Bigg Boss ಇತಿಹಾಸದಲ್ಲೇ ದಾಖಲೆ ಬರೆದ ಲವರ್ ಬಾಯ್ ಸೂರಜ್ ಸಿಂಗ್! ಇದೀಗ ಬಯಲು
ಬಿಗ್‌ಬಾಸ್ 12ರಲ್ಲಿ ಸ್ಪರ್ಧಿಸಿದ್ದ ಸಾಫ್ಟ್ವೇರ್ ಎಂಜಿನಿಯರ್ ಸೂರಜ್ ಸಿಂಗ್, ಮನೆಯಿಂದ ಹೊರಬಂದ ನಂತರ 'ಪವಿತ್ರ ಬಂಧನ' ಧಾರಾವಾಹಿಯ ನಾಯಕರಾದರು. ಸೀರಿಯಲ್ ಪ್ರಮೋಷನ್‌ಗೆ ಬಿಗ್‌ಬಾಸ್ ಮನೆಗೆ ಹೋದರು. ಬಿಗ್‌ಬಾಸ್ ಇತಿಹಾಸದಲ್ಲಿಯೇ ದಾಖಲೆಯೊಂದನ್ನು ಸೃಷ್ಟಿಸಿದ್ದು ಅದರ ಬಗ್ಗೆ ನಟ ಹೇಳಿದ್ದೇನು?

ಬಿಗ್‌ಬಾಸ್ ಲವರ್ ಬಾಯ್
ಬಿಗ್‌ಬಾಸ್ 12 (Bigg Boss 12)ನಲ್ಲಿ ಲವರ್ ಬಾಯ್ ಎಂದೇ ಫೇಮಸ್ ಆಗಿ, ನಟಿ ರಾಶಿಕಾ ಶೆಟ್ಟಿ ಜೊತೆಗಿನ ಪ್ರೇಮ ಪ್ರಸಂಗದಿಂದ ಸಕತ್ ಸದ್ದು ಮಾಡಿದ್ದವರು ಸೂರಜ್ ಸಿಂಗ್. ಇದೀಗ ಸೂರಜ್ ಸಿಂಗ್ ಬಿಗ್ಬಾಸ್ನಲ್ಲಿ ಹೊಸ ದಾಖಲೆ ಬರೆದಿದ್ದು ಇದೀಗ ಬಯಲಾಗಿದೆ.
ಟೆಕ್ಕಿಗೆ ಅವಕಾಶ
ಅಷ್ಟಕ್ಕೂ ಸೂರಜ್ ಸಿಂಗ್ ಸಾಫ್ಟ್ವೇರ್ ಎಂಜಿನಿಯರ್ ಆದವರು. ಅವರಿಗೆ ಅರಿವಿಲ್ಲದೇ ಅದೃಷ್ಟ ಒಲಿದಿತ್ತು. ಬಿಗ್ಬಾಸ್ಗೆ ಅರಿವಿಲ್ಲದೇ ಕಾಲ್ ಬಂದಿತ್ತು. ಅದು ಕೂಡ ಅಚಾನಕ್ ಆಗಿ ಬಂದಿದ್ದು ಅವರಿಗೇ ಅಚ್ಚರಿ ಉಂಟು ಮಾಡಿತ್ತಂತೆ.
ನಟನೆ ಬರಲ್ಲ ಎಂದ್ರೂ ಕೇಳಲಿಲ್ಲ
ಅದೃಷ್ಟ ಅಂದರೆ ಹಾಗೆಯೇ. ಒಂದರ ಹಿಂದೆ ಒಂದು ಬಂದುಬಿಡುತ್ತದೆ ಎನ್ನುವುದಕ್ಕೆ ಸೂರಜ್ ಅವರೇ ಸಾಕ್ಷಿ. ನಟನೆಯ ಗಂಧಗಾಳಿಯೂ ಇಲ್ಲದ ಸೂರಜ್ ಅವರಿಗೆ ಬಿಗ್ಬಾಸ್ನಿಂದ ಹೊರಬರುತ್ತಿದ್ದಂತೆಯೇ ಸೀರಿಯಲ್ಗೆ ಆಫರ್ ಬಂತು. ನಟನೆಯೇ ಬರುವುದಿಲ್ಲ, ಏನು ಆ್ಯಕ್ಟ್ ಮಾಡುವುದು ಎಂದು ಕೇಳಿದರೂ, ಅದು ತಾನಾಗಿಯೇ ಬರುತ್ತದೆ, ನಿಮ್ಮಲ್ಲಿ ಆ ಕೆಪ್ಯಾಸಿಟಿ ಇದೆ ಎಂದು ಕಲರ್ಸ್ ಕನ್ನಡ ವಾಹಿನಿಯ ಪವಿತ್ರ ಬಂಧನ (Pavitra Bandhana) ಧಾರಾವಾಹಿ ನಾಯಕನೇ ಆದರು.
ಎಲ್ಲವೂ ಕನಸು
ಇದೊಂದು ಕನಸು ಎನ್ನಿಸುತ್ತಿದೆ. ಬಿಗ್ಬಾಸ್ಗೆ ಹೋಗಿದ್ದೇ ಕನಸು ಎಂದುಕೊಂಡರೆ, ದಿಢೀರನೆ, ಹೊರಕ್ಕೆ ಬರುತ್ತಿದ್ದಂತೆಯೇ ಸೀರಿಯಲ್ನಲ್ಲಿ ನನಗೆ ಅರಿವಿಲ್ಲದೇ ಅವಕಾಶ ಸಿಕ್ಕಿತು. ಇನ್ನೂ ಅದು ನಿಜನೋ ಸುಳ್ಳೋ ಎಂದು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು kannada.mojo360ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬಿಗ್ಬಾಸ್ನಲ್ಲಿ ದಾಖಲೆ
ಇದೇ ವೇಳೆ ತಮಗೆ ಅರಿವಿಲ್ಲದೇ ಬಿಗ್‌ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ದಾಖಲೆ ಸೃಷ್ಟಿಯಾಗಿರುವ ಬಗ್ಗೆಯೂ ಹೇಳಿದ್ದಾರೆ. ಅದೇನೆಂದರೆ, ಬಿಗ್ಬಾಸ್ನಿಂದ ಹೊರಕ್ಕೆ ಬರುತ್ತಿದ್ದಂತೆಯೇ, ಮತ್ತೆ ಬಿಗ್‌ಬಾಸ್ ಮನೆಗೆ ಹೋಗಿದ್ದರು ಸೂರಜ್. ಅದಕ್ಕೆ ಕಾರಣ, ಅವರು ನಟಿಸುತ್ತಿರುವ ಸೀರಿಯಲ್ ಪ್ರಮೋಷನ್‌ಗೆ.
ಸೀರಿಯಲ್ ಪ್ರಮೋಷನ್
ಹೀಗೆ ತಮ್ಮದೇ ಸೀರಿಯಲ್ ಪ್ರಮೋಷನ್‌ಗೆ ಬಿಗ್‌ಬಾಸ್ ಸ್ಪರ್ಧಿಯೊಬ್ಬರು ಹೊರಕ್ಕೆ ಹೋಗಿ ಮತ್ತೆ ಒಳಕ್ಕೆ ಬಂದಿರೋದು ಇದುವರೆಗೂ ನಡೆದಿಲ್ಲ. ಇದೇ ಮೊದಲು ಎಂದರು ಎಂದ ಸೂರಜ್, ಈ ಮೂಲಕ ದಾಖಲೆ ಬರೆದಿರುವುದಾಗಿ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

