Bigg Boss Kannada Season 12: ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ನೋಡಿದ ವೀಕ್ಷಕರಿಗೆ ಕೆಲ ಸಂದೇಹಗಳು ಬಂದಿವೆ. ಇದಕ್ಕೆ ಕಾರಣ ಏನು? ಹಾಗಾದರೆ ಆ ಪ್ರಶ್ನೆಗಳು ಯಾವುವು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಿಚ್ಚ ಸುದೀಪ್ ಅವರ ಪಂಚಾಯಿತಿ ಹಾಗೂ ಕಿಚ್ಚನ ಚಪ್ಪಾಳೆ ಬಗ್ಗೆ ವಿಮರ್ಶೆಗಳು, ಟೀಕೆಗಳು, ಪ್ರಶಂಸೆಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಬಿಗ್ ಬಾಸ್ ಟಾಸ್ಕ್‌ಗಳನ್ನು ನೋಡಿ ಕೆಲ ವೀಕ್ಷಕರಿಗೆ ಒಂದಿಷ್ಟು ಡೌಟ್ ಬಂದಿದೆ. ಈ ಡೌಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಆ ಮೂರು ಪ್ರಶ್ನೆಗಳು ಯಾವುವು?
ಫ್ಯಾಮಿಲಿ ವೀಕ್‌ನಲ್ಲಿ ಮನೆಯವರು ಬಂದು ತಮ್ಮಿಷ್ಟದ ಸ್ಪರ್ಧಿಗಳಿಗೆ ಮತ ಹಾಕಬೇಕಿತ್ತು. ಆ ವೇಳೆ ಬಹುತೇಕರು ಗಿಲ್ಲಿ ನಟ ಅವರಿಗೆ ಮತ ಹಾಕುತ್ತಾರೆ. ಆದರೆ ಅಶ್ವಿನಿ ಗೌಡ ಅವರಿಗೆ ಎರಡು ಮತ ಬಂದಿರುತ್ತದೆ. ಹೀಗಿದ್ದಾರೆ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡಿಸಲಾಗುತ್ತದೆ. ಆದರೂ ಗಿಲ್ಲಿ ನಟ ಅವರೇ ಗೆಲ್ಲುತ್ತಾರೆ. ಗಿಲ್ಲಿ ನಟ ಅವರಿಗೆ ಅಶ್ವಿನಿ ರಾಣಿಯಾಗಿ ಉಸ್ತುವಾರಿ ನೋಡಿಕೊಳ್ಳಬೇಕು, ಕ್ಯಾಪ್ಟನ್ಸಿ ಹಂಚಿಕೆ ಆಗುವುದು.
ಗಿಲ್ಲಿ ನಟ ಅವರು ಕ್ಯಾಪ್ಟನ್ ಆದ ವಾರದಲ್ಲಿ ಪೆರ್ಫಾಮೆನ್ಸ್ ಕೊಡದ ಸ್ಪರ್ಧಿ ಯಾರೆಂದು ಪ್ರಶ್ನೆ ಮಾಡಿದಾಗ ಗಿಲ್ಲಿ ನಟ ಅವರು ಅಶ್ವಿನಿ ಹೆಸರು ಹೇಳಿದ್ದರು. ಈ ಉತ್ತರವನ್ನು ಎಲ್ಲರೂ ನಿರೀಕ್ಷೆ ಮಾಡಿದ್ದರು. ಅದರಂತೆ ಅಶ್ವಿನಿ ಗೌಡ ಅವರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ, ಆದರೆ ಧನುಷ್ ಆಟ ಗೆದ್ದು ವಿನ್ ಆಗುತ್ತಾರೆ.
ಟಾಪ್ 6 ಸ್ಪರ್ಧೆಯಲ್ಲಿ ಅಶ್ವಿನಿ ಗೌಡ ಅವರು ಓಟದಲ್ಲಿದ್ದರು. ಆದರೆ ಧನುಷ್ ಗೌಡ ವಿನ್ ಆಗ್ತಾರೆ. ಹೆಣ್ಣಾಗಿ ಚೆನ್ನಾಗಿ ಆಡಿದರು ಎಂದು ವಾರದ ಕಿಚ್ಚನ ಚಪ್ಪಾಳೆ ಕೊಡುತ್ತಾರೆ. ಧನುಷ್ ಹಾಗೂ ರಾಶಿಕಾ ಶೆಟ್ಟಿ ಆಟದ ಬಗ್ಗೆ ಕಿಚ್ಚ ಸುದೀಪ್ ಅವರು ಮಾತನಾಡೋದಿಲ್ಲ.
ಬಿಗ್ ಬಾಸ್ ಟ್ರೋಫಿ ಯಾರಿಗೆ?
ಜನವರಿ 17, 18ರಂದು ಬಿಗ್ ಬಾಸ್ ಕನ್ನಡ ಸೀಸನ್ 12 ರ ಗ್ರ್ಯಾಂಡ್ ಫಿನಾಲೆಯು ನಡೆಯಲಿದೆ. ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಗಿಲ್ಲಿ ನಟ, ಧ್ರುವಂತ್, ಧನುಷ್ ಗೌಡ, ಕಾವ್ಯ ಶೈವ, ರಘು, ರಕ್ಷಿತಾ ಶೆಟ್ಟಿ ನಡುವೆ ಯಾರು ಫಿನಾಲೆಗೆ ಹೋಗುತ್ತಾರೆ? ಯಾರು ವಿನ್ ಆಗ್ತಾರೆ ಎಂಬ ಪ್ರಶ್ನೆ ಇದೆ. ಒಟ್ಟಿನಲ್ಲಿ ಈ ಸೀಸನ್ ಟ್ರೋಫಿ ಯಾರ ಮುಡಿಗೆ ಸೇರಲಿದೆ ಎಂದು ಕಾದು ನೋಡಬೇಕಿದೆ.


