Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ಅದರಲ್ಲೂ ಈ ಬಾರಿ ಯಾರು ವಿನ್ನರ್ ಆಗ್ತಾರೆ ಎಂಬ ಕುತೂಹಲ ಹೆಚ್ಚಾಗ್ತಿದೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ವಿನ್ನರ್, ರನ್ನರ್ ಯಾರು ಎಂಬ ಪೋಸ್ಟ್‌ವೊಂದು ವೈರಲ್ ಆಗ್ತಿದೆ. ಹಾಗಾದರೆ ಯಾರದು?
ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಫಿನಾಲೆಗೆ ( BBK 12 Grand Finale ) ಸ್ಪರ್ಧಿಗಳು ರೆಡಿ ಆಗಿದ್ದಾರೆ. ದೊಡ್ಮನೆಯಲ್ಲಿರುವ ಸ್ಪರ್ಧಿಗಳು ಹೇರ್‌ಕಟ್ ಮಾಡಿಸ್ಕೊಂಡು, ಮುಖಕ್ಕೆ ಫೇಶಿಯಲ್ ಎಲ್ಲವನ್ನು ಮಾಡಿಸಿಕೊಂಡಿದ್ದಾರೆ. ಇನ್ನು ಶೂಟಿಂಗ್ ಕೂಡ ಶುರು ಆಗಿದೆಯಂತೆ.
ಡ್ಯಾನ್ಸ್ ಶೂಟಿಂಗ್ ಆಗಿದೆ
ಹೌದು, ಇಂದು ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಫಿನಾಲೆಯ ಶೂಟಿಂಗ್ ನಡೆಯುವುದು. ನಾಳೆ ಸಂಜೆ ಆರು ಗಂಟೆಗೆ ಪ್ರಸಾರ ಆಗುವುದು. ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳು ಡ್ಯಾನ್ಸ್ ಪರ್ಫಾಮೆನ್ಸ್ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಮೊದಲು ಡ್ಯಾನ್ಸ್ ಪರ್ಫಾಮೆನ್ಸ್ ಶೂಟ್ ಆಗುವುದು, ಆ ಬಳಿಕವೇ ಕಿಚ್ಚ ಸುದೀಪ್ ಅವರ ಮಾತಿನ ಭಾಗದ ಶೂಟಿಂಗ್ ಆಗುವುದು.
ಯಾರು ಗೆಲ್ಲುತ್ತಾರೆ?
ಬಿಗ್ ಬಾಸ್ ಫಿನಾಲೆಯಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಧನುಷ್ ಗೌಡ, ಅಶ್ವಿನಿ ಗೌಡ, ರಘು, ಕಾವ್ಯ ಶೈವ ಅವರು ಇದ್ದು, ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ. ಇಂದು ಶೂಟಿಂಗ್ ಆಗುವುದು, ಸೋಶಿಯಲ್ ಮೀಡಿಯಾದಲ್ಲಿ ಯಾರು ಗೆಲ್ಲುತ್ತಾರೆ ಎನ್ನೋದು ದೊಡ್ಡ ಪ್ರಶ್ನೆಯಾಗಿದೆ.
ವೀಕ್ಷಕರ ಮಧ್ಯೆ ಸ್ಪರ್ಧೆ
ಹೌದು, ಗಿಲ್ಲಿ ನಟ ಅವರು ದೊಡ್ಡ ಮೊತ್ತದ ಮೂಲಕ ಗೆದ್ದಿದ್ದಾರೆ, ಉಳಿದವರಲ್ಲಿ ಅಶ್ವಿನಿ ಗೌಡ-ಧನುಷ್ ಗೌಡ ಅವರ ಮಧ್ಯೆ ಟೈ ಅಪ್ ಆಗಿದೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಾಗಂತ ಇದು ಅಧಿಕೃತ ಹೇಳಿಕೆಯಲ್ಲ, ಕೇವಲ ಗಾಸಿಪ್ ಅಷ್ಟೇ. ಅಂದಹಾಗೆ ವೀಕ್ಷಕರ ಅಭಿಪ್ರಾಯದ ಪ್ರಕಾರ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಮಧ್ಯೆ ದೊಡ್ಡ ಸ್ಪರ್ಧೆಯಿದೆ. ಆದರೆ ಗಿಲ್ಲಿ ನಟ ಅವರು ಗೆಲ್ಲಬೇಕು ಎಂದು ಅನೇಕರು ಅವರ ಆಟೋ ಮೇಲೆ ಪೋಸ್ಟರ್ ಅಂಟಿಸಿಕೊಂಡು ಓಡಾಡುತ್ತಿದ್ದಾರೆ, ಸ್ವಯಂ ಆಸಕ್ತಿಯಿಂದ ಮತ ಹಾಕುವುದಲ್ಲದೆ, ಬೇರೆಯವರ ಬಳಿ ಕೂಡ ಕೇಳುತ್ತಿದ್ದಾರೆ.
ಯಾರು ಗೆಲ್ಲುತ್ತಾರೆ?
ಈ ಬಾರಿ ಬಿಗ್ ಬಾಸ್ ಕ್ರೇಜ್ ದೊಡ್ಡದಿದೆ. ಯಾರು ಗೆಲ್ಲುತ್ತಾರೆ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಬಹುತೇಕರು ಗಿಲ್ಲಿ ಹೆಸರು ಹೇಳುತ್ತಿದ್ದು, ಯಾರು ಗೆಲ್ಲುತ್ತಾರೆ ಎನ್ನೋದಿಕ್ಕೆ ನಾಳೆ ನೈಟ್ ಉತ್ತರ ಸಿಗಲಿದೆ. ಕಿಚ್ಚ ಸುದೀಪ್ ನಿರೂಪಣೆಯ, ಮೂರು ತಿಂಗಳ ಕಾಲದ ಈ ಮನರಂಜನೆಯ ಹಬ್ಬಕ್ಕೆ ತೆರೆ ಬೀಳಲಿದೆ.
ಫಿನಾಲೆಯಲ್ಲಿ ಏನೇನು ಇರಬಹುದು?
ಸ್ಪರ್ಧಿಗಳ ಜರ್ನಿ VT ಪ್ರಸಾರ ಮಾಡುತ್ತಾರೆ
ಸ್ಪರ್ಧಿಗಳ ವೈರಲ್ ವಿಡಿಯೋ ಪ್ಲೇ ಆಗುವುದು
ಹೆಚ್ಚು ಅತ್ತಿದ್ದು, ಜಗಳ ಆಡಿದ್ದು, ನಕ್ಕಿದ್ದ ವಿಡಿಯೋ ಪ್ರಸಾರ ಆಗುವುದು
ಗಿಚ್ಚಿ ಗಿಲಿಗಿಲಿ ಸ್ಪರ್ಧಿಗಳು, ಬಿಗ್ ಬಾಸ್ ಸ್ಪರ್ಧಿಗಳ ಮಿಮಿಕ್ರಿ ಮಾಡುವುದು


