- Home
- Entertainment
- TV Talk
- BBK 12 ರಕ್ಷಿತಾ ಶೆಟ್ಟಿಯನ್ನು ಹುಡುಕಿಕೊಂಡು ಬಂದ ಭರ್ಜರಿ ಮದುವೆ ಸಂಬಂಧ; ಜಾತಕವನ್ನೂ ಕೇಳಿದ್ರು!
BBK 12 ರಕ್ಷಿತಾ ಶೆಟ್ಟಿಯನ್ನು ಹುಡುಕಿಕೊಂಡು ಬಂದ ಭರ್ಜರಿ ಮದುವೆ ಸಂಬಂಧ; ಜಾತಕವನ್ನೂ ಕೇಳಿದ್ರು!
Bigg Boss Kannada Season 12 Rakshita Shetty: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರ ಹುಡುಗ ಹೇಗಿರಬೇಕು ಎಂದು ಚರ್ಚೆ ಆಗಿದೆ. ಆ ವೇಳೆ ಅವರು ಉತ್ತರವನ್ನು ಕೂಡ ನೀಡಿದ್ದಾರೆ. ಈಗ ಅವರಿಗೆ ಪ್ರಪೋಸಲ್ ಬಂದಿದೆ.

ಮದುವೆ ಆಮಂತ್ರಣ ಪತ್ರಿಕೆ
ನಂದಗೋಕುಲ ಧಾರಾವಾಹಿ ಕಲಾವಿದರು ಬಿಗ್ ಬಾಸ್ ಮನೆಗೆ ಬಂದಿದ್ದರು. ಆಮೇಲೆ ಆಮಂತ್ರಣ ಪತ್ರಿಕೆ ಕೂಡ ನೀಡಿದ್ದರು. ಈ ವೇಳೆ ರಕ್ಷಿತಾ ಶೆಟ್ಟಿ ಅವರ ಹುಡುಗ ಹೇಗಿರಬೇಕು ಎಂಬ ಚರ್ಚೆ ಕೂಡ ಆಗಿದೆ.
ಮದುವೆ ಆಗೋಕೆ ಗಿಲ್ಲಿ ಬೇಡ
ಈ ಹಿಂದೆಯೇ ರಕ್ಷಿತಾ ಶೆಟ್ಟಿ ಅವರು, “ನಾನು ಮದುವೆ ಆಗುವ ಹುಡುಗ ಗಿಲ್ಲಿ ನಟನ ಥರ ಇರಬೇಕು, ಆದರೆ ಗಿಲ್ಲಿ ನಟ ಆಗಿರಬಾರದು” ಎಂದು ಹೇಳಿದ್ದಾರೆ.
ಹುಡುಗ ಹೇಗಿರಬೇಕು?
ಲವ್, ಅರೇಂಜ್ ಅಂತೇನಿಲ್ಲ. ನಾನು ಲವ್ ಮಾಡಿದ್ರೆ ಓಡಿ ಹೋಗೋದಿಲ್ಲ, ಕುಟುಂಬವನ್ನು ಒಪ್ಪಿಸಿ ಮದುವೆ ಆಗುವೆ. ಫ್ಯಾಮಿಲಿಗೋಸ್ಕರ ನಾನು ಲವ್ ತ್ಯಾಗ ಮಾಡೋದಿಲ್ಲ, ಲವ್‌ಗೋಸ್ಕರ ಫಾಮಿಲಿಯನ್ನು ಬಿಟ್ಟುಕೊಡೋದಿಲ್ಲ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
ಸಮಸ್ಯೆ ಬಗೆಹರಿಸಬೇಕು
ಸೀರಿಯಸ್ ಆಗಿರುವವರು ಇಷ್ಟ ಆಗೋದಿಲ್ಲ, ಕಾಮಿಡಿ ಕಾಮಿಡಿ ಆಗಿರಬಾರದು, ಯಾವುದೇ ಕಷ್ಟದ ಸಂದರ್ಭ ಬಂದರೂ ಕೂಡ ಜಾಲಿಯಾಗಿ ಸಮಸ್ಯೆ ಬಗೆಹರಿಸಬೇಕು ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.
ರಕ್ಷಿತಾ ಜಾತಕ ಸಿಗಬಹುದಾ?
ರಕ್ಷಿತಾ ಶೆಟ್ಟಿ ಮಾತು ಕೇಳಿದ ನಂದಗೋಕುಲ ಧಾರಾವಾಹಿ ನಟ ನಂದಕುಮಾರ್, ಗಿರಿಜಾ ಅವರು ಮದುವೆ ಪ್ರಪೋಸಲ್ ಮುಂದಿಟ್ಟಿದ್ದಾರೆ. ನಮ್ಮ ಮನೆಯಲ್ಲಿ ನನ್ನ ಬಾವ, ಗಿರಿಜಾ ತಮ್ಮ ಇದ್ದಾನೆ, ಅವನಿಗೆ ಹುಡುಗಿಯನ್ನು ಹುಡುಕ್ತಿದ್ದೀವಿ, ರಕ್ಷಿತಾ ಜಾತಕ ಸಿಗಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ. ಆ ಮಾತು ಕೇಳಿ ಎಲ್ಲರೂ ನಕ್ಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

