ಈ ಸಿನಿಮಾದ ಮುಹೂರ್ತದ ಸಮಯದಲ್ಲಿ ಹೇಳಿದ್ದೆ, ಕೆಲಸ ಆದ್ಮೇಲೆ ನಿಮ್ಮ ಮುಂದೆ ಬರ್ತೀವಿ ಅಂತ. ಈಗ ಕೆಲಸ ಆಗಿದೆ,  ಬಂದಿದ್ದೇವೆ. ಈ ಸಿನಿಮಾ ನೋಡಿದರೆ ಇದರ ಅದ್ಭುತ ಮೇಕಿಂಗ್ ಹಾಗೂ ಭಿನ್ನ ಕತೆ ಬಗ್ಗೆ ಪದಗಳಲ್ಲಿ ಹೇಳಲು ಮಾತೇ ಬರ್ತಿಲ್ಲ. ರಾಜವರ್ಧನ್ ಅವರು ರಾಣಾ ಅನ್ನೋ ಡೆಡ್ಲಿ ಕ್ಯಾರೆಕ್ಟರ್ ಮಾಡಿದ್ದಾರೆ. 

ಸ್ಯಾಂಡಲ್‌ವುಡ್ ಸಿನಿ ಅಂಗಳದಲ್ಲಿ ಮಾಸ್ ನಟರೊಬ್ಬರ ಆಗಮನವಾಗುತ್ತಿದೆ. ಈಗಾಗಲೇ 'ಬಿಚ್ಚುಗತ್ತಿ' ಮೂಲಕ ಭರವಸೆ ಹುಟ್ಟಿಸಿದ್ದ ನಟ ರಾಜವರ್ಧನ್, 'ಹಿರಣ್ಯ' ಚಿತ್ರದಲ್ಲಿ ಮತ್ತೊಮ್ಮೆ 'ಮಾಸ್' ಅವತಾರದಲ್ಲಿ ಕಾಣಿಸಿಕೊಂಡಿದ್ದು ಇನ್ನಷ್ಟು ಹೆಚ್ಚಿನ ಭರವಸೆ ಹುಟ್ಟಿಸುತ್ತಿದ್ದಾರೆ. ನಿನ್ನೆ (29 ನವೆಂಬರ್ 2023) ಹಿರಣ್ಯ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದ ಟೀಸರ್‌ನಲ್ಲಿ ರಾಜವರ್ಧನ್ ಲುಕ್ ಹಾಗೂ ಫೈಟ್‌ಗೆ ಮಾಸ್ ಪ್ರಿಯರು ಬೆರಗಾಗಿದ್ದಾರೆ. ಯುವನಟಿ ರಿಹಾನಾ ರಾಜವರ್ಧನ್‌ಗೆ ಜೋಡಿಯಾಗಿ ನಟಿಸಿದ್ದಾರೆ. ನಟ ರಾಜವರ್ಧನ್ ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್‌ ಪುತ್ರ. 

ಬಿಡುಗಡೆ ಆಗಿರುವ 'ಹಿರಣ್ಯ' ಸಿನಿಮಾದ ಮಾಸ್ ಟೀಸರ್‌ನಲ್ಲಿ ಭರ್ಜರಿ ಆಕ್ಷನ್ ಮೂಲಕ ರಾಜವರ್ಧನ್ ಅಬ್ಬರಿಸಿದ್ದಾರೆ. ಬೆಂಗಳೂರಿನ ವಸಂತ ನಗರದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ 'ಹಿರಣ್ಯ ಟೀಸರ್' ರಿಲೀಸ್ ಆಯ್ತು. 'ಲಹರಿ' ಸಂಸ್ಥೆಯ ವೇಲು ನಾಯಕ ನಟ ರಾಜವರ್ಧನ್ ಸಿನಿಮಾಗೆ ಸಾಥ್ ಕೊಟ್ಟರು. ಈ ವೇಳೆ 'ಹಿರಣ್ಯ' ಚಿತ್ರತಂಡ ಈ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ. 'ಟೀಸರ್' ಬಿಡುಗಡೆ ಮೂಲಕ ಹಿರಣ್ಯ ಭಾರೀ ನಿರೀಕ್ಷೆ ಹುಟ್ಟಿಸಿದೆ. 

ಹಿರಣ್ಯ ಚಿತ್ರದ ನಿರ್ದೇಶಕ ಪ್ರವೀಣ್ ಆಯುಕ್ತ ಮಾತನಾಡಿ, 'ನಾನು ಈ ಸಿನಿಮಾದ ಮುಹೂರ್ತದ ಸಮಯದಲ್ಲಿ ಹೇಳಿದ್ದೆ, ಕೆಲಸ ಆದ್ಮೇಲೆ ನಿಮ್ಮ ಮುಂದೆ ಬರ್ತೀವಿ ಅಂತ. ಈಗ ಕೆಲಸ ಆಗಿದೆ, ಬಂದಿದ್ದೇವೆ. ಈ ಸಿನಿಮಾ ನೋಡಿದರೆ ಇದರ ಅದ್ಭುತ ಮೇಕಿಂಗ್ ಹಾಗೂ ಭಿನ್ನ ಕತೆ ಬಗ್ಗೆ ಪದಗಳಲ್ಲಿ ಹೇಳಲು ಮಾತೇ ಬರ್ತಿಲ್ಲ. ರಾಜವರ್ಧನ್ ಅವರು ರಾಣಾ ಅನ್ನೋ ಡೆಡ್ಲಿ ಕ್ಯಾರೆಕ್ಟರ್ ಮಾಡಿದ್ದಾರೆ. ಆಯ್ಕೆಗೂ ಮೊದಲು ನಟ ರಾಜವರ್ಧನ್ ಟೆಸ್ಟ್ ಲುಕ್ ಮಾಡಿದೆವು, ಇಷ್ಟವಾಯ್ತು. ಸಿನಿಮಾದಲ್ಲಿ ಅವರು ಅತ್ಯದ್ಭುತವಾಗಿ ನಟಿಸಿದ್ದಾರೆ. ಇಡೀ ತಂಡವು ಒಗ್ಗಟ್ಟಿನಿಂದ ಕೆಲಸ ಮಾಡಿ ಇಂತಹ ಮಹಾನ್ ಸಿನಿಮಾ ಸೃಷ್ಟಿಗೆ ಕಾರಣವಾಗಿದೆ' ಎಂದಿದ್ದಾರೆ. 

ಚಾಲೆಂಜಿಂಗ್ ಸ್ಟಾರ್ 'ಕಾಟೇರ' ಬಿಡುಗಡೆ ಘೋಷಣೆ; ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂತಸ!

ಹಿರಣ್ಯ ಚಿತ್ರದ ನಾಯಕ ನಟ ರಾಜವರ್ಧನ್ ಮಾತನಾಡಿ 'ನನಗೆ ಎರಡು ವರ್ಷದ ಹಿಂದೆ ಪ್ರವೀಣ್ ಬಂದು ಈ 'ಹಿರಣ್ಯ' ಕಥೆ ಹೇಳಿದ್ದರು. 'ಬಿಚ್ಚುಗತ್ತಿ'ಯಂತಹ ದೊಡ್ಡ ಸಿನಿಮಾ ಮಾಡಿದ್ದೆ. ಆ ಸಮಯದಲ್ಲಿ ಕಥೆ ಆಯ್ಕೆ ಮಾಡಿಕೊಳ್ಳುವುದು ದೊಡ್ಡ ಚಾಲೆಂಜ್ ಆಗಿತ್ತು. ಪ್ರವೀಣ್ ಕಥೆ ಹೇಳಿದಾಗ ಕಥೆಯ ಥ್ರೆಡ್ ಇಷ್ಟವಾಯ್ತು, ಒಪ್ಪಿಕೊಂಡು ಸಿನಿಮಾ ಮಾಡಿದೆ. ಈಗ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದೆ.'ಟೀಸರ್' ಬಿಡುಗಡೆ ಮೂಲಕ ಪ್ರಮೋಶನ್ ಕೆಲಸವೂ ಶುರುವಾಗಿದೆ. ಅದಷ್ಟು ಬೇಗ ಸಿನಿಮಾ ತೆರೆಗೆ ಬರಲಿದೆ, ನನಗೆ ಸಿನಿಮಾಪ್ರಿಯರ ಆಶೀರ್ವಾದ ಸಿಗಬೇಕಿದೆ' ಎಂದಿದ್ದಾರೆ. 

ಪವಾಡಗಳು ಸಂಭವಿಸುತ್ತವೆ, ನಾನು ಲೆಜೆಂಡ್ ಆಗುವುದಕ್ಕೆ ಅದೇ ಕಾರಣ; ಸೂಪರ್ ಸ್ಟಾರ್ ನಟ ರಜನಿಕಾಂತ್

ಹಿರಣ್ಯ ಸಿನಿಮಾ ನಿರ್ದೇಶನಕ್ಕೆ ಮೊದಲು ಹಲವು 'ಶಾರ್ಟ್‌ ಮೂವಿ'ಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಪ್ರವೀಣ್‌ ಅವ್ಯಕ್ತ ಹಿರಣ್ಯ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ್ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಯುವಜನತೆ ಪ್ರಾಮಾಣಿಕತೆ ಮತ್ತು ಪರಿಶುದ್ಧ ಹೃದಯ ಹೊಂದಿರುವುದು ಅಗತ್ಯ; ಬಾಲಿವುಡ್ ಕಿಂಗ್ ಖಾನ್ ಶಾರುಖ್

'ವೇದಾಸ್‌ ಇನ್ಫಿನಿಟಿ ಪಿಕ್ಚರ್' ಬ್ಯಾನರ್‌ನಲ್ಲಿ ವಿಘ್ನೇಶ್ವರ ಯು ಹಾಗೂ ವಿಜಯ್‌ ಕುಮಾರ್‌ ಬಿ ವಿ ಜಂಟಿಯಾಗಿ ಈ ಹಿರಣ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಿರಣ್ಯ ಸಿನಿಮಾಕ್ಕೆ ಯೋಗೇಶ್ವರನ್‌ ಆರ್‌ ಛಾಯಾಗ್ರಹಣ, ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಶೂಟಿಂಗ್ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿರುವ ಹಿರಣ್ಯ ಸಿನಿಮಾವನ್ನು ಆದಷ್ಟು ಬೇಗೆ ತೆರೆಗೆ ತರುವ ಕೆಲಸದಲ್ಲಿ ಈ ಸಿನಿಮಾ ಚಿತ್ರತಂಡ ನಿರತವಾಗಿದೆ.

Hiranya - 4K First Blink | Rajavardan | Prawin Ayukth | Judah Sandhy | MRT Music