಗೈದ ವಿಷಯ ಜವರೇಗೌಡನಿಗೆ ತಿಳಿದು, ಮಗನ ರಕ್ಷಣೆಗೆ ವೆಂಕಿಯನ್ನು ಬಲಿಪಶು ಮಾಡಿದ್ದಾನೆ. ವೆಂಕಿ ಜೈಲಿನಲ್ಲಿದ್ದು, ಚೆಲುವಿ ಗಂಡನಿಗಾಗಿ ಕಾಯುತ್ತಿದ್ದಾಳೆ. ಜವರೇಗೌಡ ಪೊಲೀಸರ ಮೂಲಕ ವೆಂಕಿಯನ್ನು ಎನ್‌ಕೌಂಟರ್‌ ಮಾಡಿಸಿದ್ದಾನೆ. ಭಾವನಾ ಸಿದ್ದು ಪ್ರೀತಿ ಒಪ್ಪಿಕೊಂಡಿದ್ದಾಳೆ. ಈ ಕೃತ್ಯದ ಪರಿಣಾಮಗಳೇನೆಂಬುದು ಮುಂದಿನ ಕಥೆಯ ತಿರುವು.

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಶ್ರೀಕಾಂತ್‌ನಿಗೆ ಆಕ್ಸಿಡೆಂಟ್‌ ಮಾಡಿ, ಸಾಯಿಸಿದೋರು ಸಿದ್ದೇಗೌಡ ಅನ್ನೋದು ಜವರೇಗೌಡನಿಗೆ ಗೊತ್ತಾಗಿದೆ. ತನ್ನ ಮಗನನ್ನು ಕಾಪಾಡಿಕೊಳ್ಳಲು ಅವನು ವೆಂಕಿಯನ್ನು ಅಪರಾಧಿಯನ್ನಾಗಿ ಮಾಡಿ ಜೈಲಿಗೆ ಕಳಿಸಿದ್ದಾನೆ.

ಗಂಡನಿಗೋಸ್ಕರ ಕಾಯ್ತಿರುವ ಚೆಲುವಿ! 
ಶ್ರೀಕಾಂತ್‌ ಕೊಲೆ ಕೇಸ್‌ನಲ್ಲಿ ವೆಂಕಿ ಸಿಕ್ಕಿಹಾಕಿಕೊಂಡಿದ್ದಾನೆ, ಅವನು ಜೈಲಿನಲ್ಲಿದ್ದಾನೆ ಎನ್ನೋದು ಇನ್ನೂ ಲಕ್ಷ್ಮೀ, ಶ್ರೀನಿವಾಸ್‌ ಮನೆಯವರಿಗೆ ಗೊತ್ತಿಲ್ಲ. ಚೆಲುವಿ ಮಾತ್ರ ತನ್ನ ಗಂಡ ಬರ್ತಾನೆ ಅಂತ ಕಾಯ್ತಿದ್ದಾಳೆ. ಇನ್ನೊಂದು ಕಡೆ ಸಿದ್ದು ಲವ್‌ ಏನೋ ಅನ್ನೋದು ಭಾವನಾಗೆ ಗೊತ್ತಾಗಿದ್ದು, ಅದನ್ನು ಅವಳು ಒಪ್ಪಿಕೊಂಡಿದ್ದಾಳೆ.

ವೆಂಕಿ ಎನ್‌ಕೌಂಟರ್‌ ಆಗ್ತಾನಾ?
ಈಗ ವೆಂಕಿಗೆ ಒಂದು ಗತಿ ಕಾಣಿಸಬೇಕು ಎಂದು ಜವರೇಗೌಡ ರೆಡಿಯಾಗಿದ್ದಾನೆ. ವೆಂಕಿಯನ್ನು ನಮಗೆ ಕೊಡಿ, ನಾವು ನಮ್ಮ ಫಾರ್ಮ್‌ಹೌಸ್‌ನಲ್ಲಿ ಇಟ್ಟುಕೊಳ್ತೀವಿ ಅಂತ ಅವನು ಪೊಲೀಸರಿಗೆ ಹೇಳಿದ್ದಾನೆ. ಆದರೆ ಪೊಲೀಸರು ಒಪ್ಪಲಿಲ್ಲ. ಈಗ ಅವರು ವೆಂಕಿಯನ್ನು ಇಲ್ಲವಾಗಿಸಲು ಸಂಚು ಹೂಡಿದ್ದಾರೆ. ಮಾತು ಬಾರದ, ಕಿವಿ ಕೇಳದ ವೆಂಕಿಯನ್ನು ಅವರು ಎನ್‌ಕೌಂಟರ್‌ ಮಾಡಲು ರೆಡಿಯಾಗಿದ್ದಾರೆ.

ಪೊಲೀಸರ ಕಿವಿ ಚುಚ್ಚಿದ ಜವರೇಗೌಡ! 
ವೆಂಕಿಗೆ ಇದ್ಯಾವುದರ ಅರಿವೇ ಇಲ್ಲ. ಮನೆಯಿಂದ ಅಡುಗೆ ಬಂದಿದೆ ಅಂತ ಅವನು ಖುಷಿಯಿಂದ ಊಟ ಮಾಡಿದ್ದಾನೆ. ಆಮೇಲೆ ಅವನನ್ನು ಪೊಲೀಸರು ಬಿಟ್ಟು, ಯಾರಿಗೂ ಕಾಣಿಸದ ಹಾಗೆ ಕಳಿಸಿದ್ದಾರೆ. ಅಷ್ಟೇ ಅಲ್ಲದೆ ಆರೋಪಿ ತಪ್ಪಿಸಿಕೊಂಡ ಅಂತ ಹೇಳಿ ಎನ್‌ಕೌಂಟರ್‌ ಮಾಡಿದ್ದಾರೆ. ಎನ್‌ಕೌಂಟರ್‌ ಮಾಡಿ ಅಂತ ಜವರೇಗೌಡನೇ ಪೊಲೀಸರಿಗೆ ಹೇಳಿದ್ದಾನೆ. “ನಿಮ್ಮ ಜೊತೆ ಕಳಿಸೋದು ತಪ್ಪು ಅಂತ ನಾನು ಯೋಚನೆ ಮಾಡ್ತಿದ್ದೀನಿ. ಆದರೆ ನೀವು ಎನ್‌ಕೌಂಟರ್‌ ಮಾಡಿ ಅಂತಿದೀರಿ. ಇದರಿಂದ ಜೀವನಪೂರ್ತಿ ನಾನು ಜೈಲಿನಲ್ಲೇ ಕಳೆಯಬೇಕಾಗುತ್ತದೆ, ನನ್ನ ಸಂಸಾರ ಬೀದಿಗೆ ಬರತ್ತೆ, ಇದು ರಿಸ್ಕ್”‌ ಎಂದು ಪೊಲೀಸರೇ ಹೇಳಿದರೂ ಕೂಡ ಜವರೇಗೌಡ ಮಾತ್ರ ಕೇಳುತ್ತಿಲ್ಲ. 

ಈಗ ವೆಂಕಿ ಸಾಯ್ತಾನಾ?
ಈಗ ವೆಂಕಿ ಎನ್‌ಕೌಂಟರ್‌ ಆಗ್ತಾನಾ? ಇಲ್ಲವಾ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಈಗ ಸಿದ್ದುನನ್ನು ಉಳಿಸಲು ಜವರೇಗೌಡ ಈ ರೀತಿ ಮಾಡ್ತಿದ್ದಾನೆ. ಹಾಗಾದರೆ ಮುಂದೆ ಏನಾಗುವುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಇದೆಲ್ಲ ವಿಷಯ ಭಾವನಾಗೆ ಗೊತ್ತಾದರೆ ಅವಳು ಸಿದ್ದುನಿಂದ ದೂರ ಆಗ್ತಾಳೆ, ಇನ್ನೊಂದು ಕಡೆ ಸಿದ್ದುಗೂ ಕೂಡ ತನ್ನಿಂದ ವೆಂಕಿಗೆ ಈ ಥರ ಸಮಸ್ಯೆ ಆಯ್ತು ಅನ್ನೋದು ಗೊತ್ತಾದರೆ ಅವನು ಪಶ್ಚಾತ್ತಾಪಕ್ಕೆ ಬೀಳುತ್ತಾನೆ. ಹೀಗಾಗಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಾಗಿದೆ. 

ಧಾರಾವಾಹಿ ಕಥೆ ಏನು?
ಭಾವನಾಗಿಂತ ಸಿದ್ದು ಐದು ವರ್ಷ ಚಿಕ್ಕವರು. ಭಾವನಾ ತನ್ನ ಮನೆ ಸೊಸೆ ಆಗೋದು ಸಿದ್ದು ಮನೆಯವರಿಗೆ ಇಷ್ಟವೇ ಇರಲಿಲ್ಲ. ಭಾವನಾಳನ್ನು ಪ್ರೀತಿ ಮಾಡುತ್ತಿದ್ದ ಸಿದ್ದು, ಯಾರಿಗೂ ಗೊತ್ತಾಗದ ಹಾಗೆ ಅವಳಿಗೆ ತಾಳಿ ಕಟ್ಟಿದ್ದನು. ಈ ಮದುವೆ ಎಲ್ಲರಿಗೂ ಶಾಕ್‌ ನೀಡಿತ್ತು. ಆಮೇಲೆ ಲಕ್ಷ್ಮೀ-ಶ್ರೀನಿವಾಸ್‌ ಮನೆಯವರು ಮಾತ್ರ ಈ ಮದುವೆ ಒಪ್ಪಿದ್ದರು. ಆರಂಭದಲ್ಲಿ ಈ ಮದುವೆಯನ್ನು ತಿರಸ್ಕರಿಸಿದ್ದ ಜವರೇಗೌಡ ಹಾಗೂ ಅವನ ಹಿರಿಯ ಮಗ ಈ ಮದುವೆ ಒಪ್ಪಿದ್ದಾರೆ. ಸಿದ್ದುನನ್ನು ತಿರಸ್ಕರಿಸುತ್ತಿದ್ದ ಭಾವನಾ ಈಗ ಅವನನ್ನು ಪ್ರೀತಿ ಮಾಡುತ್ತಿದ್ದಾಳೆ. ಎಲ್ಲ ಚೆನ್ನಾಗಿದೆ ಎನ್ನುವಷ್ಟರಲ್ಲಿ ವೆಂಕಿ ವಿಷಯ ದೊಡ್ಡ ಅಲೆ ಎಬ್ಬಿಸುತ್ತಿದೆಯಾ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು
ಭಾವನಾ- ದಿಶಾ ಮದನ್‌
ಸಿದ್ದೇಗೌಡ- ಧನಂಜಯ
ಶ್ರೀಕಾಂತ್-‌ ರಘು ಮುಖರ್ಜಿ
ಲಕ್ಷ್ಮೀ- ಶ್ವೇತಾ
ಶ್ರೀನಿವಾಸ್-‌ ಶ್ರೀನಿವಾಸ್‌ ಜಂಭೆ