ಸಂಗೀತಾಗೆ ನಮ್ಮನೆ ನಾಯಿ ಮರಿ ಎಂದ್ರು ತುಕಾಲಿ ಸಂತು; ಕಾರ್ತಿಕ್ ನೋಡಿ 'ಅಯ್ಯೋ ಪಾಪ' ಎನ್ನುತ್ತಿರುವ ನೆಟ್ಟಿಗರು

 ಡ್ರೋನ್ ಪ್ರತಾಪ್ ಮಹಾನ್ ಸುಳ್ಳುಗಾರ, ಕ್ವಾರಂಟೈನ್‌ ವೇಳೆ ಅವನ ಮೇಲೆ ಯಾವುದೇ ಹಲ್ಲೆ ನಡೆದಿರಲಿಲ್ಲ. ಕರ್ನಾಟಕದ ತುಂಬಾ ಅನುಕಂಪ ಗಿಟ್ಟಿಸಿಕೊಳ್ಳಲು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಿದ್ದಾನೆ ಎಂಬ ಸುದ್ದಿ ಹೊರಜಗತ್ತಿನಲ್ಲಿ ಹಬ್ಬುತ್ತಿದ್ದಂತೆ ಈಗ ಗೆಲ್ಲಲಿರುವ ಸ್ಪರ್ಧಿ ಕಾರ್ತಿಕ್, ಸಂಗೀತಾ ಅಥವಾ ತನಿಷಾ ಎಂದು ಬಹಳಷ್ಟು ಜನರು ಹೇಳತೊಡಗಿದ್ದಾರೆ.

Colors Kannada Bigg Boss kannada season 10 no elimination in 8th weekend srb

ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲಿ ಈ 'ಸೂಪರ್ ಸಂಡೇ ವಿತ್ ಸುದೀಪ'ದಲ್ಲಿ ಯಾವುದೇ ಎಲಿಮಿನೇಶನ್ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಈ ಕಳೆದ ವಾರ ಇದ್ದ ಎಲ್ಲ ಸ್ಪರ್ಧಿಗಳೂ ಇದ್ದಾರೆ. ನಮ್ರತಾಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ ಬಳಿಕ ಸಹಜವಾಗಿಯೇ ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಹವಾ ಸ್ವಲ್ಪ ಹೆಚ್ಚಾಗಿದೆ. ಈ ಮೂಲಕ ಸ್ನೇಹಿತ್ ಖುಷಿ ಹೆಚ್ಚಾಗಿದೆಯಾ ಎಂಬ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಜೋರಾಗಿದೆ. ಈ ವಾರ ಎಲಿಮಿನೇಶನ್ ಇಲ್ಲದೇ ಎಲ್ಲ ಸ್ಪರ್ಧಿಗಳೂ ಕಿಚ್ಚ ಸುದೀಪ್ ಜತೆ ಸೂಪರ್ ಸಂಡೇ ಸಂಚಿಕೆಯಲ್ಲಿ ಖುಷಿಖುಷಿಯಾಗಿ ಕಳೆದರು. 

ಇದೀಗ ಸೋಮವಾರ ಶುರುವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇಂದು ವಿಚಿತ್ರ ಎನ್ನಬಹುದಾದ ಟಾಸ್ಕ್ ಒಂದನ್ನು ನೀಡಲಾಗಿತ್ತು. ಸಂಗೀತಾ ಮತ್ತು ಕಾರ್ತಿಕ್ ಅವರಿಬ್ಬರೂ ನಾಯಿ ಮರಿಯಂತೆ ಆಡಬೇಕು ಎಂಬ ಟಾಸ್ಕ್ ಅದು. ಸಂಗೀತಾ ಅವರಂತೂ ಚೇರ್, ಟೇಬಲ್ ಮಧ್ಯೆ ಪಕ್ಕಾ ನಾಯಿಮರಿಯಂತೆ ಕೈ ಮತ್ತು ಕಾಲು ಉಪಯೋಗಿಸಿಕೊಂಡು ನಡೆದುಕೊಂಡು ಬಂದು ಆಡುತ್ತಿದ್ದರೆ ಎಲ್ಲರೂ ಜೋರಾಗಿ ನಕ್ಕು ಎಂಜಾಯ್ ಮಾಡುತ್ತಿದ್ದರು. 'ಇದು ನಮ್ಮನೆ ನಾಯಿ' ಎಂದು ತುಕಾಲಿ ಸಂತೋಷ್ ಸಂಗೀತಾಗೆ ಹೇಳಿದಾಗಲಂತೂ ಎಲ್ಲರೂ ಗೊಳ್ಳೆಂದು ನಕ್ಕಿದ್ದೇ ನಕ್ಕಿದ್ದು.

ವಿನಯ್‌ಗೆ ದುರಂಹಕಾರ ನಿವಾರಣೆ ಟಾನಿಕ್ ; ಎಲುಬಿಲ್ಲದ ನಾಲಿಗೆ ಎಂದ್ರು ಸಂಗೀತಾ ಶೃಂಗೇರಿ! 

ವಾರಗಳು ಕಳೆದಂತೆ ಸಹಜವಾಗಿಯೇ ವೀಕ್ಷಕರ ಮನದಲ್ಲಿ ಈಗ ಬಿಗ್ ಬಾಸ್ ಮನೆಯಲ್ಲಿ ಇರುವವರಲ್ಲಿ ಗೆಲ್ಲವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಡ್ರೋನ್ ಪ್ರತಾಪ್ ಮಹಾನ್ ಸುಳ್ಳುಗಾರ, ಕ್ವಾರಂಟೈನ್‌ ವೇಳೆ ಅವನ ಮೇಲೆ ಯಾವುದೇ ಹಲ್ಲೆ ನಡೆದಿರಲಿಲ್ಲ. ಕರ್ನಾಟಕದ ತುಂಬಾ ಅನುಕಂಪ ಗಿಟ್ಟಿಸಿಕೊಳ್ಳಲು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಿದ್ದಾನೆ ಎಂಬ ಸುದ್ದಿ ಹೊರಜಗತ್ತಿನಲ್ಲಿ ಹಬ್ಬುತ್ತಿದ್ದಂತೆ ಈಗ ಗೆಲ್ಲಲಿರುವ ಸ್ಪರ್ಧಿ ಕಾರ್ತಿಕ್, ಸಂಗೀತಾ ಅಥವಾ ತನಿಷಾ ಎಂದು ಬಹಳಷ್ಟು ಜನರು ಹೇಳತೊಡಗಿದ್ದಾರೆ. ಅದೇನೇ ಇರಲಿ, ಸದ್ಯ 9ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಗೆಲುವಿಗಾಗಿ ತಮ್ಮ ಹೋರಾಟ, ಹಾರಾಟ ಎಲ್ಲವನ್ನೂ ಮುಂದುವರೆಸಿದ್ದಾರೆ. 

ಹಿರಣ್ಯ ಸಿನಿಮಾ ಟೀಸರ್ ಲಾಂಚ್; ಮಾಸ್ ಅವತಾರದಲ್ಲಿ ಅಬ್ಬರಿಸಿದ ನಟ ರಾಜವರ್ಧನ್ ಮೇಲೆ ಮೂಡಿದೆ ಭಾರೀ ನಿರೀಕ್ಷೆ!

ಇನ್ನೇನು ಕೆಲವೇ ದಿನಗಳಲ್ಲಿ ವಿನ್ನರ್ ಯಾರು ಎಂಬುದು ನಿರ್ಧಾರವಾಗಲಿದೆ. ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು.

Latest Videos
Follow Us:
Download App:
  • android
  • ios