ವಿನಯ್‌ಗೆ ದುರಂಹಕಾರ ನಿವಾರಣೆ ಟಾನಿಕ್ ; ಎಲುಬಿಲ್ಲದ ನಾಲಿಗೆ ಎಂದ್ರು ಸಂಗೀತಾ ಶೃಂಗೇರಿ!

ಸಂಗೀತಾ ಕೊಟ್ಟ ಟಾನಿಕ್‌ಅನ್ನು ಕಷ್ಟಪಟ್ಟು ಕುಡಿದು, ವಿನಯ್ ಕೋಪದಿಂದ 'ಸರ್ ಅವ್ಳಿಗೆ ಫ್ರೆಂಡ್ಸ್‌ ಅಂದ್ರೆ ಸರಂಡರ್ ಆಗ್ಬಿಡ್ಬೇಕು. ಅವ್ಳು ಹೇಳಿದ್ದನ್ನೇ ಮಾಡ್ಬೇಕು, ಅವ್ಳು ಹಾಕಿದ ಗೆರೆ ದಾಟ್ಬಾರ್ದ. ಅದಕ್ಕೆ ಯಾರೂ ಫ್ರೆಂಡ್‌ಶಿಪ್ ಅನ್ನಲ್ಲ, ದುರಹಂಕಾರ ಅಂತಾರೆ' ಎಂದಿದ್ದಾರೆ. 

Sangeetha complaints about vinay in Tonic Task in front of kichcha sudeep srb

ಬಿಗ್ ಬಾಸ್ ಮನೆಯಲ್ಲಿ 'ಟ್ರೀಟ್‌ಮೆಂಟ್ ಟಾಸ್ಕ್' ನಡೆದಿದೆ. ಈ ಬಗ್ಗೆ ಹೇಳಿದ ಸುದೀಪ್ 'ಲೇಬಲ್ ಇರುವ ಟಾನಿಕ್‌ಅನ್ನು ನೀವು ನಿಮಗೆ ಸರಿ ಎನಿಸುವ ಸ್ಪರ್ಧಿಗೆ ಕೊಡಬೇಕು' ಎಂದಿದ್ದಾರೆ. ಸಂಗೀತಾ ಸರದಿ ಬಂದಾಗ 'ದುರಂಹಕಾರ ನಿವಾರಣೆ ಟಾನಿಕ್‌' ಅನ್ನು ತಕ್ಷಣವೇ ಎತ್ತಿಕೊಂಡು ಸೀದಾ ವಿನಯ್ ಬಳಿ ಹೋಗಿ ಕೊಟ್ಟಿದ್ದಾರೆ 'ಸರ್, ಅವ್ರದ್ದು ಎಲಿಬಿಲ್ಲದ ನಾಲಿಗೆ ಸರ್, ಯಾರು ಕೆಟ್ಟದ್ದು ಮಾತಾಡ್ತಾ ಇರ್ತಾರೋ, ಯಾರು ನಮ್ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೋ ಅವ್ರ ಜತೆನಲ್ಲೇ ಕೂತ್ಕೊಂಡು ನಮ್ ಬಗ್ಗೆ ಕೆಟ್ಟದ್ದು ಮಾತಾಡ್ತಾ ಇರ್ತಾರೆ' ಎಂದಿದ್ದಾರೆ ಸಂಗೀತಾ.

ಸಂಗೀತಾ ಕೊಟ್ಟ ಟಾನಿಕ್‌ಅನ್ನು ಕಷ್ಟಪಟ್ಟು ಕುಡಿದು, ವಿನಯ್ ಕೋಪದಿಂದ 'ಸರ್ ಅವ್ಳಿಗೆ ಫ್ರೆಂಡ್ಸ್‌ ಅಂದ್ರೆ ಸರಂಡರ್ ಆಗ್ಬಿಡ್ಬೇಕು. ಅವ್ಳು ಹೇಳಿದ್ದನ್ನೇ ಮಾಡ್ಬೇಕು, ಅವ್ಳು ಹಾಕಿದ ಗೆರೆ ದಾಟ್ಬಾರ್ದ. ಅದಕ್ಕೆ ಯಾರೂ ಫ್ರೆಂಡ್‌ಶಿಪ್ ಅನ್ನಲ್ಲ, ದುರಹಂಕಾರ ಅಂತಾರೆ' ಎಂದಿದ್ದಾರೆ. ವಿನಯ್ ಮಾತಿಗೆ ಕೌಂಟರ್ ಕೊಟ್ಟ ಸಂಗೀತಾ 'ಅದಕ್ಕೇ ಸರ್, ಎಲುಬಿಲ್ಲದ ನಾಲಿಗೆ ಅನ್ನೋದು, ಯಾವಾಗ್ಲೂ ಯಾರಿಗಾದ್ರೂ ನೋವು ಕೊಡ್ತಾನೆ ಇರ್ತಾರೆ' ಎಂದಿದ್ದಾರೆ ಸಂಗೀತಾ ಶೃಂಗೇರಿ. ಹೀಗೆ ವಿನಯ್-ಸಂಗೀತಾ ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ ಎದುರಿನಲ್ಲೇ ಕಿತ್ತಾಡಿಕೊಂಡಿದ್ದಾರೆ. 

ಹಿರಿಯ ನಟಿ ಲೀಲಾವತಿ ಅನಾರೋಗ್ಯ; ನಟಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲಿ ಇಂದು ಸಂಡೇ ಸಂಭ್ರಮ. 'ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆಯಲ್ಲಿ ಇಂದು ಬಿಗ್ ಬಾಸ್ ಮನೆಯಿಂದ ಒಬ್ಬರು ಸ್ಪರ್ಧಿ ಹೊರಗೆ ಕಾಲಿಡಲಿದ್ದಾರೆ. ಅದು ಯಾರು ಎಂಬುದನ್ನು ಇಂದಿನ ಸಂಚಿಕೆ ನೋಡಿಯೇ ತಿಳಿಯಬೇಕು. ಸದ್ಯ ಬಿಗ್ ಬಾಸ್ ರಿಯಾಲಿಟಿ ಶೋ ಎಂಟನೇ ವಾರದ ಅಂತ್ಯಕ್ಕೆ ಬಂದು ನಿಂತಿದೆ. ಸಾಮಾನ್ಯವಾಗಿ ಪ್ರತಿ ಸಂಡೇ ಬಿಗ್ ಬಾಸ್ ಮನೆಯಿಂದ ಒಬ್ಬರು ಸ್ಪರ್ಧಿ ಹೊರಗೆ ಹೋಗುತ್ತಾರೆ. ಆದರೆ, ಕೆಲವೊಮ್ಮೆ ಯಾರನ್ನೂ ಎಲಿಮಿನೇಟ್ ಮಾಡುವುದಿಲ್ಲ. ಇಂದು ಏನಾಗಲಿದೆ ಎಂಬುದನ್ನು ಕಾದು ನೋಡಬೇಕು. 

ಸಂತೋಷಂ ಅವಾರ್ಡ್ಸ್ ಅವಾಂತರ; ಬೆಂಗಳೂರಿಗೆ ವಾಪಸ್ ಹೊರಟ ಸ್ಯಾಂಡಲ್‌ವುಡ್ ತಾರೆಯರು

ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು.

Latest Videos
Follow Us:
Download App:
  • android
  • ios